ಭಾರತಕ್ಕೆ ಸದ್ದಿಲ್ಲದೆ ಬಂತು 108ಎಂಪಿ ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್: ಬೆಲೆ ಎಷ್ಟು, ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ಭಾರತಕ್ಕೆ ಸದ್ದಿಲ್ಲದೆ ಬಂತು 108ಎಂಪಿ ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್: ಬೆಲೆ ಎಷ್ಟು, ಇಲ್ಲಿದೆ ಮಾಹಿತಿ

ಭಾರತಕ್ಕೆ ಸದ್ದಿಲ್ಲದೆ ಬಂತು 108ಎಂಪಿ ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್: ಬೆಲೆ ಎಷ್ಟು, ಇಲ್ಲಿದೆ ಮಾಹಿತಿ

ಭಾರತದಲ್ಲಿ ಇನ್ಫಿನಿಕ್ಸ್ ಝೀರೊ 40 5ಜಿಫೋನ್​ ಬಿಡುಗಡೆ ಆಗಿದೆ. ಇನ್ಫಿನಿಕ್ಸ್​ನಲ್ಲಿ ಎಐವೈಶಿಷ್ಟ್ಯಗಳೊಂದಿಗೆ ಬಂದ ಮೊದಲ ಫೋನ್ ಇದಾಗಿದೆ. ಬಲಿಷ್ಠವಾದ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್ ಇದೆ. (ಬರಹ: ವಿನಯ್ ಭಟ್)

ಭಾರತದಲ್ಲಿ ಇನ್ಫಿನಿಕ್ಸ್ ಝೀರೊ 40 5ಜಿ ಫೋನ್ ಬಿಡುಗಡೆ ಆಗಿದೆ.
ಭಾರತದಲ್ಲಿ ಇನ್ಫಿನಿಕ್ಸ್ ಝೀರೊ 40 5ಜಿ ಫೋನ್ ಬಿಡುಗಡೆ ಆಗಿದೆ.

ಭಾರತದಲ್ಲಿ ಕ್ಯಾಮೆರಾ ಫೋನುಗಳ ಹಾವಳಿ ಮತ್ತೊಮ್ಮೆ ಶುರುವಾಗಿದೆ. ಹೆಚ್ಚಾಗಿ ಬಜೆಟ್ ಬೆಲೆಗೆ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಪ್ರಸಿದ್ಧ ಇನ್ಫಿನಿಕ್ಸ್ ಕಂಪನಿ ಇದೀಗ ಮಧ್ಯಮ ಬೆಲೆಗೆ ಆಕರ್ಷಕವಾದ ಕ್ಯಾಮೆರಾ ಫೋನೊಂದನ್ನು ಲಾಂಚ್ ಮಾಡಿದೆ. ಇದರ ಹೆಸರು ಇನ್ಫಿನಿಕ್ಸ್ ಝೀರೊ 40 5ಜಿ. ಈ ಫೋನ್ ಮುಂದಿನ ವಾರ ದೇಶದಲ್ಲಿ ಮಾರಾಟವಾಗಲಿದೆ. ಇನ್ಫಿನಿಕ್ಸ್​ನಲ್ಲಿ ಎಐವೈಶಿಷ್ಟ್ಯಗಳೊಂದಿಗೆ ಬಂದ ಮೊದಲ ಫೋನ್ ಇದಾಗಿದೆ. ಬಲಿಷ್ಠವಾದ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್ ಇದೆ. ಇದರ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಇನ್ಫಿನಿಕ್ಸ್ ಝೀರೊ 40 5ಜಿ ಬೆಲೆ, ಲಭ್ಯತೆ

ಇನ್ಫಿನಿಕ್ಸ್ ಝೀರೊ 40 5ಜಿಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 12ಜಿಬಿ RAM + 256ಜಿಬಿ ಆಯ್ಕೆಗೆ 27,999 ರೂ. ಇದೆ. 12ಜಿಬಿ + 512ಜಿಬಿ ರೂಪಾಂತರಕ್ಕೆ ರೂ. 30,000 ನಿಗದಿ ಮಾಡಲಾಗಿದೆ. ಈ ಫೋನ್ ಮೂವಿಂಗ್ ಟೈಟಾನಿಯಂ, ರಾಕ್ ಬ್ಲಾಕ್ ಮತ್ತು ವೈಲೆಟ್ ಗಾರ್ಡನ್ - ಮೂರು ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಸೆಪ್ಟೆಂಬರ್ 21 ರಿಂದ 7 ಗಂಟೆಗೆ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ.

ಇನ್ಫಿನಿಕ್ಸ್ ಝೀರೊ 40 5ಜಿ ಫೀಚರ್ಸ್

ಈ ಸ್ಮಾರ್ಟ್​​ಫೋನ್ 144Hz ರಿಫ್ರೆಶ್ ರೇಟ್‌ನೊಂದಿಗೆ 6.78-ಇಂಚಿನ ಪೂರ್ಣ-HD+ (1,080 x 2,436 ಪಿಕ್ಸೆಲ್‌ಗಳು) ಬಾಗಿದ AMOLED ಡಿಸ್​ಪ್ಲೇಯನ್ನು ಹೊಂದಿದೆ. 1,300 nits ಗರಿಷ್ಠ ಬ್ರೈಟ್​ನೆಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ನೀಡಲಾಗಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟಿಮೇಟ್ SoC ಮೂಲಕ 12GB LPDDR5X RAM ಮತ್ತು 512GB ವರೆಗೆ UFS 3.1 ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಇದು ಆಂಡ್ರಾಯ್ಡ್ 14-ಆಧಾರಿತ XOS 14.5 ನೊಂದಿಗೆ ರನ್ ಆಗುತ್ತದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, ಇನ್ಫಿನಿಕ್ಸ್ ಝೀರೊ 40 5G ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ ಬರೋಬ್ಬರಿ 108-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ನೀಡಲಾಗಿದೆ. ಜೊತೆಗೆ 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಕೂಡ ಇದೆ. ಮುಂಭಾಗದ ಕ್ಯಾಮೆರಾವು 50-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ. ಮುಂಭಾಗ ಮತ್ತು ಹಿಂಭಾಗದ ಎರಡೂ ಕ್ಯಾಮೆರಾಗಳು 60 FPS ನಲ್ಲಿ 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತವೆ.

ಇನ್ಫಿನಿಕ್ಸ್ ಝೀರೊ 40 5G GoPro ಮೋಡ್‌ನೊಂದಿಗೆ ಬರುತ್ತದೆ, ಇದು ಬಳಕೆದಾರರಿಗೆ ಯಾವುದೇ GoPro ಕ್ಯಾಮೆರಾಗಳೊಂದಿಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. GoPro Quik ಅಪ್ಲಿಕೇಶನ್‌ನ ಸಹಾಯದಿಂದ ಬಳಕೆದಾರರು ನೇರವಾಗಿ ಫೋನ್‌ನಿಂದ ಜೋಡಿಸಲಾದ GoPro ಅನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಅಥವಾ ಆಕ್ಷನ್ ಕ್ಯಾಮೆರಾಕ್ಕಾಗಿ ಮಾನಿಟರ್ ಆಗಿ ಬಳಸಬಹುದು. ಜೊತೆಗೆ ಈ ಹ್ಯಾಂಡ್‌ಸೆಟ್ ಇನ್ಫಿನಿಕ್ಸ್ AI ವೈಶಿಷ್ಟ್ಯಗಳನ್ನು ಪಡೆಯುವ ಮೊದಲ ಫೋನಾಗಿದೆ.

45W ವೈರ್ಡ್ ಮತ್ತು 20W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಇನ್ಫಿನಿಕ್ಸ್ ಝೀರೊ 40 5G ನಲ್ಲಿ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಲಾಗಿದೆ. ಡ್ಯುಯಲ್ ಹೈ-ರೆಸ್ ಡಿಟಿಎಸ್ ಸ್ಪೀಕರ್‌ಗಳು ಮತ್ತು ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಡ್ಯುಯಲ್ ನ್ಯಾನೊ ಸಿಮ್-ಬೆಂಬಲಿತ ಫೋನ್‌ಗಾಗಿ ಸಂಪರ್ಕ ಆಯ್ಕೆಗಳು 5G, 4G, Wi-Fi 6E, ಎನ್ಎಫ್‍ಸಿ, ಜಿಪಿಎಸ್, ಬ್ಲೂಟೂತ್ ಮತ್ತು ಯುಎಸ್‍ಬಿಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿವೆ.

Whats_app_banner