83ರಿಂದ 67 ಕೆಜಿಗೆ ತೂಕ ಇಳಿಸಿಕೊಂಡ ಮಹಿಳೆ; 16 ಕೆಜಿ ತೂಕ ಇಳಿಸಲು ಈಕೆ ಅನುಸರಿಸಿದ ಡಯೆಟ್ ಪ್ಲಾನ್ ಹೀಗಿದೆ
Nov 09, 2024 03:44 PM IST
83ರಿಂದ 67 ಕೆಜಿಗೆ ತೂಕ ಇಳಿಸಿಕೊಂಡ ಮಹಿಳೆ; 16 ಕೆಜಿ ತೂಕ ಇಳಿಸಲು ಅನುಸರಿಸಿದ ಡಯೆಟ್ ಹೀಗಿದೆ
- ಮಹಿಳೆಯೊಬ್ಬರು 83 ಕೆಜಿಯಿಂದ 67 ಕೆಜಿಗೆ ತಮ್ಮ ತೂಕ ಇಳಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರು ಅನುಸರಿಸಿದ ಆಹಾರಕ್ರಮವನ್ನು ಹಂಚಿಕೊಂಡಿದ್ದಾರೆ. 16 ಕೆಜಿ ತೂಕ ಕಳೆದುಕೊಳ್ಳಲು ಅವರ ಡಯೆಟ್ ಪ್ಲಾನ್ ಹೇಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ದಪ್ಪಗಿರುವವರಿಗೆ ತೂಕ ಇಳಿಸಿಕೊಳ್ಳುವುದು ಒಂದು ಸವಾಲು. ತೂಕ ಇಳಿಸಿಕೊಳ್ಳಲು ಸರಿಯಾದ ಆಹಾರ ಕ್ರಮ ಅನುಸರಿಸುವುದು ಬಹಳ ಮುಖ್ಯ. ಹಾಗಂತಾ ಒಂದೆರಡು ದಿನ ಕಠಿಣ ಡಯೆಟ್ ಮಾಡಿ ಮತ್ತೆ ಎಂದಿನಂತೆ ಮನಸೋ ಇಚ್ಛೆ ಆಹಾರ ಸೇವಿಸಿದರೆ ಕಷ್ಟ. ಪ್ರತಿದಿನ ಆಹಾರ ಕ್ರಮ ಅನುಸರಿಸಬೇಕಾಗುತ್ತದೆ. ಇಲ್ಲಿ ಶಿಸ್ತು ಅತ್ಯಗತ್ಯ. ಆಹಾರದ ಜೊತೆಗೆ, ವ್ಯಾಯಾಮಗಳನ್ನು ಸಹ ಮಾಡಬೇಕು. ಸಾಮಾನ್ಯವಾಗಿ ಮಹಿಳೆಯರಿಗೆ ತೂಕ ಇಳಿಸುವ ಬಗ್ಗೆ ಚಿಂತೆ ಹೆಚ್ಚು. ಇತ್ತೀಚೆಗೆ ಭಾವನಾ ಎಂಬ ಮಹಿಳೆಯೊಬ್ಬರು, ತಾವು 16 ಕೆಜಿ ತೂಕ ಕಳೆದುಕೊಂಡಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವರು ಬಹಿರಂಗಪಡಿಸಿದ್ದಾರೆ. ಶಿಸ್ತುಬದ್ಧ ಆಹಾರಕ್ರಮದೊಂದಿಗೆ ತಮ್ಮ ತೂಕವನ್ನು 83 ಕೆಜಿಯಿಂದ 67 ಕೆಜಿಗೆ ಇಳಿಸಿಕೊಂಡಿರುವುದಾಗಿ ಅವರು ಹೇಳಿದ್ದಾರೆ.
ನಿತ್ಯ ದಿನಚರಿಯಲ್ಲಿ ತಮ್ಮ ಆಹಾರ ಯೋಜನೆ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಅವರು, ತಮ್ಮ ಡಯೆಟ್ ಪ್ಲಾನ್ ಕುರಿತು ವಿವರಿಸಿದ್ದಾರೆ. ತೂಕ ಇಳಿಸಿಕೊಳ್ಳುವುದಕ್ಕೂ ಮುನ್ನ ಭಾವನಾ 83 ಕೆಜಿ ತೂಕ ಹೊಂದಿದ್ದರು. ಈಗ ಅವರು 16 ಕೆಜಿ ಇಳಿಸಿಕೊಂಡು 67 ಕೆಜಿಗೆ ತಲುಪಿದ್ದಾರೆ. ತನ್ನ ಆಹಾರ ಯೋಜನೆಯ ಬಗ್ಗೆ ವಿವರಿಸಿದ ಅವರು, ಈ ರೀತಿ ಹೇಳಿದ್ದಾರೆ. ಬೆಳಗ್ಗೆ 8 ಗಂಟೆಗೆ ಬುಲೆಟ್‌ಪ್ರೂಫ್ ಕಾಫಿ ಕುಡಿಯುವ ಮೂಲಕ ಡಯೆಟ್ ಆರಂಭಿಸುತ್ತಾರೆ. ಬೆಳಗಿನ ಉಪಾಹಾರದ ಬದಲಿಗೆ ಬೆಳಗ್ಗೆ 11 ಗಂಟೆಗೆ ಬ್ರಂಚ್ ಮಾಡುತ್ತಿದ್ದರು. ಒಂದು ಬಗೆಯ ಹಣ್ಣು, ನೆನೆಸಿದ ಓಟ್ಸ್ ಸೇವಿಸುತ್ತಿದ್ದರು.
ಬ್ರಂಚ್‌ನಲ್ಲಿ ಒಂದು ಹಣ್ಣು ಸೇವಿಸುತ್ತಿದ್ದರು. ಇದರಲ್ಲಿ ಸೇಬು, ಬಾಳೆಹಣ್ಣು ಅಥವಾ ಸ್ಟ್ರಾಬೆರಿ ತಿನ್ನುತ್ತಿದ್ದರು. ಓಟ್‌ಮೀಲ್‌ನಲ್ಲೂ ಅರ್ಧ ಕಪ್ ಓಟ್ಸ್, ಒಂದು ಕಪ್ ಹಾಲು, ಎರಡು ಸ್ಪೂನ್ ಚಿಯಾ ಬೀಜಗಳು, ಅರ್ಧ ಟೀಸ್ಪೂನ್ ಕೋಕೋ ಪೌಡರ್, ಒಂದು ಚಮಚ ಜೇನುತುಪ್ಪವನ್ನು ಹೊಟ್ಟೆಗಿಳಿಸುತ್ತಿದ್ದರು.
ವೆಜ್ ಬೌಲ್‌ನಲ್ಲಿ, ಕಡಲೆಕಾಯಿ ಮತ್ತು ಬೇಳೆಕಾಳುಗಳು ಇಲ್ಲದಿದ್ದರೆ, ಪನೀರ್ ಬುರ್ಜಿ ತಿನ್ನುತ್ತಿದ್ದರು. ಒಂದು ಕಪ್ ಮೊಸರು ಮತ್ತು ಎರಡು ಖರ್ಜೂರಗಳನ್ನು ಸಿಹಿತಿಂಡಿಯಾಗಿ ಹೊಟ್ಟೆಗಿಳೀಸುತ್ತಿದ್ದರು. ನಾನ್‌ವೆಜ್‌ನಲ್ಲಿ ಏರ್ ಫ್ರೈಡ್ ಚಿಕನ್ ಅಥವಾ ಮೀನು ಅಥವಾ ಮೊಟ್ಟೆ ಆಯ್ಕೆಯಾಗಿದ್ದವು.
ಮಧ್ಯಾಹ್ನ 2ರಿಂದ 3 ಗಂಟೆಯ ನಡುವೆ ಭಾವನಾ ಅವರು ಆರೋಗ್ಯಕರ ತಿಂಡಿ ಸೇವಿಸಿದರು. ಇದರಲ್ಲಿ ಮೂರು ಆಯ್ಕೆಳಿವೆ. ಅರ್ಧ ಕಪ್ ಮೊಸರು ಜೊತೆಗೆ ಬ್ಲೂಬೆರ್ರಿ ಮತ್ತು ಜೇನುತುಪ್ಪ, ಹುರಿದ ಕಡಲೆಕಾಯಿ ಇಲ್ಲದಿದ್ದರೆ ಮಖಾನಾ ತಿನ್ನುತ್ತಿದ್ದರು. ಇದರೊಂದಿಗೆ ಹಣ್ಣು ಸೇವನೆ ಮಾಡುತ್ತಿದ್ದರು.
ರಾತ್ರಿ ಊಟ
ರಾತ್ರಿಯ ಊಟಕ್ಕೆ ವೆಜ್ ಆಯ್ಕೆಯಲ್ಲಿ ಪನೀರ್, ಬುರ್ಜಿ / ಸಲಾಡ್ / ಸೋಯಾ ಪಲ್ಯ ಅಥವಾ ಬೇಳೆಕಾಳು ಕರ್ರಿ ಸೇವಿಸುತ್ತಿದ್ದರು. ನಾನ್ ವೆಜ್ ಆಯ್ಕೆಯಲ್ಲಿ ಹುರಿದ ಅಥವಾ ಗ್ರಿಲ್ಡ್ ಚಿಕನ್ ಇಲ್ಲದಿದ್ದರೆ ಮೀನು ಮತ್ತು ಮೊಟ್ಟೆ ಡಯೆಟ್ ಭಾಗವಾಗಿತ್ತು.
ಈ ಆಹಾರ ಕ್ರಮ ಅನುಸರಿಸುವ ಮೂಲಕ 16 ಕೆಜಿ ತೂಕ ಕಳೆದುಕೊಂಡಿರುವುದಾಗಿ ಭಾವನಾ ಹೇಳಿಕೊಂಡಿದ್ದಾರೆ. ಇದರೊಂದಿಗೆ ವ್ಯಾಯಾಮ ಮಾಡಿದ್ದಾರೆಯೇ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ದೇಹದ ಪರಿಸ್ಥಿತಿಗಳು ಮತ್ತು ಆರೋಗ್ಯಕ್ಕೆ ಅನುಗುಣವಾಗಿ ಆಹಾರಕ್ರಮ ಯೋಜಿಸಬೇಕು. ಪ್ರತಿಯೊಬ್ಬರ ದೇಹದ ಸ್ವಭಾವ ವಿಭಿನ್ನವಾಗಿರುತ್ತದೆ. ಹೀಗಾಗಿ ತಜ್ಞರ ಸಲಹೆಯನ್ನು ಪಡೆದು ಡಯೆಟ್ ಆರಂಭಿಸಿ.