Tech Tips: ವಾಟ್ಸಪ್‌ನಲ್ಲಿ ನಿಮ್ಮನ್ನು ಯಾರೋ ಬ್ಲಾಕ್‌ ಮಾಡಿರಬಹುದು, ಇದನ್ನು ತಿಳಿಯೋದು ಹೇಗೆ, ಈ ಟೆಕ್‌ ಟ್ರಿಕ್ಸ್‌ ಅನುಸರಿಸಿ-technology news being blocked by someone how to know if someone has blocked you on whatsapp tech tips tricks pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Tech Tips: ವಾಟ್ಸಪ್‌ನಲ್ಲಿ ನಿಮ್ಮನ್ನು ಯಾರೋ ಬ್ಲಾಕ್‌ ಮಾಡಿರಬಹುದು, ಇದನ್ನು ತಿಳಿಯೋದು ಹೇಗೆ, ಈ ಟೆಕ್‌ ಟ್ರಿಕ್ಸ್‌ ಅನುಸರಿಸಿ

Tech Tips: ವಾಟ್ಸಪ್‌ನಲ್ಲಿ ನಿಮ್ಮನ್ನು ಯಾರೋ ಬ್ಲಾಕ್‌ ಮಾಡಿರಬಹುದು, ಇದನ್ನು ತಿಳಿಯೋದು ಹೇಗೆ, ಈ ಟೆಕ್‌ ಟ್ರಿಕ್ಸ್‌ ಅನುಸರಿಸಿ

Whatsapp Tips and Tricks: ಫೇಸ್‌ಬುಕ್‌ ಮೆಟಾ ಮಾಲೀಕತ್ವದ ವಾಟ್ಸಪ್‌ ಮೆಸೆಂಜರ್‌ನಲ್ಲಿ ನಿಮ್ಮನ್ನು ಯಾರಾದರೂ ಬ್ಲಾಕ್‌ ಮಾಡಿದ್ದರೆ, ಅದನ್ನು ತಿಳಿಯೋದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಅದಕ್ಕೆ ಇಲ್ಲಿದೆ ಪರಿಹಾರ.

ವಾಟ್ಸಪ್‌ನಲ್ಲಿ ನಿಮ್ಮನ್ನು ಯಾರಾದರೂ ಬ್ಲಾಕ್‌ ಮಾಡಿದ್ದರೆ ತಿಳಿಯೋದು ಹೇಗೆ
ವಾಟ್ಸಪ್‌ನಲ್ಲಿ ನಿಮ್ಮನ್ನು ಯಾರಾದರೂ ಬ್ಲಾಕ್‌ ಮಾಡಿದ್ದರೆ ತಿಳಿಯೋದು ಹೇಗೆ

ವಾಟ್ಸ್‌ಆಪ್‌ ಎನ್ನುವುದು ಜಗತ್ತಿನ ಜನಪ್ರಿಯ ಮೆಸೆಂಜಿಂಗ್‌ ಪ್ಲಾಟ್‌ಫಾರ್ಮ್‌. ಫೇಸ್‌ಬುಕ್‌ ಮಾಲೀಕತ್ವದ ವಾಟ್ಸಪ್‌ ಸಾಕಷ್ಟು ಅಪ್‌ಡೇಟ್‌ ಆಗಿದೆ. ಇದು ಬಹುತೇಕ ಜನರ ಬದುಕಿನ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಬೆಳಗ್ಗೆ ಎದ್ದಾಗ ವಾಟ್ಸಪ್‌ ನೋಡಿ ಎದ್ದೇಳೋದು, ತಮ್ಮ ಆಪ್ತರಿಗೆ ಸಂದೇಶ ಕಳುಹಿಸುವುದು, ಲೋಕದಲ್ಲಿ ಏನೆಲ್ಲ ನಡೆಯುತ್ತಿದೆ ಎಂದು ವಾಟ್ಸಪ್‌ ಗ್ರೂಪ್‌ಗಳಲ್ಲಿ, ಚಾನೆಲ್‌ಗಳಲ್ಲಿ ಸುದ್ದಿ ಓದಲು ವಾಟ್ಸಪ್‌ ಪ್ರಮುಖ ವೇದಿಕೆಯಾಗಿದೆ.

ಸ್ನೇಹಿತರು, ಬಂಧುಬಳಗ, ಪ್ರೇಮಿಗಳಿಗೆ ವಾಟ್ಸಪ್‌ ಪ್ರಮುಖ ಸಂದೇಶವಾಹಕ. ವಾಟ್ಸಪ್‌ನಲ್ಲೇ ಹರಟೆ, ಜಗಳ ಎಲ್ಲವೂ ನಡೆಯುತ್ತದೆ. ಕೆಲವೊಮ್ಮೆ ನಿಮಗೆ ಗೊತ್ತಿಲ್ಲದೆ ನಿಮ್ಮನ್ನು ಯಾರಾದರೂ ಬ್ಲಾಕ್‌ ಮಾಡಿರಬಹುದು. ಈ ರೀತಿ ನಿಮ್ಮನ್ನು ಯಾರಾದರೂ ಬ್ಲಾಕ್‌ ಮಾಡಿದ್ದಾರೆ ಎಂದು ತಿಳಿಯಲು ನೇರವಾದ ಹಾದಿ ಇಲ್ಲ. ಪ್ರೇಮ ಪ್ರಕರಣಗಳಲ್ಲಿ ಇಂತಹ ಬ್ಲಾಕ್‌ ಪ್ರಕರಣಗಳು ಹೆಚ್ಚಾಗಿ ನಡೆಯುತ್ತವೆ. ಇನ್ನು ಕೆಲವು ಕಿರಿಕಿರಿ ಮನುಷ್ಯರಿಂದ ದೂರ ಇರಲು ಬಯಸಲು ಇಂತಹ ಬ್ಲಾಕ್‌ ಅಸ್ತ್ರ ಬಳಸಲಾಗುತ್ತದೆ. ಕೆಲವೊಮ್ಮೆ ಇನ್ನೊಬ್ಬರ ಜತೆ ಸಂಬಂಧ ಉಂಟಾದಾಗ ಹಳೆಯ ಸಂಬಂಧ ಕಡಿದುಕೊಳ್ಳಲು ಈ ಬ್ಲಾಕ್‌ ಫೀಚರ್‌ ಬಳಸಲಾಗುತ್ತದೆ. ನಿಮ್ಮನ್ನು ಯಾರಾದರೂ ಬ್ಲಾಕ್‌ ಮಾಡಿದ್ದರೆ ಈ ಮುಂದಿನ ವಿಧಾನಗಳ ಮೂಲಕ ತಿಳಿದುಕೊಳ್ಳಬಹುದು.

ವಾಟ್ಸಪ್‌ ಬ್ಲಾಕ್‌ ಮಾಡಿರುವುದನ್ನು ಪತ್ತೆಹಚ್ಚುವುದು ಹೇಗೆ?

  • ವಾಟ್ಸಪ್‌ನಲ್ಲಿ ಯಾರಾದರೂ ನಿಮ್ಮ ಕಾಂಟ್ಯಾಕ್ಟ್‌ ಸಂಖ್ಯೆಯನ್ನು ಬ್ಲಾಕ್‌ ಮಾಡಿದರೆ ನಿಮಗೆ ಅವರ ಲಾಸ್ಟ್‌ ಸೀನ್‌, ಆನ್‌ಲೈನ್‌ ಸ್ಟೇಟಸ್‌ ಇತ್ಯಾದಿಗಳನ್ನು ನೋಡಲಾಗುವುದಿಲ್ಲ. ಈ ರೀತಿ ನಮ್ಮ ಪ್ರೈವೆಸಿ ಸೆಟ್ಟಿಂಗ್‌ನಲ್ಲಿ ಇತರರನ್ನು ಬ್ಲಾಕ್‌ ಮಾಡಬಹುದು. ನಿಮಗೆ ಇತರೆ
  • ನಿಮ್ಮನ್ನು ಯಾರಾದರೂ ಬ್ಲಾಕ್‌ ಮಾಡಿದರೆ ಅವರ ಪ್ರೊಫೈಲ್‌ ಫಿಕ್ಚರ್‌ ನಿಮಗೆ ಕಾಣಿಸದು. ಸಾಮಾನ್ಯವಾಗಿ ಪ್ರೊಫೈಲ್‌ ಫಿಕ್ಚರ್‌ ಹಾಕುವ ವ್ಯಕ್ತಿಯ ಪ್ರೊಫೈಲ್‌ ಫಿಕ್ಚರ್‌ ಕಾಣಿಸದೆ ಇದ್ದರೆ ಅವರು ನಿಮ್ಮನ್ನು ಬ್ಲಾಕ್‌ ಮಾಡಿರಬಹುದು. (ಪ್ರೊಫೈಲ್‌ ಫಿಕ್ಚರ್‌ ಹಾಕದೆ ಇರುವವರೂ ಇರುತ್ತಾರೆ).
  • ನೀವು ಯಾರಿಗಾದರೂ ವಾಟ್ಸಪ್‌ನಲ್ಲಿ ಕಾಲ್‌ ಮಾಡಲು ಪ್ರಯತ್ನಿಸಿದರೆ ಅವರಿಗೆ ಕಾಲ್‌ ಹೋಗದೆ ಇದ್ದರೂ ಅವರು ಬ್ಲಾಕ್‌ ಮಾಡಿರುವ ಸಾಧ್ಯತೆಯನ್ನು ಸೂಚಿಸುತ್ತದೆ.
  • ಈ ರೀತಿ ಎಲ್ಲಾ ಅಂಶಗಳು ಒಂದು ಕಾಂಟ್ಯಾಕ್ಟ್‌ನಿಂದ ಗೋಚರಿಸುತ್ತ ಇದ್ದರೆ ಆ ವ್ಯಕ್ತಿ ನಿಮ್ಮನ್ನು ಬ್ಲಾಕ್‌ ಮಾಡಿರುವ ಸಾಧ್ಯತೆ ಹೆಚ್ಚಿದೆ.

ಗಮನಿಸಿ, ನಿಮ್ಮನ್ನು ಒಬ್ಬರು ಬ್ಲಾಕ್‌ ಮಾಡಿರಬೇಕೆಂದರೆ ಅವರಿಗೆ ನಿಮ್ಮ ಜತೆ ಸಂವಹನ ನಡೆಸಲು, ಸಂಬಂಧ ಅಥವಾ ಮಾತು ಮುಂದುವರೆಸಲು ಇಷ್ಟವಿಲ್ಲ ಎಂದರ್ಥ. ಆ ವಿಷಯವನ್ನು ಕೊರಗುತ್ತ ಇರಬೇಡಿ. ಅವರಿಗೆ ಬೇಡ ಎಂದರೆ ನಿಮಗ್ಯಾಕೆ ಬೇಕು. ಮನಸ್ಸು ಕೆಡಿಸಿಕೊಂಡರೆ ನಿಮ್ಮ ನೆಮ್ಮದಿ ಹಾಳಾಗುತ್ತದೆ.

ವಾಟ್ಸಪ್‌ ಪ್ರೈವೇಸಿ ಚೆಕಪ್‌ ಹೇಗೆ?

ನಿಮ್ಮ ವಾಟ್ಸಪ್‌ನ ಎಲ್ಲಾ ಪ್ರೈವೇಸಿ ಸೆಟ್ಟಿಂಗ್‌ ಪರಿಶೀಲಿಸಲು ಅಥವಾ ಸಕ್ರಿಯಗೊಳಿಸಲು ಇರುವ ಒಂದು ತಾಣ ಇದೆಂದು ಹೇಳಬಹುದು. ಇದಕ್ಕಾಗಿ ವಾಟ್ಸಪ್‌ ವಿಶೇಷ ಪ್ರೈವೇಸಿ ವಿಭಾಗ ಆರಂಭಿಸಿದೆ. ನಿಮ್ಮ ಪ್ರೈವೇಸಿ ಸೆಟಪ್‌ ಹೇಗಿದೆ? ಹೆಚ್ಚುವರಿ ಸುರಕ್ಷತೆಯ ಅಗತ್ಯವಿದೆಯೇ? ಇತ್ಯಾದಿಗಳನ್ನು ಪರಿಶೀಲಿಸಿಕೊಂಡು ಆನ್‌ ಅಥವಾ ಆಫ್‌ ಮಾಡಿಕೊಳ್ಳಬಹುದು. ಈ ಕುರಿತು ವಿವರವಾದ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ

mysore-dasara_Entry_Point