logo
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಹೊಟ್ಟೆ ಉಬ್ಬರಿಸಿದಂತಿದ್ದರೆ ಈ 4 ಪದಾರ್ಥಗಳನ್ನು ಬೆರೆಸಿ ಸೇವಿಸಿ: ಅಜೀರ್ಣಕ್ಕೆ ಪರಿಹಾರ ನೀಡುತ್ತೆ ಈ ಮನೆಮದ್ದು

ಚಳಿಗಾಲದಲ್ಲಿ ಹೊಟ್ಟೆ ಉಬ್ಬರಿಸಿದಂತಿದ್ದರೆ ಈ 4 ಪದಾರ್ಥಗಳನ್ನು ಬೆರೆಸಿ ಸೇವಿಸಿ: ಅಜೀರ್ಣಕ್ಕೆ ಪರಿಹಾರ ನೀಡುತ್ತೆ ಈ ಮನೆಮದ್ದು

Priyanka Gowda HT Kannada

Dec 21, 2024 05:01 PM IST

google News

ಚಳಿಗಾಲದಲ್ಲಿ ಹೊಟ್ಟೆ ಉಬ್ಬರಿಸಿದಂತಿದ್ದರೆ ಈ 4 ಪದಾರ್ಥಗಳನ್ನು ಬೆರೆಸಿ ಸೇವಿಸಿ

  • ಚಳಿಗಾಲದಲ್ಲಿ ಹೊಟ್ಟೆ ಉಬ್ಬರ ಮತ್ತು ಅಜೀರ್ಣ ಸಮಸ್ಯೆ ಸಾಮಾನ್ಯವಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು ಈ ನಾಲ್ಕು ಪದಾರ್ಥಗಳನ್ನು ಒಟ್ಟಿಗೆ ಸೇವಿಸುವುದರಿಂದ ಪ್ರಯೋಜನ ಪಡೆಯಬಹುದು. ಈ ಆಯುರ್ವೇದ ಮನೆಮದ್ದು ಅಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಈ ಔಷಧಿಯನ್ನು ಹೇಗೆ ತಯಾರಿಸಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.

ಚಳಿಗಾಲದಲ್ಲಿ ಹೊಟ್ಟೆ ಉಬ್ಬರಿಸಿದಂತಿದ್ದರೆ ಈ 4 ಪದಾರ್ಥಗಳನ್ನು ಬೆರೆಸಿ ಸೇವಿಸಿ
ಚಳಿಗಾಲದಲ್ಲಿ ಹೊಟ್ಟೆ ಉಬ್ಬರಿಸಿದಂತಿದ್ದರೆ ಈ 4 ಪದಾರ್ಥಗಳನ್ನು ಬೆರೆಸಿ ಸೇವಿಸಿ (PC: Freepik)

ಚಳಿಗಾಲದಲ್ಲಿ ಆಹಾರವನ್ನು ಸೇವಿಸಿದ ನಂತರ ಅನೇಕ ಜನರು ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸುತ್ತಾರೆ. ತಡವಾಗಿ ಊಟ ಮಾಡಿದ ತಕ್ಷಣ ಮಲಗುವುದರಿಂಲೂ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಕೆಲವೊಮ್ಮೆ ಮಧ್ಯರಾತ್ರಿ ಕಳೆದರೂ ಈ ಸಮಸ್ಯೆ ಕಡಿಮೆಯಾಗಿರುವುದಿಲ್ಲ. ಹೊಟ್ಟೆ ಉಬ್ಬುವುದು, ಭಾರವಾಗಿರುವಂತೆ, ಅಹಿತಕರವಾಗಿರುತ್ತದೆ. ಇವೆಲ್ಲವೂ ಅಜೀರ್ಣದ ಲಕ್ಷಣಗಳಾಗಿವೆ. ಚಳಿಗಾಲದಲ್ಲಿ, ಕುಳಿತುಕೊಂಡೇ ಇರುವುದು ಮತ್ತು ಹೆಚ್ಚಾಗಿ ಮಲಗಲು ಬಯಸುವವರು ಅನೇಕರು. ಇದರಿಂದ ಶಕ್ತಿಯ ವೆಚ್ಚವಾಗುವುದಿಲ್ಲ. ಅಲ್ಲದೆ, ಶೀತ ವಾತಾವರಣದಲ್ಲಿ ಜೀರ್ಣಕ್ರಿಯೆಯ ಪ್ರಕ್ರಿಯೆಯು ತುಂಬಾ ನಿಧಾನವಾಗಿರುತ್ತದೆ. ಈ ಕಾರಣದಿಂದಾಗಿ, ಹೊಟ್ಟೆ ಉಬ್ಬುವಿಕೆಯ ಸಮಸ್ಯೆಯು ಪ್ರಾರಂಭವಾಗುತ್ತದೆ. ಹೀಗಾದರೆ ಔಷಧಗಳನ್ನು ಬಳಸುವ ಬದಲು ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿ ಮನೆಮದ್ದು ತಯಾರಿಸಿ ಸೇವಿಸುವುದು ಒಳ್ಳೆಯದು.

ಚಳಿಗಾಲದಲ್ಲಿ ಹೊಟ್ಟೆ ಉಬ್ಬರ ಮತ್ತು ಅಜೀರ್ಣ ಸಮಸ್ಯೆ ಸಾಮಾನ್ಯವಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು ಈ ನಾಲ್ಕು ಪದಾರ್ಥಗಳನ್ನು ಒಟ್ಟಿಗೆ ಸೇವಿಸುವುದರಿಂದ ಪ್ರಯೋಜನ ಪಡೆಯಬಹುದು. ಈ ಆಯುರ್ವೇದ ಮನೆಮದ್ದು ಅಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಈ ಔಷಧಿಯನ್ನು ಹೇಗೆ ತಯಾರಿಸಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.

ಚಳಿಗಾಲದಲ್ಲಿ ಜನರು ಕಡಿಮೆ ದೈಹಿಕ ಚಟುವಟಿಕೆಯನ್ನು ಹೊಂದಿರುತ್ತಾರೆ. ಚಳಿಯ ವಾತಾವರಣ ಇರುವುದರಿಂದ ಮಸಾಲೆಯುಕ್ತ ತಿಂಡಿ, ಬಜ್ಜಿಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಮಸಾಲೆಯುಕ್ತ ಆಹಾರವನ್ನು ಹೆಚ್ಚು ತಿನ್ನುವುದರಿಂದ ಜೀರ್ಣಕ್ರಿಯೆಯಲ್ಲಿ ವಿಳಂಬಕ್ಕೆ ಕಾರಣವಾಗುತ್ತದೆ. ನಿಧಾನಗತಿಯ ಚಯಾಪಚಯ ಕ್ರಿಯೆಯಿಂದಾಗಿ, ಕಡಿಮೆ ನೀರು ಕುಡಿಯುವುದರಿಂದ ಹೊಟ್ಟೆ ಉಬ್ಬರ, ಅಜೀರ್ಣ, ಮಲಬದ್ಧತೆ ಮುಂತಾದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಶೀತದ ಸಮಯದಲ್ಲಿ ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸಲು, ಊಟದ ನಂತರ ಈ ನಾಲ್ಕು ಪದಾರ್ಥಗಳೊಂದಿಗೆ ಔಷಧವನ್ನು ತಯಾರಿಸಿ.

ಅಜೀರ್ಣಕ್ಕೆ ಇಲ್ಲಿದೆ ಮನೆಮದ್ದು

ಏಲಕ್ಕಿ, ಸೋಂಪು ಕಾಳು, ಕಾಳುಮೆಣಸು ಮತ್ತು ಬೆಲ್ಲ ಇವಿಷ್ಟು ಪದಾರ್ಥಗಳನ್ನು ತೆಗೆದುಕೊಳ್ಳಬೇಕು. ಈ ನಾಲ್ಕು ಸಾಮಗ್ರಿಗಳನ್ನು ಮಿಕ್ಸಿಂಗ್ ಜಾರ್‌ನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅದನ್ನು ಹೊರತೆಗೆದು ಸಣ್ಣ ಮಾತ್ರೆ ಆಕಾರದಲ್ಲಿ ಸುತ್ತಿಕೊಳ್ಳಿ. ಅಥವಾ ಮಿಶ್ರಣವನ್ನು ಚಮಚದ ಮೂಲಕ ಬಾಯಿಗೆ ಹಾಕಿ ಅಗಿಯಿರಿ.

ಈ ನಾಲ್ಕು ಪದಾರ್ಥಗಳನ್ನು ಒಟ್ಟಿಗೆ ಸೇವಿಸುವುದರಿಂದ ನಿಮ್ಮ ನಿಧಾನಗತಿಯ ಚಯಾಪಚಯವನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದು ದೇಹದ ಉಷ್ಣತೆಯನ್ನು ಸಹ ಕಾಪಾಡುತ್ತದೆ. ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸರಿಯಾಗಿಡುತ್ತದೆ. ಹೊಟ್ಟೆ ಉಬ್ಬರ ಮುಂತಾದ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ.

(ಗಮನಿಸಿ: ಅಧ್ಯಯನಗಳು ಮತ್ತು ಆರೋಗ್ಯ ನಿಯತಕಾಲಿಕಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಇಲ್ಲಿ ಒದಗಿಸಲಾಗಿದೆ. ಇದು ಕೇವಲ ಮಾಹಿತಿಯಾಗಿದೆ. ಇದು ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಆರೋಗ್ಯದ ಬಗ್ಗೆ ಅನುಮಾನವಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ