logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 66ರ ನಡುವೆ ಒಂದೇ ಒಂದು ಕಡೆ 69 ಇದೆ, ಅದು ಎಲ್ಲಿದೆ? 6 ಸೆಕೆಂಡ್‌ನಲ್ಲಿ ಹೇಳಿ; ನಿಮ್ಮ ಕಣ್ಣಿಗೊಂದು ಚಾಲೆಂಜ್‌

Brain Teaser: 66ರ ನಡುವೆ ಒಂದೇ ಒಂದು ಕಡೆ 69 ಇದೆ, ಅದು ಎಲ್ಲಿದೆ? 6 ಸೆಕೆಂಡ್‌ನಲ್ಲಿ ಹೇಳಿ; ನಿಮ್ಮ ಕಣ್ಣಿಗೊಂದು ಚಾಲೆಂಜ್‌

Reshma HT Kannada

Dec 18, 2024 09:23 AM IST

google News

ಬ್ರೈನ್ ಟೀಸರ್

    • ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ರಾಶಿ 66 ಅನ್ನು ಬರೆಯಲಾಗಿದೆ. ಈ 66ರ ನಡುವೆ ಒಂದೇ ಒಂದು ಕಡೆ 69 ಅಡಗಿದೆ. ಅದು ಎಲ್ಲಿದೆ ಎಂದು ಕೇವಲ 6 ಸೆಕೆಂಡ್ ಒಳಗೆ ನೀವು ಕಂಡುಹಿಡಿಯಬೇಕು. ನಿಮ್ಮ ಕಣ್ಣು ಚುರುಕಾಗಿದ್ರೆ ಥಟ್ಟಂತ ಉತ್ತರ ಹೇಳಿ, ನಿಮಗೊಂದು ಹೊಸ ಚಾಲೆಂಜ್‌.
ಬ್ರೈನ್ ಟೀಸರ್
ಬ್ರೈನ್ ಟೀಸರ್

ಬ್ರೈನ್ ಟೀಸರ್‌ ಚಾಲೆಂಜ್‌ಗಳು ಕ್ರೇಜಿ ಎನ್ನಿಸುವಂತಿರುವುದು ಸುಳ್ಳಲ್ಲ. ಈ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳಲು ಮೆದುಳಿನ ಜೊತೆಗೆ ಕಣ್ಣು ಕೂಡ ಚುರುಕಾಗಿ ಇರಬೇಕು. ಇಂದಿನ ಬ್ರೈನ್ ಟೀಸರ್‌ ನಿಮ್ಮ ಕಣ್ಣಿಗೆ ಚಾಲೆಂಜ್ ಹಾಕುವಂತಿದೆ. ಸೂಕ್ಷ್ಮವಾಗಿ ಗಮನಿಸಿದ್ರೆ ಖಂಡಿತ ನಾವು ನೀಡಿರುವ ಸಮಯದೊಳಗೆ ನೀವು ಉತ್ತರ ಕಂಡುಕೊಳ್ಳಲು ಸಾಧ್ಯವಿದೆ.

ಈ ಬ್ರೈನ್ ಟೀಸರ್‌ನಲ್ಲಿ ಉದ್ದಕ್ಕೆ ಸಾಲಿಗೆ 66 ನಂಬರ್ ಅನ್ನು ಬರೆಯಲಾಗಿದೆ. ಸುಮಾರು 100 66 ಈ ಚಿತ್ರದಲ್ಲಿದೆ. ಇದರ ನಡುವೆ ಒಂದೇ ಒಂದು ಕಡೆ 69 ಅಡಗಿದೆ. ಆ 69 ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು, ಅದು ನಿಮಗಿರುವ ಚಾಲೆಂಜ್‌. ಆದರೆ ಇದಕ್ಕೆ ನೀವು ದಿನಪೂರ್ತಿ ಹುಡುಕಿ ಉತ್ತರ ಹೇಳುವಂತಿಲ್ಲ, ಕೇವಲ 6 ಸೆಕೆಂಡ್ ಒಳಗೆ 69 ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು.

ಶೇ 2 ರಷ್ಟು ಮಂದಿಗೆ ಮಾತ್ರ 6 ಸೆಕೆಂಡ್ ಒಳಗೆ 69 ಎಲ್ಲಿದೆ ಎಂದು ಕಂಡುಹಿಡಿಯಲು ಸಾಧ್ಯವಾಗಿದೆ. ಈ ಚಿತ್ರವನ್ನು ದಿಟ್ಟಿಸಿ ನೋಡಿದ್ರೆ ಕಣ್ಣು ನೋವು ಬರುತ್ತೆ ಅನ್ನೋದು ಮರಿಬೇಡಿ. ಆದ್ರೆ ಸೂಕ್ಷ್ಮವಾಗಿ ಚಿತ್ರವನ್ನು ಮೇಲಿಂದ ಕೆಳಗೆ ಗಮನಿಸಿದರೆ ಖಂಡಿತ ನಿಮ್ಮಿಂದ 69 ಕಂಡುಹಿಡಿಯಲು ಸಾಧ್ಯವಿದೆ.

ಇಂತಹ ಬ್ರೈನ್ ಟೀಸರ್‌ ಚಾಲೆಂಜ್‌ಗಳು ನಿಮ್ಮ ಮೆದುಳು ಹಾಗೂ ಕಣ್ಣನ್ನು ಚುರುಕು ಮಾಡುತ್ತದೆ. ಇದರಿಂದ ನಮ್ಮಲ್ಲಿ ಏಕಾಗ್ರತೆ ಬೆಳೆಯುತ್ತದೆ. ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವುದು ಮನಸ್ಸಿಗೆ ಖುಷಿ ಹಾಗೂ ಮೋಜು ಸಿಗುತ್ತದೆ. ಹಾಗಾದರೆ ಇನ್ನೇಕೆ ತಡ 69 ಎಲ್ಲಿದೆ ಹುಡುಕಿ, ನಂತರ ಈ ಬ್ರೈನ್ ಟೀಸರ್‌ ಅನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಂಡು, ಅವರ ಬಳಿ ಉತ್ತರ ಕಂಡುಹಿಡಿಯಲು ಹೇಳಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: A+A=2, A+b=3 ಆದ್ರೆ A+B+C*4= ಎಷ್ಟು? ಗಣಿತದಲ್ಲಿ ನೀವು ಎಕ್ಸ್‌ಪರ್ಟ್‌ ಆದ್ರೆ 30 ಸೆಕೆಂಡ್ ಒಳಗೆ ಉತ್ತರ ಹೇಳಿ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್‌ ಆದ ಬ್ರೈನ್ ಟೀಸರ್‌ವೊಂದು ಮೆದುಳಿಗೆ ಹುಳ ಬಿಡೋದು ಸುಳ್ಳಲ್ಲ. ಗಣಿತದಲ್ಲಿ ನೀವು ಎಕ್ಸ್‌ಪರ್ಟ್‌ ಆದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಸಾಧ್ಯವಾಗುತ್ತದೆ. A+B+C*4= ಎಷ್ಟು? 30 ಸೆಕೆಂಡ್‌ ಒಳಗೆ ನೀವು ಉತ್ತರ ಹೇಳಬೇಕು.

Brain Teaser: ಈ ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು? ನಿಮ್ಮ ಮೆದುಳು ಚುರುಕಾಗಿದ್ರೆ ಥಟ್ಟಂತ ಉತ್ತರ ಹೇಳಿ

ಗಣಿತದಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಎಕ್ಸ್‌ನಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್‌ನಲ್ಲಿ ಮಿಸ್ ಆಗಿರುವ ನಂಬರ್ ಯಾವುದು ಎಂದು ನೀವು ಹೇಳಬೇಕು. ನಿಮಗಿರೋದು 10 ಸೆಕೆಂಡ್ ಸಮಯ, ಟ್ರೈ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ