logo
ಕನ್ನಡ ಸುದ್ದಿ  /  ಜೀವನಶೈಲಿ  /  ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ 50 ಸಾವಿರ ರೂಗೆ ಐಫೋನ್‌ 15 ಮಾರಾಟ; ಆಪಲ್‌ ಅಭಿಮಾನಿಗಳಿಗೆ ಅಚ್ಚರಿ ನೀಡುವುದೇ ಇ-ಕಾಮರ್ಸ್‌ ದೈತ್ಯ

ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ 50 ಸಾವಿರ ರೂಗೆ ಐಫೋನ್‌ 15 ಮಾರಾಟ; ಆಪಲ್‌ ಅಭಿಮಾನಿಗಳಿಗೆ ಅಚ್ಚರಿ ನೀಡುವುದೇ ಇ-ಕಾಮರ್ಸ್‌ ದೈತ್ಯ

Praveen Chandra B HT Kannada

Sep 25, 2024 03:14 PM IST

google News

ಫ್ಲಿಪ್‌ಕಾರ್ಟ್‌ ಬಿಗ್‌ಬಿಲಿಯನ್‌ ಡೇ ಸೇಲ್‌ ಸೆಪ್ಟೆಂಬರ್‌ 27ರಂದು ಆರಂಭವಾಗಲಿದೆ.

  • ಫ್ಲಿಪ್‌ಕಾರ್ಟ್‌ ಬಿಗ್‌ಬಿಲಿಯನ್‌ ಡೇ ಸೇಲ್‌ ಸೆಪ್ಟೆಂಬರ್‌ 27ರಂದು ಆರಂಭವಾಗಲಿದೆ. ಈ ಸೇಲ್‌ನಲ್ಲಿ ಆಪಲ್‌ ಐಫೋನ್‌ 15 ದರ 50 ಸಾವಿರ ರೂಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಲ್ಲಿ ಗ್ರಾಹಕರಿದ್ದಾರೆ. ಇದೇ ಸಮಯದಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ಇರುವ ಸೂಚನೆಯಿದೆ.

ಫ್ಲಿಪ್‌ಕಾರ್ಟ್‌ ಬಿಗ್‌ಬಿಲಿಯನ್‌ ಡೇ ಸೇಲ್‌ ಸೆಪ್ಟೆಂಬರ್‌ 27ರಂದು ಆರಂಭವಾಗಲಿದೆ.
ಫ್ಲಿಪ್‌ಕಾರ್ಟ್‌ ಬಿಗ್‌ಬಿಲಿಯನ್‌ ಡೇ ಸೇಲ್‌ ಸೆಪ್ಟೆಂಬರ್‌ 27ರಂದು ಆರಂಭವಾಗಲಿದೆ. (Amazon)

ಐಫೋನ್‌ ಖರೀದಿದಾರರು ಈ ಬಾರಿಯ ಫ್ಲಿಪ್‌ಕಾರ್ಟ್‌ ಸೇಲ್‌ ಸಮಯದಲ್ಲಿ ಏನಾದರೂ ಆಫರ್‌ ದೊರಕುವುದೇ ಎಂದು ಕಾಯುತ್ತಿದ್ದಾರೆ. ವಿಶೇಷವಾಗಿ ಕಳೆದ ವರ್ಷ ಬಿಡುಗಡೆಯಾದ ಐಫೋನ್‌ 15 ದರ ಎಷ್ಟಿರಬಹುದು ಎಂದು ಯೋಚಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಐಫೋನ್‌ 16 ಖರೀದಿಸುವ ಆಲೋಚನೆಯೂ ಸಾಕಷ್ಟು ಜನರಿಗೆ ಇರಬಹುದು. ಎಕ್ಸ್‌ಚೇಂಜ್‌ ಆಫರ್‌ ಮೂಲಕ ಖರೀದಿಸಿ ಒಂದಿಷ್ಟು ಕಡಿಮೆ ದರಕ್ಕೆ ಐಫೋನ್‌ ತಮ್ಮದಾಗಿಸಿಕೊಳ್ಳಲು ಯೋಚಿಸಬಹುದು. ಫ್ಲಿಪ್‌ಕಾರ್ಟ್‌ ಬಿಗ್‌ಬಿಲಿಯನ್‌ ಡೇ ಸೇಲ್‌ ಸೆಪ್ಟೆಂಬರ್‌ 27ರಂದು ಆರಂಭವಾಗಲಿದೆ. ಈ ಹಿಂದಿನ ಫ್ಲಿಪ್‌ಕಾರ್ಟ್‌ ಸೇಲ್‌ಗಳಲ್ಲಿ ಹಳೆಯ ಐಫೋನ್‌ ಆವೃತ್ತಿಗಳಿಗೆ ಭರ್ಜರಿ ಡಿಸ್ಕೌಂಟ್‌ ದೊರಕುತ್ತಿತ್ತು. ಈ ವರ್ಷವೂ ಕಳೆದ ವರ್ಷದ ಐಫೋನ್‌ 15 ದರಕ್ಕೆ ಭರ್ಜರಿ ಡಿಸ್ಕೌಂಟ್‌ ಇರುವ ನಿರೀಕ್ಷೆಯಲ್ಲಿದ್ದಾರೆ. ಐಫೋನ್‌ 15 ಮತ್ತು ಐಫೋನ್‌ 16 ನಡುವೆ ಅಂತಹ ಮಹತ್ವದ ವ್ಯತ್ಯಾಸ ಇಲ್ಲದ ಕಾರಣ ಸಾಕಷ್ಟು ಜನರು ಐಫೋನ್‌ 15 ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ.

ಫ್ಲಿಪ್‌ಕಾರ್ಟ್‌ ಕಂಪನಿಯು ಐಫೋನ್‌ 15ನ ದರ ಎಷ್ಟಿರಲಿದೆ ಎಂಬ ವಿವರ ನೀಡಿಲ್ಲ. ಆದರೆ, ನೆಟ್ಟಿಗರು ಈ ಬಾರಿಯ ಆನ್‌ಲೈನ್‌ ಹಬ್ಬದಲ್ಲಿ ಎಷ್ಟು ದರಕ್ಕೆ ಐಫೋನ್‌ 15 ದೊರಕಬಹುದು ಎಂದು ಅಂದಾಜಿಸುತ್ತಿದ್ದಾರೆ. ಕೆಲವರ ಪ್ರಕಾರ ಈ ಬಾರಿ 50 ಸಾವಿರ ರೂಪಾಯಿಗೆ ಐಫೋನ್‌ ಖರೀದಿಸಬಹುದು. ಎಕ್ಸ್‌ಚೇಂಜ್‌ ಆಫರ್‌ಗೆ ಇನ್ನೂ ಕಡಿಮೆ ದರಕ್ಕೆ ದೊರಕಬಹುದು ಎಂದುಕೊಳ್ಳುತ್ತಿದ್ದಾರೆ. ಸದ್ಯ ಈ ಇಕಾಮರ್ಸ್‌ ದೈತ್ಯ ಕಂಪನಿಯು ಐಫೋನ್‌ 15 ಪ್ರೊ ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌ ಅನ್ನು ಕ್ರಮವಾಗಿ 89,999 ರೂಪಾಯಿ ಮತ್ತು 1,09,900 ರೂಪಾಯಿಗೆ ಮಾರಾಟ ಮಾಡುತ್ತಿದೆ. ಇದಕ್ಕೆ ಬ್ಯಾಂಕ್‌ ಆಫರ್‌ಗಳು, ಡಿಸ್ಕೌಂಟ್‌ ಕೂಡ ದೊರಕುತ್ತದೆ.

ಭಾರತದಲ್ಲಿ ಐಫೋನ್‌ 15 ದರ

ಐಫೋನ್‌ 16 ಬಿಡುಗಡೆಯಾದ ಬಳಿಕ ಐಫೋನ್‌ 15 ದರ ಭಾರತದಲ್ಲಿ 69,600 ರೂಪಾಯಿಗೆ ಆರಂಭವಾಗುತ್ತದೆ. ಅಂದರೆ, 128GB ಐಫೋನ್‌ 15ಗೆ ಈ ದರವಿದೆ. ಇದೇ ರೀತಿ 256GB ಮತ್ತು 512GB ಐಫೋನ್‌ 15 ದರ ಕ್ರಮವಾಗಿ 79,600 ರೂಪಾಯಿ ಮತ್ತು 99,600 ರೂ ಇದೆ.

ಐಫೋನ್‌ 15 ಸ್ಪೆಸಿಫಿಕೇಷನ್‌

ಇದು ಎ16 ಬಯೋನಿಕ್‌ ಚಿಪ್‌ ಹೊಂದಿದೆ. 6 ಜಿಬಿ ರಾಮ್‌ ಕೂಡ ಇದೆ. ಇದು 6.1 ಇಂಚಿನ ಸೂಪರ್‌ ರೆಟಿನಾ ಎಕ್ಸ್‌ಡಿಆರ್‌ ಡಿಸ್‌ಪ್ಲೇ ಹೊಂದಿದ್ದು, 60 ಎಚ್‌ಝಡ್‌ ರಿಫ್ರೆಶ್‌ ದರ ಹೊಂದಿದೆ. ಐಒಎಸ್‌ 17ನಲ್ಲಿ ಕಾರ್ಯನಿರ್ವಹಿಸುವ ಇದನ್ನು ಮುಂದಿನ ದಿನಗಳಲ್ಲಿ ಐಒಎಸ್‌ 18ಗೆ ಅಪ್‌ಗ್ರೇಡ್‌ ಮಾಡಿಕೊಳ್ಳಬಹುದು. ಐಫೋನ್‌ 14 ಪ್ರೊನಲ್ಲಿ ಇರುವಂತೆ 48 ಮೆಗಾಫಿಕ್ಸೆಲ್‌ ಕ್ಯಾಮೆರಾ ಹೊಂದಿದೆ. 12 ಎಂಪಿಯ ಸೆಕೆಂಡರಿ ಸೆನ್ಸಾರ್‌ ಕೂಡ ಇದೆ.

ಆಪಲ್‌ ಐಫೋನ್‌ 15ನ ಅಂಚುಗಳು ತುಸು ಕರ್ವ್‌ ಆಗಿದ್ದು, ಹಿಡಿಯಲು ಖುಷಿ ನೀಡುತ್ತದೆ. ಇದರ ವಿನ್ಯಾಸವೂ ಉತ್ತಮವಾಗಿದೆ. ಅಂದಹಾಗೆ ಈ ಐಫೋನ್‌ ದರವನ್ನು ಫ್ಲಿಪ್‌ಕಾರ್ಟ್‌ ಎಷ್ಟು ದರಕ್ಕೆ ಮಾರಾಟ ಮಾಡಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ವಿವಿಧ ಎಕ್ಸ್‌ಚೇಂಜ್‌ ಆಫರ್‌ಗಳ ಮೂಲಕ ಇನ್ನಷ್ಟು ಕಡಿಮೆ ದರಕ್ಕೆ ಗ್ರಾಹಕರಿಗೆ ನೀಡುವ ಸೂಚನೆಯಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ