ತೂಕ ಹೆಚ್ಚಲು ಆಹಾರ, ಸಕ್ಕರೆ ಖಂಡಿತ ಕಾರಣವಲ್ಲ; ತೂಕ ಇಳಿಕೆಗೆ ಖ್ಯಾತ ಯೂಟ್ಯೂಬರ್ ಆಶಿಷ್ ಚಂಚಲಾನಿ ನೀಡಿದ ಟಿಪ್ಸ್ ಇಲ್ಲಿದೆ
ಖ್ಯಾತ ಯೂಟ್ಯೂಬರ್ ಆಶಿಷ್ ಚಂಚಲಾನಿ ತಮ್ಮ ವೈಟ್‌ಲಾಸ್ ಪಯಣದ ಬಗ್ಗೆ ಮಾತನಾಡಿದ್ದಾರೆ. ತೂಕ ಏರಿಕೆಯ ವಿಚಾರದಲ್ಲಿ ಆಹಾರ ಮಾತ್ರ ದೊಡ್ಡ ಸಮಸ್ಯೆ ಅಲ್ಲ ಎಂದಿರುವ ಅವರು ತಮ್ಮ ಫೋಟೊಗಳನ್ನು ನೋಡಿ ತಾವೇ ಅತ್ತಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗಾದರೆ ಅವರ ವೈಟ್‌ಲಾಸ್ ಪಯಣ ಹೇಗಿತ್ತು ನೋಡೋಣ.
ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆ ಎನ್ನುವುದು ಚರ್ಚೆಯ ವಿಷಯವಾಗಿದೆ. ಸಾಮಾಜಿಕ ಮಾಧ್ಯಮಗಳು, ಮಾಧ್ಯಮಗಳಲ್ಲಿ ಯಶಸ್ವಿಯಾಗಿ ತೂಕ ಇಳಿಸಿಕೊಂಡವರ ಕಥೆಗಳನ್ನು ನೀವೂ ಓದುತ್ತಿರಬಹುದು. ಇದೀಗ ಈ ರೀತಿ ತೂಕ ಇಳಿಸಿಕೊಂಡವರ ಸಾಲಿಗೆ ಖ್ಯಾತ ಯೂಟ್ಯೂಬರ್ ಆಶಿಷ್ ಚಂಚಲಾನಿ ಕೂಡ ಸೇರಿದ್ದಾರೆ. ಅವರ ವೈಟ್‌ಲಾಸ್ ಜರ್ನಿಯ ಈಗ ಎಲ್ಲೆಲ್ಲೂ ಸುದ್ದಿಯಾಗುತ್ತಿದೆ.
ಇತ್ತೀಚಿನ ಪಾಡ್‌ಕಾಸ್ಟ್‌ವೊಂದರಲ್ಲಿ ಆಶಿಷ್ ತಮ್ಮ ತೂಕ ಇಳಿಕೆಯ ಪಯಣದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ತೂಕ ಇಳಿಸಲು ಅವರಿಗೆ ಸ್ಫೂರ್ತಿಯಾಗಿದ್ದೇನು, ಅವರ ಫಿಟ್‌ನೆಸ್ ಪಯಣ ಹೇಗಿತ್ತು ಎನ್ನುವ ಬಗ್ಗೆ ಅವರ ಮುಕ್ತವಾಗಿ ಮಾತನಾಡಿದ್ದಾರೆ.
ತಮ್ಮ ಹಿಂದಿನ ಜೀವನದ ಬಗ್ಗೆ ನೆನಪಿಸಿಕೊಂಡ ಆಶಿಷ್ ತಾವು ಅನಾರೋಗ್ಯಕರ ಆಹಾರಕ್ರಮ ಹಾಗೂ ದಿನಚರಿಯನ್ನು ಪಾಲಿಸುತ್ತಿದಿದ್ದಾಗಿ ಹೇಳಿದ್ದಾರೆ. ಅವರು ಬೆಳಗಿನ ಉಪಾಹಾರದ ಸಮಯದಲ್ಲಿ ಚಿಪ್ಸ್ ಹಾಗೂ ಆಲ್ಕೋಹಾಲ್ ಸೇವಿಸುತ್ತಿದ್ದರು. ಅವರೊಮ್ಮೆ ರಕ್ತಪರೀಕ್ಷೆ ಮಾಡಿಸುತ್ತಾರೆ. ಆಗ ಅವರಿಗೆ ಪ್ರಿ ಡಯಾಬಿಟಿಕ್ ಹಾಗೂ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿರುವುದು ಗಮನಕ್ಕೆ ಬರುತ್ತದೆ. ಒಂದು ರಾತ್ರಿ ಅವರು ಎದ್ದು ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳುತ್ತಾರೆ. ಆಗ ಅವರು ಕುಸಿದು ಬೀಳುತ್ತಾರೆ.
ಅತಿಯಾಗಿ ತಿನ್ನೋದೇ ಅತಿ ದೊಡ್ಡ ಸಮಸ್ಯೆ
ಪ್ರಸಿದ್ಧ ನಟರು ಹಾಗೂ ಸ್ಟಾರ್‌ಗಳು ತಮ್ಮ ದೇಹ ಫಿಟ್ ಆಗಿರಲು ವರ್ಷಾನುಗಟ್ಟಲೆ ತಮ್ಮ ನೆಚ್ಚಿನ ಆಹಾರಗಳನ್ನು ತಿನ್ನದೇ ಇರುವುದರ ಬಗ್ಗೆ ಹೇಳುವುದನ್ನು ಆಶಿಷ್ ಇಲ್ಲಿ ನೆನೆಯುತ್ತಾರೆ. ಅವರೇ ಹೇಳುವಂತೆ ಸಮತೋಲನ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಅವರ ಪ್ರಕಾರ ತೂಕ ಏರಿಕೆಯ ವಿಚಾರಕ್ಕೆ ಬಂದಾಗ ಆಹಾರ ಹಾಗೂ ಸಕ್ಕರೆಯಂಶ ಇರುವ ತಿನಿಸುಗಳ ಖಂಡಿತ ಸಮಸ್ಯೆಯಲ್ಲ, ಆದರೆ ಸಮಸ್ಯೆ ಎಂದರೆ ಅತಿಯಾಗಿ ತಿನ್ನುವುದು ಎಂದಿದ್ದಾರೆ.
ಈ ಪಾಡ್‌ಕಾಸ್ಟ್‌ನಲ್ಲಿ ಅವರು ತಮ್ಮ ವೈಟ್‌ಲಾಸ್ ಪಯಣದ ಬಗ್ಗೆ ಕೂಡ ಮಾತನಾಡಿದ್ದಾರೆ. ಬಾಡಿ ಶೇಮಿಂಗ್ ಅಥವಾ ಫ್ಯಾಟ್ ಶೇಮಿಂಗ್ ಎನ್ನುವುದು ಅವರು ಬದಲಾಗಲು ಹೇಗೆ ಕಾರಣವಾಯ್ತು ಎಂಬುದನ್ನೂ ಇವರು ಇಲ್ಲಿ ವಿವರಿಸಿದ್ದಾರೆ.
ಆಶಿಷ್ ತೂಕ ಇಳಿಸಲು ಸ್ಫೂರ್ತಿ ಇವರು
ಆಶಿಷ್‌ಗೆ ತೂಕ ಇಳಿಸಿಕೊಳ್ಳಲು ಸ್ಪೂರ್ತಿಯಾದವರು ಬೇರೆ ಯಾರೂ ಅಲ್ಲ, ಬಾಲಿವುಡ್ ಕಿಂಗ್‌ಖಾನ್ ಶಾರುಖ್. ಕಳೆದ ವರ್ಷ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಶಾರುಖ್ ಇವರ ತೂಕ ಇಳಿಕೆಯ ಪಯಣಕ್ಕೆ ಹೇಗೆ ಸ್ಫೂರ್ತಿಯಾದರು ಎಂಬುದನ್ನು ಬರೆದುಕೊಂಡಿದ್ದಾರೆ. ಪಾರ್ಟಿಯೊಂದರಲ್ಲಿ ಆಶಿಷ್ ಶಾರುಖ್ ಅವರನ್ನು ಭೇಟಿಯಾಗುತ್ತಾರೆ ಮತ್ತು ಅಲ್ಲಿ ಕಿಂಗ್ ಖಾನ್ ಆರೋಗ್ಯಕರ ಜೀವನಶೈಲಿಯ ಮೂಲಕ ಹೇಗೆ ತೂಕ ಇಳಿಸಿಕೊಳ್ಳಬಹುದು ಎಂಬ ಬಗ್ಗೆ ಆಶಿಷ್‌ಗೆ ಟಿಪ್ಸ್ ನೀಡುತ್ತಾರೆ. ‘ಪಾರ್ಟಿಯಲ್ಲಿ ನಾನು ಅವರ ಬಳಿಗೆ ಹೋದ ತಕ್ಷಣ ಅವರು ನನ್ನ ಹೊಟ್ಟೆಯನ್ನು ಹಿಡಿದು ಅಶಿಷ್ ನೀನು ಮೊದಲು ನಿನ್ನ ತೂಕ ಕಡಿಮೆ ಮಾಡಿಕೊ, ಆಗ ನೀನು ಹ್ಯಾಡ್‌ಸಮ್ ಆಗಿ ಕಾಣುಸುತ್ತೀಯಾ. ಇಂದೇ ಜಿಮ್‌ಗೆ ಸೇರಿ ಒಂದಿಷ್ಟು ಕೆಜಿ ತೂಕ ಕಡಿಮೆ ಮಾಡ್ಕೋ. ನೀನು ಸುಂದರವಾಗಿದ್ದೀಯಾ, ಆದರೆ ಉತ್ತಮ ಆರೋಗ್ಯ, ಜೀವನಕ್ಕಾಗಿ ಇನ್ನಷ್ಟು ಫಿಟ್ ಆಗಿರುವುದು ಮುಖ್ಯ. ಆಗ ನಿನ್ನ ಜೀವನ ಬದಲಾಗದೇ ಇದ್ದರೆ ನಾನು ಅಡ್ವೈಸ್ ಮಾಡುವುದನ್ನೇ ನಿಲ್ಲಿಸುತ್ತೇನೆ‘ ಎಂದಿದ್ದರು ಎಂದು ಶಾರುಖ್ ಖಾನ್ ಹೇಳಿರುವುದು ಬರೆದುಕೊಂಡಿದ್ದರು.
ಶಾರುಖ್ ಖಾನ್ ಹೇಳಿರುವುದರ ಬಗ್ಗೆ ಆಶಿಷ್ ಕೋಪ, ಬೇಸರ ಮಾಡಿಕೊಳ್ಳಲಿಲ್ಲ. ಬದಲಾಗಿ ಅದನ್ನೇ ಸ್ಫೂರ್ತಿಯನ್ನಾಗಿಸಿಕೊಂಡರು. ‘ಅವರ ಮಾತುಗಳನ್ನು ಎಂದಿಗೂ ಮರೆಯುವುದಿಲ್ಲ, ಅವರು ನನ್ನನ್ನು ನಾಚಿಕೆಪಡಿಸದೆ ಸಲಹೆ ನೀಡಿದ ರೀತಿಯೇ ನಾನು ಈ ವ್ಯಕ್ತಿಯನ್ನು ಪ್ರೀತಿಸಲು ಕಾರಣ‘ ಎಂದು ಆಶಿಷ್ ತುಂಬು ಮನಸ್ಸಿನಿಂದ ಹೇಳಿಕೊಂಡಿದ್ದಾರೆ.
ಆಶಿಷ್ ಪ್ರಕಾರ ಫಿಟ್‌ನೆಸ್ ಎಂದರೆ
ತೂಕ ನಷ್ಟವು ಆರೋಗ್ಯಕರ ಆಹಾರ, ಫಿಟ್‌ನೆಸ್ ದಿನಚರಿ ಮತ್ತು ಉತ್ತಮ ಜೀವನಶೈಲಿಯನ್ನು ಒಳಗೊಂಡಿರುವ ಪ್ರಯಾಣವಾಗಿದೆ. ಆರೋಗ್ಯಕರ ದಿನಚರಿಯನ್ನು ಅನುಸರಿಸಿದ ನಂತರ, ತೀವ್ರವಾದ ತೂಕ ನಷ್ಟವನ್ನು ಹೊಂದಿರುವ ಪ್ರಭಾವಿಗಳಿಂದ ಕೆಲವು ಫಿಟ್ನೆಸ್ ಸಲಹೆಗಳನ್ನು ಪಡೆದು ಅದನ್ನು ಅನುಸರಿಸಿ ಎಂದು ಆಶಿಷ್ ಚಂಚಲಾನಿ ಸಲಹೆ ನೀಡುತ್ತಾರೆ.