Brain Teaser: 25ಕ್ಕೆ 25ಕ್ಕೆ ಕೂಡಿಸಿ ಸೊನ್ನೆ ಗುಣಿಸಿ ಒಂದು ಕಳೆದ್ರೆ ಉತ್ತರ ಎಷ್ಟಾಗುತ್ತೆ? 30 ಸೆಕೆಂಡ್‌ನಲ್ಲಿ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 25ಕ್ಕೆ 25ಕ್ಕೆ ಕೂಡಿಸಿ ಸೊನ್ನೆ ಗುಣಿಸಿ ಒಂದು ಕಳೆದ್ರೆ ಉತ್ತರ ಎಷ್ಟಾಗುತ್ತೆ? 30 ಸೆಕೆಂಡ್‌ನಲ್ಲಿ ಹೇಳಿ

Brain Teaser: 25ಕ್ಕೆ 25ಕ್ಕೆ ಕೂಡಿಸಿ ಸೊನ್ನೆ ಗುಣಿಸಿ ಒಂದು ಕಳೆದ್ರೆ ಉತ್ತರ ಎಷ್ಟಾಗುತ್ತೆ? 30 ಸೆಕೆಂಡ್‌ನಲ್ಲಿ ಹೇಳಿ

ಗಣಿತದ ಪಜಲ್‌ ಬಿಡಿಸುವುದು ನಿಮ್ಮ ನೆಚ್ಚಿನ ಹವ್ಯಾಸವಾದ್ರೆ ನಿಮಗಾಗಿ ಇಲ್ಲಿದೆ ಒಂದು ಹೊಸ ಬ್ರೈನ್‌ ಟೀಸರ್‌. ಇಲ್ಲೊಂದು ಸುಲಭದ ಗಣಿತ ಸೂತ್ರವಿದೆ. 30 ಸೆಕೆಂಡ್‌ನಲ್ಲಿ ಇದಕ್ಕೆ ಉತ್ತರ ಕಂಡುಹಿಡಿಯಬೇಕು. ಗಣಿತ ಎಕ್ಸ್‌ಪರ್ಟ್ಸ್‌ ಟ್ರೈ ಮಾಡಿ.

5ಕ್ಕೆ 25ಕ್ಕೆ ಕೂಡಿಸಿ ಸೊನ್ನೆ ಗುಣಿಸಿ ಒಂದ್ರಲ್ಲಿ ಕಳೆದ್ರೆ ಎಷ್ಟಾಗುತ್ತೆ?
5ಕ್ಕೆ 25ಕ್ಕೆ ಕೂಡಿಸಿ ಸೊನ್ನೆ ಗುಣಿಸಿ ಒಂದ್ರಲ್ಲಿ ಕಳೆದ್ರೆ ಎಷ್ಟಾಗುತ್ತೆ?

ನಿಮ್ಮನ್ನು ನೀವು ಎಂಗೇಜ್‌ ಆಗಿ ಇಡಲು ಹಾಗೂ ನಿಮ್ಮ ಮನಸ್ಸಿಗೆ ಮೋಜು ಸಿಗಬೇಕು ಅಂದ್ರೆ ನೀವು ಗಣಿತದ ಪಜಲ್‌ಗಳನ್ನು ಬಿಡಿಸಬೇಕು. ಇದು ನಿಮ್ಮ ಕೌಶಲ ಪರೀಕ್ಷೆಗೂ ಹೇಳಿ ಮಾಡಿಸಿದ್ದು. ಸೃಜನಾತ್ಮಕವಾಗಿ ಚಿಂತಿಸುವಂತೆ ಮಾಡುವ ಪಜಲ್‌ಗಳು ಮೆದುಳನ್ನು ಚುರುಕು ಮಾಡುತ್ತವೆ. ನಿಮ್ಮ ಅರಿವಿನ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡಲು ಬ್ರೈನ್‌ ಟೀಸರ್‌ಗಳು ಹೇಳಿ ಮಾಡಿಸಿದ್ದು. ಹಾಗಿದ್ರೆ ಸರಿ, ಇನ್ಯಾಕೆ ತಡ ನಿಮಗಾಗಿ ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಇದಕ್ಕೆ 30 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು.

Math Quiz, Game and Puzzles ಎಂಬ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಶೇರ್‌ ಮಾಡಲಾಗಿದೆ. ಇದರಲ್ಲಿ ಆಗಾಗ ಮೆದುಳಿಗೆ ಹುಳ ಬಿಡುವ ಬ್ರೈನ್‌ ಟೀಸರ್‌ಗಳನ್ನು ಶೇರ್‌ ಮಾಡಲಾಗುತ್ತದೆ. ಅಂತಹದ್ದೇ ಬ್ರೈನ್‌ ಟೀಸರ್‌ ಈಗ ಶೇರ್‌ ಮಾಡಲಾಗಿದ್ದು, ಉತ್ತರ ಕಂಡುಹಿಡಿಯುವ ಸಲುವಾಗಿ ನೆಟ್ಟಿಗರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. 25+25X0-1=? ಪ್ರಶ್ನೆ ಹೀಗಿದೆ.

ಸರಿ ಈ ಪ್ರಶ್ನೆ ನಿಮಗೆ ಮೇಲ್ನೋಟಕ್ಕೆ ಸುಲಭ ಅನ್ನಿಸಿದ್ರೂ ಉತ್ತರ ಹುಡುಕೋದು ಕಷ್ಟಾನೇ, ಸರಿ ನಿಮ್ಮ ಸಮಯ ಈಗ ಶುರು...

ಏಪ್ರಿಲ್‌ 11 ರಂದು ಈ ಬ್ರೈನ್‌ ಟೀಸರ್‌ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಹಲವರು, ಈ ಪೋಸ್ಟ್‌ಗೆ ಲೈಕ್‌, ಕಾಮೆಂಟ್‌ ಮಾಡಿದ್ದಾರೆ. ಹಲವರು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್‌ ಮ ಮಾಡುವ ಮೂಲಕ ತಿಳಿಸಿದ್ದಾರೆ. ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು 1 ಎಂದು ಕಾಮೆಂಟ್‌ ಮಾಡಿದ್ದರೆ. ಹಲವರು 24 ಎಂದು ಕಾಮೆಂಟ್‌ ಮಾಡಿದ್ದಾರೆ. 25+25×0-1=25+0×25-1=25+0-1=25-1=24." ಎಂದು ಉತ್ತರವನ್ನು ಬಿಡಿಸಿ ಕಾಮೆಂಟ್‌ನಲ್ಲಿ ತಿಳಿಸಿದವರೂ ಇದ್ದಾರೆ.

ಸರಿ ನೀವು ಗಣಿತದಲ್ಲಿ ಶಾರ್ಪ್‌ ಇದ್ರೆ ಈ ಬ್ರೈನ್‌ ಟೀಸರ್‌ಗೆ ಉತ್ತರವೇನು ತಿಳಿಸಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ 

Brain Teaser: 11ರಲ್ಲಿ 11 ಗುಣಿಸಿದ್ರೆ 4 ಆದ್ರೆ, 33ರಲ್ಲಿ 33 ಗುಣಿಸಿದ್ರೆ ಎಷ್ಟಾಗುತ್ತೆ? 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಗಣಿತದ ಪಜಲ್‌ಗಳು ನಮ್ಮ ಬುದ್ಧಿವಂತಿಕೆಯನ್ನು ಪರೀಕ್ಷೆ ಮಾಡುವ ಜೊತೆಗೆ ಮನಸ್ಸಿಗೂ ಖುಷಿ ನೀಡುತ್ತವೆ. ಆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಬ್ರೈನ್‌ ಟೀಸರ್‌ಗಳು ಭಾರಿ ವೈರಲ್‌ ಆಗುತ್ತವೆ. ಇಲ್ಲೊಂದು ಅಂಥದ್ದೇ ಪಜಲ್‌ ಇದೆ. ಇದಕ್ಕೆ 20 ಸೆಕೆಂಡ್‌ನಲ್ಲಿ ಉತ್ತರ ಹುಡುಕಲು ಟ್ರೈ ಮಾಡಿ.

Brain Teaser: 6 ಎ, 6 ಬಿ ಕೂಡಿಸಿದ್ರೆ 1974, ಹಾಗಿದ್ರೆ ಎ ಹಾಗೂ ಬಿಯ ಮೌಲ್ಯವೆಷ್ಟು; ಗಣಿತದಲ್ಲಿ ಶಾರ್ಪ್‌ ಅನ್ನೋರು ಉತ್ತರ ಹೇಳಿ

ಇಲ್ಲೊಂದು ಭಿನ್ನವಾದ ಬ್ರೈನ್‌ ಟೀಸರ್‌ ಇದೆ. ಇದು ಗಣಿತದ ಪಜಲ್‌ ಆಗಿದ್ದು, ಇದಕ್ಕೆ ಉತ್ತರ ಹೇಳೋಕೆ ನೀವು ಸಾಕಷ್ಟು ಬುದ್ಧಿ ಖರ್ಚು ಮಾಡಬೇಕಾಗೋದು ಖಂಡಿತ. ಇಲ್ಲಿರುವ ಉತ್ತರವನ್ನು ನೋಡಿಕೊಂಡು ಎ ಹಾಗೂ ಬಿಯ ಮೌಲ್ಯವೆಷ್ಟು ಎಂಬುದನ್ನು ಕಂಡುಹಿಡಿಯಬೇಕು. ಇದೇನು ಮಹಾ ಅಂದ್ಕೋಬೇಡಿ, ಉತ್ತರ ಹುಡುಕೋದು ಸುಲಭವಿಲ್ಲ. ಇನ್ಯಾಕೆ ತಡ, ಟ್ರೈ ಮಾಡಿ.

 

Whats_app_banner