ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಕಾರಿ ಪುದೀನಾ ರಸಂ; ಸಖತ್ ರುಚಿ ನೀಡುವ ಈ ರೆಸಿಪಿ ತಯಾರಿಸುವುದು ಹೀಗೆ
Dec 12, 2024 02:51 PM IST
ಪುದೀನಾ ರಸಂ ರೆಸಿಪಿ
ಪುದೀನಾದಿಂದ ಮಾಡಿದ ಆಹಾರಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪುದೀನಾ ವಿಶೇಷವಾಗಿ ಮಾಂಸಾಹಾರಿ ಖಾದ್ಯಗಳಿಗೆ ಬಹಳಷ್ಟು ಪರಿಮಳವನ್ನು ನೀಡುತ್ತದೆ. ನೀವು ಎಂದಾದರೂ ಪುದೀನಾ ರಸಂ ಅನ್ನು ಟ್ರೈ ಮಾಡಿದ್ದೀರಾ? ಇಲ್ಲವಾದಲ್ಲಿ ಈ ರೆಸಿಪಿಯನ್ನು ಪ್ರಯತ್ನಿಸಿ. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಈ ರೆಸಿಪಿ ಸಹಕಾರಿ. ಇಲ್ಲಿದೆ ಪಾಕವಿಧಾನ.
ಪುದೀನಾ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಪುದೀನಾ ವಿಶೇಷವಾಗಿ ಮಾಂಸಾಹಾರಿ ಖಾದ್ಯಗಳಿಗೆ ಬಹಳಷ್ಟು ಪರಿಮಳವನ್ನು ಸೇರಿಸುತ್ತದೆ. ಬಿರಿಯಾನಿಯಲ್ಲಿರುವ ಪುದೀನಾವು ಕಟುವಾದ ಪರಿಮಳವನ್ನು ನೀಡುತ್ತದೆ. ಪುದೀನಾ ಸೇವಿಸುವುದರಿಂದ ಮೆದುಳು ಕೂಡ ಉಲ್ಲಾಸಗೊಳ್ಳುತ್ತದೆ. ಚಳಿಗಾಲದಲ್ಲಿ ಈ ಪುದೀನಾ ಕರಿ ತಿನ್ನುವುದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಖಿನ್ನತೆ ಮತ್ತು ಒತ್ತಡದಿಂದ ಬಳಲುತ್ತಿರುವವರು ನಿಯಮಿತವಾಗಿ ಪುದೀನಾ ಕರಿಯನ್ನು ಸವಿಯುವುದರಿಂದ ಪ್ರಯೋಜನ ಪಡೆಯಬಹುದು. ಇಲ್ಲಿ ಪುದಿನಾ ರಸಂ ರೆಸಿಪಿಯನ್ನು ನೀಡಲಾಗಿದೆ. ಇದನ್ನು ಮಾಡುವುದು ತುಂಬಾನೇ ಸರಳ. ರೋಗನಿರೋಧಕ ಶಕ್ತಿ ಹೆಚ್ಚಲು ಕೂಡ ಇದು ಸಹಕಾರಿ. ಪುದಿನಾ ರಸಂ ಪಾಕವಿಧಾನವನ್ನು ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಪುದಿನಾ ರಸಂ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ತೊಗರಿ ಬೇಳೆ- ಅರ್ಧ ಕಪ್, ಪುದೀನಾ ಎಲೆಗಳು- ಅರ್ಧ ಕಪ್, ಅರಿಶಿನ- ಕಾಲು ಟೀ ಚಮಚ, ನೀರು- ಬೇಕಾದಷ್ಟು, ಕಡಲೆಬೇಳೆ- ಒಂದು ಟೀ ಚಮಚ, ಹುಣಸೆಹಣ್ಣು- ನಿಂಬೆಹಣ್ಣಿನ ಗಾತ್ರ, ತುಪ್ಪ- ಎರಡು ಟೀ ಚಮಚ, ಸಾಸಿವೆ- ಒಂದು ಟೀ ಚಮಚ, ಜೀರಿಗೆ- ಎರಡು ಟೀ ಚಮಚ, ಇಂಗು- ಒಂದು ಚಿಟಿಕೆ, ಒಣಮೆಣಸು- ಆರು, ಕೊತ್ತಂಬರಿ ಬೀಜ- ಒಂದು ಟೀ ಚಮಚ, ಕಾಳುಮೆಣಸು- ಒಂದು ಟೀ ಚಮಚ, ಉಪ್ಪು- ರುಚಿಗೆ ತಕ್ಕಷ್ಟು.
ಪುದೀನಾ ರಸಂ ಪಾಕವಿಧಾನ: ಪುದಿನಾ ರಸಂ ತಯಾರಿಸಲು, ಮೊದಲು ಪುಡಿಯನ್ನು ತಯಾರಿಸಿಕೊಳ್ಳಬೇಕು.
- ಇದಕ್ಕಾಗಿ ಸ್ಟೌವ್ ಮೇಲೆ ಬಾಣಲೆಯಲ್ಲಿ ಕೊತ್ತಂಬರಿ ಬೀಜ, ಕಡಲೆಬೇಳೆ, ಒಣಮೆಣಸು, ಕಾಳುಮೆಣಸು ಹಾಗೂ ಜೀರಿಗೆಯನ್ನು ಫ್ರೈ ಮಾಡಿ.
- ಅವುಗಳನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿ ಪಕ್ಕಕ್ಕೆ ಇಡಿ. ರಸಂ ಪುಡಿ ಸಿದ್ಧವಾಗಿದೆ.
- ಈಗ ಒಂದು ಪಾತ್ರೆಗೆ ಹುಣಸೆಹಣ್ಣು ಮತ್ತು ನೀರನ್ನು ಸೇರಿಸಿ ಮತ್ತು ಅದನ್ನು ನೆನೆಸಿ.
- ಹುಣಸೆಹಣ್ಣನ್ನು ನೆನೆಸಿದ ನಂತರ, ತಿರುಳನ್ನು ಬೇರ್ಪಡಿಸಲು ಹುಣಸೆಹಣ್ಣನ್ನು ಕೈಯಿಂದ ಚೆನ್ನಾಗಿ ಬೆರೆಸಿಕೊಳ್ಳಿ. ಹುಣಸೆ ಹಣ್ಣಿನ ತಿರುಳಿಗೆ ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ಜತೆಗೆ ಅರಿಶಿನ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ. ಹಾಗೆಯೇ ಮೊದಲೇ ಪುಡಿ ಮಾಡಿಕೊಂಡಿರುವ ರಸಂ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ರಸಂಗೆ ಎಷ್ಟು ಬೇಕೋ ಅಷ್ಟು ನೀರು ಸೇರಿಸಿ.
- ಇದನ್ನು ಸ್ಟೌವ್ ಮೇಲೆ ಇಟ್ಟು ಕುದಿಸಿ. ಅದು ಕುದಿಯುವವರೆಗೆ ಮುಚ್ಚಿಡಿ.
- ಮತ್ತೊಂದೆಡೆ, ಕುಕ್ಕರ್‌ನಲ್ಲಿ ತೊಗರಿಬೇಳೆ ಬೇಯಿಸಿ.
- ಈಗ ಬೇಯಿಸಿದ ತೊಗರಿ ಬೇಳೆ ಮತ್ತು ಪುದೀನಾ ಎಲೆಗಳನ್ನು ಕುದಿಯುತ್ತಿರುವ ಪದಾರ್ಥಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಸುಮಾರು ಅರ್ಧ ಘಂಟೆಯವರೆಗೆ ಬೇಯಿಸಿ.
- ಈಗ ಇನ್ನೊಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ತುಪ್ಪವನ್ನು ಹಾಕಿ.ಸಾಸಿವೆ, ಜೀರಿಗೆ, ಕರಿಮೆಣಸು ಮತ್ತು ಇಂಗು ಸೇರಿಸಿ ಹುರಿಯಿರಿ.
- ಈ ಮಿಶ್ರಣವನ್ನು ಪದಾರ್ಥಕ್ಕೆ ಒಗ್ಗರಣೆ ಕೊಟ್ಟರೆ ರುಚಿಯಾದ ಪುದಿನಾ ರಸಂ ಸವಿಯಲು ಸಿದ್ಧ.
- ಇದನ್ನು ಬಿಸಿ ಬಿಸಿ ಅನ್ನದೊಂದಿಗೆ ಬೆರೆಸಿ ತಿಂದರೆ ರುಚಿ ಅದ್ಭುತ. ಇಡ್ಲಿಯಲ್ಲಿಯೂ ಈ ಇದನ್ನು ತಿನ್ನಬಹುದು. ಇಡ್ಲಿ ಹಾಗೂ ಪುದೀನ ರಸಂ ಕಾಂಬಿನೇಷನ್ ತುಂಬಾ ರುಚಿಕರವಾಗಿರುತ್ತದೆ. ನೀವು ಒಮ್ಮೆ ಟ್ರೈ ಮಾಡಿ ನೋಡಿ, ಖಂಡಿತ ಇಷ್ಟವಾಗುತ್ತದೆ.
ಪುದೀನಾ ಉಪಯೋಗಗಳು
ಪುದೀನಾದಲ್ಲಿರುವ ಪೋಷಕಾಂಶಗಳು ಶೀತ, ಕೆಮ್ಮು, ಗಂಟಲು ನೋವು, ಸೈನಸ್ ಸೋಂಕು ಸೇರಿದಂತೆ ಚಳಿಗಾಲದಲ್ಲಿ ಉಸಿರಾಟದ ಸೋಂಕುಗಳನ್ನು ತಡೆಯುತ್ತದೆ. ಅದಕ್ಕಾಗಿಯೇ ಚಳಿಗಾಲದಲ್ಲಿ ಪುದೀನಾವನ್ನು ಅತಿಯಾಗಿ ತಿನ್ನಬೇಕು. ಗಂಟಲಿನ ಉರಿಯೂತವನ್ನು ಕಡಿಮೆ ಮಾಡುವ ಶಕ್ತಿಯೂ ಇದಕ್ಕಿದೆ. ಪುದೀನಾವನ್ನು ಹೆಚ್ಚು ತಿನ್ನುವುದರಿಂದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ. ಇದಲ್ಲದೆ, ಪುದೀನಾ ಎಲೆಗಳು ವಾಯುಮಾಲಿನ್ಯದಿಂದ ದೇಹಕ್ಕೆ ಉಂಟಾಗುವ ಹಾನಿಯನ್ನು ಗುಣಪಡಿಸುತ್ತವೆ. ಈ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ಇವುಗಳನ್ನು ತಿನ್ನುವುದರಿಂದ ಮೊಡವೆ ಸಮಸ್ಯೆಯು ಸಾಕಷ್ಟು ಕಡಿಮೆಯಾಗುತ್ತದೆ. ಹೀಗಾಗಿ ಆಗಾಗ ಪುದೀನಾ ಎಲೆಗಳಿಂದ ವಿವಿಧ ರೆಸಿಪಿಗಳನ್ನು ಮಾಡಲು ಪ್ರಯತ್ನಿಸಬಹುದು.