iPhone 16 series: ಐಫೋನ್‌ 16 ಮಾರಾಟ ಆರಂಭ, ಅಬ್ಬಬ್ಬಾ... ಭಾರತದ ಆಪಲ್‌ ಅಂಗಡಿಗಳ ಮುಂದೆ ಉದ್ದುದ್ದ ಸರದಿಯಲ್ಲಿ ಜನವೋ ಜನ-technology news iphone 16 series goes on sale globally fans wait outside apple stores in long queues in india pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Iphone 16 Series: ಐಫೋನ್‌ 16 ಮಾರಾಟ ಆರಂಭ, ಅಬ್ಬಬ್ಬಾ... ಭಾರತದ ಆಪಲ್‌ ಅಂಗಡಿಗಳ ಮುಂದೆ ಉದ್ದುದ್ದ ಸರದಿಯಲ್ಲಿ ಜನವೋ ಜನ

iPhone 16 series: ಐಫೋನ್‌ 16 ಮಾರಾಟ ಆರಂಭ, ಅಬ್ಬಬ್ಬಾ... ಭಾರತದ ಆಪಲ್‌ ಅಂಗಡಿಗಳ ಮುಂದೆ ಉದ್ದುದ್ದ ಸರದಿಯಲ್ಲಿ ಜನವೋ ಜನ

iPhone 16 series: ಜಾಗತಿಕವಾಗಿ ಅಪಲ್‌ ಕಂಪನಿಯ ಐಫೋನ್‌ 16 ಸರಣಿಗಳು ಬಿಡುಗಡೆಯಾಗಿವೆ. ಆಪಲ್‌ ಸ್ಟೋರ್‌ಗಳ ಮುಂದೆ ಸಾವಿರಾರು ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಐಫೋನ್‌ ಖರೀದಿಸುತ್ತಿದ್ದಾರೆ. ಜಗತ್ತಿನ ವಿವಿಧೆಡೆ ಗ್ರಾಹಕರು ಆಪಲ್‌ ಅಂಗಡಿಗಳ ಮುಂದೆ ಯಾವ ರೀತಿ ಕ್ಯೂ ನಿಂತಿದ್ದಾರೆ ಎಂದು ಫೋಟೋಗಳನ್ನು ನೋಡೋಣ.

ಭಾರತದಲ್ಲಿ ಐಫೋನ್‌ 16 ಸರಣಿ ಮಾರಾಟವಾಗುತ್ತಿದೆ. ಇದೇ ಸಮಯದಲ್ಲಿ ಭಾರತದ ವಿವಿಧ ಆಪಲ್‌ ಸ್ಟೋರ್‌ಗಳ ಮುಂದೆ ಜನ ದಟ್ಟಣೆ ಹೆಚ್ಚಾಗಿದೆ. ಆಪಲ್‌ ಸ್ಟೋರ್‌ಗಳ ಹೊರಗೆ ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ. ಇದು ದೆಹಲಿಯ ಸಾಕೇತ್‌ನಲ್ಲಿರುವ ಆಪಲ್‌ ಅಂಗಡಿಯ ಹೊರಗಿನ ದೃಶ್ಯ. 
icon

(1 / 6)

ಭಾರತದಲ್ಲಿ ಐಫೋನ್‌ 16 ಸರಣಿ ಮಾರಾಟವಾಗುತ್ತಿದೆ. ಇದೇ ಸಮಯದಲ್ಲಿ ಭಾರತದ ವಿವಿಧ ಆಪಲ್‌ ಸ್ಟೋರ್‌ಗಳ ಮುಂದೆ ಜನ ದಟ್ಟಣೆ ಹೆಚ್ಚಾಗಿದೆ. ಆಪಲ್‌ ಸ್ಟೋರ್‌ಗಳ ಹೊರಗೆ ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ. ಇದು ದೆಹಲಿಯ ಸಾಕೇತ್‌ನಲ್ಲಿರುವ ಆಪಲ್‌ ಅಂಗಡಿಯ ಹೊರಗಿನ ದೃಶ್ಯ. (X: Shikhil Vyas)

ಭಾರತದ ಮೊದಲ ಆಪಲ್ ಸ್ಟೋರ್ ಆಗಿರುವ ಮುಂಬೈನ ಬಿಕೆಸಿಯಲ್ಲಿರುವ ಆಪಲ್ ಸ್ಟೋರ್ ಹೊರಗೆ ಜನರು ಉದ್ದನೆಯ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಇಷ್ಟೊಂದು ಜನರು ತಮಗೆ ಯಾವಾಗ ಹೊಸ ಐಫೋನ್‌ 16 ಸಿಗುವುದೋ ಎಂಬ ಕಾತರದಲ್ಲಿದ್ದಾರೆ.
icon

(2 / 6)

ಭಾರತದ ಮೊದಲ ಆಪಲ್ ಸ್ಟೋರ್ ಆಗಿರುವ ಮುಂಬೈನ ಬಿಕೆಸಿಯಲ್ಲಿರುವ ಆಪಲ್ ಸ್ಟೋರ್ ಹೊರಗೆ ಜನರು ಉದ್ದನೆಯ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಇಷ್ಟೊಂದು ಜನರು ತಮಗೆ ಯಾವಾಗ ಹೊಸ ಐಫೋನ್‌ 16 ಸಿಗುವುದೋ ಎಂಬ ಕಾತರದಲ್ಲಿದ್ದಾರೆ.(X: Shubham Singh Rajput)

ಆಪಲ್ ಅಭಿಮಾನಿಗಳು ಚೀನಾದ ಹ್ಯಾಂಗ್ಜೌ  ಆಪಲ್‌ ಅಂಗಡಿಯ ಹೊರಗೆ ಕಾಯುತ್ತಿದ್ದಾರೆ. ಭಾರತದಂತೆ ಚೀನಾದಲ್ಲೂ ಐಫೋನ್‌ 16 ಕುರಿತು ಜನರಲ್ಲಿ ಕ್ರೇಜ್‌ ಹೆಚ್ಚಾಗಿದೆ.
icon

(3 / 6)

ಆಪಲ್ ಅಭಿಮಾನಿಗಳು ಚೀನಾದ ಹ್ಯಾಂಗ್ಜೌ  ಆಪಲ್‌ ಅಂಗಡಿಯ ಹೊರಗೆ ಕಾಯುತ್ತಿದ್ದಾರೆ. ಭಾರತದಂತೆ ಚೀನಾದಲ್ಲೂ ಐಫೋನ್‌ 16 ಕುರಿತು ಜನರಲ್ಲಿ ಕ್ರೇಜ್‌ ಹೆಚ್ಚಾಗಿದೆ.(X: Sally Yin)

ಆಪಲ್ ಕಂಪನಿಯ ದೆಹಲಿ ರಿಟೇಲ್‌ ಸ್ಟೋರ್‌ ಹೊರಗಿನ ನೋಟವಿದು. ಐಫೋನ್‌ 15ಗೆ ಹೋಲಿಸಿದರೆ ಐಫೋನ್‌ 16ನಲ್ಲಿ ಎಐ ಸೇರಿದಂತೆ ಕೆಲವು ಬದಲಾವಣೆಗಳಾಗಿವೆ. ಹೀಗಿದ್ದರೂ ಜನರ ಕ್ರೇಜ್‌ ಕಡಿಮೆಯಾಗಿಲ್ಲ.
icon

(4 / 6)

ಆಪಲ್ ಕಂಪನಿಯ ದೆಹಲಿ ರಿಟೇಲ್‌ ಸ್ಟೋರ್‌ ಹೊರಗಿನ ನೋಟವಿದು. ಐಫೋನ್‌ 15ಗೆ ಹೋಲಿಸಿದರೆ ಐಫೋನ್‌ 16ನಲ್ಲಿ ಎಐ ಸೇರಿದಂತೆ ಕೆಲವು ಬದಲಾವಣೆಗಳಾಗಿವೆ. ಹೀಗಿದ್ದರೂ ಜನರ ಕ್ರೇಜ್‌ ಕಡಿಮೆಯಾಗಿಲ್ಲ.(X: Yasmin_9667)

ಭಾರತದಲ್ಲಿ ಆಪಲ್ ಬಿಡುಗಡೆಗೆ ಮುಂಚಿತವಾಗಿ ಐಫೋನ್ 16 ಸರಣಿಯ ಮೊದಲ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಲು ಕಾಯುತ್ತಿರುವ ವ್ಯಕ್ತಿ. ಇವರು 21 ಗಂಟೆಗಳ ಕಾಲ ಸಾಲಿನಲ್ಲಿ ಕಾಯುತ್ತಿದ್ದರು. ಭಾರತಲ್ಲಿ ಆಪಲ್‌ 16 ಮೊದಲನೆಯ ಖರೀದಿಗ ನಾನಾಗುತ್ತೇನೆ ಎಂದು ಸುದ್ದಿ ಸಂಸ್ಥೆಗೆ ಇವರು ತಿಳಿಸಿದ್ದಾರೆ. 
icon

(5 / 6)

ಭಾರತದಲ್ಲಿ ಆಪಲ್ ಬಿಡುಗಡೆಗೆ ಮುಂಚಿತವಾಗಿ ಐಫೋನ್ 16 ಸರಣಿಯ ಮೊದಲ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಲು ಕಾಯುತ್ತಿರುವ ವ್ಯಕ್ತಿ. ಇವರು 21 ಗಂಟೆಗಳ ಕಾಲ ಸಾಲಿನಲ್ಲಿ ಕಾಯುತ್ತಿದ್ದರು. ಭಾರತಲ್ಲಿ ಆಪಲ್‌ 16 ಮೊದಲನೆಯ ಖರೀದಿಗ ನಾನಾಗುತ್ತೇನೆ ಎಂದು ಸುದ್ದಿ ಸಂಸ್ಥೆಗೆ ಇವರು ತಿಳಿಸಿದ್ದಾರೆ. (X: ANI)

ಚೀನಾದ ಬೀಜಿಂಗ್‌ ಆಪಲ್‌ ಸ್ಟೋರ್‌ ಮುಂದೆ ಆಪಲ್‌ ಐಫೋನ್‌ಗಾಗಿ ಜನರ ಸರದಿ. ಐಫೋನ್‌ 16ನಲ್ಲಿ ಹೊಸ ಎ18 ಚಿಪ್‌ಸೆಟ್‌ ಮತ್ತು 8ಜಿಬಿ ರಾಮ್‌ ಇದೆ. ಐಫೋನ್‌ 15ಗಿಂತ ಶೇಕಡ 30ರಷ್ಟು ಸ್ಪೀಡ್‌ ಆಗಿದೆ.  ತನ್ನ ಹಾರ್ಡ್‌ವೇರ್‌ ಸಾಧನಗಳಿಗೆ ಆಪಲ್‌ ಕಂಪನಿಯು ಆಪಲ್‌ ಇಂಟಲಿಜೆನ್ಸ್‌ ಅಳವಡಿಸಿದೆ. ಐಫೋನ್‌ 16ನಲ್ಲಿ ಹೊಸ ಫ್ಯೂಷನ್‌ ಕ್ಯಾಮೆರಾ ಇದೆ. ಇದು 48 ಮೆಗಾಫಿಕ್ಸೆಲ್‌ ರೆಸಲ್ಯೂಷನ್‌ ಹೊಂದಿದೆ. 2ಎಕ್ಸ್‌ ಆಪ್ಟಿಕಲ್‌ ಝೂಮ್‌ ಹೊಂದಿದೆ. 
icon

(6 / 6)

ಚೀನಾದ ಬೀಜಿಂಗ್‌ ಆಪಲ್‌ ಸ್ಟೋರ್‌ ಮುಂದೆ ಆಪಲ್‌ ಐಫೋನ್‌ಗಾಗಿ ಜನರ ಸರದಿ. ಐಫೋನ್‌ 16ನಲ್ಲಿ ಹೊಸ ಎ18 ಚಿಪ್‌ಸೆಟ್‌ ಮತ್ತು 8ಜಿಬಿ ರಾಮ್‌ ಇದೆ. ಐಫೋನ್‌ 15ಗಿಂತ ಶೇಕಡ 30ರಷ್ಟು ಸ್ಪೀಡ್‌ ಆಗಿದೆ.  ತನ್ನ ಹಾರ್ಡ್‌ವೇರ್‌ ಸಾಧನಗಳಿಗೆ ಆಪಲ್‌ ಕಂಪನಿಯು ಆಪಲ್‌ ಇಂಟಲಿಜೆನ್ಸ್‌ ಅಳವಡಿಸಿದೆ. ಐಫೋನ್‌ 16ನಲ್ಲಿ ಹೊಸ ಫ್ಯೂಷನ್‌ ಕ್ಯಾಮೆರಾ ಇದೆ. ಇದು 48 ಮೆಗಾಫಿಕ್ಸೆಲ್‌ ರೆಸಲ್ಯೂಷನ್‌ ಹೊಂದಿದೆ. 2ಎಕ್ಸ್‌ ಆಪ್ಟಿಕಲ್‌ ಝೂಮ್‌ ಹೊಂದಿದೆ. (Bloomberg)


ಇತರ ಗ್ಯಾಲರಿಗಳು