Viral Video: ವೈರಲ್ ಆಯ್ತು 100 ರೂಪಾಯಿಯ ದುಬಾರಿ ಟೀ; ಇದೇನೋ ಚಹಾವೋ ಅಥವಾ ಪಾಯಸವೋ? ಕಾಲೆಳೆದ ನೆಟ್ಟಿಗರು-expensive tea has gone viral netizens wonder if this is tea or stew here is the viral video smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Viral Video: ವೈರಲ್ ಆಯ್ತು 100 ರೂಪಾಯಿಯ ದುಬಾರಿ ಟೀ; ಇದೇನೋ ಚಹಾವೋ ಅಥವಾ ಪಾಯಸವೋ? ಕಾಲೆಳೆದ ನೆಟ್ಟಿಗರು

Viral Video: ವೈರಲ್ ಆಯ್ತು 100 ರೂಪಾಯಿಯ ದುಬಾರಿ ಟೀ; ಇದೇನೋ ಚಹಾವೋ ಅಥವಾ ಪಾಯಸವೋ? ಕಾಲೆಳೆದ ನೆಟ್ಟಿಗರು

Expensive tea: ಫುಡ್ ವ್ಲಾಗರ್ ಸುಕೃತ್ ಜೈನ್ ಈ ಟೀ ಅಂಗಡಿಯ ವೀಡಿಯೊವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಚಹಾವನ್ನು ನೋಡಿದ ನೆಟ್ಟಿಗರು ಇದೇನೋ ಚಹಾವೋ ಅಥವಾ ಪಾಯಸವೋ? ಎಂದು ಕಾಲೆಳೆದಿದ್ದಾರೆ.

ವೈರಲ್ ಟೀ
ವೈರಲ್ ಟೀ (ಸುಕೃತ್ ಜೈನ್ (Instagram))

ಚಹಾ ಪ್ರಿಯರು ತುಂಬಾ ಜನ ಇದ್ದಾರೆ. ಆದರೆ ಅವರು ಎಂದಿಗೂ ಈ ರೀತಿ ಚಹವನ್ನು ನೋಡಿರಲು ಸಾಧ್ಯವೇ ಇಲ್ಲ. ಅಮೃತಸರದಲ್ಲಿರುವ ಈ ಚಹಾ ಮಾರಾಟಗಾರನ ಚಹಾ ಮಾರಾಟ ಮಾಡುವ ಪರಿ ತುಂಬಾ ವೈರಲ್ ಆಗಿದೆ. ಬಾದಾಮಿ ಮತ್ತು ಗುಲಾಬಿ ದಳಗಳನ್ನು ಬಳಸಿ ಈ ಚಹಾ ರೆಡಿ ಮಾಡ್ತಾರೆ. ಇದು ತುಂಬಾ ಜನರ ಹುಬ್ಬೇರಿಸುವಂತೆ ಮಾಡಿದೆ. ಆ ವಿಡಿಯೋ ಕೂಡ ಇಲ್ಲೇ ಇದೆ. ಒಂದು ಚಹಾದ ಬೆಲೆ 100 ರೂಪಾಯಿ ಆಗಿದೆ. ಇಷ್ಟೊಂದು ಕಾಸ್ಟಲಿ ಚಹಾವನ್ನು ಹೇಗೆ ಮಾಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಕೆಲವರಿಗೆ ಇದು ಇಷ್ಟ ಆದರೆ ಇನ್ನು ಕೆಲವರು ಇದನ್ನು ನೋಡಿದ್ರೆ ಕುಡಿಯೋಕೆ ಮನಸಾಗಲ್ಲ ಎಂದಿದ್ಧಾರೆ.

ಫುಡ್ ವ್ಲಾಗರ್ ಸುಕೃತ್ ಜೈನ್

ಫುಡ್ ವ್ಲಾಗರ್ ಸುಕೃತ್ ಜೈನ್ ಈ ಟೀ ಅಂಗಡಿಯ ವೀಡಿಯೊವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿರುವ ವಿಡಿಯೋ ಆಗಿದೆ. ಚಹಾ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಹಾಲು, ಪುಡಿಮಾಡಿದ ಬಾದಾಮಿ, ಗುಲಾಬಿ ದಳಗಳು, ಏಲಕ್ಕಿ ಮತ್ತು ಬೆಣ್ಣೆ ಸೇರಿದಂತೆ ಪದಾರ್ಥಗಳ ಮಿಶ್ರಣವನ್ನು ಮಾಡಿಕೊಳ್ಳಲಾಗುತ್ತದೆ. ಇದೆಲ್ಲವನ್ನು ಬಳಸಿಕೊಂಡು ಈ ವಿಶೇಷವಾದ ಚಹಾ ಮಾಡಲಾಗುತ್ತದೆ. ಇದೆಲ್ಲವನ್ನು ಬಳಸಿ ಮಾರಾಟಗಾರರು ವಿಶೇಷ ಚಹಾವನ್ನು ತಯಾರಿಸುವುದನ್ನು ಕ್ಲಿಪ್‌ನಲ್ಲಿ ತೋರಿಸಲಾಗಿದೆ. ಈ ವಿಶೇಷ ಚಹಾದ ಪ್ರತಿ ಗ್ಲಾಸ್ ಬೆಲೆ 100 ರೂಪಾಯಿ ಎಂದು ವೀಡಿಯೊದಲ್ಲಿ ಮಾರಾಟಗಾರರು ಹೇಳಿದ್ದಾರೆ.

ವೀಡಿಯೊದಲ್ಲಿ, ಚಹಾ ಮಾರಾಟಗಾರನು ಒಂದು ಪಾತ್ರೆಯಲ್ಲಿ ಏಲಕ್ಕಿ, ಚಹಾ ಎಲೆಗಳು ಮತ್ತು ಗುಲಾಬಿ ದಳಗಳೊಂದಿಗೆ ಹಾಲನ್ನು ಕುದಿಸುವ ಮೂಲಕ ಪ್ರಾರಂಭಿಸುತ್ತಾನೆ. ಕೆಲವು ಬಾದಾಮಿಗಳನ್ನು ಪುಡಿಮಾಡುವ ಸಂದರ್ಭದಲ್ಲೇ ಸ್ವಲ್ಪ ಬೆಣ್ಣೆಯನ್ನು ಬಿಸಿಮಾಡುತ್ತಾನೆ. ಅದಕ್ಕೆ ಪುಡಿಮಾಡಿದ ಬಾದಾಮಿ ಪುಡಿಯನ್ನು ಸೇರಿಸಿ ನಂತರ ಇದನ್ನು ಹಿಂದೆ ತಯಾರಿಸಿದ ಹಾಲಿನ ಮಿಶ್ರಣದೊಂದಿಗೆ ಮಿಕ್ಸ್‌ ಮಾಡುತ್ತಾನೆ. ನಂತರ ಚಹಾವನ್ನು ದೊಡ್ಡ ಗಾಜಿನ ಕಪ್ನಲ್ಲಿ ನೀಡಲಾಗುತ್ತದೆ.

ಈ ವಿಡಿಯೋ ತಕ್ಷಣವೇ ವೈರಲ್ ಆಗಿದ್ದು, ಜನರಿಂದ ವಿವಿಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಣ್ಣೆಯನ್ನು ಸೇರಿಸುವ ಬಗ್ಗೆ ಹಲವರು ತಮಾಷೆ ಮಾಡಿದರೆ ಇದನ್ನು ಕುಡಿದರೆ ಏನಾಗಬಹುದು ಎಂದು ಆಲೋಚಿಸುತ್ತಿದ್ದೇನೆ ಎನ್ನುತ್ತಿದ್ದಾರೆ.

ಇನ್ನೊಬ್ಬರು ತಮಾ‍‍ಷೆಯಾಗಿ "ಅವರು ಮಟನ್ ಮಸಾಲಾ ಮತ್ತು ಮೊಸರು ಸೇರಿಸಲು ಮರೆತಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ.

“ಬಾದಾಮಿ, ಗುಲಾಬಿ ದಳಗಳು ಮತ್ತು ಏಲಕ್ಕಿ ತನಕ ಅದು ಚೆನ್ನಾಗಿತ್ತು ಆದರೆ ಬೆಣ್ಣೆಯನ್ನು ಚಹಾದಲ್ಲಿ ಬಳಸಬಾರದಿತ್ತು" ಎಂದಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ

ಒಬ್ಬ ಬಳಕೆದಾರ, "ಟೀ ಮತ್ತು ಬಾದಾಮ್ ಶೇಕ್‌ಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲು ಹೇಳಿ, ಅವರು ಹೆಚ್ಚಿನ ಗ್ರಾಹಕರನ್ನು ಪಡೆಯುತ್ತಾರೆ" ಎಂದಿದ್ದಾರೆ

"ಇದು ಟೀ ಅಥವಾ ಶೀರ್ ಕುರ್ಮಾ?" ಒಬ್ಬರು ತಮಾಷೆ ಮಾಡಿದ್ದಾರೆ.ಅವರ ಪ್ರೀತಿಯ ಕಪ್ "ಚಾಯ್"

ಈ ಹೊಸ ಪ್ರಯೋಗ ನೋಡುವುದಕ್ಕಷ್ಟೆ ಚಂದ ಇದನ್ನು ಕುಡಿದವರು ಬದುಕುತ್ತಾರಾ? ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇದನ್ನು ನೋಡುತ್ತಿದ್ದಂತೆ ನನಗೆ ಟಾಯ್ಲೆಟ್‌ನಿಂದ 99 ಮಿಸ್‌ಕಾಲ್ ಬಂದಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಈ ಚಹಾ ತುಂಬಾ ವೈರಲ್ ಆಗಿದೆ.

mysore-dasara_Entry_Point