logo
ಕನ್ನಡ ಸುದ್ದಿ  /  ಜೀವನಶೈಲಿ  /  ಡೋನಟ್ಸ್ ಸೇರಿ ತನ್ನಿಷ್ಟದ ತಿಂಡಿ ತಿಂದೂ 29 ಕೆಜಿ ತೂಕ ಇಳಿಸಿಕೊಂಡ ಮಹಿಳೆ; ತೂಕ ಕಡಿಮೆಯಾಗಲು ಆಕೆ ನೀಡಿದ ಸಿಂಪಲ್ ಟಿಪ್ಸ್ ಹೀಗಿದೆ

ಡೋನಟ್ಸ್ ಸೇರಿ ತನ್ನಿಷ್ಟದ ತಿಂಡಿ ತಿಂದೂ 29 ಕೆಜಿ ತೂಕ ಇಳಿಸಿಕೊಂಡ ಮಹಿಳೆ; ತೂಕ ಕಡಿಮೆಯಾಗಲು ಆಕೆ ನೀಡಿದ ಸಿಂಪಲ್ ಟಿಪ್ಸ್ ಹೀಗಿದೆ

Reshma HT Kannada

Nov 15, 2024 09:58 AM IST

google News

ಡೋನಟ್ಸ್ ಸೇರಿ ತನ್ನಿಷ್ಟದ ತಿಂಡಿ ತಿಂದು 29 ಕೆಜಿ ತೂಕ ಇಳಿಸಿಕೊಂಡ ಮಹಿಳೆ

    • ಇತ್ತೀಚಿನ ಜೀವನಶೈಲಿಯು ತೂಕ ಹೆಚ್ಚಲು ಕಾರಣವಾಗಿದೆ. ಇದರಿಂದ ನಮ್ಮಿಷ್ಟದ ತಿಂಡಿ ತಿನ್ನಲು ಯೋಚಿಸಬೇಕಾಗಿದೆ. ಆದರೆ ಇಲ್ಲೊಬ್ಬರು ಫಿಟ್ನೆಸ್‌ ಕೋಚ್ ಡೋನಟ್‌ ಸೇರಿದಂತೆ ಇತರ ತಿನಿಸುಗಳನ್ನು ತಿಂದು ಕೂಡ 29 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ತೂಕ ಇಳಿಕೆಯ ವಿಚಾರಕ್ಕೆ ಬಂದಾಗ ಕ್ಯಾಲೊರಿ ಕಡಿಮೆ ಇರುವ ಆಹಾರ ಸೇವಿಸುವುದು ಎಷ್ಟು ಮುಖ್ಯ ಎಂದು ಆಕೆ ಹೇಳಿಕೊಂಡಿದ್ದಾರೆ.
ಡೋನಟ್ಸ್ ಸೇರಿ ತನ್ನಿಷ್ಟದ ತಿಂಡಿ ತಿಂದು 29 ಕೆಜಿ ತೂಕ ಇಳಿಸಿಕೊಂಡ ಮಹಿಳೆ
ಡೋನಟ್ಸ್ ಸೇರಿ ತನ್ನಿಷ್ಟದ ತಿಂಡಿ ತಿಂದು 29 ಕೆಜಿ ತೂಕ ಇಳಿಸಿಕೊಂಡ ಮಹಿಳೆ (PC: Instagram )

ತೂಕ ಇಳಿಕೆ ಎನ್ನುವುದು ನಿಜಕ್ಕೂ ಸವಾಲಾಗಿದೆ. ಕೆಲವೊಮ್ಮೆ ತೂಕ ಕಡಿಮೆ ಮಾಡಿಕೊಳ್ಳಲು ಇಲ್ಲದ ಸಾಹಸಕ್ಕೆ ಕೈ ಹಾಕಿದರೂ ಒಂದೆರಡು ಕೆಜಿ ಕೂಡ ಕಡಿಮೆಯಾಗುವುದಿಲ್ಲ. ತೂಕ ಇಳಿಕೆ ಎಂದು ಬಂದಾಗ ಮೊದಲು ಸವಾಲು ಎನ್ನಿಸುವುದು ನಮ್ಮಿಷ್ಟದ ಆಹಾರಕ್ಕೆ ಕಡಿವಾಣ ಹಾಕಬೇಕು ಎನ್ನುವುದು.‍ ಸಮೋಸಾಯಿಂದ ಕೇಕ್‌ವರೆಗೆ, ಬಜ್ಜಿಯಿಂದ ಡೋನಟ್‌ವರೆಗೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ತಿನಿಸು ತುಂಬಾನೇ ಇಷ್ಟ ಇರುತ್ತೆ. ಅದನ್ನು ತಿನ್ನದೇ ಇರುವುದು ಅವರಿಗೆ ಕಷ್ಟವಾಗಬಹುದು.

ತೂಕ ಇಳಿಕೆಯ ವಿಚಾರಕ್ಕೆ ಬಂದಾಗ ಜಂಕ್‌ಫುಡ್‌ಗಳ ಸೇವನೆಗೆ ಕಡಿವಾಣ ಹಾಕಲೇಬೇಕಾಗುತ್ತದೆ. ನಮಗೆ ಎಷ್ಟೇ ಇಷ್ಟ ಇದ್ದರೂ ಕೆಲವು ಆಹಾರಗಳನ್ನ ನಿರ್ಬಂಧಿಸಬೇಕಾಗುತ್ತದೆ. ಆದರೆ ಇಲ್ಲೊಬ್ಬರು ಫಿಟ್‌ನೆಸ್ ಕೋಚ್‌ ತನ್ನಿಷ್ಟದ ಡೋನಟ್‌ಗಳನ್ನು ತಿಂದು ಕೂಡ 29 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಡೋನಟ್‌ ಮಾತ್ರ ಆಕೆ ತನ್ನಿಷ್ಟದ ತಿನಿಸುಗಳನ್ನೆಲ್ಲಾ ತಿನ್ನುತ್ತಿದ್ದರಂತೆ. ಹಾಗಾದರೆ ಆಕೆ 29 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ ನೋಡಿ.

ಕೋಲ್ಸ್ ನೀಡಿದ ವೈಟ್‌ಲಾಸ್ ಟಿಪ್ಸ್ 

ಫಿಟ್‌ನೆಸ್ ಕೋಚ್ ಆಗಿರುವ ಕೋಲ್ಸ್ ಅವರು ತಮ್ಮ ವೈಟ್‌ಲಾಸ್ ಸ್ಟೋರಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅವರ ವೈಟ್‌ಲಾಸ್ ಜರ್ನಿಯ ರೀಲ್ಸ್ ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇವರು ತಮ್ಮ ರೀಲ್ಸ್‌ನಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ನಾವು ನಮ್ಮಿಷ್ಟದ ತಿಂಡಿಗಳನ್ನು ತಿನ್ನುವುದನ್ನು ಬಿಡಬೇಕು ಅಂತಿಲ್ಲ ಎಂದಿದ್ದಾರೆ. ಈ ರೀಲ್ಸ್‌ನಲ್ಲಿ ಆಕೆ ‘ತೂಕ ಇಳಿಸುವ ನಾನು ನನ್ನ ಇಷ್ಟದ ತಿಂಡಿಗಳನ್ನು ತಿನ್ನಲು ಸಾಧ್ಯವಿಲ್ಲ ಎಂದು ನಿಮಗೆ ನೀವೇ ಹೇಳಿಕೊಂಡರೆ ತೂಕ ಇಳಿಕೆಯ ಪಯಣದಲ್ಲಿ ನೀವು ಎಂದಿಗೂ ಯಶಸ್ಸು ಗಳಿಸಲು ಸಾಧ್ಯವಿಲ್ಲ‘ ಎಂದು ಅವರು ಹೇಳಿಕೊಂಡಿದ್ದಾರೆ.

‘ನೀವು ನನ್ನಂತೆ ಸಾಮಾನ್ಯರಾಗಿದ್ದು, ನೀವು ತೂಕ ಇಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರೆ ಕಿಟೊ ಡಯೆಟ್ ನಿಮಗೆ ಪರಿಹಾರವಲ್ಲ. ಇತರ ಯಾವುದೇ ಡಯೆಟ್‌ಗಳು ನಿಮಗೆ ಪರಿಹಾರವಲ್ಲ, ಯಾಕೆಂದರೆ ಈ ಎಲ್ಲವೂ ನಿಮಗೆ ತಿನ್ನುವುದಕ್ಕೆ ನಿರ್ಬಂಧ ಹೇರುವ ವಿಧಾನಗಳಾಗಿವೆ. ಯಾಕೆಂದರೆ ಯಾವುದೇ ಡಯೆಟ್ ವಿಧಾನಕ್ಕೆ ಹೋದರೂ ನೀವು ನಿಮ್ಮಷ್ಟದ ಆಹಾರಗಳನ್ನು ತಿನ್ನುವುದನ್ನು ಬಿಡಬೇಕಾಗುತ್ತದೆ. ಇಷ್ಟದ ಆಹಾರಗಳನ್ನು ತಿನ್ನುತ್ತಲೇ ತೂಕ ಇಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಕೋಲ್ಸ್‌ಗೆ ಹಳೆಯ ಶೈಲಿ ಡೋನಟ್ಸ್ ಎಂದರೆ ಬಹಳ ಪ್ರೀತಿ ಇತ್ತು. ಆದರೆ ಆಕೆ ಕಾರ್ನಿವೋರ್ ಡಯೆಟ್ ಕ್ರಮವನ್ನು ಪಾಲಿಸಲು ಆರಂಭಿಸಿದರು. ಇದರಿಂದ ಆಕೆ ಡೋನಟ್ಸ್ ತಿನ್ನುವ ಅವಕಾಶವನ್ನ ಕಳೆದುಕೊಂಡರು. ಇದರಿಂದ ಆಕೆಗೆ ತನ್ನಿಷ್ಟದ ತಿನಿಸನ್ನು ತಿನ್ನಲು ಸಾಧ್ಯವಾಗಲಿಲ್ಲವಲ್ಲ ದೇವರೆ ಎಂಬ ಬೇಸರ ಶುರು ಆಯ್ತು. ಕೊನೆಗೆ ಆಕೆಗೆ ಅನ್ನಿಸಲು ಶುರುವಾಗಿತ್ತು. ನಾನು ನಿಜವಾಗಿಯೂ ಮಾಡಬೇಕಾಗಿರುವುದು ಕ್ಯಾಲೊರಿ ಕಡಿಮೆ ಮಾಡಿಕೊಳ್ಳುವುದು ಎಂದು ಆಕೆ ಕಂಡುಕೊಂಡರು.

ಕೊನೆಗೆ ಡೋನಟ್ ತಿಂದು ತೂಕ ಇಳಿಸಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ ಆಕೆ ವಾರಕ್ಕೊಮ್ಮೆ ಡೋನಟ್‌ ತಿನ್ನುವ ಮೂಲಕ 29 ಕೆಜಿ ತೂಕ ಇಳಿಸಿಕೊಂಡಿದ್ದಾಗಿ ಆಕೆ ಹೇಳಿಕೊಂಡಿದ್ದಾರೆ. ಅವರ ಪ್ರಕಾರ ನಮ್ಮ ಇಷ್ಟದ ತಿನಿಸುಗಳನ್ನು ತಿನ್ನುವುದನ್ನು ಬಿಡುವ ಬದಲು ಕ್ಯಾಲೊರಿ ಕಡಿಮೆ ಇರುವ ಆಹಾರಗಳ ಸೇವನೆಗೆ ಒತ್ತು ನೀಡಬೇಕು. ಕ್ಯಾಲೊರಿ ಕಡಿಮೆ ಇರುವ ಆಹಾರಗಳು ನಿಜಕ್ಕೂ ತೂಕ ಕಡಿಮೆ ಸಹಾಯ ಮಾಡುತ್ತವೆ ಎಂದು ಆಕೆ ಹೇಳಿಕೊಂಡಿದ್ದಾರೆ.

ಕ್ಯಾಲೊರಿ ಕಡಿಮೆ ಸೇವಿಸಿದ್ರೆ ಏನಾಗುತ್ತೆ 

ಕ್ಯಾಲೊರಿ ಕಡಿಮೆ ಇರುವ ಆಹಾರಗಳನ್ನು ಸೇವಿಸುವುದರಿಂದ ಪರಿಣಾಮಕಾರಿಯಾಗಿ ತೂಕ ಇಳಿಸಿಕೊಳ್ಳಲು ಸಾಧ್ಯ ಎಂದು ಹಲವು ಅಧ್ಯಯನಗಳು ಸಾಬೀತು ಪಡಿಸಿವೆ. ಕ್ಯಾಲೊರಿ ಕಡಿಮೆ ಇರುವ ಆಹಾರಗಳನ್ನು ಸೇವಿಸಿದಾಗ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಶಕ್ತಿಯ ರೂಪದಲ್ಲಿ ಬಳಸಿಕೊಳ್ಳಲಾಗುತ್ತದೆ. ಆಗ ಕೊಬ್ಬಿನಾಂಶ ಕಡಿಮೆಯಾಗಿ ದೇಹದಲ್ಲಿ ನಿಧಾನಕ್ಕೆ ತೂಕ ಇಳಿಯಲು ಸಾಧ್ಯವಾಗುತ್ತದೆ. ಆದರೆ ದೇಹದಲ್ಲಿ ಅತಿಯಾದ ಕ್ಯಾಲೊರಿ ಕೊರತೆಯು ಒಂದಿಷ್ಟು ಸಮಸ್ಯೆಗಳನ್ನು ಉಂಟು ಮಾಡಬಹುದು. ಕ್ಯಾಲೊರಿ ಕೊರತೆಯಿಂದ ಟೈಪ್ 2 ಡಯಾಬಿಟಿಸ್‌, ಕಿಡ್ನಿ ಸಮಸ್ಯೆ ರಕ್ತದೊತ್ತಡ ಹೆಚ್ಚು ಕಡಿಮೆಯಾಗುವುದು ಇಂತಹ ಸಮಸ್ಯೆಗಳು ಎದುರಾಗಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ