ಸಿಹಿ ತಿನ್ನುವ ಆಸೆಗೆ ಕಡಿವಾಣ ಹಾಕಿರಲಿಲ್ಲ, ಆದ್ರೂ 20 ಕೆಜಿ ತೂಕ ಇಳಿಸಿಕೊಂಡ್ಲು ಆ ಯುವತಿ; ಹೀಗಿತ್ತು ಆಕೆ ತೂಕ ಕಡಿಮೆ ಮಾಡಿಕೊಂಡ ರೀತಿ
Nov 14, 2024 11:40 AM IST
ತೂಕ ಇಳಿಕೆ ಸಲಹೆ
- ತೂಕ ಇಳಿಕೆಯ ವಿಚಾರಕ್ಕೆ ಬಂದಾಗ ಶೇ 80 ರಷ್ಟು ಜನ ತಿನ್ನುವುದನ್ನು ಕಡಿಮೆ ಮಾಡುತ್ತಾರೆ. ತಮ್ಮಿಷ್ಟದ ತಿಂಡಿಗಳನ್ನು ತಿನ್ನದೇ ಬಾಯಿ ಕಟ್ಟಿಕೊಂಡು ಡಯೆಟ್ ಫಾಲೋ ಮಾಡುತ್ತಾರೆ. ಆದರೆ ಇಲ್ಲೊಬ್ಬರು ಯುವತಿ ತಮ್ಮ ಸಿಹಿ ತಿನ್ನುವ ಬಯಕೆಯನ್ನು 4 ವಸ್ತುಗಳೊಂದಿಗೆ ಬದಲಿಸಿಕೊಂಡು 20 ಕೆಜಿ ತೂಕ ಕಡಿಮೆ ಮಾಡಿಕೊಳ್ಳುತ್ತಾರೆ. ಹೀಗಿತ್ತು ಅವರ ತೂಕ ಇಳಿಕೆಯ ಪಯಣ.
ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆಯ ಸ್ಟೋರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಹಲವರಿಗೆ ತೂಕ ಇಳಿಸಿಕೊಳ್ಳುವುದು ಕನಸಾಗಿದೆ. ಆ ಕಾರಣಕ್ಕೆ ತೂಕ ಇಳಿಸಿಕೊಂಡವರ ಕಥೆಗಳನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳುತ್ತಾರೆ. ತೂಕ ಇಳಿಸಿಕೊಳ್ಳುವ ವಿಚಾರಕ್ಕೆ ಬಂದಾಗ ಒಬ್ಬೊಬ್ಬರು ಒಂದೊಂದು ಕ್ರಮ ಅನುಸರಿಸುತ್ತಾರೆ. ಇಲ್ಲೊಬ್ಬರು ಯುವತಿ ತಮ್ಮ ಸಿಹಿ ತಿನ್ನುವ ಆಸೆಯನ್ನು ನಿಯಂತ್ರಿಸದೇ 20 ಕೆಜಿ ತೂಕ ಇಳಿಸಿಕೊಳ್ಳುತ್ತಾರೆ.
ನವೀನ ಮುಹಿಲನ್ ಎನ್ನುವವರು ಎನ್ನವ ಈ ಯುವತಿ ತಮ್ಮ ತೂಕ ಇಳಿಕೆಯ ಜರ್ನಿ ಹೇಗಿತ್ತು ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆನ್‌ಲೈನ್ ಫಿಟ್‌ನೆಸ್ ಕೋಚ್ ಆಗಿರುವ ಇವರು ತಮ್ಮದೇ ಸ್ಫೂರ್ತಿದಾಯಕ ತೂಕ ಇಳಿಕೆಯ ಪಯಣದ ಬಗ್ಗೆ ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಅವರ ಕಥೆಯು ಬಹಳಷ್ಟು ಮಂದಿಗೆ ಪ್ರೇರಣೆಯಾಗುವಂತಿದೆ.
ಕೋವಿಡ್ ಲಾಕ್‌ಡೌನ್ ಸಮಯದಿಂದ ನವೀನಾ ಅವರ ವೈಟ್‌ಲಾಸ್ ಪಯಣ ಆರಂಭವಾಗುತ್ತದೆ. ಮನೆಯಲ್ಲೇ ಡಂಬಲ್ಸ್ ಹಿಡಿದು ವರ್ಕೌಟ್ ಮಾಡುವುದರಿಂದ ಅವರು ತಮ್ಮ ತೂಕ ಇಳಿಕೆಯ ಪಯಣವನ್ನು ಆರಂಭಿಸುತ್ತಾರೆ. ಸದ್ಯ ಅವರು 20 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ.
ತೂಕ ಇಳಿಕೆಯ ಸಮಯದಲ್ಲಿ ಆಹಾರದ ಕಡುಬಯಕೆ ನಿಯಂತ್ರಿಸುವುದು ಸಮರ್ಪಣೆ ಮತ್ತು ಸ್ಥಿರತೆ ತೂಕ ನಷ್ಟಕ್ಕೆ ಬಹಳ ಮುಖ್ಯವಾದ ಅಂಶವಾಗಿದೆ. ಆದರೆ ಕೆಲವೊಮ್ಮೆ ಆಹಾರದ ಕಡುಬಯಕೆಗಳು ನಮ್ಮನ್ನು ನಿಯಂತ್ರಿಸುತ್ತವೆ. ಆದರೆ ಇದನ್ನು ಆರೋಗ್ಯಕರ ರೀತಿಯಲ್ಲಿ ನಿಭಾಯಿಸಬಹುದು ಎಂಬುದನ್ನು ನವೀನಾ ಅವರು ಹೇಳಿಕೊಂಡಿದ್ದಾರೆ. ಆಕೆಯ ಪ್ರಕಾರ ತಿನ್ನುವ ವಿಚಾರದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಅತಿ ಅಗತ್ಯ.
ಆಹಾರದ ಕಡುಬಯಕೆ ನಿಯಂತ್ರಿಸದೇ ತೂಕ ಇಳಿಸಿಕೊಂಡಿದ್ದು ಹೀಗೆ
‘ಸಾಮಾನ್ಯವಾಗಿ ಆಹಾರ ಹಾಗೂ ಸಿಹಿ ತಿನಿಸುಗಳ ಕಡುಬಯಕೆ ಎಲ್ಲರಿಗೂ ಇರುತ್ತದೆ. ಅದನ್ನು ನಿಯಂತ್ರಿಸುವುದು ಸುಲಭವಲ್ಲ, ಹಾಗಂತ ಅಧಿಕ ಕ್ಯಾಲೊರಿ ಸೇವನೆಯಿಂದ ತೂಕ ಹೆಚ್ಚುತ್ತೆ. ಅದರ ಬದಲು ಆರೋಗ್ಯ ಹಾಗೂ ತೂಕ ಇಳಿಕೆಗೆ ಸೂಕ್ತವಾಗಿರುವ ಪದಾರ್ಥಗಳನ್ನು ಸೇವಿಸುವ ಮೂಲಕ ಕಡುಬಯಕೆಯನ್ನು ನಿಯಂತ್ರಿಸಬಹುದು ಎಂದು ಆಕೆ ಹೇಳುತ್ತಾರೆ. ಹಾಗಾದರೆ ಸಿಹಿ ತಿನ್ನುವ ಕಡುಬಯಕೆ ಇರುವವರು ಏನೆಲ್ಲಾ ತಿನ್ನಬಹುದು ಎಂದು ಆಕೆ ಹೇಳಿದ್ದಾರೆ ನೋಡಿ.
ನವೀನಾ ಅವರ ಪ್ರಕಾರ ಡಾರ್ಕ್ ಚಾಕೊಲೇಟ್, ಕರ್ಜೂರ, ಹಣ್ಣು ಹಾಗೂ ಕಡಿಮೆ ಕ್ಯಾಲೊರಿ ಅಂಶ ಇವರು ಚಾಕೊಲೇಟ್‌ಗಳನ್ನು ತಿನ್ನಬಹುದು. ಫಿಟ್‌ನೆಸ್ ಗೈಡ್ ಆಗಿರುವ ನವೀನಾ ಅವರು ತಮ್ಮ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಬೆಲ್ಲಿ ಫ್ಯಾಟ್ ಕರಗಿಸುವುದು, ತೋಳು, ತೊಡೆ ಸೇರಿದಂತೆ ದೇಹದ ಇತರ ಭಾಗಗಳಲ್ಲಿ ಇರುವ ಕೊಬ್ಬು ಕರಗಿಸುವ ವ್ಯಾಯಾಮಗಳ ಬಗ್ಗೆ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.
ಜಿಮ್ ಹಾಗೂ ಸಮತೋಲಿತ ಆಹಾರಕ್ರಮವು ನವೀನಾ ಅವರ ತೂಕ ಇಳಿಕೆಯ ಪಯಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.
ತೂಕ ಇಳಿಕೆ ಎನ್ನುವುದು ವ್ಯಕ್ತಿಗಳ ದೇಹಸ್ಥಿತಿಗೆ ಅನುಗುಣವಾಗಿದೆ. ಎಲ್ಲರಿಗೂ ಒಂದೇ ವಿಧಾನ ಅನುಕರಣೆಯ ಮೂಲಕ ತೂಕ ಇಳಿಯುತ್ತದೆ ಎಂಬುದೇನು ಇಲ್ಲ. ಒಟ್ಟಾರೆ ತೂಕ ಇಳಿಕೆಗೆ ಸಮತೋಲಿತ ಆಹಾರ ಸೇವನೆ ಹಾಗೂ ದೈಹಿಕ ಚಟುವಟಿಕೆ ಬಹಳ ಮುಖ್ಯ.