Dating Trend: ಘೋಸ್ಟಿಂಗ್‌ನಿಂದ ಲವ್‌ ಬಾಂಬಿಂಗ್‌ವರೆಗೆ 2023ರ ವಿಚಿತ್ರ, ಡೇಂಜರಸ್‌ ಡೇಟಿಂಗ್‌ ಟ್ರೆಂಡ್‌ಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  Dating Trend: ಘೋಸ್ಟಿಂಗ್‌ನಿಂದ ಲವ್‌ ಬಾಂಬಿಂಗ್‌ವರೆಗೆ 2023ರ ವಿಚಿತ್ರ, ಡೇಂಜರಸ್‌ ಡೇಟಿಂಗ್‌ ಟ್ರೆಂಡ್‌ಗಳಿವು

Dating Trend: ಘೋಸ್ಟಿಂಗ್‌ನಿಂದ ಲವ್‌ ಬಾಂಬಿಂಗ್‌ವರೆಗೆ 2023ರ ವಿಚಿತ್ರ, ಡೇಂಜರಸ್‌ ಡೇಟಿಂಗ್‌ ಟ್ರೆಂಡ್‌ಗಳಿವು

ಘೋಸ್ಟಿಂಗ್‌ನಿಂದ ಲವ್‌ ಬಾಂಬಿಂಗ್‌ವರೆಗೆ 2023ರಲ್ಲಿ ಹೆಚ್ಚು ಸದ್ದು ಮಾಡಿದ ಡೇಟಿಂಗ್‌ ಟ್ರೆಂಡ್‌ಗಳಿವು. ಇವು ಪ್ರೀತಿ ವಿಚಾರದಲ್ಲಿ ನಂಬಿಕೆ ಹೋಗುವಂತೆ ಮಾಡಿರುವ ಟ್ರೆಂಡ್‌ಗಳು ಎಂದರೂ ತಪ್ಪಾಗಲಿಕ್ಕಿಲ್ಲ. ಈ ಡೇಟಿಂಗ್‌ ಪ್ರವೃತ್ತಿ ಹಲವರಲ್ಲಿ ಕೆಟ್ಟ ಅನುಭವಕ್ಕೂ ಕಾರಣವಾಗಿದೆ ಎಂಬುದು ಸುಳಲ್ಲ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಒಂದು ವರ್ಷ ಮುಗಿದು ಹೊಸ ವರ್ಷ ಕಾಲಿಡುವಾಗ ಈ ವರ್ಷ ಏನೆಲ್ಲಾ ಆಯ್ತು ಎಂದು ನೆನಪಿಸಿಕೊಳ್ಳುವುದು ಸಾಮಾನ್ಯ. ಅದರಲ್ಲಿ ಈ ವರ್ಷ ಏನೇನು ಟ್ರೆಂಡ್‌ ಇತ್ತು ಅನ್ನೋದು ಕೂಡ ನೆನಪಿಗೆ ಬರುತ್ತೆ.

ಡೇಟಿಂಗ್‌ ಸಂಸ್ಕೃತಿ ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ದೇಶಗಳಲ್ಲೂ ಸಾಮಾನ್ಯ ಎಂಬಂತಾಗಿದೆ. ಹೊಸ ಹೊಸ ಡೇಟಿಂಗ್‌ ಪರಿಕಲ್ಪನೆಗಳು ಹುಟ್ಟಿಕೊಳ್ಳುತ್ತಲೇ ಇವೆ. ಇದರೊಂದಿಗೆ ವರ್ಷ ವರ್ಷಕ್ಕೂ ಡೇಟಿಂಗ್‌ ಸಂಸ್ಕೃತಿ ಕೂಡ ಬದಲಾಗುತ್ತಿರುತ್ತದೆ. 2023ರಲ್ಲೂ ಒಂದಿಷ್ಟು ಡೇಟಿಂಗ್‌ ಟ್ರೆಂಡ್‌ಗಳು ಸದ್ದು ಮಾಡಿದ್ದವು. ಪ್ರೇಮಪಾಶದಲ್ಲಿ ಸಿಲುಕಲು ನೆರವಾಗುವ ಆಪ್‌ಗಳು ಡೇಟಿಂಗ್‌ ಟ್ರೆಂಡ್‌ ಜೊತೆಗೆ ಸೇರಿ ಪ್ರೇಮಿಗಳಿಗೆ ನೆರವಾಗಿದ್ದವು. ಆದರೆ ಕೆಲವು ಡೇಟಿಂಗ್‌ ಪರಿಕಲ್ಪನೆಗಳು ವಿಷಕಾರಿ ಪರಿಣಾಮ ಬೀರಿರುವುದು ಮಾತ್ರ ಸುಳ್ಳಲ್ಲ.

ಕೆಲವೊಂದು ಟಾಕ್ಸಿಕ್‌ ಡೇಟಿಂಗ್‌ ವಿಧಗಳು ವ್ಯಕ್ತಿಗಳ ಸ್ವಾಭಿಮಾನ ಹಾಗೂ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಿರುವುದು ಸುಳ್ಳಲ್ಲ. ಸಂಗಾತಿಯ ಮೇಲೆ ಅತಿಯಾದ ಅವಲಂಬನೆ, ಅಸೂಯೆ, ಅತಿಯಾದ ನಿಯಂತ್ರಣ ಸೇರಿದಂತೆ ಕೆಲವು ಸಾಮಾನ್ಯ ನಡವಳಿಕೆಗಳು ವ್ಯಕ್ತಿಯ ಅಂದರೆ ಸಂಗಾತಿಯ ದೈಹಿಕ ಹಾಗೂ ಭಾವನಾತ್ಮಕ ಮಟ್ಟದ ಮೇಲೆ ಪರಿಣಾಮ ಬೀರುವಂತೆ ಮಾಡಬಹುದುʼ ಎಂದು ನಮ್ರೋವಾಣಿಯ ರಿಲೇಷನ್‌ಶಿಪ್‌ ಕೋಚ್‌ ಸಿದ್ಧಾರ್ಥ್‌ ಎಸ್‌. ಕುಮಾರ್‌ ವಿವರಿಸುತ್ತಾರೆ.

ಘೋಸ್ಟಿಂಗ್‌ನಿಂದ ಮೈಕ್ರೋ ಚೀಟಿಂಗ್‌ವರೆಗೆ 2023ರಲ್ಲಿ ಅತ್ಯಂತ ಕೆಟ್ಟ ಡೇಟಿಂಗ್‌ ಪ್ರವೃತ್ತಿಗಳಿವು.

ಘೋಸ್ಟಿಂಗ್‌

ನೀವು ನಿಮ್ಮ ಸಂಗಾತಿ ಇಬ್ಬರೂ ಚೆನ್ನಾಗಿಯೇ ಇರುತ್ತೀರಿ. ಆಗ ಇದ್ದಕ್ಕಿದ್ದ ಹಾಗೆ ನಿಮ್ಮ ಸಂಬಂಧದಲ್ಲಿ ಸಾಮಾಜಿಕ ಜಾಲತಾಣ ಬಳಕೆಯ ವಿಚಾರಕ್ಕೆ ಸಂಬಂಧಿಸಿದ ನಿಮ್ಮ ಸಂಗಾತಿಯು ನಿಮ್ಮನ್ನು ಪ್ರಶ್ನೆ ಮಾಡಬಹುದು. ಇದರಿಂದ ಸಂಬಂಧದಲ್ಲಿ ಬಿರುಕು ಮೂಡುವುದು ಸಹಜ. ಹಲವು ಬಾರಿ ಸಾಮಾಜಿಕ ಜಾಲತಾಣಗಳ ಬಳಕೆಯ ಬಗೆಗಿನ ಸಂಗಾತಿಯ ಮೇಲಿನ ಅನುಮಾನವು ಸಂದರ್ಭವನ್ನು ಕೆಡಿಸುತ್ತದೆ.

ಮೈಕ್ರೋ ಚೀಟಿಂಗ್‌

ನಿಮ್ಮ ಸಂಗಾತಿಯನ್ನು ನಿಮ್ಮ ಸ್ನೇಹಿತೆ ಅಥವಾ ಕಸಿನ್‌ಗೆ ಪರಿಚಯ ಮಾಡಿರುತ್ತೀರಿ. ಆರಂಭದಲ್ಲಿ ಸ್ನೇಹಿತನಂತೆ ವರ್ತಿಸುವ ಆ ವ್ಯಕ್ತಿ ನಂತರ ಬದಲಾಗುತ್ತಾನೆ. ಅವರೊಂದಿಗೂ ಅವರ ವರ್ತನೆ ಬದಲಾಗುತ್ತದೆ. ನಿಮಗೆ ಮೋಸ ಮಾಡಿ ಅವರೊಂದಿಗೆ ಫ್ಲರ್ಟ್‌ ಮಾಡಲು ಆರಂಭಿಸುತ್ತಾನೆ ಅಥವಾ ಆರಂಭಿಸುತ್ತಾಳೆ. ಇದು ಕೂಡ ಕೆಟ್ಟ ಡೇಟಿಂಗ್‌ ಪ್ರವೃತ್ತಿಗಳಲ್ಲಿ ಒಂದಾಗಿದೆ.

ಲವ್‌ ಬಾಂಬಿಂಗ್‌

ಯಾರೋ ಒಬ್ಬರು ನಿಮ್ಮ ಜೀವನಕ್ಕೆ ಅತ್ಯಂತ ಸುಂದರ ಕನಸಾಗಿ ಎಂಟ್ರಿ ಕೊಡುತ್ತಾರೆ. ನೀವು ಬದುಕು ಎಂಬಂತೆ ವರ್ತಿಸುತ್ತಾರೆ. ನಿಮ್ಮನ್ನು ಭಾವನಾತ್ಮಕವಾಗಿ ನಂಬಿಸಿ ನಂತರ ನಿಮಗೆ ಅರಿವಾಗದಂತೆ ಮೋಸ ಮಾಡಿ ಹೋಗುತ್ತಾರೆ. ನಿಮ್ಮ ಬದುಕಿನ ಸುಂದರ ಕನಸಾಗಿದ್ದ ಅವರು ದುಸ್ವಪ್ನವಾಗುತ್ತಾರೆ. ಇದನ್ನು ಲವ್‌ ಬಾಂಬಿಂಗ್‌ ಎನ್ನುತ್ತಾರೆ. ಯಾಕೆಂದರೆ ನೀವು ಅವರು ನಿಮಗೆ ಮೋಸ ಮಾಡುತ್ತಾರೆ ಎಂದು ಊಹಿಸಿಯೂ ಇರುವುದಿಲ್ಲ. ಇದ್ದಕ್ಕಿದ್ದಂತೆ ಬಾಂಬ್‌ ಸಿಡಿಸುತ್ತಾರೆ.

ಆರ್ಬಿಟಿಂಗ್‌

ಇದೊಂದು ಡಿಜಿಟಲ್‌ ವಿದ್ಯಾಮಾನ. ಇದರಲ್ಲಿ ವ್ಯಕ್ತಿಯು ನಿಮ್ಮೊಂದಿಗೆ ಎಲ್ಲಾ ನೇರ ಸಂವಹನವನ್ನು ಕಡಿತಗೊಳಿಸುತ್ತಾನೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸಂಪರ್ಕದಲ್ಲಿರುತ್ತಾನೆ. ಸಾಮಾಜಿಕ ಜಾಲತಾಣದಲ್ಲಿ ಇದ್ದರೂ ನಿಮ್ಮ ಫೋಟೊಗಳಿಗೆ ಲೈಕ್‌ ಕಾಮೆಂಟ್‌ ಮಾಡುವುದಿಲ್ಲ. ಆದರೆ ನಾವು ಪೋಸ್ಟ್‌ ಮಾಡುವ ಎಲ್ಲವನ್ನೂ ಗಮನಿಸುತ್ತಾನೆ. ಇದೊಂದು ರೀತಿಯ ಡೇಟಿಂಗ್‌ ಟ್ರೆಂಡ್‌ ಕೂಡ 2023 ರಲ್ಲಿ ಹೆಚ್ಚು ಚಾಲ್ತಿಯಲ್ಲಿತ್ತು.

ಸ್ಟೋನ್‌ವಾಲಿಂಗ್‌

ಸ್ಟೋನ್‌ ವಾಲಿಂಗ್‌ ಎಂದರೆ ಒಬ್ಬ ವ್ಯಕ್ತಿ ಅಥವಾ ಸಂಗಾತಿ ಇದ್ದಕ್ಕಿದ್ದಂತೆ ಸಂಬಂಧದಿಂದ ದೂರಾಗುವುದು. ಇದ್ದಕ್ಕಿದ್ದಂತೆ ಮಾತನಾಡುವುದನ್ನು ನಿಲ್ಲಿಸುವುದು. ಆದರೆ ದೂರವಾಗುವುದಕ್ಕೆ ಕಾರಣ ಹೇಳುವುದಿಲ್ಲ. ನಿಮ್ಮೊಂದಿಗೆ ಭಾವನಾತ್ಮಕ ಕೋಟೆ ಕಟ್ಟಿ ಇದ್ದಕ್ಕಿದ್ದಂತೆ ಆ ಕೋಟೆಯನ್ನು ಬೀಳಿಸುತ್ತಾನೆ ಅಥವಾ ಬೀಳಿಸುತ್ತಾಳೆ. ತನ್ನ ತಪ್ಪೇ ಇಲ್ಲ ಎಂಬಂತೆ ನಡೆದುಕೊಳ್ಳುವ ಈ ಟ್ರೆಂಡ್‌ ಇನ್ನೊಬ್ಬರನ್ನು ಗುರಿಯಾಗಿಸುವುದಾಗಿದೆ.

ಗ್ಯಾಸ್‌ ಲೈಟಿಂಗ್‌

ಗ್ಯಾಸ್‌ ಲೈಟಿಂಗ್‌ ಎನ್ನುವ ಡೇಟಿಂಗ್‌ ಟ್ರೆಂಡ್‌ನಲ್ಲಿ ಸಂಬಂಧದ ಬಗ್ಗೆ ಪ್ರೇಮಿ ತನ್ನಲ್ಲಿ ಪ್ರಶ್ನೆ ಹುಟ್ಟಿಸಿಕೊಳ್ಳುವಂತೆ ಮಾಡುವುದು. ಸುಮ್ಮನೆ ಆರೋಪಿಸಿವುದು, ಇಲ್ಲದ್ದನ್ನು ಕಲ್ಪಿಸಿಕೊಂಡು ಹೇಳುವುದು. ಸತ್ಯವನ್ನು ತಿರುಚುವುದು ಹೀಗೆ ವಾಸ್ತವವನ್ನು ಕೆಡಿಸುವ ಮೂಲಕ ಸ್ವಂತ ಆಲೋಚನೆಗಳು, ಭಾವನೆಗಳು ಹಾಗೂ ಗ್ರಹಿಕೆಯನ್ನು ಪ್ರಶ್ನಿಸುವಂತೆ ಮಾಡುವ ಪ್ರಯತ್ನ ಇದಾಗಿದೆ.

ನಿಮ್ಮ ಪ್ರೇಮಬಂಧ ಅಥವಾ ಸಂಬಂಧದಲ್ಲೂ ಇಂತಹ ಅನುಭವಗಳನ್ನು ನೀವು ಹೊಂದಿರಬಹುದು. ಇದರಿಂದ ಪ್ರೀತಿ ಹಲವ ಕಾಲ ಉಳಿಯುವುದಿಲ್ಲ. ಸಂಬಂಧ ಮುಂದುವರಿಯುವುದು ಕೂಡ. ಇಂತಹ ಪ್ರೀತಿ, ಪ್ರೇಮ ಸಂಬಂಧವಾದರೂ ಒಂದು ನಿರ್ದಿಷ್ಟ ಗಡಿ ಇರಲಿ. ನಿಮ್ಮನ್ನು ಪ್ರೀತಿಸುವ ವ್ಯಕ್ತಿಯ ಬಗ್ಗೆ ಮೊದಲೇ ಒಂದಿಷ್ಟು ಮಾಹಿತಿಗಳನ್ನು ಸಂಗ್ರಹಿಸಿ.

Whats_app_banner