logo
ಕನ್ನಡ ಸುದ್ದಿ  /  ಜೀವನಶೈಲಿ  /  ಸೆಪ್ಟೆಂಬರ್ 27 ರಿಂದ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಆರಂಭ, ಹಲವು ಸ್ಮಾರ್ಟ್‌ಫೋನ್‌ಗಳ ದರ ಇಳಿಕೆ

ಸೆಪ್ಟೆಂಬರ್ 27 ರಿಂದ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಆರಂಭ, ಹಲವು ಸ್ಮಾರ್ಟ್‌ಫೋನ್‌ಗಳ ದರ ಇಳಿಕೆ

Priyanka Gowda HT Kannada

Dec 16, 2024 04:15 PM IST

google News

ಅಮೆಜಾನ್‌ನಲ್ಲಿ ಗ್ರಾಹಕರಿಗಾಗಿ ಹಬ್ಬದ ಋತುವಿನ ಮಾರಾಟ ಪ್ರಾರಂಭವಾಗಲಿದೆ.

  •  ಸೆಪ್ಟೆಂಬರ್ 27 ರಿಂದ ಆರಂಭವಾಗುವ ಅಮೆಜಾನ್ ಮಾರಾಟದ ಸಮಯದಲ್ಲಿ, ಗ್ರಾಹಕರು ಬ್ಯಾಂಕ್ ಕೊಡುಗೆಗಳು  ಮತ್ತು ವಿನಿಮಯ ಕೊಡುಗೆಗಳ ಪ್ರಯೋಜನವನ್ನು ಪಡೆಯುತ್ತಾರೆ. ಇದರಿಂದ ನೀವು ಇನ್ನಷ್ಟು ಉಳಿತಾಯವನ್ನು ಮಾಡಲು ಸಾಧ್ಯವಾಗುತ್ತದೆ. (ಬರಹ: ವಿನಯ್ ಭಟ್)

ಅಮೆಜಾನ್‌ನಲ್ಲಿ ಗ್ರಾಹಕರಿಗಾಗಿ ಹಬ್ಬದ ಋತುವಿನ ಮಾರಾಟ ಪ್ರಾರಂಭವಾಗಲಿದೆ.
ಅಮೆಜಾನ್‌ನಲ್ಲಿ ಗ್ರಾಹಕರಿಗಾಗಿ ಹಬ್ಬದ ಋತುವಿನ ಮಾರಾಟ ಪ್ರಾರಂಭವಾಗಲಿದೆ. (Pexels)

ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್​ನಲ್ಲಿ ಇದ್ದೀರಾ? ಹಾಗಾದರೆ ನಿಮಗಾಗಿ, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಪ್ರಾರಂಭವಾಗಲಿದೆ. ಅಮೆಜಾನ್‌ನಲ್ಲಿ ಗ್ರಾಹಕರಿಗಾಗಿ ಹಬ್ಬದ ಋತುವಿನ ಮಾರಾಟ ಪ್ರಾರಂಭವಾಗಲಿದೆ. ನೀವು ಹೊಸ ಗೃಹೋಪಯೋಗಿ ವಸ್ತು ಅಥವಾ ಹೊಸ ಫೋನ್ ಖರೀದಿಸಲು ಯೋಜಿಸುತ್ತಿದ್ದರೆ? ನಿಮಗೆ ಬೇಕಾದವುಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಸೇಲ್ ಸೆಪ್ಟೆಂಬರ್ 27 ರಿಂದ ಪ್ರಾರಂಭವಾಗಲಿದೆ.

ಅಮೆಜಾನ್ ಮಾರಾಟದ ಸಮಯದಲ್ಲಿ, ಗ್ರಾಹಕರು ಬ್ಯಾಂಕ್ ಕೊಡುಗೆಗಳು, ಯಾವುದೇ ವೆಚ್ಚದ ಇಎಂಐ ಮತ್ತು ವಿನಿಮಯ ಕೊಡುಗೆಗಳ ಪ್ರಯೋಜನವನ್ನು ಪಡೆಯುತ್ತಾರೆ. ಇದರಿಂದ ನೀವು ಇನ್ನಷ್ಟು ಉಳಿತಾಯವನ್ನು ಮಾಡಲು ಸಾಧ್ಯವಾಗುತ್ತದೆ. ಮಾರಾಟದ ಸಮಯದಲ್ಲಿ ಯಾವ ಕಂಪನಿಯ ಯಾವ ಮಾದರಿಗಳ ಫೋನುಗಳು ಬಂಪರ್ ರಿಯಾಯಿತಿಗಳನ್ನು ಪಡೆಯುತ್ತವೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ಇದರಲ್ಲಿ 40ಕ್ಕೂ ಅಧಿಕ ಫೋನುಗಳಿವೆ.

ಸ್ಯಾಮ್​ಸಂಗ್ ಸ್ಮಾರ್ಟ್‌ಫೋನ್‌ಗಳು: ಸ್ಯಾಮ್​ಸಂಗ್ ಗ್ಯಾಲಕ್ಸಿ ಎಂ35 5ಜಿ, ಸ್ಯಾಮ್​ಸಂಗ್ ಗ್ಯಾಲಕ್ಸಿ S24 ಆಲ್ಟ್ರಾ 5ಜಿ, ಸ್ಯಾಮ್​ಸಂಗ್ ಗ್ಯಾಲಕ್ಸಿ ಎ35 5ಜಿ, ಸ್ಯಾಮ್​ಸಂಗ್ ಗ್ಯಾಲಕ್ಸಿ ಎ55 5ಜಿ, ಸ್ಯಾಮ್​ಸಂಗ್ ಗ್ಯಾಲಕ್ಸಿ ಎಂ15 5ಜಿ, ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್‌21ಎಫ್‌ಇ 5ಜಿ, ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್‌24 5ಜಿ, ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಝಡ್‌ ಫ್ಲಿಪ್ 6,5 ರಿಯಾಯಿತಿಯೊಂದಿಗೆ ಲಭ್ಯವಿದೆ.

ಒನ್ ಪ್ಲಸ್ ಸ್ಮಾರ್ಟ್‌ಫೋನ್‌ಗಳು: ಅಮೆಜಾನ್ ಮಾರಾಟದ ಸಮಯದಲ್ಲಿ, ಒನ್​ಪ್ಲಸ್ 11 ಆರ್‌ 5ಜಿ, ಒನ್​ಪ್ಲಸ್ 12, ಒನ್​ಪ್ಲಸ್ 12ಆರ್‌ ಒನ್​ಪ್ಲಸ್ ನಾರ್ಡ್ ಸಿಇ 4 ಲೈಟ್ 5ಜಿ, ಒನ್​ಪ್ಲಸ್ ನಾರ್ಡ್ ಸಿಇ 4 ಮತ್ತು ಇತರ ಒನ್​ಪ್ಲಸ್ ಮಾದರಿಗಳು ಅಗ್ಗದ ಬೆಲೆಯಲ್ಲಿ ಲಭ್ಯವಿರುತ್ತವೆ.

ಐಕ್ಯೂ ಸ್ಮಾರ್ಟ್‌ಫೋನ್‌ಗಳು: ಐಕ್ಯೂ ಫೋನುಗಳು ಕೂಡ ಈ ಸೇಲ್​ನಲ್ಲಿ ಅತಿ ಕಡಿಮೆ ಬೆಲೆಗೆ ಮಾರಾಟ ಕಾಣಲಿದೆ. ಐಕ್ಯೂ ಝಡ್‌9ಎಸ್‌ 5ಜಿ, ಝಡ್‌9ಎಸ್‌ ಪ್ರೊ 5ಜಿ, ಝಡ್‌9 5ಜಿ, ಝಡ್‌9 ಲೈಟ್‌ 5ಜಿ, ಝಡ್‌9 ಎಕ್ಸ್‌ 5ಜಿ, ಐಕ್ಯೂ ನಿಯೋ 9 ಪ್ರೊ 5ಜಿ, ಐಕ್ಯೂ ಝಡ್‌7 ಪ್ರೊ 5ಜಿ, ಐಕ್ಯೂ 12 5ಜಿ ಸೇರಿದಂತೆ ಇತರ ಮಾದರಿಗಳು ಬಂಪರ್ ರಿಯಾಯಿತಿಯಲ್ಲಿ ಲಭ್ಯವಿರುತ್ತವೆ.

ರಿಯಲ್ ಮಿ ಸ್ಮಾರ್ಟ್‌ಫೋನ್‌ಗಳು: ಮಾರಾಟದ ಸಮಯದಲ್ಲಿ, ರಿಯಲ್ ಮಿ ನಾರ್ಜೊ 70 ಪ್ರೊ 5G, ರಿಯಲ್ ಮಿ GT 6T 5ಜಿ, ರಿಯಲ್ ಮಿ ನಾರ್ಜೊ ಎನ್‌61, ನಾರ್ಜೊ 70ಎಕ್ಸ್‌ 5ಜಿ ಮತ್ತು ನಾರ್ಜೊ ಎನ್‌65 5ಜಿ ಸೇರಿದಂತೆ ಇತರೆ ರಿಯಲ್ ಮಿ ಮೊಬೈಲ್‌ಗಳನ್ನು ಅಗ್ಗದ ದರದಲ್ಲಿ ಖರೀದಿಸಲು ಅವಕಾಶವಿರುತ್ತದೆ.

ಶವೋಮಿ ಮತ್ತು ರೆಡ್ಮಿ ಸ್ಮಾರ್ಟ್‌ಫೋನ್‌ಗಳು: ಶವೋಮಿ 14 ಸಿವಿ, ರೆಡ್ಮಿ 13 5ಜಿ, ರೆಡ್ಮಿ ನೋಟ್ 13 5ಜಿ, ರೆಡ್ಮಿ ನೋಟ್ 13 ಪ್ರೊ ಪ್ಲಸ್, ಶವೋಮಿ 14, ರೆಡ್ಮಿ 13C 5ಜಿ, ರೆಡ್ಮಿ ಎ3ಎಕ್ಸ್‌ ಮತ್ತು ರೆಡ್ಮಿ ನೋಟ್ 13 ಪ್ರೊ 5ಜಿ ಮೊಬೈಲ್‌ಗಳು ಮಾರಾಟದಲ್ಲಿ ಬೆಲೆ ಕಡಿತವಾಗಲಿದೆ.

ಪೋಕೋ ಸ್ಮಾರ್ಟ್‌ಫೋನ್‌ಗಳು: ನೀವು ಪೋಕೋ ಎಕ್ಸ್‌6 ನಿಯೋ 5ಜಿ, ಪೋಕೋ ಎಂ6 5ಜಿ, ಪೋಕೋ ಸಿ65, ಪೋಕೋ ಎಕ್ಸ್‌ 6 5ಜಿ ಮತ್ತು ಪೋಕೋ ಎಂ6 ಪ್ರೊ 5ಜಿ ಸೇರಿದಂತೆ ಇತರ ಪೋಕೋ ಮೊಬೈಲ್ ಫೋನ್‌ಗಳನ್ನು ಖರೀದಿಸುವ ಪ್ಲಾನ್​ನಲ್ಲಿದ್ದರೆ ಮಾರಾಟದ ಸಮಯದಲ್ಲಿ ಇದು ಕೂಡ ಅಗ್ಗದ ಬೆಲೆಯಲ್ಲಿ ಪಡೆಯುತ್ತೀರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ