Brain Teaser: ನಿಮ್ಮ ಕಣ್ಣು ನಿಜಕ್ಕೂ ಸಖತ್ ಶಾರ್ಪ್ ಇದ್ರೆ ಚಿತ್ರದಲ್ಲಿ ಅಡಗಿರುವ ಪ್ರಾಣಿಯನ್ನು ಹುಡುಕಿ; ನಿಮಗೊಂದು ಹೊಸ ಚಾಲೆಂಜ್
ಗಿಡದ ಬಿಳಲುಗಳಿಂದ ತುಂಬಿರುವ ಈ ಬಣ್ಣದ ಚಿತ್ರದಲ್ಲಿ ಪ್ರಾಣಿಯೊಂದು ಅಡಗಿದೆ. ಇದು ಯಾವುದು ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್ ಇದ್ದರೆ ಚಿತ್ರದಲ್ಲಿ ಇರುವುದು ಯಾವ ಜೀವಿ, ಅದು ಇಲ್ಲಿದೆ ಎಂದು ಕಂಡುಹಿಡಿಯಿರಿ.
ಬ್ರೈನ್ ಟೀಸರ್ ಚಿತ್ರಗಳು ನಮ್ಮ ಕಣ್ಣು ಮೆದುಳಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಇದಕ್ಕೆ ಉತ್ತರ ಹುಡುಕುವುದು ಸವಾಲು ಎನ್ನಿಸಿದರೂ ಉತ್ತರ ಸಿಗುವವರೆಗೂ ಮನಸ್ಸು ಸುಮ್ಮನಿರುವುದಿಲ್ಲ. ಇದು ಕಣ್ಣು, ಮನಸ್ಸಿಗೆ ಚಾಲೆಂಜ್ ಹಾಕುವ ಚಿತ್ರವಾಗಿದೆ. ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ಒಂದು ಪ್ರಾಣಿ ಇದೆ. ಅದು ಎಲ್ಲಿದೆ ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ಇಂತಹ ಬ್ರೈನ್ ಟೀಸರ್‌ಗಳು ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣವನ್ನು ವೃದ್ಧಿಸುತ್ತವೆ. ಯಾಕೆಂದರೆ ಇದು ನಮಗೆ ಉತ್ತರ ಹುಡುಕುವ ಚಾಲೆಂಜ್ ಮಾಡುವ ಕಾರಣ ಉತ್ತರ ಸಿಗುವವರೆಗೂ ನಾವು ಬಿಡುವುದಿಲ್ಲ.
ಗಿಡದ ಬಿಳಲುಗಳು ಹರಡಿರುವ ಈ ಚಿತ್ರದಲ್ಲಿ ಕೆಂಪು, ಕೇಸರಿ, ಚರ್ಮದ ಬಣ್ಣದ ಬಿಳಲುಗಳು ಕಣ್ಣಿಗೆ ಗೋಚರವಾಗುತ್ತವೆ. ಇದರ ನಡುವೆ ಅಸ್ಪಷ್ಟ ರೂಪದಲ್ಲಿ ಪ್ರಾಣಿಯೊಂದು ಗೋಚರವಾಗುತ್ತದೆ. ಆ ಪ್ರಾಣಿ ಯಾವುದು ಎಂದು ನೀವು ಕಂಡುಹಿಡಿಯಬೇಕು. ಇಂಟರ್‌ನೆಟ್‌ನಲ್ಲಿ ವೈರಲ್ ಆದ ಈ ಚಿತ್ರವು ನೆಟ್ಟಿಗರ ಮೆದುಳಿಗೆ ಹುಳ ಬಿಟ್ಟಿರುವುದು ಸುಳ್ಳಲ್ಲ. ಯಾಕೆಂದರೆ ಬಹುತೇಕರಿಗೆ ಚಿತ್ರದಲ್ಲಿ ಪ್ರಾಣಿಯನ್ನು ಕಂಡುಹಿಡಿಯುವುದು ಸವಾಲಾಗಿದೆ.
@br4inteaserhub ಎನ್ನುವ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಲಾಗಿತ್ತು. ಇದರಲ್ಲಿ ಅವಿತಿರುವ ಪ್ರಾಣಿಯನ್ನು ಹುಡುಕುವ ವಿಚಾರದಲ್ಲಿ ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಇದರಲ್ಲಿ ಪ್ರಾಣಿಯನ್ನು ಹುಡುಕುವುದು ಕಷ್ಟವೇ ಆದರೂ ಕ್ಷಣಕಾಲ ಗಮನವಿಟ್ಟು ನೋಡಿದರೆ ಚಿತ್ರದಲ್ಲಿ ಪ್ರಾಣಿಯು ಖಂಡಿತ ನಿಮಗೆ ಗೋಚರವಾಗುತ್ತದೆ.
ಈ ಬ್ರೈನ್ ಟೀಸರ್ ನಿಮ್ಮ ಗಮನಶಕ್ತಿಯನ್ನ ಹೆಚ್ಚಿಸುತ್ತದೆ. ಏಕಾಗ್ರತೆಯನ್ನು ವೃದ್ಧಿಸುವ ಈ ಚಿತ್ರ ಒಂಥರಾ ಫನ್ನಿ ಅನ್ನಿಸೋದು ಸುಳ್ಳಲ್ಲ. ಯಾಕೆಂದರೆ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವುದು ಮೋಜಿನ ಕೆಲಸ ಅನ್ನಿಸೋದು ಸುಳ್ಳಲ್ಲ. ಈ ಬ್ರೈನ್ ಟೀಸರ್‌ಗೆ ನಿಮಗೆ ಉತ್ತರ ಗೊತ್ತಾದರೆ ನಿಮ್ಮ ಆತ್ಮೀಯರೊಂದಿಗೂ ಹಂಚಿಕೊಳ್ಳಿ. ಅವರಿಗೂ ಪ್ರಾಣಿ ಹುಡುಕುವ ಚಾಲೆಂಜ್ ಹಾಕಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಚಿತ್ರದಲ್ಲಿರುವ ಪ್ರಾಣಿಯ ಮುಖಗಳಲ್ಲಿ ಒಂದೇ ಒಂದು ಮಾತ್ರ ಭಿನ್ನವಾಗಿದೆ, ಅದು ಯಾವುದು? 4 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ
12 ಯೂನಿಕಾರ್ನ್‌ಗಳಿರುವ ಚಿತ್ರವೊಂದು ಇಲ್ಲಿದೆ, ಈ ಎಲ್ಲವೂ ನೋಡಲು ಒಂದೇ ರೀತಿ ಇವೆ. ಆದರೂ ಇದರಲ್ಲಿ ಒಂದೇ ಒಂದು ಮಾತ್ರ ಭಿನ್ನವಾಗಿದೆ. ಆ ಭಿನ್ನವಾಗಿರುವ ಮುಖ ಯಾವುದು ಎಂದು ನೀವು ಕಂಡು ಹಿಡಿಯಬೇಕು. ನಿಮಗಿರುವುದು ಕೇವಲ 4 ಸೆಕೆಂಡ್ ಸಮಯ. ನಿಮ್ಮ ಕಣ್ಣಿಗೊಂದು ಪರೀಕ್ಷೆ ಇದು.
Brain Teaser: ಬುದ್ಧಿವಂತರಿಗಾಗಿ ಈ ಪ್ರಶ್ನೆ, ಚಿತ್ರದಲ್ಲಿ ಖಾಲಿ ಇರುವ ಜಾಗವನ್ನು ನೀವು ತುಂಬಿಸಬೇಕು, ನಿಮಗಿರೋದು 15 ಸೆಕೆಂಡ್ ಸಮಯ
ಮೆದುಳಿಗೆ ಕೆಲಸ ಕೊಡಬೇಕು ಎಂದು ನಿಮಗೆ ಅನ್ನಿಸ್ತಾ ಇದ್ಯಾ, ಹಾಗಾದರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಬಣ್ಣದ ಚೌಕವಿರುವ ಈ ಚಿತ್ರದಲ್ಲಿ ಒಂದು ಕಡೆ ಖಾಲಿ ಬಿಡಲಾಗಿದೆ, ಅಲ್ಲಿ ಯಾವ ಪ್ಯಾರ್ಟನ್ ಬರುತ್ತೆ ಎಂಬುದನ್ನು ನೀವು ಕಂಡುಹಿಡಿಯಬೇಕು. ನಿಮಗಿರುವ 15 ಸೆಕೆಂಡ್ ಸಮಯ, ಟ್ರೈ ಮಾಡಿ.