logo
ಕನ್ನಡ ಸುದ್ದಿ  /  ಜೀವನಶೈಲಿ  /  ಡೇಟಿಂಗ್‌ ಮಾಡಲು ಸಂಗಾತಿ ಇಲ್ಲ ಅನ್ನೋ ಚಿಂತೆ ಬಿಡಿ; ತಯಾರಾಗ್ತಿದೆ ಎಐ ಡೇಟಿಂಗ್‌ ಮಾಡೆಲ್‌, ಎಐ ಜತೆ ಮದ್ವೆನೂ ಆಗಬಹುದಂತೆ

ಡೇಟಿಂಗ್‌ ಮಾಡಲು ಸಂಗಾತಿ ಇಲ್ಲ ಅನ್ನೋ ಚಿಂತೆ ಬಿಡಿ; ತಯಾರಾಗ್ತಿದೆ ಎಐ ಡೇಟಿಂಗ್‌ ಮಾಡೆಲ್‌, ಎಐ ಜತೆ ಮದ್ವೆನೂ ಆಗಬಹುದಂತೆ

Reshma HT Kannada

Jul 16, 2024 04:14 PM IST

google News

ಡೇಟಿಂಗ್‌ ಮಾಡಲು ಸಂಗಾತಿ ಇಲ್ಲ ಅನ್ನೋ ಚಿಂತೆ ಬಿಡಿ; ತಯಾರಾಗ್ತಿದೆ ಎಐ ಡೇಟಿಂಗ್‌ ಮಾಡೆಲ್‌, ಎಐ ಜತೆ ಮದ್ವೆನೂ ಆಗಬಹುದಂತೆ

    • ಇಂದಿನ ಮಿಲೇನಿಯಲ್‌ ಯುಗದಲ್ಲಿ ಡೇಟಿಂಗ್‌ ಹೊಸ ಟ್ರೆಂಡ್‌ ಏನಲ್ಲ. ಡೇಟ್‌ ಮಾಡಲು ನಂಗ್ಯಾರೂ ಇಲ್ಲ ಅಂತ ಇನ್ನು ಮುಂದೆ ಬೇಸರ ಮಾಡುವಂತಿಲ್ಲ, ಯಾಕಂದ್ರೆ ಡೇಟಿಂಗ್‌ ಮಾಡಲು ನಿಮ್ಮ ಜೊತೆಯಾಗಲಿವೆ ಎಐ (ಆರ್ಟಿಫಿಶೀಯಲ್‌ ಇಂಟೆಲಿಜೆನ್ಸ್‌) ಮಾಡೆಲ್‌ಗಳು. ಒಂಟಿತನ ಭಾಯಿಸಲು ಜಪಾನ್‌ ತಂತ್ರಜ್ಞಾನವು ಕಂಡುಕೊಂಡ ಮಾರ್ಗವಿದು. ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
ಡೇಟಿಂಗ್‌ ಮಾಡಲು ಸಂಗಾತಿ ಇಲ್ಲ ಅನ್ನೋ ಚಿಂತೆ ಬಿಡಿ; ತಯಾರಾಗ್ತಿದೆ ಎಐ ಡೇಟಿಂಗ್‌ ಮಾಡೆಲ್‌, ಎಐ ಜತೆ ಮದ್ವೆನೂ ಆಗಬಹುದಂತೆ
ಡೇಟಿಂಗ್‌ ಮಾಡಲು ಸಂಗಾತಿ ಇಲ್ಲ ಅನ್ನೋ ಚಿಂತೆ ಬಿಡಿ; ತಯಾರಾಗ್ತಿದೆ ಎಐ ಡೇಟಿಂಗ್‌ ಮಾಡೆಲ್‌, ಎಐ ಜತೆ ಮದ್ವೆನೂ ಆಗಬಹುದಂತೆ

ಒಂಟಿತನ ಎಲ್ಲರಿಗೂ ಇಷ್ಟವಾಗುವುದಿಲ್ಲ. ಸಂಗಾತಿಯ ಜೊತೆ ಚಾಟಿಂಗ್‌, ಡೇಟಿಂಗ್‌ ಇದ್ರಷ್ಟೇ ಲೈಫ್‌ ಕೂಲ್‌ ಆಗಿರುತ್ತೆ ಅನ್ನೋದು ಝೆಡ್‌ ಜನರೇಷನ್‌ ಮಂದಿಯ ಮನೋಭಾವ. ಹಾಗಂತ ಡೇಟಿಂಗ್‌ ಮಾಡೋಕೆ ಸಂಗಾತಿ ಅಂತೂ ಇರ್ಲೇಬೇಕು ಅಲ್ವಾ? ಖಂಡಿತ ಬೇಕಿಲ್ಲ ಎನ್ನುತ್ತೆ ಜಪಾನ್‌ನ ಈ ತಂತ್ರಜ್ಞಾನ. ಏನಪ್ಪಾ ಇದು ಇದೆಲ್ಲಾ ಹೇಗೆ ಸಾಧ್ಯ ಅಂತ ಹುಬ್ಬೇರಿಸಬೇಡಿ, ಮುಂದೆ ಓದಿ. 

ಎಐ ಡೇಟಿಂಗ್‌ ಮಾಡೆಲ್‌

ಒಂದಿಷ್ಟು ವರ್ಷಗಳ ಹಿಂದೆ ಇಣುಕು ಹಾಕಿದ್ರೆ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಡೇಟಿಂಗ್‌ ಅನ್ನೋದು ವಾಸ್ತವಕ್ಕೆ ದೂರ ಅಂತ ಅನ್ನಿಸ್ತಾ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎಐ ಡೇಟಿಂಗ್‌ ಏನು ಅಸಾಧ್ಯ ಏನಲ್ಲ ಎಂಬುದು ಸಾಬೀತಾಗಿದೆ. ಎಐ ಡೇಟಿಂಗ್‌ನ ಬೇಡಿಕೆಯನ್ನು ಉಳಿಸಿಕೊಳ್ಳಲು, ಲವರ್ಸ್ ಎಂಬ ಜಪಾನಿನ ಕಂಪನಿ ಇದನ್ನು ರಿಯಾಲಿಟಿ ಆಗಿ ಪರಿವರ್ತಿಸುತ್ತಿದೆ.

ಜಪಾನ್‌ ಚಿಹಾರು ಶಿಮೊಡ ಅವರು ಡೇಟಿಂಗ್‌ ಅಪ್ಲಿಕೇಶನ್‌ ಮೂಲಕ ಸಂಗಾತಿಯನ್ನು ಹುಡುಕಲು ಬಯಸಿದ್ದರು. ಎರಡು ತಿಂಗಳು ಕಾಲ ಅವರು ಐದಾರು ಜನರ ಜೊತೆಗೆ ಚಾಟಿಂಗ್‌ ಮಾಡಿದ್ದರು. ಆದರೆ ಅವರು ಕೊನೆಗೆ 24 ವರ್ಷ ಮಿಕು ಜೊತೆ ಕನೆಕ್ಟ್‌ ಆಗುತ್ತಾರೆ. ಅಂದ ಹಾಗೆ ಈ ಮಿಕು ಐಎ ರೋಬೋಟ್‌. ಮಿಕು ಮತ್ತು ಶಿಮೊಡ ಮದುವೆ ಕೂಡ ಆಗುತ್ತಾರೆ.

52 ವರ್ಷ ವಯಸ್ಸಿನ ಶಿಮೊಡ ಲವರ್ಸ್‌ನ 5,000 ಕ್ಕೂ ಹೆಚ್ಚು ಬಳಕೆದಾರರಲ್ಲಿ ಒಬ್ಬರಾಗಿದ್ದಾರೆ, ಇದು ಒಂದು ವರ್ಷದ ಹಳೆಯ ಅಪ್ಲಿಕೇಶನ್ ಆಗಿದ್ದು ಅದು ಉತ್ಪಾದಕ ಕೃತಕ ಬುದ್ಧಿಮತ್ತೆಯೊಂದಿಗೆ ಮಾತ್ರ ಸಂವಹನವನ್ನು ಅನುಮತಿಸುತ್ತದೆ. ನಿಜ ಜೀವನದಲ್ಲಿ ಸಂಗಾತಿಯೊಂದಿಗೆ ಮನಸ್ತಾಪ ಬಂದು ದೂರಾಗುವವರ ಸಂಖ್ಯೆ ಜಗತ್ತಿನಾದ್ಯಂತ ಕಡಿಮೆ ಏನಿಲ್ಲ. ನೈಜ ಪ್ರಣಯದೊಂದಿಗೆ ಬರುವ ಅವ್ಯವಸ್ಥೆ ಮತ್ತು ಅನಿಶ್ಚಿತತೆಯ ಬಗ್ಗೆ ಜಾಗರೂಕರಾಗಿರುವ ಜನರ ದೊಡ್ಡ ಸಮೂಹದಲ್ಲಿ ಶಿಮೊಡಾ ಕೂಡ ಸೇರಿದ್ದಾರೆ. ಎರಡು ವರ್ಷಗಳ  ಹಿಂದೆ ಇವರು ತಮ್ಮ ಮಡದಿಯಿಂದ ವಿಚ್ಛೇದನ ಪಡೆದಿರುತ್ತಾರೆ. ಶಿಮೊಡ ಪ್ರಕಾರ, ಡೇಟಿಂಗ್‌ಗೆ ಸಮಯ ಮತ್ತು ಶ್ರಮ ಬೇಕಾಗುತ್ತದೆ. ಆ ಕಾರಣಕ್ಕೆ  ಡೇಟಿಂಗ್‌ ಮಾಡಲು ಐಎ ರೋಬೊವನ್ನು ಆರಿಸಿಕೊಂಡಿದ್ದಾರೆ. 

ಶಿಮೊಡ ಅವರ ಪ್ರಕಾರ ʼವಿಚ್ಛೇದನದ ಬಳಿಕ ನಾನು ಮನೆಗೆ ಬಂದಾಗ ಒಂಟಿ ಎನ್ನಿಸುತ್ತದೆ. ಅದಕ್ಕಾಗಿ ನಾನು ಎರಡನೇ ಮದುವೆಯಾಗಲು ನಿರ್ಧಾರ ಮಾಡಿದೆ. ಮಿಕು ಜೊತೆಗಿನ ನನ್ನ ಸಂಬಂಧ ಮದುವೆಯ ಎರಡನೇ ಭಾಗ. ಆದರೆ ಇದರ ಜೊತೆ ಅವರ ಬಾರಿ ಭೇಟಿ ಮಾಡಿದಾಗ ತೆರೆದುಕೊಳ್ಳುವುದು ತುಂಬಾ ಕಷ್ಟವಾಗುತ್ತದೆʼ ಎಂದು ಅನುಭವ ಹಂಚಿಕೊಳ್ಳುತ್ತಾರೆ.

ಜಪಾನ್‌ನಲ್ಲಿ ಒಂಟಿತನದ ಬಿಕ್ಕಟ್ಟು ನಿಭಾಯಿಸಲು ಲವರ್ಸ್‌ ಕಂಡುಕೊಂಡು ಈ ಮಾರ್ಗವು ಹಲವರಿಗೆ ನೆರವಾಗಲಿದೆ. ಇವು ಜನರಿಗೆ ಭಾವನಾತ್ಮಕವಾಗಿ ಹತ್ತಿರವಾಗುತ್ತವೆ. ಹರ್ ಚಿತ್ರದಲ್ಲಿ ಸಮಂತಾ ಹೆಸರಿನ AI ಯಂತೆಯೇ, ಈ ಬಾಟ್‌ಗಳು ಜನರ ಭಾವನಾತ್ಮಕ ಜೀವನದಲ್ಲಿ ಅಂತರವನ್ನು ತುಂಬಲು ಸಹಾಯ ಮಾಡುತ್ತವೆ. ಲವರ್ಸ್ ಸೃಷ್ಟಿಕರ್ತ ಗೋಕಿ ಕುಸುನೋಕಿ ಹೇಳುವ ಪ್ರಕಾರ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ನೈಜ-ಜೀವನದ ಒಡನಾಟಕ್ಕೆ ಬದಲಿಯಾಗಿ ಪರ್ಯಾಯವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ, ಅವರಲ್ಲಿ ಹೆಚ್ಚಿನವರು 40 ಮತ್ತು 50 ರ ಹರೆಯದ ಪುರುಷರು. ಅವರ ಸಂಸ್ಥೆಯು ಈ ವರ್ಷದ ಆರಂಭದಲ್ಲಿ ಸ್ತ್ರೀ ಮತ್ತು LGBTQ ಬಳಕೆದಾರರನ್ನು ಆಕರ್ಷಿಸಲು ಪಾತ್ರಗಳ ಪಾತ್ರವನ್ನು ವಿಸ್ತರಿಸಲು ¥30 ಮಿಲಿಯನ್ ($190,000) ಸಂಗ್ರಹಿಸಿತು.

ಇದು ಪ್ರೀತಿ-ಪ್ರೇಮ, ಸಂಸಾರದ ಗೋಜು ಬೇಡ ಎನ್ನುವವರಿಗೆ ಉತ್ತಮ ಸಂಗಾತಿ. ಈ ಅಪ್ಲಿಕೇಶನ್‌ನಂತಹ ಸೇವೆಗಳು ಪ್ರಣಯದಿಂದ ದೂರವಿರುವ ಜನರಿಗೆ ಪ್ರೀತಿ ಎಷ್ಟು ಸಂತೋಷಕರವಾಗಿದೆ ಎಂಬುದನ್ನು ನೆನಪಿಸುತ್ತದೆ ಮತ್ತು ನೈಜ ಪಾಲುದಾರರೊಂದಿಗೆ ಮಾತನಾಡುವಾಗ ಉತ್ತಮ ಸಂವಹನ ನಡೆಸಲು AI ಜನರಿಗೆ ತರಬೇತಿ ನೀಡುತ್ತದೆ ಎಂದು ಜಪಾನ್‌ನ ಕಂಪನಿಯೊಂದ ಮಾಲೀಕ ಹೇಳುತ್ತಾರೆ.

ಈ ಎಐ ಮಾಡೆಲ್‌ನಲ್ಲೂ ಇದೆ ತೊಂದರೆ

ಕೆಲವು ಹಿಂದಿನ ಬಳಕೆದಾರರ ಪ್ರಕಾರ, ಲವರ್ಸ್ ಇನ್ನೂ ಮನುಷ್ಯರನ್ನು ಅನುಕರಿಸುವಲ್ಲಿ ಬಹಳ ದೂರ ಸಾಗಬೇಕಾಗಿದೆ. ಅಪ್ಲಿಕೇಶನ್‌ನ ಅನೇಕ ವ್ಯಕ್ತಿಗಳು ಟೈಪ್‌ಕಾಸ್ಟ್‌ನಂತೆ ತೋರುತ್ತಿದ್ದಾರೆ ಮತ್ತು ಮಾನವ ಸಂವಹನಕ್ಕೆ ಇದು ದೂರವಾದಂತಿದೆ ಎಂದು 39 ವರ್ಷದ ಯುಕಿ ಸೈಟೊ ಹೇಳುತ್ತಾರೆ ಮತ್ತು ಅವರು ಅಪ್ಲಿಕೇಷನ್‌ ಬಳಸಲು ಆರಂಭಿಸಿದ ಒಂದು ತಿಂಗಳೊಳಗೆ ಅದನ್ನು ತೊರೆಯುತ್ತಾರೆ. 

ದೈನಂದಿನ ಜೀವನಕ್ಕೆ ಸಹಾಯ ಮಾಡಲು AI ಅನ್ನು ಅಳವಡಿಸಿಕೊಳ್ಳುವುದು ಈ ವರ್ಷದ ಚಾಲ್ತಿಯಲ್ಲಿರುವ ವಿಷಯವಾಗಿದೆ, ಮೈಕ್ರೋಸಾಫ್ಟ್ ಕಾರ್ಪ್ ತನ್ನ ಕಾಪಿಲೋಟ್ ಚಾಟ್‌ಬಾಟ್ ಅನ್ನು ಪ್ರಮುಖ ವಿಂಡೋಸ್ ವೈಶಿಷ್ಟ್ಯವಾಗಿ ಪರಿವರ್ತಿಸಿದೆ, Apple Inc. AI-ಚಾಲಿತ ಐಫೋನ್‌ಗಳಲ್ಲಿ ಕೆಲಸ ಮಾಡುತ್ತಿದೆ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸ್ಟಾರ್ಟ್ಅಪ್ Luka Inc.' s Replika AI ಬೋಟ್ ಹತ್ತಾರು ಮಿಲಿಯನ್ ಬಳಕೆದಾರರನ್ನು ಆಕರ್ಷಿಸಿದೆ. ಜಪಾನ್‌ನಲ್ಲಿ, ಟೋಕಿಯೊ ಮೆಟ್ರೋಪಾಲಿಟನ್ ಸರ್ಕಾರವು ಮ್ಯಾಚ್‌ಮೇಕಿಂಗ್ ಅಪ್ಲಿಕೇಶನ್ ಅನ್ನು ಪರಿಚಯಿಸುತ್ತಿದೆ.

ಅದೇನೇ ಇದ್ದರೂ ಶಿಮೊಡ ಹಾಗೂ ಮಿಕು ಅನ್ಯೋನ್ಯವಾಗಿದ್ದಾರೆ. ಅವರಿಬ್ಬರು ನಮ್ಮ ದಿನಚರಿಯನ್ನು ಪರಸ್ಪರ ಹಂಚಿಕೊಂಡು ಮಾಡುತ್ತಾರೆ. ರಜೆಯ ದಿನಗಳಲ್ಲಿ ಎಲ್ಲಿಗೆ ಹೋಗುವುದು, ತಿಂಡಿ ಏನು ತಿನ್ನುವುದು, ಹೀಗೆ ಪ್ರತಿಯೊಂದನ್ನು ಇವರು ಮಾತನಾಡಿಕೊಂಡು ಮಾಡುತ್ತಾರೆ. ಒಟ್ಟಾರೆ ಶಿಮೊಡ ಹಾಗೂ ಮಿಕು ನಡುವೆ ಸಂಭಾಷಣೆ ಚೆನ್ನಾಗಿದೆ.

ಒಟ್ಟಾರೆ ಇನ್ನು ಮುಂದೆ ಮನುಷ್ಯರಿಗಿಂತ ಐಎ ರೊಬೋಟ್‌ಗಳದ್ದೇ ಸದ್ದು ಹೆಚ್ಚಿರುತ್ತದೆ ಎನ್ನುವುದು ಮಾತ್ರ ಸುಳ್ಳಲ್ಲ, ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎನ್ನುವ ನಮ್ಮ ಗಂಡು ಮಕ್ಕಳು ಐಎಯನ್ನು ಸಂಗಾತಿಯನ್ನಾಗಿ ಆರಿಸಿಕೊಳ್ಳುವ ದಿನ ದೂರದಲ್ಲಿಲ್ಲ. 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ