logo
ಕನ್ನಡ ಸುದ್ದಿ  /  ಜೀವನಶೈಲಿ  /  ಓಣಂಗಾಗಿ ರಾತ್ರಿ 12 ಗಂಟೆಗೆ ಸ್ವಿಗ್ಗಿ ಮಾರ್ಟ್‌ನಲ್ಲಿ ಸೀರೆ ಆರ್ಡರ್‌ ಮಾಡಿದ ಬೆಂಗಳೂರು ಯುವತಿ, ಮುಂದೇನಾಯ್ತು ನೋಡಿ

ಓಣಂಗಾಗಿ ರಾತ್ರಿ 12 ಗಂಟೆಗೆ ಸ್ವಿಗ್ಗಿ ಮಾರ್ಟ್‌ನಲ್ಲಿ ಸೀರೆ ಆರ್ಡರ್‌ ಮಾಡಿದ ಬೆಂಗಳೂರು ಯುವತಿ, ಮುಂದೇನಾಯ್ತು ನೋಡಿ

Reshma HT Kannada

Sep 17, 2024 03:43 PM IST

google News

ವೈರಲ್ ಸುದ್ದಿ

    • ಹಬ್ಬ ಹರಿದಿನಗಳು ಎಂದರೆ ಹೆಣ್ಣುಮಕ್ಕಳು ತಿಂಗಳಿಗೂ ಮೊದಲೇ ರೆಡಿ ಆಗುತ್ತಾರೆ. ಹಬ್ಬ ದಿನದಂದು ಧರಿಸಲು ಸೀರೆ, ಒಡವೆ, ಮ್ಯಾಚಿಂಗ್ ಬಳೆ, ಕಿವಿಯೋಲೆ ಅಂತೆಲ್ಲಾ ತಯಾರಾಗುತ್ತಾರೆ. ಆದ್ರೆ ಇಲ್ಲೊಬ್ಬಳು ಯುವತಿ ಓಣಂ ದಿನ ರಾತ್ರಿ 12 ಗಂಟೆಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಸೀರೆ ಆರ್ಡರ್ ಮಾಡಿದ್ದಾರೆ. ಈ ಯುವತಿಯ ಸೀರೆ ಕಥೆ ಈಗ ಫುಲ್ ವೈರಲ್ ಆಗಿದೆ.
ವೈರಲ್ ಸುದ್ದಿ
ವೈರಲ್ ಸುದ್ದಿ

ಕೇರಳಿಗರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಓಣಂಗೆ ಪ್ರಥಮ ಸ್ಥಾನ. ಪ್ರತಿವರ್ಷ ಓಣಂ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 6 ರಿಂದ 15ರವರೆಗೆ ಓಣಂ ಆಚರಣೆ ಇತ್ತು. ಇದೇನಪ್ಪಾ ಇದು, ಇವರು ಹಬ್ಬದ ಮುಗಿದು ಎರಡು ದಿನ ಆದ ಮೇಲೆ ಓಣಂ ಬಗ್ಗೆ ಮಾತಾಡ್ತಾ ಇದಾರೆ ಅಂದ್ಕೋಬೇಡಿ, ಖಂಡಿತ ವಿಷ್ಯಾ ಇದೆ. ಓಣಂ ಹಬ್ಬಕ್ಕೆ ಬೆಂಗಳೂರಿನ ಯುವತಿಯೊಬ್ಬರು ಸೀರೆ ತರಿಸಿ ವೈರಲ್ ಆದ ಕಥೆಯಿದು.

ಈಗ ನಿಮಗೆ ಇನ್ನೂ ವಿಚಿತ್ರ ಅನ್ನಿಸ್ತಾ ಇದ್ಯಾ, ಸೀರೆ ತರಿಸಿದ್ರೆ ವೈರಲ್ ಹೇಗೆ ಆಗ್ತಾರೆ ಅಂತ ಅನ್ನಿಸಿರಬಹುದು. ಆದರೆ ಆಕೆ ಸೀರೆ ತರಿಸಿದ್ದು ಸ್ವಿಗ್ಗಿ ಮಾರ್ಟ್‌ನಲ್ಲಿ, ಅದೂ ರಾತ್ರಿ 12 ಗಂಟೆಗೆ. ಈಗ ನಿಮಗೆ ಅನ್ನಿಸರಬಹುದು ಅಲ್ವಾ, ಇಂಥವರು ಇರ್ತಾರಾ ಈ ಜಗತ್ತಲ್ಲಿ ಅಂತ. ಖಂಡಿತ ಇರ್ತಾರೆ, ಇದಕ್ಕೆ ನೀರ್ಜಾ ಶಾ ಸಾಕ್ಷಿ.

ಹೆಣ್ಣುಮಕ್ಕಳು ಹಬ್ಬ ಎಂದರೆ ತಿಂಗಳಿಗೂ ಮೊದಲೇ ರೆಡಿ ಆಗುತ್ತಾರೆ. ಹಬ್ಬ ದಿನದಂದು ಧರಿಸಲು ಸೀರೆ, ಒಡವೆ, ಮ್ಯಾಚಿಂಗ್ ಬಳೆ, ಕಿವಿಯೋಲೆ ಅಂತೆಲ್ಲಾ ತಯಾರಾಗುತ್ತಾರೆ. ಆದರೆ ಈ ಹುಡುಗಿ ಈ ಎಲ್ಲದರ ನಡುವೆ ವಿಚಿತ್ರ ಅನ್ನಿಸೋದು ಸುಳ್ಳಲ್ಲ. ಆದರೆ ಆಕೆಯೇ ಆಕೆಯ ಅನುಭವವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಎಕ್ಸ್ ಬಳಕೆದಾರರಾದ ನೀರ್ಜಾ ತಮ್ಮ ಎಕ್ಸ್‌ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಕಿರಾಣಿ ಸಾಮಗ್ರಿಗಳನ್ನು ವಿತರಿಸುವ ಆನ್‌ಲೈನ್‌ ಫ್ಲ್ಯಾಟ್‌ಫಾರಂ ಸ್ವಿಗ್ಗಿ ಮಾರ್ಟ್‌ನಲ್ಲಿ ನೀರ್ಜಾ ಸೀರೆ ತರಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಇವರ ಟ್ವೀಟ್ ಹಲವರ ಗಮನ ಸೆಳೆದಿದೆ. ‘ಕೊನೆಯ ಕ್ಷಣದ ಓಣಂ ಪ್ಲಾನ್‌ಗಾಗಿ ನಾನು @SwiggyInstamart ನಲ್ಲಿ ಸೀರೆ ಆರ್ಡರ್ ಮಾಡಿದೆ. ಈ ಕಾರಣಕ್ಕೆ ನಂಗೆ ಬೆಂಗಳೂರು‘ ಇಷ್ಟ ಎಂದು ಅವರು ಬರೆದುಕೊಂಡಿದ್ದಾರೆ.

ಸೆಪ್ಟೆಂಬರ್ 15ರಂದು ನೀರ್ಜಾ ಈ ಪೋಸ್ಟ್ ಹಾಕಿದ್ದಾರೆ. ಇವರ ಪೋಸ್ಟ್‌ ಅನ್ನು 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 400ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಕೆಲವರು ಕಾಮೆಂಟ್ ಮಾಡಿದ್ದಾರೆ. ಸ್ವಿಗ್ಗಿ ಕೇರ್ ಎಕ್ಸ್ ಖಾತೆ ಹ್ಯಾಂಡಲ್ ಮಾಡುವವರು ನೀರ್ಜಾ ಅವರ ಟ್ವೀಟ್ ಹಂಚಿಕೊಂಡು ‘ನಮಗೆ ಓಣಂ ಸದ್ಯ ಕಳುಹಿಸಿ ಕೊಡಿ‘ ಎಂದು ಬರೆದಿದ್ದಾ

ರೆ.

ನೀರ್ಜಾ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು

‘ನಾನು ಫ್ಲೈಟ್‌ಗೆ ಹೊರಡುವ ಕೊನೆ ಕ್ಷಣದಲ್ಲಿ ಫ್ರೆಶರ್ ಕುಕ್ಕರ್ ಬುಕ್ ಮಾಡಿದ್ದೆ, ಅಮೆರಿಕದಲ್ಲಿರುವ ನನ್ನ ಫ್ರೆಂಡ್‌ಗೆ ಕೊಡಬೇಕಿತ್ತು‘ ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಸೀರೆಗೆ ಫಾಲ್ ಇಡಿಸಿದ್ರಾ, ತುದಿ ಹೊಲಿದಿತ್ತಾ‘ ಎಂದು ಇನ್ನೊಬ್ಬರು ಕಾಮೆಂಟ್ ಮಾಡುವ ಮೂಲಕ ಕುತೂಹಲ ವ್ಯಕ್ತಪಡಿಸಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ