logo
ಕನ್ನಡ ಸುದ್ದಿ  /  ಜೀವನಶೈಲಿ  /  Realme 13 5g Series: ಕ್ಯಾಮೆರಾ ಪ್ರಿಯರಿಗಾಗಿ ಕಡಿಮೆ ಬೆಲೆಗೆ ಎರಡು ಆಕರ್ಷಕ ಸ್ಮಾರ್ಟ್​ಫೋನ್ ಪರಿಚಯಿಸಿದ ರಿಯಲ್‌ಮಿ

Realme 13 5G Series: ಕ್ಯಾಮೆರಾ ಪ್ರಿಯರಿಗಾಗಿ ಕಡಿಮೆ ಬೆಲೆಗೆ ಎರಡು ಆಕರ್ಷಕ ಸ್ಮಾರ್ಟ್​ಫೋನ್ ಪರಿಚಯಿಸಿದ ರಿಯಲ್‌ಮಿ

Priyanka Gowda HT Kannada

Dec 16, 2024 06:01 PM IST

google News

ರಿಯಲ್ ಮಿ 13 5G ಮತ್ತು ರಿಯಲ್ ಮಿ 13+ 5G ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿವೆ.

  • ರಿಯಲ್ ಮಿ 13 5ಜಿ ಮತ್ತು ರಿಯಲ್ ಮಿ 13+ 5ಜಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿವೆ. ಎರಡೂ ಹ್ಯಾಂಡ್‌ಸೆಟ್‌ಗಳ ಹಿಂಬದಿಯಲ್ಲಿ 50-ಮೆಗಾಪಿಕ್ಸೆಲ್ ಡ್ಯುಯಲ್  ಕ್ಯಾಮೆರಾಗಳು ಇವೆ. (ಬರಹ: ವಿನಯ್ ಭಟ್)

ರಿಯಲ್ ಮಿ 13 5G ಮತ್ತು ರಿಯಲ್ ಮಿ 13+ 5G ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿವೆ.
ರಿಯಲ್ ಮಿ 13 5G ಮತ್ತು ರಿಯಲ್ ಮಿ 13+ 5G ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿವೆ.

ಪ್ರಸಿದ್ಧ ರಿಯಲ್ ಮಿ ಕಂಪನಿ ಭಾರತೀಯ ಮಾರುಕಟ್ಟೆಗೆ ಎರಡು ಹೊಸ ಸ್ಮಾರ್ಟ್​ಫೋನ್ ಪರಿಚಯಿಸಿದೆ. ತನ್ನ ರಿಯಲ್ ಮಿ 13 5ಜಿ ಸರಣಿಯಲ್ಲಿ ರಿಯಲ್ ಮಿ 13 5ಜಿ ಮತ್ತು ರಿಯಲ್ ಮಿ 13+ 5ಜಿ ಮಾದರಿಗಳನ್ನು ಅನಾವರಣ ಮಾಡಿದೆ. ಈ ಸರಣಿಯು 50-ಮೆಗಾಪಿಕ್ಸೆಲ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕಗಳೊಂದಿಗೆ ಬರುತ್ತದೆ ಮತ್ತು ಆಂಡ್ರಾಯ್ಡ್ 14-ಆಧಾರಿತ ರಿಯಲ್ ಮಿ ಯುಐನೊಂದಿಗೆ ಕಾರ್ಯನಿರ್ವಹಿಸುತ್ತದೆ. ಎರಡೂ ಹ್ಯಾಂಡ್‌ಸೆಟ್‌ಗಳು 80 ಡಬ್ಲ್ಯು ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000 ಎಂಎಎಚ್‌ ಬ್ಯಾಟರಿಗಳನ್ನು ಒಳಗೊಂಡಿದೆ. ಇನ್ನೂ ಅನೇಕ ಫೀಚರ್​ಗಳು ಇದರಲ್ಲಿವೆ.

ಭಾರತದಲ್ಲಿ ರಿಯಲ್ ಮಿ 13 5G, ರಿಯಲ್ ಮಿ 13+ 5G ಬೆಲೆ, ಲಭ್ಯತೆ

ರಿಯಲ್ ಮಿ 13 5ಜಿ ಸ್ಮಾರ್ಟ್​ಫೋನ್​ನ 8 ಜಿಬಿ + 128 ಜಿಬಿ ಆಯ್ಕೆಗೆ 17,999 ರೂ. ಇದೆ. ಅಂತೆಯೆ ಇದರ 8 ಜಿಬಿ + 256 ಜಿಬಿ ರೂಪಾಂತರದ ಬೆಲೆ 19,999 ರೂ. ಆಗಿದೆ.

ಮತ್ತೊಂದೆಡೆ, ರಿಯಲ್ ಮಿ 13+ 5ಜಿಜಿ ಬೆಲೆ 8 ಜಿಬಿ + 128 ಜಿಬಿ ಆವೃತ್ತಿಗೆ 22,999 ರೂ. ಹಾಗೆಯೆ 8 ಜಿಬಿ + 256 ಜಿಬಿ ಮತ್ತು 12ಜಿಬಿ + 256 ಜಿಬಿ ಕಾನ್ಫಿಗರೇಶನ್‌ಗಳ ಬೆಲೆ ಕ್ರಮವಾಗಿ 24,999 ರೂ. ಮತ್ತು 26,999 ರೂ. ಆಗಿದೆ.

ಫ್ಲಿಪ್‌ಕಾರ್ಟ್, ರಿಯಲ್‌ಮಿ ಇಂಡಿಯಾ ವೆಬ್‌ಸೈಟ್ ಮತ್ತು ಆಫ್‌ಲೈನ್ ಮೇನ್‌ಲೈನ್ ಸ್ಟೋರ್‌ಗಳ ಮೂಲಕ ಸೆಪ್ಟೆಂಬರ್ 6 ರಿಂದ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈ ಫೋನ್‌ಗಳನ್ನು ಮುಂಗಡವಾಗಿ ಆರ್ಡರ್ ಮಾಡುವ ಎಲ್ಲಾ ಆಸಕ್ತ ಖರೀದಿದಾರರು ರೂ. 1,500 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.

ರಿಯಲ್ ಮಿ 13 5ಜಿ, ರಿಯಲ್ ಮಿ 13+ 5ಜಿ ಫೀಚರ್ಸ್:

ರಿಯಲ್ ಮಿ 13 5G ಫೋನ್ 6.72-ಇಂಚಿನ ಪೂರ್ಣ-ಎಚ್‌ಡಿ+ ಎಲ್‌ಸಿಡಿ (1,080 x 2,400 ಪಿಕ್ಸೆಲ್‌ಗಳು) "ಐ ಕಂಫರ್ಟ್" ಡಿಸ್‌ಪ್ಲೇಯನ್ನು 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 580nನೈಟ್ಸ್‌ ವಿಶಿಷ್ಟ ಬ್ರೈಟ್‌ನೆಸ್ ಮಟ್ಟದೊಂದಿಗೆ ನೀಡಲಾಗಿದೆ. 13+ 5G ಫೋನ್ 6.67-ಇಂಚಿನ ಪೂರ್ಣ-ಎಚ್‌ಡಿ+ (1,080 x 2,400 ಪಿಕ್ಸೆಲ್‌ಗಳು) ಒಲೆಡ್‌ ಇ ಸ್ಪೋರ್ಟ್ಸ್‌ ಡಿಸ್‌ಪ್ಲೇ ಹೊಂದಿದೆ. ಇದು 120Hz ವರೆಗೆ ರಿಫ್ರೆಶ್ ರೇಟ್‌ ಹೊಂದಿದೆ. ಎರಡೂ ಹ್ಯಾಂಡ್‌ಸೆಟ್‌ಗಳು ರೈನ್‌ವಾಟರ್ ಸ್ಮಾರ್ಟ್ ಟಚ್ ಫೀಚರ್‌ಗಳನ್ನು ಬೆಂಬಲಿಸುತ್ತದೆ. ಅದು ಬಳಕೆದಾರರಿಗೆ ಮಳೆಯಲ್ಲಿ ಅಥವಾ ಒದ್ದೆಯಾದ ಕೈಗಳಿಂದ ಫೋನ್‌ಗಳನ್ನು ಬಳಸಲು ಅನುಮತಿಸುತ್ತದೆ.

ಮೂಲ ರಿಯಲ್ ಮಿ 13 5G ಅನ್ನು 6nm ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 5G ಚಿಪ್‌ಸೆಟ್ ಅನ್ನು 8 ಜಿಬಿ ರಾಮ್‌ ಮತ್ತು 256 ಜಿಬಿವರೆಗಿನ ಯುಎಫ್‌ಎಸ್‌ 2.2 ಆನ್‌ಬೋರ್ಡ್ ಸಂಗ್ರಹಣೆ ಹೊಂದಿದೆ. ಮತ್ತೊಂದೆಡೆ, ರಿಯಲ್ ಮಿ 13+ 5G, 4nm ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎನರ್ಜಿ 5ಜಿ SoC ಯಿಂದ 12 ಜಿಬಿ ಎಲ್‌ಪಿಡಿಡಿಆರ್‌4 ಎಕ್ಸ್‌ ರಾಮ್‌ ಮತ್ತು 256 ಜಿಬಿವರೆಗಿನ ಯುಎಫ್‌ಎಸ್‌ 3.1 ಇಂಟರ್ನಲ್‌ ಸ್ಟೋರೇಜ್‌ ಹೊಂದಿದೆ.

ವೆನಿಲ್ಲಾ ಮಾದರಿಯಲ್ಲಿ ರಾಮ್‌ ಅನ್ನು ಹೆಚ್ಚುವರಿ 8 ಜಿಬಿವರೆಗೆ ವರ್ಚುವಲ್ ಆಗಿ ವಿಸ್ತರಿಸಬಹುದು, ಪ್ಲಸ್ ರೂಪಾಂತರದಲ್ಲಿ ರಾಮ್‌ ಅನ್ನು ಹೆಚ್ಚುವರಿ 14 ಜಿಬಿವರೆಗೆ ವರ್ಚುವಲ್ ಆಗಿ ಹೆಚ್ಚಿಸಬಹುದು. ಎರಡೂ ಹ್ಯಾಂಡ್‌ಸೆಟ್‌ಗಳು ಆಂಡ್ರಾಯ್ಡ್ 14-ಆಧಾರಿತ ರಿಯಲ್ ಮಿ ಯುಐ 5.0 ನೊಂದಿಗೆ ರನ್ ಆಗುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, ರಿಯಲ್ ಮಿ 13 5G ಸರಣಿಯು 50-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕಗಳೊಂದಿಗೆ ಬರುತ್ತದೆ. ಸ್ಯಾಮ್​ಸಂಗ್ ಎಸ್‌5ಕೆಜೆಎನ್‌ಎಸ್‌ ಮುಖ್ಯ ಸೆನ್ಸಾರ್‌ ಹೊಂದಿದೆ. ಆದರೆ ರಿಯಲ್ ಮಿ 13+ 5G ಸೋನಿ ಎಲ್‌ವೈಟಿ-600 ಪ್ರಾಥಮಿಕ ಸಂವೇದಕವನ್ನು ಹೊಂದಿದೆ. ಮುಖ್ಯ ಕ್ಯಾಮೆರಾಗಳು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಅನ್ನು ಸಹ ಬೆಂಬಲಿಸುತ್ತವೆ. ಎರಡೂ ಹ್ಯಾಂಡ್‌ಸೆಟ್‌ಗಳು ಹಿಂಭಾಗದಲ್ಲಿ 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್‌ಗಳೊಂದಿಗೆ ಮತ್ತು ಸೆಲ್ಫಿಗಳಿಗಾಗಿ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ.

ರಿಯಲ್ ಮಿ 13 5G ಮತ್ತು ರಿಯಲ್ ಮಿ 13+ 5G ಫೋನ್ 5,000 ಎಂಎಎಚ್‌ ಬ್ಯಾಟರಿಗಳು 80 ಡಬ್ಲ್ಯು ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ 5G, ವೈಫೈ, ಜಿಪಿಎಸ್‌, ಬ್ಲೂಟೂತ್, 3.5 ಎಂಎಂ ಆಡಿಯೋ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಪ್ರತಿಯೊಂದೂ ಸೇರಿವೆ. ಸುರಕ್ಷತೆಗಾಗಿ, ಮೂಲ ಆವೃತ್ತಿಯು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಆದರೆ ಪ್ಲಸ್ ರೂಪಾಂತರದಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಆಯ್ಕೆ ನೀಡಲಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ