ಭಾರತೀಯ ರೈಲ್ವೆ ಉದ್ಯೋಗ ಯಾಕೆ ಉತ್ತಮ? ಈ 10 ಪ್ರಯೋಜನಗಳ ವಿವರ ತಿಳಿದ್ರೆ ನೀವೂ ರೈಲ್ವೆ ಜಾಬ್ ಕನಸು ಕಾಣುವಿರಿ
Nov 17, 2024 10:32 AM IST
ಭಾರತೀಯ ರೈಲ್ವೆ ಉದ್ಯೋಗ ಯಾಕೆ ಉತ್ತಮ?
- Why Indian Railway Job Best?: ಭಾರತೀಯ ರೈಲ್ವೆಯು ತನ್ನ ಉದ್ಯೋಗಿಗಳಿಗೆ ಮತ್ತು ಉದ್ಯೋಗಿಗಳ ಕುಟುಂಬಕ್ಕೆ ಅತ್ಯುತ್ತಮ ಸವಲತ್ತು ನೀಡುತ್ತವೆ. ಉತ್ತಮ ವೇತನ, ಮಕ್ಕಳ ಶಿಕ್ಷಣ, ವೈದ್ಯಕೀಯ ಸೇವೆಗಳ ಕಾರಣದಿಂದ ರೈಲ್ವೆ ಉದ್ಯೋಗವನ್ನು ಎಲ್ಲರೂ ಇಷ್ಟಪಡುತ್ತಾರೆ.
Why Indian Railway Job Best?: ಭಾರತೀಯ ರೈಲ್ವೆಯು ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿದರೆ ಲಕ್ಷಾಂತರ, ಕೋಟ್ಯಾಂತರ ಜನರು ಅರ್ಜಿ ಸಲ್ಲಿಸುತ್ತಾರೆ. ಕೇಂದ್ರ ಸರಕಾರದ ಈ ಉದ್ಯೋಗ ದೊರಕಿದರೆ ಜೀವನ ಸುಖಮಯವಾಗಿರಬಹುದು ಎನ್ನುವುದು ಬಹುತೇಕರ ನಂಬಿಕೆ. ಉನ್ನತ ಶಿಕ್ಷಣ ಪಡೆದವರೂ ಸಾಮಾನ್ಯ ಡಿ ದರ್ಜೆಯ ರೈಲ್ವೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಹಿಂಜರಿಯುವುದಿಲ್ಲ. ಭಾರತೀಯ ರೈಲ್ವೆಯು ಭಾರತದ ಬೃಹತ್ ಉದ್ಯೋಗದಾತ. ಜಗತ್ತಿನ ಅಗ್ರ 8ನೇ ಉದ್ಯೋಗದಾತ. ಭಾರತೀಯ ರೈಲ್ವೆಯಲ್ಲಿ 14 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ದುಡಿಯುತ್ತಿದ್ದಾರೆ. ಭಾರತೀಯ ರೈಲ್ವೆಯು ಭಾರತ ಸರಕಾರ ಮತತು ಭಾರತದ ಅರ್ಥವ್ಯವಸ್ಥೆಯ ಬೆನ್ನೆಲುಬು ಅಂದರೂ ತಪ್ಪಾಗದು. ಭಾರತೀಯ ರೈಲ್ವೆಯ ಗುಣಗಾನ ಎಷ್ಟು ಮಾಡಿದರೂ ಮುಗಿಯದು. ಈ ಲೇಖನದಲ್ಲಿ ಬಹುತೇಕರು ಯಾಕೆ ರೈಲ್ವೆ ಉದ್ಯೋಗ ಇಷ್ಟಪಡುತ್ತಾರೆ? ಭಾರತೀಯ ರೈಲ್ವೆಯು ಉದ್ಯೋಗಿಗಳಿಗೆ ನೀಡುವ ಸೌಕರ್ಯಗಳೇನು? ಇತ್ಯಾದಿ ವಿವರ ಪಡೆಯೋಣ.
1. ಆರ್ಥಿಕ ಬಿಕ್ಕಟ್ಟಿನ ಭಯವಿಲ್ಲ, ಜಾಬ್ ಕಟ್ ಇಲ್ಲ
ಖಾಸಗಿ ಉದ್ಯೋಗ ಪಡೆದರೆ ಉದ್ಯೋಗ ಅಭದ್ರತೆ ಸಾಮಾನ್ಯ. ಆದರೆ, ರೈಲ್ವೆ ಉದ್ಯೋಗವು ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ವೇತನ ಕಡಿತ, ಉದ್ಯೋಗ ಕಡಿತ ಇತ್ಯಾದಿಗಳನ್ನು ಮಾಡಿದ ಉದಾಹರಣೆ ಇಲ್ಲ.
2. ಉಚಿತ ರೈಲ್ವೆ ಪ್ರಯಾಣ
ರೈಲು ಉದ್ಯೋಗಿಯ ಹುದ್ದೆಗೆ ತಕ್ಕಂತೆ ರೈಲ್ವೆ ಉದ್ಯೋಗಿಗಳಿಗೆ ವಾರ್ಷಿಕ ಉಚಿತ ರೈಲ್ವೆ ಪ್ರಯಾಣ ಪಾಸ್ ದೊರಕುತ್ತದೆ.
3. ವಾಸಕ್ಕೆ ರೈಲ್ವೆ ಕ್ವಾಟರ್ಸ್
ಕಡಿಮೆ ದರಕ್ಕೆ, ಸಾಮಾನ್ಯ ಮೂಲಸೌಕರ್ಯ ಇರುವ ರೈಲ್ವೆ ಕ್ವಾರ್ಟರ್ಸ್‌ಗಳನ್ನು ಭಾರತೀಯ ರೈಲ್ವೆಯು ತನ್ನ ಉದ್ಯೋಗಿಗಳಿಗೆ ನೀಡುತ್ತದೆ.
4. ಸಬ್ಸಿಡಿ ಇರುವ ಆಹಾರ
ರೈಲ್ವೆ ಕ್ಯಾಂಟಿನ್‌ಗಳಲ್ಲಿ ಕಡಿಮೆ ದರಕ್ಕೆ ಬ್ರೇಕ್‌ಫಾಸ್ಟ್ ಮತ್ತು ಊಟವನ್ನು ರೈಲ್ವೆ ಉದ್ಯೋಗಿಗಳು ಪಡೆಯುತ್ತಾರೆ.
5. ವೈದ್ಯಕೀಯ ಸೌಕರ್ಯಗಳು
ರೈಲ್ವೆ ಉದ್ಯೋಗಿಗಳು ಮತ್ತು ಕುಟುಂಬಕ್ಕೆ ಉಚಿತ ವೈದ್ಯಕೀಯ ಸೌಕರ್ಯಗಳನ್ನು ಭಾರತೀಯ ರೈಲ್ವೆ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ.
6. ರೈಲ್ವೆ ಉದ್ಯೋಗಿಗಳ ಮಕ್ಕಳಿಗೆ ಶಿಕ್ಷಣ
ರೈಲ್ವೆ ಕಾಲೋನಿಗಳಲ್ಲಿ ವಾಸಿಸುವ ಉದ್ಯೋಗಿಗಳ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುತ್ತದೆ.
7. ಅನುಕಂಪ ಆಧರಿತ ಉದ್ಯೋಗಗಳು
ರೈಲ್ವೆ ಉದ್ಯೋಗಿಯು ಸೇವೆಯಲ್ಲಿದ್ದಾಗ ಮರಣ ಹೊಂದಿದರೆ ಅವರ ಕುಟುಂಬ ಸದಸ್ಯರಿಗೆ ಅವರ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಅನುಕಂಪದ ಆಧಾರದಲ್ಲಿ ಉದ್ಯೋಗ ದೊರಕುತ್ತದೆ.
8. ಅಧ್ಯಯನ ರಜೆ (ಸ್ಟಡಿ ಲೀವ್)
ರೈಲ್ವೆ ಉದ್ಯೋಗಿಯು ಉನ್ನತ ಶಿಕ್ಷಣ ಪಡೆಯಲು ಉದ್ದೇಶಿಸಿದರೆ ಭಾರತೀಯ ರೈಲ್ವೆಯು ಸ್ಟಡಿ ಲೀವ್ ನೀಡುತ್ತದೆ.
9. ಉದ್ಯೋಗ ಭದ್ರತೆ
ಸರಕಾರಿ ಉದ್ಯೋಗಗಳಲ್ಲಿ ಉದ್ಯೋಗ ಕಡಿತ ಮಾಡುವುದಿಲ್ಲ. ಹೀಗಾಗಿ ಉದ್ಯೋಗ ಭದ್ರತೆ ದೊರಕುತ್ತದೆ.
10. ಪೆನ್ಷನ್
ನಿವೃತ್ತಿ ನಂತರವೂ ರೈಲ್ವೆ ಉದ್ಯೋಗಿಗಳಿಗೆ ಭಯವಿಲ್ಲ. ಏಕೆಂದರೆ, ರೈಲ್ವೆಯ ಪೆನ್ಷನ್ ಕೂಡ ಉತ್ತಮವಾಗಿರುತ್ತದೆ. ಇದರೊಂದಿಗೆ ಭಾರತೀಯ ರೈಲ್ವೆಯ ವೇತನವೂ ಉತ್ತಮವಾಗಿರುತ್ತದೆ. ಇದೇ ಕಾರಣಕ್ಕೆ ರೈಲ್ವೆ ಉದ್ಯೋಗವನ್ನು ಎಲ್ಲರೂ ಇಷ್ಟಪಡುತ್ತಾರೆ.