Bajaj Freedom 125: 2 ಕೆಜಿ ಸಿಎನ್‌ಜಿ, 2 ಲೀಟರ್‌ ಪೆಟ್ರೋಲ್‌ಗೆ 300 ಕಿಮೀ ಮೈಲೇಜ್‌; ಬಜಾಜ್‌ ಫ್ರೀಡಂ 125ಗೆ ಸಾಟಿಯುಂಟೆ
ಕನ್ನಡ ಸುದ್ದಿ  /  ಜೀವನಶೈಲಿ  /  Bajaj Freedom 125: 2 ಕೆಜಿ ಸಿಎನ್‌ಜಿ, 2 ಲೀಟರ್‌ ಪೆಟ್ರೋಲ್‌ಗೆ 300 ಕಿಮೀ ಮೈಲೇಜ್‌; ಬಜಾಜ್‌ ಫ್ರೀಡಂ 125ಗೆ ಸಾಟಿಯುಂಟೆ

Bajaj Freedom 125: 2 ಕೆಜಿ ಸಿಎನ್‌ಜಿ, 2 ಲೀಟರ್‌ ಪೆಟ್ರೋಲ್‌ಗೆ 300 ಕಿಮೀ ಮೈಲೇಜ್‌; ಬಜಾಜ್‌ ಫ್ರೀಡಂ 125ಗೆ ಸಾಟಿಯುಂಟೆ

Bajaj Freedom 125 CNG: ಆಧುನಿಕ ವಿನ್ಯಾಸ, ಕೈಗೆಟುಕುವ ದರ ಮತ್ತು ಡಿಜಿಟಲ್‌ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌, ಬ್ಲೂಟೂಥ್‌ ಕನೆಕ್ಟಿವಿಟಿ ಮುಂತಾದ ಹೊಸ ತಲೆಮಾರಿನ ಫೀಚರ್‌ಗಳನ್ನು ನೂತನ ಬಜಾಜ್‌ ಫ್ರೀಡಂ 125 ಸಿಎನ್‌ಜಿ ಹೊಂದಿದೆ. ಈ ಬೈಕ್‌ ಸದ್ಯ ದೆಹಲಿಯಲ್ಲಿ ಖರೀದಿಗೆ ಲಭ್ಯವಿದೆ.

Bajaj Freedom 125 CNG: ಇದರ ಸಿಎನ್‌ಜಿ ಟ್ಯಾಂಕ್‌ 2 ಕೆಜಿ ಇಂಧನ ತುಂಬಿಸುವ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್‌ ಟ್ಯಾಂಕ್‌ ಕೂಡ 2 ಲೀಟರ್‌ ಸಾಮರ್ಥ್ಯ ಹೊಂದಿದೆ.
Bajaj Freedom 125 CNG: ಇದರ ಸಿಎನ್‌ಜಿ ಟ್ಯಾಂಕ್‌ 2 ಕೆಜಿ ಇಂಧನ ತುಂಬಿಸುವ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್‌ ಟ್ಯಾಂಕ್‌ ಕೂಡ 2 ಲೀಟರ್‌ ಸಾಮರ್ಥ್ಯ ಹೊಂದಿದೆ. (HT Auto/Kunal Thale)

Bajaj Freedom 125 CNG: ಬಜಾಜ್‌ ಫ್ರೀಡಂ ಸಿಎನ್‌ಜಿಯ ಡೆಲಿವರಿಯು ವಿವಿಧ ರಾಜ್ಯಗಳಲ್ಲಿ ಆರಂಭವಾಗಿದೆ. ಅಂದರೆ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಆರಂಭವಾಗಿದೆ. ಇದೀಗ ದೆಹಲಿಯಲ್ಲೂ ಆರಂಭವಾಗಿದೆ. ಕರ್ನಾಟಕದಲ್ಲೂ ಆರಂಭವಾಗುತ್ತಿದೆ. ಕಣ್ಮನ ಸೆಳೆಯುವ ವಿನ್ಯಾಸ ಮತ್ತು ಅಫರ್ಡೆಬಿಲಿಟಿ ಬಯಸುವ ಗ್ರಾಹಕರಿಗೆ ಇದು ಸೂಕ್ತವಾಗಿದೆ.

ಕೈಗೆಟುಕವ ದರ, ಆಕರ್ಷಕ ವಿನ್ಯಾಸ, ಆಧುನಿಕ ಫೀಚರ್‌ಗಳು ಜತೆಗೆ ಅದ್ಭುತ ಎನಿಸುವ ಇಂಧನ ದಕ್ಷತೆಯಿಂದಾಗಿ ಬಜಾಜ್‌ ಫ್ರೀಡಂ ಬೈಕ್‌ ಜನಪ್ರಿಯತೆ ಹೆಚ್ಚುತ್ತಿದೆ. ಇದೀಗ ಸಿಎನ್‌ಜಿಯ ಬೈಕ್‌ಗೂ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ.

ಬಜಾಜ್‌ ಫ್ರೀಡಂ 125: ಆಧುನಿಕ ವಿನ್ಯಾಸ

ವಿನ್ಯಾಸ ವಿಷಯದಲ್ಲಿ ಬಜಾಜ್‌ ಫ್ರೀಡಂ 125 ಇತರೆ ಕಮ್ಯುಟರ್‌ ಬೈಕ್‌ಗಳಂತೆ ಅಲ್ಲ. ಇದರಲ್ಲಿ ಆಧುನಿಕ ಸ್ಟೈಲಿಂಗ್‌ ಅಂಶಗಳಿದ್ದು, ಕಡಿಮೆ ದರದ ಬೈಕೆಂಬ ಭಾವ ಮೂಡಿಸುವಂತೆ ಇಲ್ಲ. ಆಕರ್ಷಕ ಫ್ರೇಮ್‌, ಟ್ಯಾಂಕ್‌ ವಿನ್ಯಾಸ, ಹೆಗ್ಸಾಜೊನಲ್‌ ಫ್ರಂಟಲ್‌ ಲ್ಯಾಂಪ್‌ ಇತ್ಯಾದಿಗಳು ಬೈಕ್‌ನ ಅಂದವನ್ನು ಹೆಚ್ಚಿಸಿವೆ.

ವಿಶಾಲ ಸೀಟು

ಸಿಎನ್‌ಜಿ ಮೋಟಾರ್‌ಸೈಕಲ್‌ನಲ್ಲಿರುವ ಸೀಟ್‌ ಈ ಸೆಗ್ಮೆಂಟ್‌ನಲ್ಲೇ ದೊಡ್ಡಗಾತ್ರದ್ದು. 785 ಮಿ.ಮೀ. ಗಾತ್ರದ ಸೀಟ್‌ನಲ್ಲಿ ಸವಾರ ಮತ್ತು ಹಿಂಬದಿ ಸವಾರ ಆರಾಮವಾಗಿ ಕುಳಿತು ಪ್ರಯಾಣ ಕೈಗೊಳ್ಳಬಹುದು. ಇದು ಪ್ಲಾಟ್‌ ಸೀಟಾಗಿದ್ದು, ನಗರದಲ್ಲಿ ಪ್ರಯಾಣಿಸಲು ಸೂಕ್ತವಾಗಿದೆ.

ಡ್ಯೂಯೆಲ್‌ ಇಂಧನ ಆಯ್ಕೆಗಳು

ಈ ಬೈಕ್‌ ಎರಡು ಇಂಧನಗಳ ಮೂಲಕ ಚಲಿಸುವ ಆಯ್ಕೆ ಹೊಂದಿದೆ. ಸಿಎನ್‌ಜಿ ಮತ್ತು ಪೆಟ್ರೋಲ್‌ನಲ್ಲಿ ರೈಡ್‌ ಮಾಡಬಹುದು. ಇದರ ಸಿಎನ್‌ಜಿ ಟ್ಯಾಂಕ್‌ 2 ಕೆಜಿ ಇಂಧನ ತುಂಬಿಸುವ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್‌ ಟ್ಯಾಂಕ್‌ ಕೂಡ 2 ಲೀಟರ್‌ ಸಾಮರ್ಥ್ಯ ಹೊಂದಿದೆ. ಇವೆರಡು ಒಟ್ಟಾಗಿ 300 ಕಿ.ಮೀ. ಇಂಧನ ದಕ್ಷತೆ (ಎರಡು ಟ್ಯಾಂಕ್‌ಗಳ ಒಟ್ಟು ರೇಂಜ್‌) ದೊರಕುತ್ತದೆ.

ಬಜಾಜ್‌ ಫ್ರೀಡಂ 125: ತಂತ್ರಜ್ಞಾನ

ಬಜಾಜ್‌ ಕಂಪನಿಯು ಫ್ರೀಡಂ ಬೈಕ್‌ಗೆ ಆಧುನಿಕ ಫೀಚರ್‌ಗಳನ್ನು ಅಳವಡಿಸಿದೆ. ಬ್ಲೂಟೂಥ್‌ ಕನೆಕ್ಟಿವಿಟಿ ಇರುವ ಡಿಜಿಟಲ್‌ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌ ಇದೆ. ಕಾಲರ್‌ ಐಡಿ, ಮಿಸ್ಡ್‌ ಕಾಲ್‌ ನೋಟಿಫಿಕೇಷನ್‌, ಬ್ಯಾಟರಿ ಲೈಫ್‌ ಇಂಡಿಕೇಟರ್‌, ಎಲ್‌ಇಡಿ ಲೈಟಿಂಗ್‌ ಮುಂತಾದ ಕನೆಕ್ಟ್ರಿವಿಟಿ ಹಾಗೂ ಇತರೆ ಫೀಚರ್‌ಗಳನ್ನು ಹೊಂದಿದೆ.

ದರ ಎಷ್ಟು?

ಖರೀದಿ ಮತ್ತು ನಿರ್ವಹಣೆ ದೃಷ್ಟಿಯಿಂದ ಇದು ಅಫರ್ಡೆಬಲ್‌. ಇದರ ದೆಹಲಿ ಎಕ್ಸ್‌ ಶೋರೂಂ ದರ 94,995 ರೂಪಾಯಿ ಇದೆ. ಇದರ ನಿರ್ವಹಣಾ ವೆಚ್ಚ ಕಡಿಮೆ ಇರುವುದರಿಂದ ರನ್ನಿಂಗ್‌ ವೆಚ್ಚ ಶೇಕಡ 50ರಷ್ಟು ಕಡಿಮೆ ಇರಲಿದೆ ಎಂದು ಕಂಪನಿ ತಿಳಿಸಿದೆ.

Whats_app_banner