ರಿಯಲ್ ಮಿ ಪಿ2 ಪ್ರೊ 5ಜಿ: ಮಧ್ಯಮ ಬೆಲೆಗೆ ಬಂಪರ್ ಸ್ಮಾರ್ಟ್‌ಫೋನ್; ದರ, ಫೀಚರ್ಸ್ ಸೇರಿದಂತೆ ಇಲ್ಲಿದೆ ಹೆಚ್ಚಿನ ವಿವರ
Dec 16, 2024 03:37 PM IST
ರಿಯಲ್ ಮಿ ಪಿ2 ಪ್ರೊ 5ಜಿ ಬಿಡುಗಡೆ
ರಿಯಲ್ ಮಿ ಕಂಪನಿಯ ಹೊಸ ಪಿ2 ಪ್ರೊ 5ಜಿ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಹ್ಯಾಂಡ್‌ಸೆಟ್‌ನ ಆರಂಭಿಕ ಮಾರಾಟವು ಸೆಪ್ಟೆಂಬರ್ 17 ರಂದು ನಡೆಯಲಿದೆ. (ಬರಹ: ವಿನಯ್ ಭಟ್)
ಪ್ರಸಿದ್ಧ ರಿಯಲ್ ಮಿ ಕಂಪನಿ ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಮಧ್ಯಮ ಬೆಲೆಗೆ ನೂತನವಾದ ರಿಯಲ್ ಮಿ ಪಿ2 ಪ್ರೊ 5G ಅನ್ನು ದೇಶದಲ್ಲಿ ಅನಾವರಣ ಮಾಡಿದೆ. ಈ ಫೋನ್ನಲ್ಲಿ ಸ್ನಾಪ್‌ಡ್ರಾಗನ್ 7 ಎಸ್ ಜೆನ್ 2 ಎಸ್‌ಒಎಸ್ ಮತ್ತು 80ಡಬ್ಲ್ಯು ವೈರ್ಡ್ ಸೂಪರ್ ವಿಒಒಸಿ ಚಾರ್ಜಿಂಗ್ಗೆ ಬೆಂಬಲ ನೀಡುವ 5,200 ಎಂಎಎಚ್ ಬ್ಯಾಟರಿಯನ್ನು ನೀಡಲಾಗಿದೆ. 50-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಘಟಕವಿದೆ. ಇಷ್ಟು ಮಾತ್ರವಲ್ಲದೆೆ ಇನ್ನೂ ಅನೇಕ ಫೀಚರ್ಗಳು ಈ ಸ್ಮಾರ್ಟ್ಫೋನ್ನಲ್ಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ರಿಯಲ್ ಮಿ P2 ಪ್ರೊ 5G ಬೆಲೆ, ಲಭ್ಯತೆ
ಭಾರತದಲ್ಲಿ ರಿಯಲ್ ಮಿ ಪಿ2 ಪ್ರೊ 5ಜಿ ಸ್ಮಾರ್ಟ್‌ಫೋನ್ ಒಟ್ಟು ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಆರಂಭಿಕ ಮಾದರಿಯ 8 ಜಿಬಿ + 128 ಜಿಬಿ ಆಯ್ಕೆಗೆ 21,999 ರೂ. ಇದೆ. 12 ಜಿಬಿ + 256 ಜಿಬಿ ಮತ್ತು 12 ಜಿಬಿ + 512 ಜಿಬಿ ರೂಪಾಂತರಗಳ ಬೆಲೆ ಕ್ರಮವಾಗಿ ರೂ. 24,999 ಮತ್ತು ರೂ. 27,999 ಆಗಿದೆ. ಇದನ್ನು ಈಗಲ್ ಬೂದು ಬಣ್ಣ (Gray) ಮತ್ತು ಗಿಳಿ ಹಸಿರು (parrot green)ಬಣ್ಣಗಳಲ್ಲಿ ನೀಡಲಾಗುತ್ತದೆ.
ಈ ಹ್ಯಾಂಡ್‌ಸೆಟ್‌ನ ಆರಂಭಿಕ ಮಾರಾಟವು ಸೆಪ್ಟೆಂಬರ್ 17 ರಂದು ನಡೆಯಲಿದೆ. ಫ್ಲಿಪ್‌ಕಾರ್ಟ್ ಮತ್ತು ರಿಯಲ್ ಮಿ ಇಂಡಿಯಾ ವೆಬ್‌ಸೈಟ್ ಮೂಲಕ ಖರೀದಿಸಲು ಲಭ್ಯವಿರುತ್ತದೆ. ಆರಂಭಿಕ ಮಾರಾಟದ ಭಾಗವಾಗಿ ಗ್ರಾಹಕರು ರೂ. 2,000 ಕೂಪನ್ ರಿಯಾಯಿತಿ ಪಡೆಯುತ್ತಾರೆ.
ರಿಯಲ್ ಮಿ P2 ಪ್ರೊ 5G ಫೀಚರ್ಸ್
ರಿಯಲ್ ಮಿಪಿ2 ಪ್ರೊ 5ಜಿ ಫೋನ್ 6.7-ಇಂಚಿನ ಪೂರ್ಣ-ಎಚ್‌ಡಿ+ (1,080 x 2,412 ಪಿಕ್ಸೆಲ್‌ಗಳು) 3ಡಿ ಕರ್ವ್ಡ್ ಅಮೊಲೆಡ್ ಸ್ಕ್ರೀನ್ ಜೊತೆಗೆ 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ದರ, 2,000ನಿಟ್ಸ್ ಪೀಕ್ ಬ್ರೈಟ್‌ನೆಸ್, ಮತ್ತು ಕಾರ್ನಿಂಗ್ ಗ್ಲಾಸ್ ರಕ್ಷಣೆಯನ್ನು ಹೊಂದಿದೆ. ಈ ಹ್ಯಾಂಡ್‌ಸೆಟ್ 4ಎನ್‌ಎಂ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 7ಎಸ್ ಜೆನ್ 2 ಎಸ್ಒಸಿ ಅಂಡ್ರೆನೊ 710 ಜಿಪಿಯು ಜತೆ ಜೋಡಿಸಲಾಗಿದೆ. 512 ಜಿಬಿವರೆಗಿನ ಯುಎಫ್‌ಎಸ್ 3.1 ಆನ್‌ಬೋರ್ಡ್ ಸಂಗ್ರಹ ಸ್ಥಳ ಹೊಂದಿದೆ. ಆಂಡ್ರಾಯ್ಡ್ 14-ಆಧರಿತ ರಿಯಲ್ ಮಿ ಯುಐ 5 ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಈ ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದೆ, ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ಜೊತೆಗೆ 50-ಮೆಗಾಪಿಕ್ಸೆಲ್ನ ಆಕರ್ಷಕವಾದ ಸೋನಿ ಎಲ್‌ವೈಟಿ-600 ಪ್ರಾಥಮಿಕ ಸೆನ್ಸಾರ್ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್ ಹೊಂದಿದೆ . ಮುಂಭಾಗದ ಕ್ಯಾಮೆರಾವು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 32-ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ.
80ಡಬ್ಲ್ಯು ವೈರ್ಡ್ ಸೂಪರ್ ವೂಕ್ ಚಾರ್ಜಿಂಗ್ ಬೆಂಬಲ ಹೊಂದಿರುವ ರಿಯಲ್ ಮಿ ಪಿ2 ಪ್ರೊ ನಲ್ಲಿ 5,200 ಎಂಎಎಚ್ ಬ್ಯಾಟರಿ ಇದೆ. ಈ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಇದೆ. ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ ಐಪಿ65-ರೇಟಿಂಗ್ ಪಡೆದುಕೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ 5G, ವೈ-ಫೈ 6, ಬ್ಲೂಟೂತ್ 5.2, ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಹೊಂದಿದೆ..