Car Buy:ಏರ್‌ ಬ್ಯಾಗ್‌ ಎಷ್ಟಿದೆ, ಸ್ಟಾರ್‌ ರೇಟಿಂಗ್‌ ಇದೆಯಾ, ಮೈಲೇಜ್‌ ಎಷ್ಟು? ಕಾರು ಖರೀದಿ ಸಮಯದಲ್ಲಿ ಭಾರತೀಯರು ಪರಿಗಣಿಸುವ ವಿಚಾರಗಳಿವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Car Buy:ಏರ್‌ ಬ್ಯಾಗ್‌ ಎಷ್ಟಿದೆ, ಸ್ಟಾರ್‌ ರೇಟಿಂಗ್‌ ಇದೆಯಾ, ಮೈಲೇಜ್‌ ಎಷ್ಟು? ಕಾರು ಖರೀದಿ ಸಮಯದಲ್ಲಿ ಭಾರತೀಯರು ಪರಿಗಣಿಸುವ ವಿಚಾರಗಳಿವು

Car Buy:ಏರ್‌ ಬ್ಯಾಗ್‌ ಎಷ್ಟಿದೆ, ಸ್ಟಾರ್‌ ರೇಟಿಂಗ್‌ ಇದೆಯಾ, ಮೈಲೇಜ್‌ ಎಷ್ಟು? ಕಾರು ಖರೀದಿ ಸಮಯದಲ್ಲಿ ಭಾರತೀಯರು ಪರಿಗಣಿಸುವ ವಿಚಾರಗಳಿವು

Car Buyers top priorities: ವೈಯಕ್ತಿಕ ಬಳಕೆಗೆ ಕಾರು ಖರೀದಿಸುವ ಸಂದರ್ಭದಲ್ಲಿ ಭಾರತೀಯರು ಸುರಕ್ಷತೆ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ. ಭಾರತದ ಖರೀದಿದಾರರ ಪ್ರಮುಖ ಆದ್ಯತೆಗಳ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Car Buy:ಏರ್‌ ಬ್ಯಾಗ್‌ ಎಷ್ಟಿದೆ, ಸ್ಟಾರ್‌ ರೇಟಿಂಗ್‌ ಇದೆಯಾ, ಮೈಲೇಜ್‌ ಎಷ್ಟು? ಕಾರು ಖರೀದಿ ಸಮಯದಲ್ಲಿ ಭಾರತೀಯರು ಪರಿಗಣಿಸುವ ವಿಚಾರಗಳಿವು
Car Buy:ಏರ್‌ ಬ್ಯಾಗ್‌ ಎಷ್ಟಿದೆ, ಸ್ಟಾರ್‌ ರೇಟಿಂಗ್‌ ಇದೆಯಾ, ಮೈಲೇಜ್‌ ಎಷ್ಟು? ಕಾರು ಖರೀದಿ ಸಮಯದಲ್ಲಿ ಭಾರತೀಯರು ಪರಿಗಣಿಸುವ ವಿಚಾರಗಳಿವು

ಬೆಂಗಳೂರು: ಭಾರತದಲ್ಲಿ ಕಾರು ಖರೀದಿದಾರರು ಗಮನಿಸುವಂತಹ ಪ್ರಮುಖ ವಿಚಾರಗಳೇನು ಎನ್ನುವ ವಿಷಯದ ಕುರಿತು ಹೊಸ ಅಧ್ಯಯನವೊಂದು ನಡೆದಿದೆ. ಈ ಅಧ್ಯಯನದಲ್ಲಿ ಭಾರತೀಯರು ಸುರಕ್ಷತೆ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ತಿಳಿದುಬಂದಿದೆ. ಸ್ಕೋಡಾ ಆಟೋ ಇಂಡಿಯಾ ಪ್ರಾಯೋಜಕತ್ವದ ಎನ್‌ಐಕ್ಯೂ ಬೇಸಸ್‌ ನಡೆಸಿದ ಈ ಅಧ್ಯಯನದಲ್ಲಿ "ಕಾರಿನಲ್ಲಿ ಎಷ್ಟು ಏರ್‌ ಬ್ಯಾಗ್‌ಗಳಿವೆ" ಮತ್ತು "5 ಸ್ಟಾರ್‌ ಕ್ರ್ಯಾಷ್‌ ರೇಟಿಂಗ್‌" ಇರುವುದೇ ಎಂಬ ಪ್ರಶ್ನೆಯನ್ನು ಗ್ರಾಹಕರು ಕೇಳಿಕೊಳ್ಳುತ್ತಾರೆ. ಹೊಸ ಕಾರು ಖರೀದಿ ಸಮಯದಲ್ಲಿ ಇವರೆಡು ಪ್ರಮುಖ ಆದ್ಯತೆಗಳು ಎಂದು ಗ್ರಾಹಕರು ತಿಳಿಸಿರುವುದಾಗಿ ಅಧ್ಯಯನ ಹೇಳಿದೆ. ಇವೆರಡು ವಿಚಾರಗಳೇ ವಾಹನ ಖರೀದಿ ಸಮಯದಲ್ಲಿ ಪ್ರಮುಖ ನಿರ್ಧಾರಕಗಳು ಎಂದು ಸಮೀಕ್ಷೆ ತಿಳಿಸಿದೆ.

ಕ್ರ್ಯಾಷ್‌ ಟೆಸ್ಟಿಂಗ್‌

ಕಾರಿನಲ್ಲಿರುವ ಇತರೆ ಫೀಚರ್‌ಗಳಿಗಿಂತ ಸುರಕ್ಷತೆಯ ಫೀಚರ್‌ಗಳಿಗೆ ಪ್ರಮುಖವಾಗಿ ಗಮನ ನೀಡುವುದಾಗಿ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡ 47.6ರಷ್ಟು ಜನರು ಹೇಳಿದ್ದಾರೆ. ಕಾರು ಅತ್ಯುತ್ತಮ ಕ್ರ್ಯಾಷ್‌ ರೇಟಿಂಗ್‌ ಹೊಂದಿರುವುದು ಅಗತ್ಯವೆಂದು ಶೇಕಡ 22.3 ಸಂವಾದಿಗಳು ಅಭಿಪ್ರಾಯಪಟ್ಟಿದ್ದಾರೆ. ಇದರ ಬಳಿಕ ಕಾರಿನಲ್ಲಿ ಎಷ್ಟು ಸಂಖ್ಯೆಯ ಏರ್‌ಬ್ಯಾಗ್‌ಗಳು ಇದೆ ಎಂದು ಗಮನಿಸುತ್ತೇವೆ ಎಂದು ಶೇಕಡ 21.6 ಜನರು ಅಭಿಪ್ರಾಯಪಟ್ಟಿದ್ದಾರೆ. ಕಾರು ಖರೀದಿ ಸಮಯದಲ್ಲಿ ಗ್ರಾಹಕರು ಆದ್ಯತೆ ನೀಡುವ ಮೂರನೇ ವಿಷಯವೆಂದರೆ "ವಾಹನದ ಅತ್ಯಧಿಕ ಇಂಧನ ದಕ್ಷತೆ". ಕಾರಿನ ಫ್ಯೂಯೆಲ್‌ ಎಫಿಶಿನ್ಸಿ ವಿಷಯವನ್ನು ಸಮೀಕ್ಷೆಯಲ್ಲಿ ಶೇಕಡ 15ರಷ್ಟು ಗ್ರಾಹಕರು ಪ್ರಮುಖ ಆದ್ಯತೆ ಎಂದಿದ್ದಾರೆ.

ಕ್ರ್ಯಾಷ್‌ ಟೆಸ್ಟಿಂಗ್‌ ಷಿಯದಲ್ಲಿ ಶೇಕಡ 22.2ರಷ್ಟು ಕಾರು ಗ್ರಾಹಕರು 5 ಸ್ಟಾರ್‌ ರೇಟಿಂಗ್‌ ಇರುವ ಕಾರಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ಶೇಕಡ 21.3ರಷ್ಟು ಗ್ರಾಹಕರು 4 ಸ್ಟಾರ್‌ ರೇಟಿಂಗ್‌ ಇದ್ದರೂ ಓಕೆ ಎಂದಿದ್ದಾರೆ. ಕೇವಲ ಶೇಕಡ 6.8 ಗ್ರಾಹಕರು ಮಾತ್ರ ಸ್ಟಾರ್‌ ರೇಟಿಂಗ್‌ ಝೀರೋ ಇದ್ದರೂ ಓಕೆ ಎಂದಿದ್ದಾರೆ.

ನಾಲ್ಕು ಚಕ್ರದ ವಾಹನಗಳಲ್ಲಿರುವ ಎರಡು ಬಗೆಯ ಕ್ರಾಸ್‌ ರೇಟಿಂಗ್‌ ಬಗ್ಗೆ ಜನರಿಗೆ ಇರುವ ಅರಿವಿನ ಕುರಿತೂ ಸಮೀಕ್ಷೆ ಕಂಡುಕೊಂಡಿದೆ. ಈ ಸೇಫ್ಟಿ ರೇಟಿಂಗ್‌ ಎರಡು ಸೆಟ್‌ ಹೊಂದಿರುವುದರ ಕುರಿತು ಅರಿವಿದೆ ಎಂದು ಶೇಕಡ 76ರಷ್ಟು ಗ್ರಾಹಕರು ತಿಳಿಸಿದ್ದಾರೆ. ಶೇಕಡ 53ರಷ್ಟು ಗ್ರಾಹಕರಿಗೆ ಅಡಲ್ಟ್‌ ಆಕ್ಯುಪೆಂಟ್‌ (ಮಕ್ಕಳಿಗಾಗಿ ಇರುವ) ಕ್ರ್ಯಾಷ್‌ ರೇಟಿಂಗ್‌ ತಿಳಿದಿರುವುದಾಗಿ ತಿಳಿಸಿದ್ದಾರೆ. ಶೇಕಡ 30ರಷ್ಟು ಜನರಿಗೆ ಹಿಂಬದಿ ಕುಳಿತುಕೊಳ್ಳುವವರು/ಮಕ್ಕಳಿಗಾಗಿ ಇರುವ ಸುರಕ್ಷತಾ ಕ್ರ್ಯಾಷ್‌ ರೇಟಿಂಗ್‌ ಬಗ್ಗೆ ತಿಳಿದಿರುವುದಾಗಿ ತಿಳಿಸಿದ್ದಾರೆ.

ಯಾರು 5 ಲಕ್ಷ ರೂ.ಗಿಂತ ಹೆಚ್ಚಿನ ದರದ ಕಾರು ಹೊಂದಿರುವರೋ ಅವರು ಮತ್ತು ಮುಂದಿನ ಒಂದು ವರ್ಷದಲ್ಲಿ 5 ಲಕ್ಷ ರೂಪಾಯಿಗಿಂತ ಹೆಚ್ಚಿನ ದರದ ಕಾರು ಖರೀದಿಸಲು ಬಯಸುವವರನ್ನು ಸಮೀಕ್ಷೆ ನಡೆಸಲಾಗಿದೆ. ಇವರಲ್ಲಿ ಶೇಕಡ 67ರಷ್ಟು ಜನರು ಈಗಾಗಲೇ ಕಾರು ಹೊಂದಿರುವವರು ಮತ್ತು ಶೇಕಡಾ 33ರಷ್ಟು ಜನರು ಮುಂದಿನ ಒಂದು ವರ್ಷದೊಳಗೆ ಕಾರು ಖರೀದಿಸಲು ಬಯಸುವವರು. 18 ವರ್ಷದಿಂದ 54 ವರ್ಷ ವಯಸ್ಸಿನ ವಯೋಮಿತಿಯವರನ್ನು ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಶೇಕಡ 80ರಷ್ಟು ಪುರುಷರು ಮತ್ತು ಶೇಕಡ 20ರಷ್ಟು ಮಹಿಳೆಯರು ಪಾಲ್ಗೊಂಡಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.