Brain Teaser: ಬುದ್ಧಿವಂತರಿಗೆ ಮಾತ್ರ; ಸಂದರ್ಶನವೊಂದರಲ್ಲಿ ಕೇಳಿದ ಈ ಗಣಿತದ ಪಜಲ್‌ಗೆ 3 ಸೆಕೆಂಡ್‌ನಲ್ಲಿ ಉತ್ತರಿಸಲು ಸಾಧ್ಯವೇ, ಪ್ರಯತ್ನಿಸಿ
ರೆಡ್ಡಿಟ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್ ಚಿತ್ರವೊಂದು ನಿಮ್ಮ ಮೆದುಳಿನಲ್ಲಿ ಹುಳ ಬಿಡುವಂತಿರುವುದು ಸುಳ್ಳಲ್ಲ. ಈ ಚಿತ್ರದಲ್ಲಿರುವ ಗಣಿತದ ಪಜಲ್ ಸಿಇಒ ಒಬ್ಬರು ಉದ್ಯೋಗ ಸಂದರ್ಶನದಲ್ಲಿ ಅಭ್ಯರ್ಥಿಗಳಿಗೆ ಕೇಳಿರುವ ಪ್ರಶ್ನೆ ಇದಾಗಿದೆ. ಈ ಗಣಿತದ ಪಜಲ್‌ಗೆ 3 ಸೆಕೆಂಡ್‌ನಲ್ಲಿ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಟ್ರೈ ಮಾಡಿ.
ರೆಡ್ಡಿಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬ್ರೈನ್ ಟೀಸರ್ ಚಿತ್ರವೊಂದು ಚರ್ಚೆಗೆ ಕಾರಣವಾಗಿದೆ. ಈ ಚಿತ್ರದಲ್ಲಿ ಒಂದು ಗಣಿದ ಪಜಲ್ ಇದೆ. ಇದು ಟ್ರಿಕ್ಕಿ ಆಗಿರುವುದು ಸುಳ್ಳಲ್ಲ. ಇದಕ್ಕೆ 3 ಸೆಕೆಂಡ್ ಒಳಗೆ ಉತ್ತರ ಹೇಳಬೇಕಾಗಿರುವುದು ನಿಮಗಿರುವ ಸವಾಲು.
ಉದ್ಯೋಗ ಸಂದರ್ಶನವೊಂದರಲ್ಲಿ ಕಂಪನಿಯ ಸಿಇಒ ಅಭ್ಯರ್ಥಿಗಳಿಗೆ ಕೇಳಿದ ಪ್ರಶ್ನೆ ಇದಾಗಿದೆ. ಬ್ರೈನ್ ಟೀಸರ್ ಪ್ರಿಯರಿಗೂ ಒಂದು ಕ್ಷಣ ಈ ಪಜಲ್ ಮೆದುಳಿನಲ್ಲಿ ಹುಳ ಬಿಟ್ಟಂತೆ ಮಾಡುವುದು ಸುಳ್ಳಲ್ಲ. ಸಾಮಾಜಿಕ ಜಾಲತಾಣದಲ್ಲಿ ಹಲವರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ಇಲ್ಲಿ ತಿಳಿಸಿದ್ದಾರೆ.
Back4breakfast ರೆಡ್ಡಿಟ್ ಬಳಕೆದಾರರು ಜೆನೆಸಿಸ್ ಕ್ಯಾಪಿಟಲ್ ಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿನೋ ಡಿಯೋನೆ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಒಳಗೊಂಡಿರುವ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ.
ಈ ಬ್ರೈನ್ ಟೀಸರ್‌ನಲ್ಲಿ ಏನಿದೆ?
3×3-3÷3+3 ಎಂಬ ಗಣಿತದ ಸೂತ್ರ ಇಲ್ಲಿದ್ದು, ಬುದ್ಧಿವಂತರಿಗೆ ಮಾತ್ರ ಎಂಬ ಶೀರ್ಷಿಕೆಯನ್ನು ಇದರಲ್ಲಿ ಬರೆಯಲಾಗಿದೆ. ಸರಳವಾಗಿ ಕಾಣುವ ಈ ಸವಾಲಿನ ಸಮೀಕರಣಕ್ಕೆ ಉತ್ತರ ಕಂಡುಹಿಡಿಯಲು ಹಲವರು ತಲೆ ಕೆಡಿಸಿಕೊಂಡಿದ್ದು ಸುಳ್ಳಲ್ಲ.
ಈ ಪಜಲ್‌ನ ಪೋಸ್ಟ್ ಹಾಕಿದಾಗಿನಿಂದ ಇಲ್ಲಿಯವರೆಗೆ 2800 ಮಂದಿ ಲೈಕ್ ಮಾಡಿದ್ದು, 2900 ಮಂದಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಉತ್ತರ ಕಂಡುಹಿಡಿಯಲು ಪ್ರಯತ್ನ ಮಾಡಿದ್ದು, ಕೆಲವರು ಪ್ರಯತ್ನದಲ್ಲಿ ತಾವು ಸೋತಿದ್ದಾಗಿ ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ಇಂದಿನ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು.
ಬ್ರೈನ್ ಟೀಸರ್‌ಗಳು ನಮ್ಮ ಮೆದುಳನ್ನು ಎಂಗೇಜ್ ಆಗಿ ಇಡುತ್ತವೆ. ಇದರಿಂದ ನಮ್ಮ ಮೆದುಳಿಗೆ ಮೋಜು ಸಿಗುತ್ತದೆ. ಅಂತಹ ಪಜಲ್‌ಗಳು ನಾವು ಕ್ರಿಯಾತ್ಮಕವಾಗಿ ಯೋಚಿಸುವಂತೆ ಮಾಡುತ್ತವೆ. ಬ್ರೈನ್ ಟೀಸರ್‌ಗಳು ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣವನ್ನು ಬೆಳೆಸುತ್ತವೆ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 4+4=8, 6+6=24 ಆದ್ರೆ 9+9= ಎಷ್ಟು? ಈ ಪ್ರಶ್ನೆ ನಿಮ್ಮ ಮೆದುಳಿಗೆ ಹುಳ ಬಿಡೋದು ಪಕ್ಕಾ; ಇದಕ್ಕೆ ಉತ್ತರ ಹೇಳಲು ಪ್ರಯತ್ನಿಸಿ
ಗಣಿತದಲ್ಲಿ ಎಕ್ಸ್‌ಪರ್ಟ್ ಅನ್ನೋರು ಕೂಡ ಒಮ್ಮೆ ಮೆದುಳು ಕೆರೆದುಕೊಳ್ಳುವ ಹಾಗೆ ಮಾಡುವ ಪಜಲ್‌ವೊಂದು ಇಲ್ಲಿದೆ. ಇದರಲ್ಲಿ ಇರುವುದು ಸುಲಭದ ಕೂಡಿಸುವ ಲೆಕ್ಕಾಚಾರ, ಆದ್ರೂ ಇಲ್ಲಿ 4 + 4 = 8 ಆದ್ರೆ 6+6= 12 ಖಂಡಿತ ಆಗೊಲ್ಲ. ಈಗ 9+9= ಎಷ್ಟು ಎಂದು ಕಂಡು ಹಿಡಿಯಬೇಕಾಗಿರುವುದು ನಿಮಗಿರುವ ಸವಾಲು.
Brain Teaser: ನಿಮ್ಮ ಕಣ್ಣಿಗೊಂದು ಪರೀಕ್ಷೆ, 20 ಸೆಕೆಂಡ್‌ನಲ್ಲಿ ಹಸಿರು ಬಣ್ಣದ ವೃತ್ತದಲ್ಲಿ ಅಡಗಿರುವ ನಂಬರ್ ಯಾವುದು ಕಂಡುಹಿಡಿಯಿರಿ
ನಿಮ್ಮ ಕಣ್ಣು ಸಖತ್ ಶಾರ್ಪ್ ಅಂತ ನಿಮಗೆ ಅನ್ನಿಸ್ತಾ ಇದ್ಯಾ, ಹಾಗಾದರೆ ನಿಮಗೊಂದು ಚಾಲೆಂಜ್ ಇದೆ. ಈ ಬ್ರೈನ್ ಟೀಸರ್‌ನಲ್ಲಿ ಇರುವ ಹಸಿರು ಬಣ್ಣದ ವೃತ್ತದ ಒಳಗೆ ಬರೆದಿರುವ ನಂಬರ್ ಯಾವುದು ಎಂದು 20 ಸೆಕೆಂಡ್‌ನಲ್ಲಿ ನೀವು ಕಂಡುಹಿಡಿಯಬೇಕು, ಕಣ್ಣು ನೋವು ಬಂದರೆ ನಾವು ಜವಾಬ್ದಾರರಲ್ಲ.