logo
ಕನ್ನಡ ಸುದ್ದಿ  /  ಜೀವನಶೈಲಿ  /  ಆಪಲ್‌ ಸ್ಟುಡೆಂಟ್‌ ಆಫರ್‌: ವಿದ್ಯಾರ್ಥಿಗಳೇ ಉಚಿತವಾಗಿ ಏರ್‌ಪಾಡ್ಸ್‌, ಆಪಲ್‌ ಪೆನ್ಸಿಲ್‌ ಬೇಕಿದ್ರೆ ಹೀಗೆ ಮಾಡಿ, ಸೀಮಿತ ಅವಧಿಯ ಕೊಡುಗೆ

ಆಪಲ್‌ ಸ್ಟುಡೆಂಟ್‌ ಆಫರ್‌: ವಿದ್ಯಾರ್ಥಿಗಳೇ ಉಚಿತವಾಗಿ ಏರ್‌ಪಾಡ್ಸ್‌, ಆಪಲ್‌ ಪೆನ್ಸಿಲ್‌ ಬೇಕಿದ್ರೆ ಹೀಗೆ ಮಾಡಿ, ಸೀಮಿತ ಅವಧಿಯ ಕೊಡುಗೆ

Praveen Chandra B HT Kannada

Sep 17, 2024 06:40 PM IST

google News

ಆಪಲ್‌ ಸ್ಟುಡೆಂಟ್‌ ಆಫರ್‌: ಈ ಆಫರ್‌ ಮೂಲಕ ಮ್ಯಾಕ್‌ ಮತ್ತು ಐಪ್ಯಾಡ್‌ ಮಾಡೆಲ್‌ ಖರೀದಿಗೆ ಗಮನಾರ್ಹವಾಗಿ ದರ ಕಡಿತ ದೊರಕಲಿದೆ.

  • ನೀವು ವಿದ್ಯಾರ್ಥಿಯಾಗಿದ್ದು ಆಪಲ್‌ ಪ್ರಾಡಕ್ಟ್‌ನಲ್ಲಿ ಡಿಸ್ಕೌಂಟ್‌ ಬಯಸುತ್ತಿರುವಿರಾ? ಈ ಲೇಖನದಲ್ಲಿ ಉಚಿತ ಏರ್‌ಪಾಡ್ಸ್‌ ಅಥವಾ ಆಪಲ್‌ ಪೆನ್ಸಿಲ್‌ ಅನ್ನು ನಿಮ್ಮ ಖರೀದಿ ಸಮಯದಲ್ಲಿ ಉಚಿತವಾಗಿ ಹೇಗೆ ಪಡೆಯಬಹುದು ಎಂದು ತಿಳಿಯೋಣ.

ಆಪಲ್‌ ಸ್ಟುಡೆಂಟ್‌ ಆಫರ್‌: ಈ ಆಫರ್‌ ಮೂಲಕ ಮ್ಯಾಕ್‌ ಮತ್ತು ಐಪ್ಯಾಡ್‌ ಮಾಡೆಲ್‌ ಖರೀದಿಗೆ ಗಮನಾರ್ಹವಾಗಿ ದರ ಕಡಿತ ದೊರಕಲಿದೆ.
ಆಪಲ್‌ ಸ್ಟುಡೆಂಟ್‌ ಆಫರ್‌: ಈ ಆಫರ್‌ ಮೂಲಕ ಮ್ಯಾಕ್‌ ಮತ್ತು ಐಪ್ಯಾಡ್‌ ಮಾಡೆಲ್‌ ಖರೀದಿಗೆ ಗಮನಾರ್ಹವಾಗಿ ದರ ಕಡಿತ ದೊರಕಲಿದೆ. (Pexels)

ಬೆಂಗಳೂರು: ಭಾರತದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ "ಯೂನಿಡೇಸ್‌" ಮಾರಾಟವನ್ನು ಆಪಲ್‌ ಆರಂಭಿಸಿದೆ. ಇದು ಸೀಮಿತ ಅವಧಿಯ ಆಫರ್‌ ಆಗಿದೆ. ಈ ಆಫರ್‌ ಮೂಲಕ ಮ್ಯಾಕ್‌ ಮತ್ತು ಐಪ್ಯಾಡ್‌ ಮಾಡೆಲ್‌ ಖರೀದಿಗೆ ಗಮನಾರ್ಹವಾಗಿ ದರ ಕಡಿತ ದೊರಕಲಿದೆ. ಇಷ್ಟು ಮಾತ್ರವಲ್ಲದೆ ಉಚಿತ ಏರ್‌ ಪಾಡ್‌ಗಳು ಅಥವಾ ಆಪಲ್‌ ಪೆನ್ಸಿಲ್‌ ಪಡೆಯುವ ಅವಕಾಶವೂ ಇದೆ. ಈ ಪ್ರಮೋಷನ್‌ ಆಫರ್‌ನಲ್ಲಿ ಆಪಲ್‌ ಕೇರ್‌ ಪ್ಲಸ್‌ ಖರೀದಿಸುವವರಿಗೆ ಶೇಕಡ 20 ಡಿಸ್ಕೌಂಟ್‌ ಕೂಡ ದೊರಕಲಿದೆ. ಆಪಲ್‌ ಎಜುಕೇಷನ್‌ ಸ್ಟೋರ್‌ನಲ್ಲಿ ಸೆಪ್ಟೆಂಬರ್‌ 30, 2024ರವರೆಗೆ ಈ ಆಫರ್‌ ದೊರಕಲಿದೆ.

ಅರ್ಹ ವಿದ್ಯಾರ್ಥಿಗಳು ಮತ್ತು ಸ್ಟಾಫ್‌ಗಳು ಮೆಕ್‌ಬುಕ್‌ ಏರ್‌ ಅನ್ನು 89,900 (ಆರಂಭಿಕ ದರ) ರೂನಿಂದ ಖರೀದಿಸಬಹುದು. ಇದರ ಜತೆಗೆ ಒಂದು ಸೆಟ್‌ ಏರ್‌ಪಾಡ್‌ 4 ದೊರಕಲಿದೆ. ಇದರೊಂದಿಗೆ ಹೆಚ್ಚುವರಿ ವೆಚ್ಚವಿಲ್ಲದೆ ಲೈಟಿಂಗ್‌ ಚಾರ್ಜಿಂಗ್‌ ಕೇಸ್‌ ಕೂಡ ದೊರಕಲಿದೆ. ಐಪ್ಯಾಡ್‌ಗಳ ಕುರಿತು ಆಸಕ್ತಿ ಇರುವವರು ಐಪ್ಯಾಡ್‌ ಏರ್‌ ಅನ್ನು 54,900 ರೂಗೆ ಖರೀದಿಸಬಹುದು. ಇದರ ಜತೆಗೆ ಉಚಿತವಾಗಿ ಆಪಲ್‌ ಪೆನ್ಸಿಲ್‌ ದೊರಕಲಿದೆ.

ಈ ಆಫರ್‌ ಉನ್ನತ ಮಾಡೆಲ್‌ಗಳಿಗೂ ಇದೆ. ಮ್ಯಾಕ್‌ ಪ್ರೋ 158,900 ರೂಪಾಯಿಗೆ ವಿದ್ಯಾರ್ಥಿಗಳಿಗೆ ದೊರಕುತ್ತದೆ. ಇದರ ಜತೆ ಉಚಿತ ಏರ್‌ಪಾಡ್‌ಗಳು ದೊರಕುತ್ತವೆ. ಐಪ್ಯಾಡ್‌ ಪ್ರೋ ಆರಂಭಿಕ ದರ 89,900 ರೂಪಾಯಿ ಇದೆ. ಇದರ ಜತೆಗೆ ಆಪಲ್‌ ಪೆನ್ಸಿಲ್‌ ಉಚಿತವಾಗಿ ದೊರಕುತ್ತದೆ. ಇಷ್ಟು ಮಾತ್ರವಲ್ಲದೆ ಮ್ಯಾಕ್‌ ಮಿನಿ ಮತ್ತು ಐಮ್ಯಾಕ್‌ಗಳಿಗೂ ಸ್ಟುಡೆಂಟ್‌ ಆಫರ್‌ ದೊರಕುತ್ತದೆ. ಇವುಗಳಿಗೆ ಡಿಸ್ಕೌಂಟ್ಸ್‌ ಜತೆಗೆ ಉಚಿತ ಏರ್‌ಪಾಡ್‌ಗಳು ದೊರಕುತ್ತವೆ.

ಸ್ಟುಡೆಂಟ್‌ ಆಫರ್‌ಗೆ ಅರ್ಹ ಡಿವೈಸ್‌ಗಳು

  • ಮ್ಯಾಕ್‌ಬುಕ್ ಏರ್ ಎಂ2
  • ಮ್ಯಾಕ್‌ಬುಕ್ ಏರ್ ಎಂ3
  • ಮ್ಯಾಕ್‌ಬುಕ್ ಪ್ರೊ 14-ಇಂಚು- ಎಂ3
  • ಮ್ಯಾಕ್‌ಬುಕ್ ಪ್ರೊ 16-ಇಂಚು- ಎಂ3
  • ಐಮ್ಯಾಕ್‌ ಎಂ3
  • ಜೊತೆಗೆ ಮ್ಯಾಕ್ ಮಿನಿ ಎಂ2
  • ಐಪ್ಯಾಡ್‌ ಪ್ರೊ 13-ಇಂಚು (ಎಂ4)
  • ಐಪ್ಯಾಡ್‌ ಪ್ರೊ 11-ಇಂಚು (ಎಂ4)
  • ಐಪ್ಯಾಡ್ ಏರ್ 13-ಇಂಚು (ಎಂ2)
  • ಐಪ್ಯಾಡ್ ಏರ್ 11-ಇಂಚು (ಎಂ2)

ಉಚಿತ ಏರ್‌ ಪಾಡ್‌ಗಳು ಅಥವಾ ಆಪಲ್‌ ಪೆನ್ಸಿಲ್‌ ಮಾತ್ರವಲ್ಲದೆ ಮ್ಯಾಕ್‌ ಅಥವಾ ಐಪ್ಯಾಡ್‌ ಖರೀದಿಸುವ ವಿದ್ಯಾರ್ಥಿಗಳು ಆಪಲ್‌ ಕೇರ್‌ ಪ್ಲಸ್‌ ಪ್ಲ್ಯಾನ್‌ಗಳನ್ನು ಖರೀದಿಸಿದರೆ ಶೇಕಡ 20 ಡಿಸ್ಕೌಂಟ್‌ ದೊರಕುತ್ತದೆ. ಈ ಪ್ಲ್ಯಾನ್‌ಗಳು ಖರೀದಿಸಿದ ಸಾಧನಗಳಿಗೆ ಆಕಸ್ಮಿಕವಾಗಿ ಹಾನಿಯಾದರೆ ಪರಿಹಾರ ನೀಡುತ್ತವೆ. ಇದರೊಂದಿಗೆ ಆಪಲ್‌ ಕಂಪನಿಯು ವಿಶೇಷ ಆಫಲ್‌ ಮ್ಯೂಸಿಕ್‌ ಸ್ಟುಂಡೆಂಟ್‌ ಡೀಲ್‌ ಕೂಡ ನಡೆಯುತ್ತಿದೆ. ಇದರ ಮೂಲಕ ಆಪಲ್‌ ಟಿವಿ ಪ್ಲಸ್‌ ಉಚಿತವಾಗಿ ನೋಡಬಹುದು.

ಈ ಸ್ಟುಡೆಂಟ್‌ ಆಫರ್‌ "ಯುನಿಡೇಸ್‌" ಪಡೆಯಲು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ತಮ್ಮ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ಸಂಸ್ಥೆಯ ಐಡಿ ಹೊಂದಿರಬೇಕು. ಇದನ್ನು ಯೂನಿಡೇಸ್‌ ಥರ್ಡ್‌ಪಾರ್ಟಿ ಮೂಲಕ ದೃಢೀಕರಣ ಮಾಡಲಿದೆ. ಈ ಪ್ರಮೋಷನ್‌ ಅನ್ನು ಬೇರೆ ಆಫರ್‌ಗಳ ಜತೆ ಜೋಡಿಸಲು ಸಾಧ್ಯವಿಲ್ಲ. ಈ ಆಫರ್‌ ಸೆಪ್ಟೆಂಬರ್‌ 30, 2024ರವರೆಗೆ ಚಾಲ್ತಿಯಲ್ಲಿ ಇರಲಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ