ಆಪಲ್ ಐಫೋನ್ 16 ದರ 55,000 ರೂಗಿಂತಲೂ ಕಡಿಮೆ! ಫ್ಲಿಪ್‌ಕಾರ್ಟ್‌ನಲ್ಲಿ ಈ ಡೀಲ್ ನಿಮ್ಮದಾಗಿಸಲು ಹೀಗೆ ಮಾಡಿ
Sep 23, 2024 03:48 PM IST
ಈ ಎಕ್ಸ್‌ಚೇಂಜ್ ಆಫರ್ ಮೂಲಕ ನೀವು ಐಫೋನ್ 16 ಅನ್ನು 55 ಸಾವಿರ ರೂಪಾಯಿಗಿಂತಲೂ ಕಡಿಮೆ ದರದಲ್ಲಿ ಖರೀದಿಸಬಹುದು.
ಆಪಲ್ ಐಫೋನ್ 16 ದರ ಇಳಿಕೆಯಾಗಿದೆಯೇ? ಇಲ್ಲ! ಆದರೆ, ಈ ಎಕ್ಸ್‌ಚೇಂಜ್ ಆಫರ್ ಮೂಲಕ ನೀವು ಐಫೋನ್ 16 ಅನ್ನು 55 ಸಾವಿರ ರೂಪಾಯಿಗಿಂತಲೂ ಕಡಿಮೆ ದರದಲ್ಲಿ ಖರೀದಿಸಬಹುದು.
ಕಳೆದ ಶುಕ್ರವಾರ ಆಪಲ್ ಐಫೋನ್ 16 ಮಾರಾಟ ಆರಂಭವಾಗಿದೆ. ಈ ಹೊಸ ಐಫೋನ್ ಖರೀದಿಸಲು ಬೆಂಗಳೂರು, ದೆಹಲಿ, ಮುಂಬೈನ ಆಪಲ್ ಮಳಿಗೆಗಳಲ್ಲಿ ಜನ ಜಾತ್ರೆಯೇ ನೆರೆದಿತ್ತು. ಇದೀಗ ಆಫ್‌ಲೈನ್ ಮಾತ್ರವಲ್ಲದೆ ಆನ್‌ಲೈನ್‌ನಲ್ಲಿಯೂ ಹೊಸ ಐಫೋನ್ ಖರೀದಿಸಬಹುದು. ಇದೀಗ ಆಪಲ್ ಐಫೋನ್ 16ಗೆ ಒಳ್ಳೆಯ ಎಕ್ಸ್‌ಚೇಂಜ್ ಆಫರ್ ದೊರಕಿದೆ. ಈ ವಿನಿಮಯ ಆಫರ್‌ನಿಂದ ಆಪಲ್ ಐಫೋನ್ 16 ಅನ್ನು ನೀವು 60 ಸಾವಿರ ರೂಪಾಯಿಗಿಂತಲೂ ಕಡಿಮೆ ದರಕ್ಕೆ ಪಡೆಯಬಹುದು. 55 ಸಾವಿರ ರೂ.ಗೂ ಖರೀದಿಸಬಹುದು. ನಿಮ್ಮಲ್ಲಿ ಯಾವ ಐಫೋನ್ ಇದೆ, ಅದನ್ನು ಹೊಸ ಐಫೋನ್ ಖರೀದಿಸುವ ಸಮಯದಲ್ಲಿ ಎಕ್ಸ್‌ಚೇಂಜ್ ಮಾಡಬಹುದು. ಆದರೆ, ಐಫೋನ್ 15 ಅನ್ನು ಐಫೋನ್ 16 ಜತೆ ಹಂಚಿಕೊಳ್ಳಬೇಡಿ. ಇದರ ಬದಲು ಮುಂದಿನ ವರ್ಷ ಬಿಡುಗಡೆಯಾಗುವ ಐಫೋನ್ 17 ಖರೀದಿಸಬಹುದು.
ಫ್ಲಿಪ್‌ಕಾರ್ಟ್‌ನಲ್ಲಿ ಆಪಲ್ ಐಫೋನ್ 16 ದರ
128 ಜಿಬಿಯ ಆಪಲ್ ಐಫೋನ್ 16 ಮೂಲ ದರ 79900 ರೂಪಾಯಿ ಇದೆ. ಆದರೆ, ಫ್ಲಿಪ್‌ಕಾರ್ಟ್ ಗ್ರಾಹಕರು ಎಕ್ಸ್‌ಚೇಂಜ್ ಆಫರ್ ಬಳಸಿಕೊಂಡು ಕಡಿಮೆದರಕ್ಕೆ ಈ ಸ್ಮಾರ್ಟ್‌ಫೋನ್ ಖರೀದಿಸಬಹುದು. ಕಡಿಮೆಯೆಂದರೆ 55000 ರೂಪಾಯಿಗೆ ಐಫೋನ್ 16 ನಿಮ್ಮದಾಗಿಸಿಕೊಳ್ಳಬಹುದು. ನಿಮ್ಮಲ್ಲಿರುವ ಹಳೆಯ ಸ್ಮಾರ್ಟ್‌ಫೋನ್‌ನ ಮಾಡೆಲ್ ಮತ್ತು ಅದರ ವರ್ಕಿಂಗ್ ಕಂಡಿಷನ್ ಆಧಾರದಲ್ಲಿ ಎಕ್ಸ್‌ಚೇಂಜ್ ಆಫರ್‌ನಲ್ಲಿ ಒಳ್ಳೆಯ ಡೀಲ್ ನಿಮಗೆ ದೊರಕಲಿದೆ.
ಉದಾಹರಣೆಗೆ ನಿಮ್ಮಲ್ಲಿ ಐಫೋನ್ 13 ಇದೆ ಎಂದಿರಲಿ. ಇದನ್ನು ವಿನಿಮಯ ಕೊಡುಗೆಯಲ್ಲಿ ಎಕ್ಸ್‌ಚೇಂಜ್ ಮಾಡಿದರೆ 25500 ರೂ ಪಡೆಯಬಹುದು. ಹಾಗಾಗಿ ಬೆಲೆ 54400 ರೂ.ಗೆ ಇಳಿಕೆಯಾಗಲಿದೆ. ಈ ಬೆಲೆಯು 3000 ಹೆಚ್ಚುವರಿ ವಿನಿಮಯ ಬೋನಸ್ ಅನ್ನು ಸಹ ಒಳಗೊಂಡಿರುತ್ತದೆ. ಆದ್ದರಿಂದ, ಖರೀದಿದಾರರು ಹೊಸ ಐಫೋನ್ 16 ಅನ್ನು ಅತ್ಯಂತ ಕಡಿಮೆ ದರಕ್ಕೆ ಖರೀದಿಸಬಹುದು.
ಎಕ್ಸ್‌ಚೇಂಜ್ ಆಫರ್‌ಗಳು ಮಾತ್ರವಲ್ಲದೆ ಖರೀದಿದಾರರು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಶೇಕಡ 5ರಷ್ಟು ಅನ್‌ಲಿಮಿಟೆಡ್ ಕ್ಯಾಶ್‌ಬ್ಯಾಕ್ ಪಡೆಯಬಹುದು. ಎಚ್‌ಡಿಎಫ್‌ಸಿ ಬ್ಯಾಂಕ್ ಫಿಕ್ಸೆಲ್ ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟಿನಲ್ಲಿ 500 ರೂಪಾಯಿ ದರ ಕಡಿತ ಪ್ರಯೋಜನ ಪಡೆಯಬಹುದು.
ಐಫೋನ್ 16 ಏಕೆ ಖರೀದಿಸಬೇಕು?
ನೂತನ ಆಪಲ್ ಐಫೋನ್ 16 ಹೊಸ ವಿನ್ಯಾಸ ಮತ್ತು ಆಕರ್ಷಕ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಕಪ್ಪು, ಬಿಳಿ, ಪಿಂಖ್, ಟೀಲ್ ಮತ್ತು ಆಲ್ಟ್ರಾಮೆರಿನ್ ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಇದರಿಂದ ಈ ಐಫೋನ್ ಹೆಚ್ಚು ಪ್ರೀಮಿಯಂ ಲುಕ್‌ನಲ್ಲಿ ಕಾಣಿಸಿಕೊಂಡಿದೆ. ನೂತನ ಐಫೋನ್‌ನಲ್ಲಿ ಹೊಸ ಎ18 ಚಿಪ್‌ಸೆಟ್ ಇದೆ. ಇದು ಆಪಲ್ ಇಂಟಲಿಜೆನ್ಸ್‌ಗೂ ಬೆಂಬಲ ನೀಡುತ್ತದೆ. ಇದರಲ್ಲಿ ಹೊಸ ಆಕ್ಷನ್ ಬಟನ್ ಮತ್ತು ಕ್ಯಾಮೆರಾ ಕಂಟ್ರೋಲ್ ಬಟನ್ ಇದೆ. ಇದರಿಂದ ಕೆಲವು ಫೀಚರ್‌ಗಳನ್ನು ಸುಲಭವಾಗಿ ಬಳಕೆ ಮಾಡಬಹುದು.
ಐಫೋನ್ 16ನಲ್ಲಿ ಡ್ಯೂಯೆಲ್ ಕ್ಯಾಮೆರಾ ಸೆಟಪ್ ಇದೆ. ಇದು 48 ಮೆಗಾಫಿಕ್ಸೆಲ್‌ನ ಫ್ಯೂಷನ್ ಕ್ಯಾಮೆರಾವಾಗಿದ್ದು, 2ಎಕ್ಸ್ ಆಪ್ಟಿಕಲ್ ಝೂಮ್ ವ್ಯವಸ್ಥೆ ಹೊಂದಿದೆ. 12 ಮೆಗಾಫಿಕ್ಸೆಲ್‌ನ ಆಲ್ಟ್ರಾ ವೈಡ್ ಕ್ಯಾಮೆರಾವನ್ನೂ ಹೊಂದಿದೆ. ಈ ಐಫೋನ್‌ನಲ್ಲಿ 6.1 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಒಲೆಡ್ ಡಿಸ್‌ಪ್ಲೇ ಇದೆ.