logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಗೂಗಲ್‌ ಸಂದರ್ಶನದಲ್ಲಿ ಕೇಳಿದ ಈ ಬ್ರೈನ್ ಟೀಸರ್ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯವೇ? ನಿಮಗಿರೋದು 3 ಸೆಕೆಂಡ್ ಸಮಯ

Brain Teaser: ಗೂಗಲ್‌ ಸಂದರ್ಶನದಲ್ಲಿ ಕೇಳಿದ ಈ ಬ್ರೈನ್ ಟೀಸರ್ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯವೇ? ನಿಮಗಿರೋದು 3 ಸೆಕೆಂಡ್ ಸಮಯ

Reshma HT Kannada

Oct 31, 2024 10:16 AM IST

google News

ಬ್ರೈನ್ ಟೀಸರ್

    • ಗೂಗಲ್ ಕಂಪನಿಯು ಸಂದರ್ಶನವೊಂದರಲ್ಲಿ ಅಭ್ಯರ್ಥಿಗಳಿಗೆ ಕೇಳಿದ ಪ್ರಶ್ನೆಯು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪ್ರಶ್ನೆಗೆ ಉತ್ತರ ಕಂಡು ಹಿಡಿಯಲು ಮೆದುಳಿಗೆ ಹುಳ ಬಿಟ್ಟು ಕೊಂಡಿದ್ದಾರೆ ನೆಟ್ಟಿಗರು. ಪ್ರಶ್ನೆ ಸುಲಭ ಎನ್ನಿಸಿದರೂ ಉತ್ತರ ಕಂಡುಹಿಡಿಯುವುದು ನಿಜಕ್ಕೂ ಸುಲಭವಲ್ಲ. ಈ ಪ್ರಶ್ನೆಗೆ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವೇ ಪ್ರಯತ್ನಿಸಿ.
ಬ್ರೈನ್ ಟೀಸರ್
ಬ್ರೈನ್ ಟೀಸರ್

ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ನಿಮಗೆ ಇಲ್ಲೊಂದು ಚಾಲೆಂಜ್ ಇದೆ. ಈ ಬ್ರೈನ್ ಟೀಸರ್ ಚಾಲೆಂಜ್ ನೀವು ಸ್ವೀಕರಿಸಿದರೆ ಖಂಡಿತ ನಿಮ್ಮ ಮೆದುಳಲ್ಲಿ ಹುಳ ಬಿಟ್ಟಂತೆ ಆಗುತ್ತದೆ. ಸಾಧಾರಣ ಬುದ್ಧಿವಂತಿಕೆ ಇದ್ದರೆ ಖಂಡಿತ ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಸಾಧ್ಯವಿಲ್ಲ. ಆದರೆ ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡುವುದರಿಂದ ನಿಮ್ಮ ಮೆದುಳು ಚುರುಕಾಗೋದು ಖಂಡಿತ. 

ಗೂಗಲ್ ಕಂಪನಿಯು ತನ್ನ ಸಂದರ್ಶನದಲ್ಲಿ ಅಭ್ಯರ್ಥಿಗಳಿಗೆ ಕೇಳಿದ ಪ್ರಶ್ನೆ ಇದಾಗಿದೆ. ಈ ಬ್ರೈನ್ ಟೀಸರ್ ಚಿತ್ರವೀಗ ರೆಡ್ಡಿಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬ್ರೈನ್ ಟೀಸರ್ ಚಿತ್ರದಲ್ಲಿ ಎರಡು ಜಾರ್ ಇದ್ದು, 2 ಗೋಲಿಗಳಿವೆ. ಇದರಲ್ಲಿ ಎರಡೂ ಜಾರ್‌ಗೆ 50 ಗೋಲಿಗಳನ್ನು ನೀಡಲಾಗಿದೆ. ಆದರ ಕೆಂಪು ಗೋಲಿಗಳನ್ನು ನೀವು ಹೆಚ್ಚು ಹಿಡಿಸಬೇಕು, ಅದು ಹೇಗೆ ಸಾಧ್ಯ ಎಂದು ನೀವು ಹೇಳಬೇಕು.

ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳುವ ಪ್ರಯತ್ನ ಮಾಡುವುದರಿಂದ ಮೋಜು ಸಿಗುತ್ತದೆ. ಇದರಿಂದ ನಮ್ಮಲ್ಲಿ ಯೋಚನಾಶಕ್ತಿ ಬೆಳೆಯುತ್ತದೆ. ಇದು ನಮ್ಮ ಬುದ್ಧಿವಂತಿಕೆಗೆ ಸವಾಲು ಹಾಕುವಂತಿದ್ದು, ಮೆದುಳಿನ ಸ್ನಾಯುಗಳಿಗೆ ಸಾಕಷ್ಟು ಕೆಲಸ ನೀಡುತ್ತದೆ. ಇದರಿಂದ ನಮ್ಮಲ್ಲಿ ಏಕಾಗ್ರತೆ ಬೆಳೆಯುತ್ತದೆ.

‘ನಿಮಗೆ ಜಾಬ್ ಬೇಕಾದರೆ ಈ ಬ್ರೈನ್ ಟೀಸರ್‌ಗೆ 3 ಸೆಕೆಂಡ್‌ನಲ್ಲಿ ಉತ್ತರ ಹೇಳಿ. ಈ ನಾನು ಈ ಪ್ರಶ್ನೆಯನ್ನು ಕೇಳಿದವರು ನೀಡಿದ ಹ್ಯಾಸ್ಯಾಸ್ಪದ ಉತ್ತರಗಳನ್ನು ಕೇಳಿ ನನಗೆ ಈಗಲೂ ನಗು ಬರುತ್ತಿದೆ. ಆದರೆ ನನ್ನ 6 ವರ್ಷದ ಮಗ ಈ ಪ್ರಶ್ನೆ 30 ಸೆಕೆಂಡ್‌ನಲ್ಲಿ ಉತ್ತರ ಹೇಳಿದ್ದಾನೆ‘ ಎಂದು ಜೆನೆಸಿಸ್ ಕ್ಯಾಪಿಟಲ್ ಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿನೋ ಡಿಯೊನ್ನೆ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: ನಿಮ್ಮ ಕಣ್ಣು ನಿಜಕ್ಕೂ ಸಖತ್ ಶಾರ್ಪ್ ಇದ್ರೆ ಚಿತ್ರದಲ್ಲಿ ಅಡಗಿರುವ ಪ್ರಾಣಿಯನ್ನು ಹುಡುಕಿ; ನಿಮಗೊಂದು ಹೊಸ ಚಾಲೆಂಜ್

ಗಿಡದ ಬಿಳಲುಗಳಿಂದ ತುಂಬಿರುವ ಈ ಬಣ್ಣದ ಚಿತ್ರದಲ್ಲಿ ಪ್ರಾಣಿಯೊಂದು ಅಡಗಿದೆ. ಇದು ಯಾವುದು ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್ ಇದ್ದರೆ ಚಿತ್ರದಲ್ಲಿ ಇರುವುದು ಯಾವ ಜೀವಿ, ಅದು ಇಲ್ಲಿದೆ ಎಂದು ಕಂಡುಹಿಡಿಯಿರಿ.

Brain Teaser: ಬುದ್ಧಿವಂತರಿಗೆ ಮಾತ್ರ; ಸಂದರ್ಶನವೊಂದರಲ್ಲಿ ಕೇಳಿದ ಈ ಗಣಿತದ ಪಜಲ್‌ಗೆ 3 ಸೆಕೆಂಡ್‌ನಲ್ಲಿ ಉತ್ತರಿಸಲು ಸಾಧ್ಯವೇ, ಪ್ರಯತ್ನಿಸಿ

ರೆಡ್ಡಿಟ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್ ಚಿತ್ರವೊಂದು ನಿಮ್ಮ ಮೆದುಳಿನಲ್ಲಿ ಹುಳ ಬಿಡುವಂತಿರುವುದು ಸುಳ್ಳಲ್ಲ. ಈ ಚಿತ್ರದಲ್ಲಿರುವ ಗಣಿತದ ಪಜಲ್‌ ಸಿಇಒ ಒಬ್ಬರು ಉದ್ಯೋಗ ಸಂದರ್ಶನದಲ್ಲಿ ಅಭ್ಯರ್ಥಿಗಳಿಗೆ ಕೇಳಿರುವ ಪ್ರಶ್ನೆ ಇದಾಗಿದೆ. ಈ ಗಣಿತದ ಪಜಲ್‌ಗೆ 3 ಸೆಕೆಂಡ್‌ನಲ್ಲಿ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಟ್ರೈ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ