logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 11+11=4, 12+12=6 ಹಾಗಾದ್ರೆ 14+14= ಎಷ್ಟು? 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗಿದು ಚಾಲೆಂಜ್‌

Brain Teaser: 11+11=4, 12+12=6 ಹಾಗಾದ್ರೆ 14+14= ಎಷ್ಟು? 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗಿದು ಚಾಲೆಂಜ್‌

Reshma HT Kannada

Apr 30, 2024 10:01 AM IST

google News

11+11=4, 12+12=6 ಹಾಗಾದ್ರೆ 14+14= ಎಷ್ಟು? 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ

    • ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವ ಬ್ರೈನ್‌ ಟೀಸರ್‌ಗಳು ನಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇದೇನು ಮಹಾ ಲೆಕ್ಕ ಎಂದು ಅನ್ನಿಸಿದ್ರೂ ಉತ್ತರ ಹುಡುಕೋಕೆ ಹೊರಟರೆ ತಲೆ ಕೆಡೋದು ಖಂಡಿತ. ಅದೆಲ್ಲಾ ಇರ್ಲಿ 11+11=4 ಆದ್ರೆ, 14+14=? ಇದಕ್ಕೆ ಉತ್ತರ ಹೇಳಿ.
11+11=4, 12+12=6 ಹಾಗಾದ್ರೆ 14+14= ಎಷ್ಟು? 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ
11+11=4, 12+12=6 ಹಾಗಾದ್ರೆ 14+14= ಎಷ್ಟು? 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಗಣಿತದ ಪಜಲ್‌ಗಳನ್ನು ಬಿಡಿಸೋಕೆ ಕೂತ್ರೆ ಸಮಯ ಸರಿದಿದ್ದೆ ತಿಳಿಯೊಲ್ಲ. ಆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಬ್ರೈನ್‌ ಟೀಸರ್‌ಗಳ ಮೂಲಕ ನೆಟ್ಟಿಗರನ್ನು ಸೆಳೆಯಲಾಗುತ್ತಿದೆ. ಗಣಿತ ಪ್ರಿಯರು ಈ ಬ್ರೈನ್‌ ಟೀಸರ್‌ಗಳ ಹುಡುಕಾಟ ನಡೆಸಬಹುದು. ಇಲ್ಲಿರುವ ಪಜಲ್‌ಗಳು ಮೇಲ್ನೋಟಕ್ಕೆ ನಿಮಗೆ ಸುಲಭ ಅನ್ನಿಸಿದ್ರೂ ಉತ್ತರ ಹುಡುಕೋಕೆ ಹೊರಟಾಗ ತಲೆ ಕೆಡುವುದು ಖಂಡಿತ.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾದ ಬ್ರೈನ್‌ ಟೀಸರ್‌ವೊಂದು ಹಾಗೇ ಇದೆ. ಇದರಲ್ಲಿ ಕೂಡಿಸುವ ಸುಲಭ ಲೆಕ್ಕಾಚಾರವಿದೆ. ಇದಕ್ಕೆ ಉತ್ತರ ಹೇಳೋದು ಖಂಡಿತ ಸುಲಭವಲ್ಲ. @EdieBxgood ಎಂಬ ಎಕ್ಸ್‌ ಬಳಕೆದಾರರು ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಿದ್ದಾರೆ. ಮೊದಲು ಎಸ್‌ ಅಥವಾ ನೋ ಹೇಳಿ ನಾನು ಆಮೇಲೆ ಉತ್ತರ ತಿಳಿಸುತ್ತೇನೆ ಎಂದು ಶೀರ್ಷಿಕೆ ಬರೆದು ಇದನ್ನು ಪೋಸ್ಟ್‌ ಮಾಡಲಾಗಿದೆ. ಚಿತ್ರದ ಮೇಲೆ 5 ಸೆಕೆಂಡ್‌ನಲ್ಲಿ ಈ ಗಣಿತದ ಪಜಲ್‌ ಅನ್ನು ಬಿಡಿಸಲು ಸಾಧ್ಯವೇ ಎಂದು ಬರೆಯಲಾಗಿದೆ.

ಏಪ್ರಿಲ್‌ 23 ರಂದು ಪೋಸ್ಟ್‌ ಮಾಡಲಾದ ಈ ಬ್ರೈನ್‌ ಟೀಸರ್‌ ಅನ್ನು 600ಕ್ಕೂ ವೀಕ್ಷಿಸಿದ್ದಾರೆ. ಹಲವರು ಲೈಕ್‌ ಮಾಡಿದ್ದರೆ, ಇನ್ನೂ ಕೆಲವರು ಕಾಮೆಂಟ್‌ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ.

ಸರಿ ಹಾಗಿದ್ರೆ, ಈ ಸುಲಭ ಗಣಿತ ಪಜಲ್‌ಗೆ ನಿಮ್ಮ ಉತ್ತರವೇನು, ಇದಕ್ಕೆ 5 ಸೆಕೆಂಡ್‌ನಲ್ಲಿ ನೀವು ಉತ್ತರ ಹೇಳಿದ್ದು ಹೌದಾದ್ರೆ ನೀವು ಖಂಡಿತ ಗಣಿತದಲ್ಲಿ ಎಕ್ಸ್‌ಪರ್ಟ್. ಇಂತಹ ಹಲವು ಪಜಲ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ. ಇವು ನಮಗೆ ಟೈಮ್‌ ಪಾಸ್‌ಗೆ ಉತ್ತಮ ಎನ್ನಿಸಿದ್ರೂ ನಮ್ಮ ಮೆದುಳಿನ ಕಾರ್ಯಗಳನ್ನು ಇವು ಸುಧಾರಿಸುತ್ತವೆ. ನಮ್ಮ ಮೆದುಳನ್ನು ಚುರುಕುಗೊಳಿಸುವ ಕಾರ್ಯವನ್ನು ಈ ಬ್ರೈನ್‌ ಟೀಸರ್‌ಗಳು ಮಾಡುತ್ತವೆ. ಬ್ರೈನ್‌ ಟೀಸರ್‌ಗಳನ್ನು ಎಲ್ಲಿ ಹುಡುಕೋದು ಅನ್ನೋ ಚಿಂತೆ ನಿಮಗೆ ಬೇಡ. ನಾವು ನಿಮಗಾಗಿ ಪ್ರತಿದಿನ ಒಂದೊಂದು ಬ್ರೈನ್‌ ಟೀಸರ್‌ಗಳನ್ನು ಹಾಕುತ್ತೇವೆ ಗಮನಿಸಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ 

Brain Teaser: 50%÷10%=?, ನೀವೂ ಗಣಿತದಲ್ಲಿ ಪಂಟರಾದ್ರೆ ಕ್ಯಾಲ್ಕುಲೆಟರ್‌ ಬಳಸದೇ ಈ ಸೂತ್ರಕ್ಕೆ ಉತ್ತರ ಕಂಡುಹಿಡಿಯಿರಿ

ಗಣಿತದಲ್ಲಿ ಶಾರ್ಪ್‌ ಅನ್ನೋರಿಗಾಗಿ ಇಲ್ಲಿದೆ ಒಂದು ಬ್ರೈನ್‌ ಟೀಸರ್‌. ಇದೊಂದು ಗಣಿತದ ಪಜಲ್‌, 50%÷10%= ಎಷ್ಟು ಎನ್ನುವುದು ಪ್ರಶ್ನೆ. ಇದಕ್ಕೆ ಕ್ಯಾಲ್ಕುಲೆಟರ್‌ ಬಳಸದೇ ಥಟ್ಟಂತ ಉತ್ತರ ಹೇಳಬೇಕು. ನೋಡೋಣ ನಿಮ್ಮ ಗಣಿತ ಜ್ಞಾನ ಹೇಗಿದೆ ಅಂತ. ಉತ್ತರ ಹೇಳೋಕೆ ಟ್ರೈ ಮಾಡಿ.

Brain Teaser: 25ಕ್ಕೆ 25ಕ್ಕೆ ಕೂಡಿಸಿ ಸೊನ್ನೆ ಗುಣಿಸಿ ಒಂದು ಕಳೆದ್ರೆ ಉತ್ತರ ಎಷ್ಟಾಗುತ್ತೆ? 30 ಸೆಕೆಂಡ್‌ನಲ್ಲಿ ಹೇಳಿ

ಗಣಿತದ ಪಜಲ್‌ ಬಿಡಿಸುವುದು ನಿಮ್ಮ ನೆಚ್ಚಿನ ಹವ್ಯಾಸವಾದ್ರೆ ನಿಮಗಾಗಿ ಇಲ್ಲಿದೆ ಒಂದು ಹೊಸ ಬ್ರೈನ್‌ ಟೀಸರ್‌. ಇಲ್ಲೊಂದು ಸುಲಭದ ಗಣಿತ ಸೂತ್ರವಿದೆ. 30 ಸೆಕೆಂಡ್‌ನಲ್ಲಿ ಇದಕ್ಕೆ ಉತ್ತರ ಕಂಡುಹಿಡಿಯಬೇಕು. ಗಣಿತ ಎಕ್ಸ್‌ಪರ್ಟ್ಸ್‌ ಟ್ರೈ ಮಾಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ