ಜಗತ್ತಿನಲ್ಲಿ ಅತ್ಯಧಿಕ ಜನರು ಬಳಸುವ ಕಾಮನ್ ಪಾಸ್‌ವರ್ಡ್‌ಗಳಿವು; ಈ ಲಿಸ್ಟ್ ಗಮನಿಸಿ, ಇಂಥ ದುರ್ಬಲ ಪಾಸ್‌ವರ್ಡ್ ಬಳಸಿದ್ರೆ ತಕ್ಷಣ ಬದಲಾಯಿಸಿ
Nov 18, 2024 12:36 PM IST
ಜಗತ್ತಿನಲ್ಲಿ ಹೆಚ್ಚು ಜನರು ಬಳಸುವ ಕಾಮನ್ ಪಾಸ್‌ವರ್ಡ್‌ಗಳಿವು
Most common passwords: ಜಗತ್ತಿನಲ್ಲಿ ಅತ್ಯಧಿಕ ಜನರು ಬಳಸುತ್ತಿರುವ ಪಾಸ್‌ವರ್ಡ್ 123456. ಇದೇ ರೀತಿ ಹೆಚ್ಚು ಜನರು ಬಳಸುವ ಪಾಸ್‌ವರ್ಡ್‌ಗಳ ಲಿಸ್ಟ್ ಇಲ್ಲಿ ನೀಡಲಾಗಿದೆ. ಈ ರೀತಿಯ ಸರಳ, ಊಹಿಸಬಹುದಾದ ಪಾಸ್‌ವರ್ಡ್ ಬದಲಾಯಿಸಿದ್ದರೆ ಎಚ್ಚರ ವಹಿಸಿ.
Most common passwords: ಈ ಆನ್‌ಲೈನ್ ಜಗತ್ತಿನಲ್ಲಿ ಹತ್ತು ಹಲವು ಖಾತೆಗಳಿಗೆ ಪಾಸ್‌ವರ್ಡ್ ಬಳಸಬೇಕಿದೆ. ಸಾಕಷ್ಟು ಜನರು ಕಠಿಣ ಪಾಸ್‌ವರ್ಡ್ ಬಳಸಿ ಸುರಕ್ಷಿತವಾಗಿರಲು ಬಯಸುತ್ತಾರೆ. ಇನ್ನು ಕೆಲವರು ತಮ್ಮ ಹೆಸರು, ಅಥವಾ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಒಂದು ಎರಡು ಮೂರು ಸಂಖ್ಯೆಗಳು ಅಥವಾ ತಮ್ಮ ಮೊಬೈಲ್ ನಂಬರ್ ಅನ್ನೇ ಪಾಸ್‌ವರ್ಡ್ ಆಗಿ ಬಳಸುತ್ತಾರೆ. ಸುಲಭವಾಗಿ ಊಹಿಸಲಾಗದ ಪಾಸ್‌ವರ್ಡ್ ಬಳಸುವುದು ಅತ್ಯಂತ ಅಗತ್ಯವಾಗಿದೆ. ಈಗಿನ ಡಿಜಿಟಲ್ ಜಗತ್ತಿನಲ್ಲಿ ನಮ್ಮ ಪ್ರೈವೇಸಿ, ನಮ್ಮ ಹಣಕಾಸು ವ್ಯವಸ್ಥೆ, ನಮ್ಮ ವೈಯಕ್ತಿಕ ಡೇಟಾಗಳನ್ನು ಕಾಪಾಡಿಕೊಳ್ಳಲು ಸುರಕ್ಷಿತ ಸದೃಢ ಪಾಸ್‌ವರ್ಡ್ ಅತ್ಯಂತ ಅವಶ್ಯಕ. 2024ರಲ್ಲಿ ಜಗತ್ತಿನಾದ್ಯಂತ ಜನರು ಬಳಸಿರುವ ಅತ್ಯಂತ ಕಾಮನ್ ಪಾಸ್‌ವರ್ಡ್ ಅನ್ನು ನೋರ್ಡ್‌ಪ್ರೆಸ್ ಬಿಡುಗಡೆ ಮಾಡಿದೆ. ಆ ಪಾಸ್‌ವರ್ಡ್ ಲಿಸ್ಟ್ ಇಲ್ಲಿದೆ.
ಹೆಚ್ಚು ಜನರು ಸಾಮಾನ್ಯವಾಗಿ ಬಳಸುವ ಪಾಸ್‌ವರ್ಡ್‌ಗಳು
123456
123456789
12345678
Password
Qwerty123
Qwerty1
111111
12345
Secret
123123
ಇದೇ ಸಮಯದಲ್ಲಿ ಕಂಪನಿಗಳಲ್ಲಿ ಉದ್ಯೋಗಿಗಳು ವರ್ಕ್‌ಪ್ಲಸ್ ಸೆಟ್ಟಿಂಗ್‌ಗಳಲ್ಲಿ ಬಳಸುವ ಪಾಸ್‌ವರ್ಡ್‌ಗಳ ವಿವರವನ್ನೂ ನೋರ್ಡ್‌ಪ್ರೆಸ್ ಬಳಸಿದೆ. ಇದು ಕಂಪನಿಗಳ ಸುರಕ್ಷತೆಗೂ ಅಪಾಯಕಾರಿ.
ಕೆಟ್ಟ ಕಾರ್ಪೊರೇಟ್ ಪಾಸ್‌ವರ್ಡ್‌ಗಳು
123456
123456789
12345678
secret
password
qwerty123
qwerty1
111111
123123
1234567890
ನೋರ್ಡ್ ಪ್ರಸ್ ಕಳೆದ ಐದು ಬಾರಿ ಪ್ರಕಟಿಸಿದ ಕಳಪೆ ಪಾಸ್‌ವರ್ಡ್‌ಗಳಲ್ಲಿ 123456 ಎನ್ನುವುದು ಇತ್ತು. ಇದು ಹೆಚ್ಚು ಜನಪ್ರಿಯ ಪಾಸ್‌ವರ್ಡ್ ಆಗಿದೆ.
ವೈಯಕ್ತಿಕ ಮತ್ತು ಕಾರ್ಪೊರೇಟ್ ಪಾಸ್‌ವರ್ಡ್ ಹೋಲಿಕೆಗಳು
ಆಸಕ್ತಿದಾಯಕ ಸಂಗತಿಯೆಂದರೆ ಪರ್ಸನಲ್ ಮತ್ತು ಕಾರ್ಪೊರೇಟ್ ಲಿಸ್ಟ್‌ನಲ್ಲಿರುವ ಹತ್ತು ಪಾಸ್‌ವರ್ಡ್‌ಗಳು ಒಂದೇ ರೀತಿ ಇವೆ. ಹೆಚ್ಚು ಜನರು ವೈಯಕ್ತಿಕ ಮತ್ತು ಆಫೀಸ್ ಬಳಕೆಯ ಖಾತೆಗಳಿಗೆ ಒಂದೇ ರೀತಿಯ ದುರ್ಬಲ ಪಾಸ್‌ವರ್ಡ್ ಬಳಸುತ್ತಿರುವುದು ತಿಳಿದುಬಂದಿದೆ.
ಸದೃಢ ಪಾಸ್‌ವರ್ಡ್ ಬಳಸಿ ಎಂದು ಮತ್ತೆಮತ್ತೆ ಎಚ್ಚರಿಕೆ ನೀಡುವ ವ್ಯವಸ್ಥೆಗಳಿಂದಾಗಿ ಕಳೆದ ಕೆಲವ ವರ್ಷಗಳಲ್ಲಿ ಜನರು ನೀಡುವ ಪಾಸ್‌ವರ್ಡ್‌ಗಳಲ್ಲಿ ಕೊಂಚ ಸುಧಾರಣೆ ಕಂಡಿದೆ. ನಿಮ್ಮ ಡೇಟಾವನ್ನು ಕಾಪಾಡಿಕೊಳ್ಳಲು ಈಗ ಸದೃಢ ಪಾಸ್‌ವರ್ಡ್ ಜತೆಗೆ 2 ವೇ ವೇರಿಫಿಕೇಷನ್ ಮುಂತಾದ ವ್ಯವಸ್ಥೆಗಳನ್ನೂ ಬಳಸುವುದು ಅಗತ್ಯವಾಗಿದೆ.
ಸುರಕ್ಷಿತ ಪಾಸ್‌ವರ್ಡ್ ರಚನೆಗೆ ಸಲಹೆಗಳು
ಪಾಸ್‌ಕೀಸ್ ಬಳಸಿ (Passkeys): ಈಗ ಪಾಸ್‌ಕೀ ಸಾಕಷ್ಟು ಜನಪ್ರಿಯತೆ ಪಡೆದಿದೆ. ಗೂಗಲ್‌ನಂತಹ ಕಂಪನಿಗಳ ಪಾಸ್‌ಕೀಗೆ ಬೆಂಬಲ ನೀಡುತ್ತದೆ. ನಿಮ್ಮ ಬಯೋಮೆಟ್ರಿಕ್ ಡೇಟಾ ಆಧರಿಸಿ ಲಾಗಿನ್ ಮಾಡಲು ಪಾಸ್‌ಕೀ ನೆರವು ನೀಡುತ್ತದೆ. ಪಾಸ್‌ಕೀ ಸುರಕ್ಷಿತವಾಗಿದ್ದು, ನಿಮಗೆ ಮಾತ್ರ ಬಳಸಲು ಅವಕಾಶ ಇರುತ್ತದೆ.
ಸ್ಟ್ರಾಂಗ್ ಪಾಸ್‌ವರ್ಡ್ ಟೂಲ್‌ಗಳು: ಕಠಿಣ ಪಾಸ್‌ವರ್ಡ್ ರಚಿಸಲು ನಿಮ್ಮಿಂದ ಸಾಧ್ಯ ಇಲ್ಲವಾದರೆ ಆಪಲ್ ಪಾಸ್‌ವರ್ಡ್ ಮ್ಯಾನೇಜರ್, ಗೂಗಲ್ ಪಾಸ್‌ವರ್ಡ್ ಮ್ಯಾನೇಜರ್ ಇತ್ಯಾದಿಗಳನ್ನು ಬಳಸಿ. ಅಪ್ಪರ್‌ಕೇಸ್, ಲೋವರ್‌ಕೇಸ್, ನಂಬರ್, ಸ್ಪೆಷಲ್ ಕ್ಯಾರೆಕ್ಟರ್ ಒಳಗೊಂಡಿರುವ ಪಾಸ್‌ವರ್ಡ್ ರಚಿಸಿ.
ನಿಯಮಿತವಾಗಿ ಪಾಸ್‌ವರ್ಡ್ ಬದಲಾಯಿಸುತ್ತ ಇರಿ: ಡೇಟಾ ಬ್ರೀಚಸ್ ಘಟನೆಗಳು ಆಗಾಗ ಆಗುತ್ತಿವೆ. ಮಾಹಿತಿ ಸೋರಿಕೆಯಿಂದ ಸಾಕಷ್ಟು ಬಳಕೆದಾರರ ಪಾಸ್‌ವರ್ಡ್‌ಗಳು ಹ್ಯಾಕರ್‌ಗಳಿಗೆ ತಿಳಿಯುತ್ತದೆ. ಆಗಾಗ ಪಾಸ್‌ವರ್ಡ್ ಬದಲಾಯಿಸುವ ಅಭ್ಯಾಸ ಮಾಡಿಕೊಳ್ಳಿ.
ಪಾಸ್‌ವರ್ಡ್ ಮ್ಯಾನೇಜರ್: ನೋರ್ಡ್‌ಪ್ರೆಸ್‌ನಂತಹ ಪಾಸ್‌ವರ್ಡ್ ಮ್ಯಾನೇಜರ್ ಟೂಲ್‌ಗಳನ್ನು ಬಳಸಿ. ಗೂಗಲ್ ಪಾಸ್‌ವರ್ಡ್ ಮ್ಯಾನೇಜರ್ ಕೂಡ ಉತ್ತಮವಾಗಿದೆ. ಆಪಲ್ ಬಳಕೆದಾರರು ಆಪಲ್ ಪಾಸ್‌ವರ್ಡ್ ಮ್ಯಾನೇಜರ್ ಬಳಸಬಹುದು.