logo
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಕೈ, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು, ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯಿರಿ

Personality Test: ಕೈ, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು, ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯಿರಿ

Reshma HT Kannada

Dec 04, 2024 04:06 PM IST

google News

ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್

    • ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಕಣ್ಣಿಗೆ ವಿಚಿತ್ರವಾಗಿ ಕಾಣುವುದು ಮಾತ್ರವಲ್ಲ, ಇದರಿಂದ ನಮ್ಮ ವ್ಯಕ್ತಿತ್ವವನ್ನು ತಿಳಿಯಬಹುದು. ಒಂದೇ ಚಿತ್ರವು ಬೇರೆ ಬೇರೆಯವರಿಗೆ ಬೇರೆ ಬೇರೆ ರೀತಿ ಕಾಣುತ್ತದೆ. ಈ ಚಿತ್ರವು ನಿಮ್ಮ ಕಣ್ಣಿಗೆ ಹೇಗೆ ಕಾಣುತ್ತದೆ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಕಾಣುವುದೇನು ಹೇಳಿ.
ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್
ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್

ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್‌ಗಳು ಸಾಕಷ್ಟು ವೈರಲ್ ಆಗುತ್ತಿವೆ. ಯಾಕೆಂದರೆ ಇವು ವಿಚಿತ್ರವಾಗಿ ಕಂಡರೂ ಈ ಚಿತ್ರಗಳ ಮೂಲಕ ನಾವು ನಮ್ಮ ವ್ಯಕ್ತಿತ್ವ ಹೇಗೆ ಎಂದು ತಿಳಿದುಕೊಳ್ಳಬಹುದು. ಯಾಕೆಂದರೆ ಈ ಚಿತ್ರಗಳು ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣುತ್ತವೆ. ಇದರಲ್ಲಿ ನಿಮ್ಮ ಕಣ್ಣಿಗೆ ಕಾಣುವ ರೀತಿ ನಿಮ್ಮ ವ್ಯಕ್ತಿತ್ವವಾಗಿರುತ್ತದೆ.

ಈ ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್‌ಗಳು ಶೇ 100 ನಿಜವಲ್ಲ ಎಂದರೂ ಇವನ್ನು ಸುಳ್ಳು ಎಂದು ವಾದಿಸಲೂ ಸಾಧ್ಯವಿಲ್ಲ. ಯಾಕೆಂದರೆ ಇದರಲ್ಲಿರುವ ಹಲವು ಅಂಶಗಳು ನಮ್ಮ ವ್ಯಕ್ತಿತ್ವಕ್ಕೆ ಹೊಂದಿಕೆಯಾಗುತ್ತವೆ. ಮನೋಶಾಸ್ತ್ರದಲ್ಲೂ ವ್ಯಕ್ತಿತ್ವ ಪರೀಕ್ಷೆಗೆ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ಬಳಸಲಾಗುತ್ತದೆ.

ಇದು ಖ್ಯಾತ ಆಪ್ಟಿಕಲ್ ಇಲ್ಯೂಷನ್ ಸ್ಪೆಷಲಿಸ್ಟ್ ಮಿಯಾ ಯಲಿನ್ ವಿನ್ಯಾಸ ಮಾಡಿದ ಚಿತ್ರವಾಗಿದೆ. ಚಿತ್ರದಲ್ಲಿ ನಿಮಗೆ ಮೊದಲು ಮನುಷ್ಯನ ಮುಖ ಕಾಣಿಸುವುದೋ ಅಥವಾ ಕೈ ಕಾಣಿಸುತ್ತಿದೆಯೇ ಹೇಳಿ. ಅದರಂತೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು.

ಮನುಷ್ಯನ ಮುಖ

ಚಿತ್ರದಲ್ಲಿ ಮನುಷ್ಯನ ಮುಖ ಮೊದಲು ನೋಡಿದರೆ ನೀವು ಆಳವಾದ ಚಿಂತನಶೀಲ, ಕಾಳಜಿಯುಳ್ಳ ಮತ್ತು ಪರಿಗಣಿಸುವ ವ್ಯಕ್ತಿ ಎಂದು ಅರ್ಥ. ನೀವು ಆಗಾಗ್ಗೆ ನಿಮ್ಮ ಕೆಲಸಗಳ ಮೇಲೆ ಗಮನ ಹರಿಸುತ್ತೀರಿ. ಸ್ವಾಭಾವಿಕವಾಗಿ ಕೆಲಸದ ಮೇಲೆ ಗಮನ ಹರಿಸುವ ವ್ಯಕ್ತಿತ್ವದವರು. ಹಾಗಂತ ನಿಮ್ಮ ಮೇಲೆ ನೀವು ಗಮನ ಹರಿಸದೇ ಕೆಲಸ ಮಾಡದಿರಿ. ನಿಮ್ಮ ಬಗ್ಗೆ ನೀವು ದಯೆ, ಕರುಣೆ ಹೊಂದಿರಬೇಕು. ನೀವು ಇರುವಂತೆಯೇ ನಿಮ್ಮನ್ನು ನೀವು ಒಪ್ಪಿಕೊಳ್ಳಿ. ಆಳವಾದ ಚಿಂತಕರಾಗಿರುವುದರಿಂದ ನೀವು ಇತರರಿಗಿಂತ ಉತ್ತಮ ಸಮಸ್ಯೆ ಪರಿಹಾರಕರಾಗಲು ಸಹಾಯ ಮಾಡುತ್ತದೆ. ಏಕೆಂದರೆ ನೀವು ಸಮಸ್ಯೆಯನ್ನು ಗಮನಿಸಬಹುದು ಮತ್ತು ಅದಕ್ಕೆ ವಿಭಿನ್ನ ಪರಿಹಾರಗಳನ್ನು ಕಂಡುಹಿಡಿಯಬಹುದು.

ಮನುಷ್ಯನ ಕೈ

ನೀವು ಮೊದಲು ಮನುಷ್ಯನ ಕೈಯನ್ನು ನೋಡಿದರೆ ನೀವು ತಕ್ಷಣಕ್ಕೆ ನಿರ್ಧಾರ ತೆಗೆದುಕೊಳ್ಳುವವರು. ನೀವು ತ್ವರಿತ ಆಲೋಚನೆ ಮಾಡುವವರು ಎಂದರ್ಥ. ನೀವು ಒತ್ತಡದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತೀರಿ ಮತ್ತು ಜೀವನದ ಸವಾಲುಗಳನ್ನು ಸುಲಭವಾಗಿ ನ್ಯಾವಿಗೇಟ್ ಮಾಡುತ್ತೀರಿ. ಆದರೆ ಆಯ್ಕೆಗಳನ್ನು ನೀಡಿದಾಗ, ನಿರ್ಧಾರ ತೆಗೆದುಕೊಳ್ಳುವುದು ನಿಮಗೆ ಸ್ವಲ್ಪ ಕಷ್ಟಕರವೆಂದು ತೋರುತ್ತದೆ. ನೀವು ನಿರ್ಣಯಿಸದ ವ್ಯಕ್ತಿಯಾಗಿ ಕಾಣುತ್ತೀರಿ.

(ಗಮನಿಸಿ: ಈ ಲೇಖನವು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ದೊರೆತ ಮಾಹಿತಿಯನ್ನು ಆಧರಿಸಿದ ಬರಹ. ಈ ಅಂಶಗಳನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪುಷ್ಟೀಕರಿಸುವುದಿಲ್ಲ. ಈ ಕುರಿತ ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

ಈ ಪರ್ಸನಾಲಿಟಿ ಟೆಸ್ಟ್ ಅನ್ನೂ ಓದಿ 

Personality Test: ಮಲಗುವ ಭಂಗಿಯಿಂದ ತಿಳಿಯಬಹುದು ವ್ಯಕ್ತಿತ್ವ; ನೀವು ಯಾವ ರೀತಿ ಮಲಗೋದು, ನಿಮ್ಮ ಸುಪ್ತ ಸ್ವಭಾವ ಹೇಗಿರುತ್ತೆ ನೋಡಿ

ನಮ್ಮ ದೇಹದ ಅಂಗಾಂಗಗಳು ಹೇಗಿವೆ ಎಂಬುದರ ಮೇಲೆ ವ್ಯಕ್ತಿತ್ವ ನಿರ್ಧಾರವಾಗುತ್ತದೆ ಎಂಬುದನ್ನು ನೀವು ಕೇಳಿರಬಹುದು. ಅಂತೆಯೇ ನಾವು ನಡೆದಾಡುವ ರೀತಿ, ಕುಳಿತುಕೊಳ್ಳುವ ರೀತಿ, ಮಲಗುವ ರೀತಿಯಿಂದಲೂ ವ್ಯಕ್ತಿತ್ವ ಸ್ವಭಾವ ತಿಳಿಯಬಹುದು. ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಾವು ಮಲಗುವ ರೀತಿಯ ಮೂಲಕ ನಮ್ಮ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ತಿಳಿಯೋಣ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ