logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಚಳಿಗಾಲದಲ್ಲೂ ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡುತ್ತೆ ಅಂದ್ರೆ ಈ ಬ್ರೈನ್ ಟೀಸರ್‌ಗೆ ಥಟ್ಟಂತ ಉತ್ತರ ಹೇಳಿ, ನಿಮಗೊಂದು ಸವಾಲ್

Brain Teaser: ಚಳಿಗಾಲದಲ್ಲೂ ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡುತ್ತೆ ಅಂದ್ರೆ ಈ ಬ್ರೈನ್ ಟೀಸರ್‌ಗೆ ಥಟ್ಟಂತ ಉತ್ತರ ಹೇಳಿ, ನಿಮಗೊಂದು ಸವಾಲ್

Reshma HT Kannada

Dec 02, 2024 10:51 AM IST

google News

ಬ್ರೈನ್ ಟೀಸರ್

    • ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ ಈಗ ಹಲವರ ಮೆದುಳಿಗೆ ಹುಳ ಬಿಟ್ಟಿದೆ. ಇದರಲ್ಲಿರುವ ಗಣಿತದ ಪಜಲ್‌ಗೆ ಉತ್ತರ ಹೇಳಬೇಕಾಗಿರುವುದು ಇಂದಿನ ಸವಾಲು. ಇದರಲ್ಲಿ ಸುಲಭ ಗಣಿತ, ಆದರೆ ಉತ್ತರ ಖಂಡಿತ ಸುಲಭವಿಲ್ಲ. ನಿಮ್ಮ ಮೆದುಳು ಚುರುಕಾಗಿದ್ರೆ ಈ ಪ್ರಶ್ನೆಗೆ ಥಟ್ಟಂತ ಉತ್ತರ ಹೇಳಿ.
ಬ್ರೈನ್ ಟೀಸರ್
ಬ್ರೈನ್ ಟೀಸರ್

ಚಳಿಗಾಲದಲ್ಲಿ ನಮ್ಮ ದೇಹದಂತೆ ಮೆದುಳು ಕೂಡ ಜಡ ಹಿಡಿದಂತೆ ಆಡುತ್ತದೆ. ಮೆದುಳು ಚುರುಕಾಗಿ ಕೆಲಸ ಮಾಡಿಲ್ಲ ಅಂದ್ರೆ ಬುದ್ಧಿ ಉಪಯೋಗಿಸೋದು ಕಷ್ಟವಾಗುತ್ತದೆ. ಈ ವರ್ಷದ ಚಳಿಗಾಲದಲ್ಲಿ ಮಳೆ ಕೂಡ ಜೊತೆಯಾಗಿದೆ. ಇಂತಹ ಸಮಯದಲ್ಲಿ ನಿಮ್ಮ ಮೆದುಳು, ಬುದ್ಧಿ ಚುರುಕಾಗಿ ಕೆಲಸ ಮಾಡಬೇಕು ಅಂದ್ರೆ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳಬೇಕು.

ಇಂದಿನ ಬ್ರೈನ್ ಟೀಸರ್‌ನಲ್ಲಿರುವುದು ಕೂಡಿಸಿ, ಗುಣಿಸಿ, ಭಾಗಿಸುವ ಪ್ರಾಥಮಿಕ ಶಾಲಾ ಗಣಿತ. ಈ ಗಣಿತ ಸೂತ್ರಕ್ಕೆ ನೀವು ಥಟ್ಟಂತ ಉತ್ತರ ಹೇಳಬೇಕು. ಎಕ್ಸ್‌ನಲ್ಲಿ ವೈರಲ್ ಆಗಿರುವ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯುವಲ್ಲಿ ಹಲವರು ಸೋತಿದ್ದಾರೆ. ಹಾಗಾದರೆ ಇದಕ್ಕೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯತೆ ಪ್ರಯತ್ನಿಸಿ.

ಬ್ರೈನ್ ಟೀಸರ್‌ನಲ್ಲಿ ಏನಿದೆ?

ಈ ಬ್ರೈನ್ ಟೀಸರ್‌ನಲ್ಲಿರುವುದು ಪ್ರಾಥಮಿಕ ಶಾಲಾ ಹಂತದ ಸುಲಭ ಗಣಿತ. ಶಾಲಾ ದಿನಗಳಲ್ಲಿ ಗಣಿತ ನಿಮ್ಮ ಫೇವರಿಟ್ ಸಬ್ಜೆಕ್ಟ್ ಆಗಿದ್ದರೆ ಖಂಡಿತ ಇದಕ್ಕೆ ಉತ್ತರ ಹೇಳಲು ನಿಮಗೆ ಕಷ್ಟವಾಗುವುದಿಲ್ಲ. P+Q=6, 3P-Q=2 ಆದ್ರೆ, Q/P= ಎಷ್ಟು ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು.

ಇಂತಹ ಗಣಿತದ ಪಜಲ್‌ಗೆ ಉತ್ತರ ಕಂಡುಹಿಡಿಯುವುದು ಒಂಥರಾ ಮಜಾ ಸಿಗುವುದು ಮಾತ್ರವಲ್ಲ, ಇದರಿಂದ ನಮ್ಮ ಮೆದುಳು ಚುರುಕಾಗುತ್ತದೆ. ಗಣಿತ ಪಜಲ್‌ಗಳು ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣವನ್ನು ವೃದ್ಧಿಸುತ್ತವೆ. ಇದರಿಂದ ಏಕಾಗ್ರತೆ ಕೂಡ ಹೆಚ್ಚಾಗುತ್ತದೆ. ಹಾಗಾದರೆ ಇಂದಿನ ಬ್ರೈನ್ ಟೀಸರ್‌ಗೆ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವಾಗಿದೆ ಎಂದರೆ ಇದನ್ನು ನಿಮ್ಮ ಸ್ನೇಹಿತರೂ ಆತ್ಮೀಯರಿಗೂ ಕಳುಹಿಸಿ ಅವರಿಂದ ಸರಿಯಾದ ಉತ್ತರ ಏನು ಬರಬಹುದು ಎಂದು ನಿರೀಕ್ಷಿಸಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ಮೆದುಳಿಗೆ ಹುಳ ಬಿಡುವ ಈ ಗಣಿತದ ಸೂತ್ರಕ್ಕೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೆ? ನೀವು ಜಾಣರಾಗಿದ್ರೆ ಟ್ರೈ ಮಾಡಿ

ಗಣಿತದಲ್ಲಿ ನೀವು ಪಂಟರಾಗಿದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದಲ್ಲಿರುವ ಗಣಿತಸೂತ್ರಕ್ಕೆ ನೀವು ಉತ್ತರ ಹೇಳಬೇಕು. ನೀವು ಜಾಣರಾದರಷ್ಟೇ ಈ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯ. K/P= ಎಷ್ಟು?ನಿಮಗೊಂದು ಚಾಲೆಂಜ್‌, ಥಟ್ಟಂತ ಉತ್ತರ ಹೇಳಿ.

Brain Teaser: ಪಾಂಡಗಳ ರಾಶಿಯ ನಡುವೆ ನಾಯಿಯೊಂದು ಅವಿತಿದೆ, ಅದು ಎಲ್ಲಿದೆ? 10 ಸೆಕೆಂಡ್ ಒಳಗೆ ಹುಡುಕಿ, ನಿಮ್ಮ ಕಣ್ಣಿಗೊಂದು ಸವಾಲ್‌

ಶನಿವಾರದ ಹೊತ್ತು ಖಾಲಿ ಕೂತು ಬೇಸರ ಆಗಿದ್ರೆ ಮೆದುಳು, ಕಣ್ಣಿಗೆ ಸ್ವಲ್ಪ ಕೆಲಸ ಕೊಡಿ. ಈ ಬ್ರೈನ್ ಟೀಸರ್‌ ಗಮನಿಸಿ. ಇದರಲ್ಲಿ ನಿಮಗೆ ಪಾಂಡಗಳ ರಾಶಿಯೇ ಕಾಣಿಸಬಹುದು. ಇದರ ನಡುವೆ ಅಡಗಿರುವ ನಾಯಿಯನ್ನು ನೀವು ಹುಡುಕಬೇಕು. ನಿಮಗಿರೋದು 10 ಸೆಕೆಂಡ್ ಸಮಯ ಮಾತ್ರ. ನಿಮ್ಮ ಸಮಯ ಈಗ ಶುರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ