logo
ಕನ್ನಡ ಸುದ್ದಿ  /  ಜೀವನಶೈಲಿ  /  ಇದೊಂದು ಸಾಂಬಾರ್ ಪುಡಿ ಇದ್ರೆ ಸಾಕು, ಯಾವಾಗ ಬೇಕಿದ್ರೂ ಥಟ್ ಅಂತ ರೆಡಿಯಾಗುತ್ತೆ ಬಾಯಲ್ಲಿ ನೀರೂರಿಸುವ ರುಚಿಯಾದ ಅಡುಗೆ!

ಇದೊಂದು ಸಾಂಬಾರ್ ಪುಡಿ ಇದ್ರೆ ಸಾಕು, ಯಾವಾಗ ಬೇಕಿದ್ರೂ ಥಟ್ ಅಂತ ರೆಡಿಯಾಗುತ್ತೆ ಬಾಯಲ್ಲಿ ನೀರೂರಿಸುವ ರುಚಿಯಾದ ಅಡುಗೆ!

Suma Gaonkar HT Kannada

Sep 19, 2024 12:05 PM IST

google News

ಸಾಂಬಾರ್ ಪೌಡರ್ ರೆಸಿಪಿ

    • Instant Sambar Powder: ಸಾಂಬಾರ್ ಅನ್ನು ಅನೇಕ ಜನರು ಇಷ್ಟಪಡುತ್ತಾರೆ. ಅನ್ನದ ಜೊತೆ ಸಾಂಬಾರ್ ಇಲ್ಲ ಅಂದ್ರೆ ಊಟ ಸಪ್ಪೆ ಎನಿಸುತ್ತದೆ. ಆದರೆ  ಕೆಲವೊಮ್ಮೆ ಒತ್ತಡದ ಜೀವನದಲ್ಲಿ ಸಾಂಬಾರ್ ರೆಡಿ ಮಾಡೋಕೆ ಅಥವಾ ರುಬ್ಬೋಕೆ ಸಮಯವೇ ಇರೋದಿಲ್ಲ. ಅಂತ ಸಂದರ್ಭದಲ್ಲಿ ನೀವು ಈ ರೀತಿ ಪೌಡರ್ ಯೂಸ್ ಮಾಡ್ಬಹುದು. ಇದನ್ನು ಮಾಡುವ ವಿಧಾನ ತಿಳಿಸಿದ್ದೇವೆ ಗಮನಿಸಿ. 
ಸಾಂಬಾರ್ ಪೌಡರ್ ರೆಸಿಪಿ
ಸಾಂಬಾರ್ ಪೌಡರ್ ರೆಸಿಪಿ

ಸಾಂಬಾರ್ ಮಾಡುವುದು ಒಂದು ಲಾಂಗ್ ಪ್ರಾಸೆಸ್ ಎಂದು ಅದಕ್ಕೆ ಸಮಯ ಬೇಕು ಎಂದು ಮಾಡುವುದನ್ನೇ ಕೆಲವರು ಬಿಟ್ಟಿರುತ್ತಾರೆ. ಮಾಡಿದರೂ ತುಂಬಾ ಸಮಯ ತೆಗೆದುಕೊಂಡು ಆಫಿಸ್‌ಗೆ ಅಥವಾ ಕಾಲೇಜಿಗೆ ಹೋಗೋಕೆ ಲೇಟ್ ಆಯ್ತಲ್ಲಪ್ಪ ಅಂತ ಬೈಕೊಂಡು ಡಬ್ಬಿ ತುಂಬ್ತಾ ಇರ್ತಾರೆ. ಆದ್ರೆ ಇನ್ನು ಮೇಲೆ ನೀವು ಅಷ್ಟೆಲ್ಲ ಸಮಸ್ಯೆಪಟ್ಟುಕೊಳ್ಳುವ ಅಗತ್ಯವಿಲ್ಲ. ಯಾಕೆಂದರೆ ಇಲ್ಲಿದೆ ನೋಡಿ ಇನಸ್ಟಂಟ್ ಸಾಂಬಾರ್ ಪೌಡರ್ ರೆಸಿಪಿ. ಒಮ್ಮೆ ಮಾಡಿಟ್ಟುಕೊಂಡರೆ ನೀವು ಬೇಗನೇ ಸಾಂಬಾರ್ ಮಾಡಬಹುದು. ಹಾಗಾದರೆ ಹೇಗೆ ಇದನ್ನು ತಯಾರು ಮಾಡೋದು ನೋಡೋಣ ಬನ್ನಿ.

ಇನಸ್ಟಂಟ್ ಸಾಂಬಾರ್ ಪೌಡರ್ ಮಾಡಲು ಬೇಕಾಗುವ ಸಾಮಗ್ರಿಗಳು

ಕಡಲೆ - 3/4 ಕಪ್

ಹೆಸರು ಬೇಳೆ - ಅರ್ಧ ಕಪ್

ಮೆಂತ್ಯ - ಅರ್ಧ ಕಪ್

ಕರಿಮೆಣಸು - 20

ಮೆಣಸು - ಒಂದು ಚಮಚ

ಮೆಂತ್ಯ - ಒಂದು ಚಮಚ

ಜೀರಿಗೆ - ಒಂದು ಚಮಚ

ಕೊತ್ತಂಬರಿ ಸೊಪ್ಪು - ಅರ್ಧ ಕಪ್

ಕರಿಬೇವಿನ ಎಲೆಗಳು - ಒಂದು ಕಪ್

ಹುಣಸೆಹಣ್ಣು - 100 ಗ್ರಾಂ

ಜೀರಿಗೆ - ಒಂದು ಚಮಚ

ದಾಲ್ಚಿನ್ನಿ - ಸಣ್ಣ ತುಂಡು

ಲವಂಗ - 6

ಉಪ್ಪು - ರುಚಿಗೆ ತಕ್ಕಷ್ಟು

ಒಣ ಕೊಬ್ಬರಿ - ಒಂದು ಕಪ್

ಸಾಂಬಾರ್ ಪೌಡರ್ ರೆಸಿಪಿ

1. ಒಲೆಯ ಮೇಲೆ ಬಾಣಲೆ ಇರಿಸಿ ಮತ್ತು ಕಡಿಮೆ ಉರಿಯಲ್ಲಿ ಎರಡೂ ಬೇಳೆಗಳು ಎಣ್ಣೆ ಹಾಕದೆ ಹಾಗೇ ಹುರಿದುಕೊಳ್ಳಿ

2. ನಂತರ ಹುರಿದ ಎಲ್ಲ ಸಾಮಗ್ರಿಗಳನ್ನು ಪಕ್ಕಕ್ಕೆ ಇಟ್ಟು ತಣಿಸಿಕೊಳ್ಳಿ

3. ನಂತರ ಕೊತ್ತಂಬರಿ , ಮೆಂತ್ಯ, ಜೀರಿಗೆ, ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ.

4. ಈಗ ಬೇಳೆಯನ್ನು ದೊಡ್ಡ ಮಿಕ್ಸಿಂಗ್ ಜಾರ್‌ಗೆ ಹಾಕಿ ಲವಂಗ, ದಾಲ್ಚಿನ್ನಿ, ಹುಣಸೆಹಣ್ಣು, ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಇಂಗು ಸೇರಿಸಿ ಮತ್ತು ನುಣ್ಣಗೆ ಪುಡಿ ಮಾಡಿ.

5. ಇಷ್ಟು ಮಾಡಿದರೆ ರೆಡಿ. ಇದನ್ನು ಗಾಳಿಯಾಡದ ಡಬ್ಬದಲ್ಲಿ ಯಾವಾಗ ಬೇಕಾದರೂ ಬಳಸಬಹುದು.

ಸಾಂಬಾರ್ ಮಾಡಲು ಬೇಕಾದ ತರಕಾರಿಗಳನ್ನು ಕತ್ತರಿಸಿ ಪಕ್ಕಕ್ಕೆ ಇಡಿ. ಒಲೆಯ ಮೇಲೆ ಬಾಣಲೆ ಇಟ್ಟು ಎರಡು ಚಮಚ ಎಣ್ಣೆ ಹಾಕಿ. ಸಾಸಿವೆ, ಜೀರಿಗೆ, ಉದ್ದಿನಬೇಳೆ, ಹಸಿಮೆಣಸು, ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ. ನಂತರ ಈರುಳ್ಳಿ ಚೂರುಗಳನ್ನು ಹಾಕಿ ಫ್ರೈ ಮಾಡಿ. ಟೊಮೇಟೊ ಚೂರುಗಳು ಮತ್ತು ತರಕಾರಿ ಸೇರಿಸಿ ಮತ್ತು ಕುದಿಯಲು ಬಿಡಿ. ಒಂದು ಚಮಚ ಅರಿಶಿನವನ್ನು ಕೂಡ ಸೇರಿಸಬೇಕು. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದ ನಂತರ, ಒಂದು ಕಪ್ ಸಾಂಬಾರ್ ಪುಡಿಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಈಗ ಸಾಂಬಾರ್‌ಗೆ ಬೇಕಾದಷ್ಟು ನೀರು ಹಾಕಿ ಬೇಯಿಸಿ. ಉಪ್ಪು ಸಾಕಾಗದಿದ್ದರೆ, ನೀವು ಸ್ವಲ್ಪ ಹೆಚ್ಚು ಸೇರಿಸಬಹುದು. ಹತ್ತು ನಿಮಿಷ ಬೇಯಿಸಿದ ನಂತರ ಸಾಂಬಾರ್ ರೆಡಿಯಾಗೇಬಿಡುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ