logo
ಕನ್ನಡ ಸುದ್ದಿ  /  ಜೀವನಶೈಲಿ  /  ಗೂಗಲ್‌ Theft Protection ಕಂಡು ಮೊಬೈಲ್‌ ಕಳ್ಳರು ಗಾಬರಿ, ಇನ್ಮುಂದೆ ಸುಲಭವಿಲ್ಲ ರಾಬರಿ; ಆಂಡ್ರಾಯ್ಡ್‌ನ ಹೊಸ ಸೇಫ್ಟಿ ಫೀಚರ್‌ ಹೀಗಿದೆ ನೋಡಿ

ಗೂಗಲ್‌ Theft protection ಕಂಡು ಮೊಬೈಲ್‌ ಕಳ್ಳರು ಗಾಬರಿ, ಇನ್ಮುಂದೆ ಸುಲಭವಿಲ್ಲ ರಾಬರಿ; ಆಂಡ್ರಾಯ್ಡ್‌ನ ಹೊಸ ಸೇಫ್ಟಿ ಫೀಚರ್‌ ಹೀಗಿದೆ ನೋಡಿ

Praveen Chandra B HT Kannada

Oct 07, 2024 10:37 AM IST

google News

ಮೊಬೈಲ್‌ ಕಳ್ಳತನದಿಂದ ರಕ್ಷಣೆ ನೀಡುವ ಗೂಗಲ್‌ ಸುರಕ್ಷತೆಯ ಫೀಚರ್‌

  • ಆಂಡ್ರಾಯ್ಡ್‌ I/O 2024 ಅಪ್‌ಡೇಟ್‌ನಲ್ಲಿ ಗೂಗಲ್‌ ಹೊಸ ಸುರಕ್ಷತಾ ಫೀಚರ್‌ಗಳನ್ನು ಪರಿಚಯಿಸುತ್ತಿದೆ. ಸ್ಮಾರ್ಟ್‌ಫೋನ್‌ನಲ್ಲಿ ಅನುಮಾನಾಸ್ಪದ ಚಟುವಟಿಕೆ ಕಂಡರೆ ಥೆಪ್ಟ್‌ ಪ್ರೊಟೆಕ್ಷನ್‌ ಎಚ್ಚರಿಕೆವಹಿಸುತ್ತದೆ. ನಿಮ್ಮ ಸಾಧನದ ಡೇಟಾವನ್ನು ರಕ್ಷಿಸುತ್ತದೆ.

ಮೊಬೈಲ್‌ ಕಳ್ಳತನದಿಂದ ರಕ್ಷಣೆ ನೀಡುವ ಗೂಗಲ್‌ ಸುರಕ್ಷತೆಯ ಫೀಚರ್‌
ಮೊಬೈಲ್‌ ಕಳ್ಳತನದಿಂದ ರಕ್ಷಣೆ ನೀಡುವ ಗೂಗಲ್‌ ಸುರಕ್ಷತೆಯ ಫೀಚರ್‌

ಮೊಬೈಲ್‌ ಕಳ್ಳತನಗೊಂಡರೆ ಟೆನ್ಷನ್‌ ಆಗೋದು ಸಹಜ. ಒಂದು ಕಡೆ ಮೊಬೈಲ್‌ಗೆ ನೀಡಿರುವ ಹಣ ಲಾಸ್‌ ಆದ ಚಿಂತೆ. ಇನ್ನೊಂದೆಡೆ ಸ್ಮಾರ್ಟ್‌ಫೋನ್‌ನಲ್ಲಿರುವ ಪ್ರಮುಖ ಮಾಹಿತಿಗಳು ಕಳುವಾಗುವ ಚಿಂತೆ. ನಮ್ಮ ಫೋಟೋಗಳು, ವಿಡಿಯೋಗಳ ದುರ್ಬಳಕೆಯಾಗಬಹುದು ಎಂಬ ಆತಂಕ ಇರುತ್ತದೆ. ಇಷ್ಟು ಮಾತ್ರವಲ್ಲ, ನಮ್ಮ ಫೋನ್‌ನಲ್ಲಿರುವ ಡೇಟಾವನ್ನು ಕಳ್ಳರು ಏನು ಬೇಕಾದರೂ ಮಾಡಬಹುದು, ನಮ್ಮ ಬ್ಯಾಂಕ್‌ಗೂ ಕನ್ನ ಹಾಕಬಹುದು. ಇದೀಗ ಆಂಡ್ರಾಯ್ಡ್‌ ಫೋನ್‌ನ ಸುರಕ್ಷತೆಗೆ ಗೂಗಲ್‌ ಇನ್ನಷ್ಟು ಕ್ರಮ ಕೈಗೊಳ್ಳುತ್ತಿದೆ. ಆಂಡ್ರಾಯ್ಡ್‌ I/O 2024 ಅಪ್‌ಡೇಟ್‌ನಲ್ಲಿ ಗೂಗಲ್‌ ಹೊಸ ಸುರಕ್ಷತಾ ಫೀಚರ್‌ಗಳನ್ನು ಪರಿಚಯಿಸುತ್ತಿದೆ. ಸ್ಮಾರ್ಟ್‌ಫೋನ್‌ನಲ್ಲಿ ಅನುಮಾನಾಸ್ಪದ ಚಟುವಟಿಕೆ ಕಂಡರೆ ಥೆಪ್ಟ್‌ ಪ್ರೊಟೆಕ್ಷನ್‌ ಎಚ್ಚರಿಕೆವಹಿಸುತ್ತದೆ. ನಿಮ್ಮ ಸಾಧನದ ಡೇಟಾವನ್ನು ರಕ್ಷಿಸುತ್ತದೆ.

ಈ ಫೀಚರ್‌ಗಳಿಂದ ಅನೇಕ ಪ್ರಯೋಜನಗಳು ಇವೆ. ಅದು ಸ್ವಯಂಚಾಲಿತವಾಗಿ ಅನುಮಾನಾಸ್ಪದ ಸಂಕೇತಗಳನ್ನು ಗುರುತಿಸುತ್ತದೆ. ಇಂತಹ ಸಂದರ್ಭದಲ್ಲಿ ಮೊದಲಿಗೆ ನಿಮ್ಮ ಡೇಟಾವನ್ನು ರಕ್ಷಿಸುತ್ತದೆ. ಗೂಗಲ್‌ ಪ್ಲೇ ಮೂಲಕ ಆಂಡ್ರಾಯ್ಡ್‌ 10 ನಂತರದ ಸಾಧನಗಳಿಗೆ ಈ ಫೀಚರ್‌ ಲಭ್ಯವಿರಲಿದೆ. ಬಳಕೆದಾರರು ಸೆಟ್ಟಿಂಗ್ಸ್‌ಗೆ ಹೋಗಿ Theft protection ಆನ್‌ಮಾಡಬಹುದು. ಗೂಗಲ್‌ನ ಎಲ್ಲಾ ಸೇವೆಗಳ ಟ್ಯಾಬ್‌- ಪರ್ಸನಲ್‌ ಆಂಡ್‌ ಡಿವೈಸ್‌ ಸೇಫ್ಟಿ ವಿಭಾಗದಲ್ಲಿಯೂ (Google services page > All services tab > Personal & device safety) ಇದನ್ನು ಆಕ್ಟಿವೇಟ್‌ ಮಾಡಬಹುದು.

ಥೆಫ್ಟ್‌ ಡಿಟೆಕ್ಷನ್‌ ಲಾಕ್‌

ಗೂಗಲ್‌ ಎಐನಲ್ಲಿ ಥೆಫ್ಟ್‌ ಡಿಟೆಕ್ಷನ್‌ ಲಾಕ್‌ ಎನ್ನುವುದು ಶಕ್ತಿಶಾಲಿ ಹೊಸ ಫೀಚರ್‌ ಆಗಿದೆ. ಎಲ್ಲಾದರೂ ನಿಮ್ಮ ಮೊಬೈಲ್‌ ಫೋನ್‌ ಅನ್ನು ಕಸಿದುಕೊಂಡು ಓಡಿದರೆ, ಬೈಕ್‌ನಲ್ಲಿ ಬಂದು ಎಳೆದುಕೊಂಡು ಹೋದ್ರೆ ಇದರಲ್ಲಿರುವ ಥೆಪ್ಟ್‌ ಡಿಟೆಕ್ಷನ್‌ ಗುರುತಿಸುತ್ತದೆ. ತಕ್ಷಣ ನಿಮ್ಮ ಫೋನ್‌ನ ಸ್ಕ್ರೀನ್‌ ಲಾಕ್‌ ಆಗುತ್ತದೆ. ಯಾವುದೇ ಡೇಟಾವನ್ನು ಬಳಸದಂತೆ ನೋಡಿಕೊಳ್ಳುತ್ತದೆ.

ಆಫ್‌ಲೈನ್‌ ಡಿವೈಸ್‌ ಲಾಕ್‌

ಕಳ್ಳರು ಸಾಕಷ್ಟು ಬುದ್ದಿವಂತರು ಇರುತ್ತಾರೆ. ಮೊಬೈಲ್‌ ಕಳ್ಳತನ ಮಾಡಿದ ಬಳಿಕ ಆಫ್‌ಲೈನ್‌ ಮಾಡುತ್ತಾರೆ. ಇದಕ್ಕಾಗಿಯೇ ಗೂಗಲ್‌ ಆಫ್‌ಲೈನ್‌ ಡಿವೈಸ್‌ ಲಾಕ್‌ ಪರಿಚಯಿಸಿದೆ. ನಿಮ್ಮ ಮೊಬೈಲ್‌ ಬೇರೆಯವರ ಕೈಯಲ್ಲಿ (ರಾಂಗ್‌ ಹ್ಯಾಂಡ್‌) ಇರುವುದನ್ನೂ ಇದು ಗುರುತಿಸುತ್ತದೆ. ಲಾಗಿನ್‌ ಪ್ರಯತ್ನ ಹಲವು ಬಾರಿ ವಿಫಲವಾದ ಸಂದರ್ಭದಲ್ಲಿಯೂ ಸ್ಕ್ರೀನ್‌ ಲಾಕ್‌ ಆಗುತ್ತದೆ.

ರಿಮೋಟ್‌ ಲಾಕ್‌

ನೀವು ಬೇರೆ ಸಾಧನದ ಮೂಲಕ ಕೇವಲ ಮೊಬೈಲ್‌ ಫೋನ್‌ ಸಂಖ್ಯೆ ಬಳಸಿ ರಿಮೋಟ್‌ಲಾಕ್‌ ಮಾಡಬಹುದು. ಇಂತಹ ಸಂದರ್ಭದಲ್ಲಿ ಲಾಗಿನ್‌ ಆಗಲು ಸೆಕ್ಯುರಿಟಿ ಕೊಶ್ಚನ್‌ ಕೇಳುತ್ತದೆ. ಫೈಂಡ್‌ ಮೈ ಡಿವೈಸ್‌ ಆಯ್ಕೆ ಮೂಲಕ ಖಾತೆಯ ವಿವರವನ್ನು ರಿಕವರ್‌ ಮಾಡಿಕೊಳ್ಳಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ