logo
ಕನ್ನಡ ಸುದ್ದಿ  /  ಜೀವನಶೈಲಿ  /  Top Mileage Bikes: ಈ ಬೈಕ್‌ಗಳ ಮೈಲೇಜ್‌ ಅದ್ಭುತ... ಫುಲ್‌ ಟ್ಯಾಂಕ್‌ ಪೆಟ್ರೋಲ್‌ ತುಂಬಿಸಿಕೊಂಡ್ರೆ 600-700 ಕಿಮೀ ಜರ್ನಿ ಮಾಡಬಹುದು!

Top Mileage Bikes: ಈ ಬೈಕ್‌ಗಳ ಮೈಲೇಜ್‌ ಅದ್ಭುತ... ಫುಲ್‌ ಟ್ಯಾಂಕ್‌ ಪೆಟ್ರೋಲ್‌ ತುಂಬಿಸಿಕೊಂಡ್ರೆ 600-700 ಕಿಮೀ ಜರ್ನಿ ಮಾಡಬಹುದು!

Praveen Chandra B HT Kannada

Oct 15, 2024 12:17 PM IST

google News

ಅತ್ಯಧಿಕ ಮೈಲೇಜ್‌ ನೀಡುವ ಬೈಕ್‌ಗಳು

    • Top Mileage Bikes: ಮಧ್ಯಮ ವರ್ಗದ ಜನರು ಮೈಲಜ್‌ ನೀಡುವ ಬೈಕ್‌ಗಳನ್ನು ಹುಡುಕುತ್ತಾರೆ. ಬಜಾಜ್ ಪ್ಲಾಟಿನಾ ಮತ್ತು ಟಿವಿಎಸ್ ಸ್ಪೋರ್ಟ್ಸ್ ಬೈಕ್‌ಗಳು ಮೈಲೇಜ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಈಗಿನ ದುಬಾರಿ ಇಂಧನ ದರದ ಕಾಲದಲ್ಲಿ ಮೈಲೇಜ್‌ ಉತ್ತಮವಾಗಿದ್ದರೆ ಕಿಸೆಗೆ ಪ್ರಯೋಜನವಾಗುತ್ತದೆ.
ಅತ್ಯಧಿಕ ಮೈಲೇಜ್‌ ನೀಡುವ ಬೈಕ್‌ಗಳು
ಅತ್ಯಧಿಕ ಮೈಲೇಜ್‌ ನೀಡುವ ಬೈಕ್‌ಗಳು

ಭಾರತೀಯರು ಬೈಕ್‌ ಅಥವಾ ಸ್ಕೂಟರ್‌ ಖರೀದಿಸುವ ಸಮಯದಲ್ಲಿ ತಪ್ಪದೇ "ಮೈಲೇಜ್‌ ಎಷ್ಟು ದೊರಕುತ್ತದೆ?" ಎಂದು ಕೇಳುತ್ತಾರೆ. ನೀವು ಹೊಸ ಬೈಕ್‌ ಖರೀದಿಸಿದಾಗ ಇತರರು ಕೂಡ ಅದೇ ಪ್ರಶ್ನೆ ಕೇಳುತ್ತಾರೆ. ನೀವು ಹಲವು ಲಕ್ಷ ನೀಡಿ ಸೂಪರ್‌ ಬೈಕ್‌ ಖರೀದಿಸಿದರೂ ಎಷ್ಟು ನೀಡುತ್ತೆ ಅನ್ತಾರೆ. ಭಾರತದಲ್ಲಿ ಮಧ್ಯಮ ವರ್ಗದವರು ಮೈಲೇಜ್ ಕೊಡುವ ಬೈಕ್‌ಗಳನ್ನೇ ಖರೀದಿಸಲು ಬಯಸುತ್ತಾರೆ. ಇಂಧನ ಬೆಲೆ ಏರಿಕೆ ಎಲ್ಲರಿಗೂ ಹೊರೆಯಾಗಿ ಪರಿಣಮಿಸಿದೆ. ಇದರಿಂದಾಗಿ ಮೈಲೇಜ್ ನೀಡುವ ಬೈಕ್‌ಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಕೆಲವು ಬೈಕ್‌ಗಳು ಹೆಚ್ಚಿನ ನಿರ್ವಹಣಾ ವೆಚ್ಚವನ್ನು ಹೊಂದಿರುತ್ತವೆ. ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಎರಡು ಬೈಕ್‌ಗಳಿವೆ. ಅವುಗಳು ಕಡಿಮೆ ನಿರ್ವಹಣಾ ವೆಚ್ಚವನ್ನೂ ಹೊಂದಿವೆ.

ಮೈಲೇಜ್ ಕೊಡುವ ಬೈಕ್ ಗಳು ಸಾಮಾನ್ಯವಾಗಿ ತೂಕದಲ್ಲಿ ಹಗುರವಾಗಿರುತ್ತವೆ. ಅವುಗಳ ಟೈರ್ ಕೂಡ ತೆಳುವಾಗಿರುತ್ತವೆ. ಎಂಜಿನ್ ಮೇಲಿನ ಒತ್ತಡ ಕಡಿಮೆ ಇರುತ್ತದೆ. ಇಂತಹ ದ್ವಿಚಕ್ರ ವಾಹಗಳು ಗರಿಷ್ಠ ಮೈಲೇಜ್ ಕೂಡ ನೀಡುತ್ತವೆ. ಇತರ ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ, ಬಜಾಜ್ ಪ್ಲಾಟಿನಾ ಮತ್ತು ಟಿವಿಎಸ್ ಸ್ಪೋರ್ಟ್ ಉತ್ತಮ ಇಂಧನ ದಕ್ಷತೆ ಒದಗಿಸುತ್ತವೆ. ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಬೈಕ್ ನಿರ್ವಹಣೆ ಮಾಡಬಹುದು. ಈ ಬೈಕ್‌ಗಳ ಪೆಟ್ರೋಲ್‌ ಟ್ಯಾಂಕ್ ಫುಲ್‌ ತುಂಬಿಸಿದರೆ, ಸುಮಾರು ಐನೂರರಿಂದ ಏಳುನೂರು ಕಿಮೀ ದೂರದ ವಿವಿಧ ಪ್ರದೇಶಗಳಿಗೆ ಹೋಗಬಹುದು. ಅಂದರೆ ಬೆಂಗಳೂರಿನಿಂದ ಮಂಗಳೂರು ಮೂಲಕ ಉಡುಪಿ ತನಕವೂ ಹೋಗಬಹುದು. ಕೂರ್ಗ್‌, ದಾಂಡೇಲಿಗೂ ಹೋಗಬಹುದು. ಆದರೆ, ಇವು ದೂರ ಪ್ರಯಾಣಕ್ಕೆ ಅಷ್ಟು ಸೂಕ್ತವಾದ ಬೈಕ್‌ಗಳು ಅಲ್ಲವೆನ್ನುವುದು ನೆನಪಿನಲ್ಲಿಟ್ಟುಕೊಳ್ಳಬೇಕು. ಲಾಂಗ್‌ ಡ್ರೈವ್‌ಗೆ ರಾಯಲ್‌ ಎನ್‌ಫೀಲ್ಡ್‌ ಅಥವಾ ಇತರೆ ಪ್ರೀಮಿಯಂ ಅಥವಾ ಟೂರರ್‌ ಬೈಕ್‌ಗಳು ಹೆಚ್ಚು ಸೂಕ್ತವಾಗಿವೆ. ಕಮ್ಯುಟರ್‌ ಬೈಕ್‌ ಮತ್ತು ಸ್ಕೂಟರ್‌ಗಳನ್ನು ದಿನಬಳಕೆಯ ಅವಶ್ಯಕತೆಗಾಗಿ ಮತ್ತು ಹತ್ತಿರದ ಪ್ರಯಾಣಗಳಿಗೆ ಬಳಸುವುದು ಉತ್ತಮ.

ಟಿವಿಎಸ್ ಸ್ಪೋರ್ಟ್

ಟಿವಿಎಸ್ ಕಂಪನಿ ಪರಿಚಯಿಸಿದ ಟಿವಿಎಸ್ ಸ್ಪೋರ್ಟ್ ದ್ವಿಚಕ್ರವಾಹನವು ಅತ್ಯಧಿಕ ಇಂಧನ ದಕ್ಷತೆ ನೀಡುವ ಬೈಕಾಗಿದೆ. ಬೆಂಗಳೂರಿನಲ್ಲಿ ಟಿವಿಎಸ್‌ ಸ್ಪೋರ್ಟ್‌ ಬೈಕ್‌ನ ಎಕ್ಸ್‌ಶೋರೂಂ ದರ 67,320 ರೂಪಾಯಿ ಇದೆ. ಏಳು ಬಣ್ಣಗಳಲ್ಲಿ, ಎರಡು ಆವೃತ್ತಿಗಳಲ್ಲಿ ದೊರಕುತ್ತದೆ. ಇದು ಪ್ರತಿ ಲೀಟರ್ ಪೆಟ್ರೋಲ್ ಗೆ ಸುಮಾರು 70 ರಿಂದ 80 ಕಿ.ಮೀ ಇಂಧನ ದಕ್ಷತೆ ನೀಡುತ್ತದೆ. ಇದು 10 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್‌ ಹೊಂದಿದೆ. ಇದರ ಟ್ಯಾಂಕ್ ಪೂರ್ತಿ ತುಂಬಿದರೆ ಸುಮಾರು 700ರಿಂದ 750 ಕಿ.ಮೀ ಪ್ರಯಾಣಿಸಬಹುದು. ಇದು 109.7cc ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ BS6 ಎಂಜಿನ್‌ ಹೊಂದಿದೆ. 4-ಸ್ಪೀಡ್ ಗಿಯರ್‌ ಬಾಕ್ಸ್‌ ಇದೆ. ಇದರ ಎಂಜಿನ್ 8.07 PS ಪವರ್ ಮತ್ತು 8.4 Nm ಟಾರ್ಕ್ ನೀಡುತ್ತದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್‌ ಬ್ರೇಕ್‌ಗಳಿವೆ.

ಬಜಾಜ್ ಪ್ಲಾಟಿನಾ

ಬಜಾಜ್ ಪ್ಲಾಟಿನಾ ಬೈಕ್ ದರ 69,165 ರೂ. ಇದೆ. ಇದು ಎಕ್ಸ್‌ಶೋರಂ ದರ. ಆರ್‌ಟಿಒ, ಇನ್ಸುರೆನ್ಸ್‌ ಸೇರಿದರೆ ದರ 90 ಸಾವಿರ ಆಸುಪಾಸಿನಲ್ಲಿರುತ್ತದೆ. ಇದು ಪ್ರತಿಲೀಟರ್‌ಗೆ ಸುಮಾರು 72 ಕಿ.ಮೀ. ಮೈಲೇಜ್‌ ನೀಡುತ್ತದೆ. 11 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಇದೆ. ಪೂರ್ಣ ಟ್ಯಾಂಕ್‌ನಲ್ಲಿ 792 ಕಿಮೀ ಮೈಲೇಜ್ ನೀಡುತ್ತದೆ. 102 cc ಸಿಂಗಲ್ ಸಿಲಿಂಡರ್ DTS-I ಎಂಜಿನ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದು 7.79 bhp ಪವರ್ ಮತ್ತು 8.34 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೈಕು ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್‌ ಬ್ರೇಕ್‌ಗಳಿವೆ. ನಾಲ್ಕು ಹಂತದ ಗಿಯರ್‌ಬಾಕ್ಸ್‌ ಇದೆ.

ಹೀಗೆ ಇವೆರಡು ಬೈಕ್‌ಗಳು ಅತ್ಯುತ್ತಮ ಇಂಧನ ದಕ್ಷತೆ ನೀಡುತ್ತವೆ. ಈ ಮೈಲೇಜ್‌ ಅಂಕಿಅಂಶಗಳು ಆಯಾ ಕಂಪನಿಗಳು ಪ್ರತಿಪಾದಿಸಿರುವಂತಹ ಸಂಖ್ಯೆಯಾಗಿದೆ. ಆಯಾ ರೈಡರ್‌ಗೆ ರಸ್ತೆಗಳು, ಚಾಲನಾ ರೀತಿ, ಪರಿಸರಕ್ಕೆ ತಕ್ಕಂತೆ ಇಂಧನ ದಕ್ಷತೆಯಲ್ಲಿ ಹೆಚ್ಚು ಕಡಿಮೆಯಾಗಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ