logo
ಕನ್ನಡ ಸುದ್ದಿ  /  ಜೀವನಶೈಲಿ  /  ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ: ನಿಮ್ಮ ಫೋನ್‍ನಲ್ಲಿ ಈ ಅಪಾಯಕಾರಿ ಅಪ್ಲಿಕೇಶನ್‌ ಇದ್ದರೆ ತಕ್ಷಣ ಡಿಲೀಟ್ ಮಾಡಿ

ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ: ನಿಮ್ಮ ಫೋನ್‍ನಲ್ಲಿ ಈ ಅಪಾಯಕಾರಿ ಅಪ್ಲಿಕೇಶನ್‌ ಇದ್ದರೆ ತಕ್ಷಣ ಡಿಲೀಟ್ ಮಾಡಿ

Priyanka Gowda HT Kannada

Sep 25, 2024 12:54 PM IST

google News

ನೆಕ್ರೋ ಟ್ರೋಜನ್ ಎಂದು ಕರೆಯಲ್ಪಡುವ ಅಪಾಯಕಾರಿ ಮಾಲ್‌ವೇರ್ ಅನಧಿಕೃತವಾಗಿ ಮಾರ್ಪಡಿಸಿದ ಅಪ್ಲಿಕೇಶನ್‌ಗಳಲ್ಲಿ ಕಾಣಿಸಿಕೊಂಡಿದೆ.

  • ಒಂದು ಮಾಲ್‌ವೇರ್ ಪತ್ತೆಯಾಗಿದ್ದು, ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ನೆಕ್ರೋ ಟ್ರೋಜನ್ ಎಂದು ಕರೆಯಲ್ಪಡುವ ಅಪಾಯಕಾರಿ ಮಾಲ್‌ವೇರ್ ಅನಧಿಕೃತವಾಗಿ ಮಾರ್ಪಡಿಸಿದ ಅಪ್ಲಿಕೇಶನ್‌ಗಳಲ್ಲಿ ಕಾಣಿಸಿಕೊಂಡಿದೆ. (ಬರಹ: ವಿನಯ್ ಭಟ್)

ನೆಕ್ರೋ ಟ್ರೋಜನ್ ಎಂದು ಕರೆಯಲ್ಪಡುವ ಅಪಾಯಕಾರಿ ಮಾಲ್‌ವೇರ್ ಅನಧಿಕೃತವಾಗಿ ಮಾರ್ಪಡಿಸಿದ ಅಪ್ಲಿಕೇಶನ್‌ಗಳಲ್ಲಿ ಕಾಣಿಸಿಕೊಂಡಿದೆ.
ನೆಕ್ರೋ ಟ್ರೋಜನ್ ಎಂದು ಕರೆಯಲ್ಪಡುವ ಅಪಾಯಕಾರಿ ಮಾಲ್‌ವೇರ್ ಅನಧಿಕೃತವಾಗಿ ಮಾರ್ಪಡಿಸಿದ ಅಪ್ಲಿಕೇಶನ್‌ಗಳಲ್ಲಿ ಕಾಣಿಸಿಕೊಂಡಿದೆ. (Unsplash )

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರೆ. ಇದರಲ್ಲಿ ಫೋಟೋಗಳು, ವೀಡಿಯೋಗಳು, ಡಾಕ್ಯುಮೆಂಟ್‌ ಸೇರಿದಂತೆ ಅನೇಕ ಡೇಟಾವನ್ನು ಸೇವ್ ಮಾಡಿಟ್ಟುಕೊಂಡಿರುತ್ತಾರೆ. ಹೀಗಿರುವಾಗ ಫೋನ್ ಡೇಟಾವನ್ನು ಸುರಕ್ಷಿತವಾಗಿರಿಸುವುದು ಅವಶ್ಯಕ. ಆದರೆ, ಕೆಲವರು ವೈರಸ್ ಬಿಡುಗಡೆ ಮಾಡುವ ಮೂಲಕ ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡಲು ಮುಂದಾಗುತ್ತಾರೆ. ಈಗ ಅಂಥದ್ದೇ ಒಂದು ಮಾಲ್‌ವೇರ್ ಪತ್ತೆಯಾಗಿದ್ದು, ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ನೆಕ್ರೋ ಟ್ರೋಜನ್ ಎಂದು ಕರೆಯಲ್ಪಡುವ ಅಪಾಯಕಾರಿ ಮಾಲ್‌ವೇರ್ ಅನಧಿಕೃತವಾಗಿ ಮಾರ್ಪಡಿಸಿದ ಅಪ್ಲಿಕೇಶನ್‌ಗಳಲ್ಲಿ ಕಾಣಿಸಿಕೊಂಡಿದೆ.

ಸ್ಮಾರ್ಟ್​ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಇದು ಅಡಕವಾಗಿದ್ದು 11 ಮಿಲಿಯನ್‌ಗಿಂತಲೂ ಹೆಚ್ಚು ಆಂಡ್ರಾಯ್ಡ್ ಸಾಧನಗಳಿಗೆ ಸೋಂಕು ತಗುಲಿಸಿದೆ ಎಂದು ವರದಿಯಾಗಿದೆ. ಈ ಮಾಲ್ವೇರ್ ಮೊದಲ ಬಾರಿಗೆ 2019 ರಲ್ಲಿ ಕಾಣಿಸಿಕೊಂಡಿತು. ಆದರೆ, ಈಗ ಇದು ಹಲವು ಹೊಸ ರೂಪದಲ್ಲಿ ಪುನರಾಗಮನ ಮಾಡಿದೆ ಎಂದು ವರದಿಯಾಗಿದೆ.

ಕ್ಯಾಸ್ಪರ್ಸ್ಕಿಯ ವರದಿಯ ಪ್ರಕಾರ, ಮಾಲ್ವೇರ್ ಈಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಧಿಕೃತ ಅಪ್ಲಿಕೇಶನ್‌ಗಳ ಒಳಗೆ ಸೇರಿಕೊಂಡಿದೆ. ಒಮ್ಮೆ ಇನ್​ಸ್ಟಾಲ್ ಮಾಡಿಕೊಂಡರೆ ಇದು ಹೆಚ್ಚುವರಿ ಫೈಲ್​ಗಳನ್ನು ಡೌನ್‌ಲೋಡ್ ಮಾಡುತ್ತದೆ. ನಂತರ ಆಯ್ಡ್‌ವೇರ್, ಚಂದಾದಾರಿಕೆ ವಂಚನೆ ಮತ್ತು ಟ್ರಾಫಿಕ್ ಕಳುಹಿಸುವಿಕೆಗಾಗಿ ಫೋನ್ ಅನ್ನು ಪ್ರಾಕ್ಸಿ ಸರ್ವರ್ ಆಗಿ ಪರಿವರ್ತಿಸುತ್ತದೆ.

ಈ ವೈರಸ್ ವುಟಾ ಕ್ಯಾಮೆರಾ ಮತ್ತು ಮ್ಯಾಕ್ಸ್ ಬ್ರೌಸರ್ ಅಪ್ಲಿಕೇಶನ್‌ಗಳಲ್ಲಿ ಸೇರಿವೆ. ವುಟಾ ಕ್ಯಾಮೆರಾ ಅತಿ ಹೆಚ್ಚು ಜನರು ಬಳಸುವ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಈ ಕ್ಯಾಮೆರಾ ಅಪ್ಲಿಕೇಶನ್ ಅನ್ನು ಸುಮಾರು 10 ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಲಾಗಿದೆ. ಸದ್ಯ ಹಳೆಯ ಆವೃತ್ತಿಗಳನ್ನು ತೆಗೆದುಹಾಕಲಾಗಿದೆ ಮತ್ತು ಬಳಕೆದಾರರು ಕೂಡಲೇ ಈ ಅಪ್ಲಿಕೇಶನ್‌ಗಳನ್ನು ಅಪ್ಡೇಟ್ ಮಾಡಿ ಅಥವಾ ಈಗಿರುವ ಆ್ಯಪ್ ಡಿಲೀಟ್ ಮಾಡಿ ಹೊಸ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು.

ಹೇಗೆ ರಕ್ಷಿಸಿಕೊಳ್ಳುವುದು?

ಆಂಡ್ರಾಯ್ಡ್ ಮಾಲ್‌ವೇರ್‌ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ಗೂಗಲ್ ಪ್ಲೇ ಸ್ಟೋರ್ ನಂತಹ ಅಧಿಕೃತ ಮೂಲಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ. ನಿಮ್ಮ ಸಾಧನದಲ್ಲಿ ಗೂಗಲ್ ಪ್ಲೇ ಪ್ರೊಟೆಕ್ಷನ್ ಸಕ್ರಿಯಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು, ಅದರ ರೇಟಿಂಗ್‌ ಮತ್ತು ವಿಮರ್ಶೆಗಳನ್ನು ಪರಿಶೀಲಿಸಿ. ಆನ್‌ಲೈನ್ ವೀಡಿಯೊ ವಿಮರ್ಶೆಗಳನ್ನು ಸಹ ವೀಕ್ಷಿಸಿ. ಹಾಗೆಯೆ ಬಳಕೆದಾರರು ತಮ್ಮ ಆಂಡ್ರಾಯ್ಡ್ ಸಾಧನವನ್ನು ಆಂಟಿವೈರಸ್ ಸಾಫ್ಟ್‌ವೇರ್‌ನಿಂದ ಸ್ಕ್ಯಾನ್ ಮಾಡುತ್ತಿರಿ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ