Weight Loss: ಹೇಗಿದ್ದೆ ಹೇಗಾದೆ ಗೊತ್ತಾ? 5 ವರ್ಷದಲ್ಲಿ 50 ಕೆಜಿ ತೂಕ ಇಳಿಕೆ, ತೆಳ್ಳಗಾಗಲು ಬಯಸುವವರಿಗೆ ಮುತ್ತಿನಂತಹ 3 ಸಲಹೆ ನೀಡಿದ ನಿಕ್‌
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss: ಹೇಗಿದ್ದೆ ಹೇಗಾದೆ ಗೊತ್ತಾ? 5 ವರ್ಷದಲ್ಲಿ 50 ಕೆಜಿ ತೂಕ ಇಳಿಕೆ, ತೆಳ್ಳಗಾಗಲು ಬಯಸುವವರಿಗೆ ಮುತ್ತಿನಂತಹ 3 ಸಲಹೆ ನೀಡಿದ ನಿಕ್‌

Weight Loss: ಹೇಗಿದ್ದೆ ಹೇಗಾದೆ ಗೊತ್ತಾ? 5 ವರ್ಷದಲ್ಲಿ 50 ಕೆಜಿ ತೂಕ ಇಳಿಕೆ, ತೆಳ್ಳಗಾಗಲು ಬಯಸುವವರಿಗೆ ಮುತ್ತಿನಂತಹ 3 ಸಲಹೆ ನೀಡಿದ ನಿಕ್‌

Weight Loss Motivation: ತೂಕ ಇಳಿಕೆ ಮಾಡುವ ಪ್ರಯತ್ನದಲ್ಲಿ ಮೋಟಿವೇಷನ್‌ ಕೊರತೆ ಕಾಡುವವರಿಗೆ ಅಮೆರಿಕದ ವ್ಯಕ್ತಿಯೊಬ್ಬರು ಸ್ಪೂರ್ತಿಯಾಗಬಲ್ಲರು. ಇವರು ಐದು ವರ್ಷಗಳಲ್ಲಿ ಸುಮಾರು 50 ಕೆಜಿ ತೂಕ ಕಳೆದುಕೊಂಡಿದ್ದಾರೆ. ಇವರು ನೀಡಿರುವುದು ಕೇವಲ ಮೂರು ಸಲಹೆ. ಇದನ್ನು ಅನುಸರಿಸಿದರೆ ತೂಕ ಇಳಿಕೆ ಗ್ಯಾರಂಟಿಯಂತೆ.

5 ವರ್ಷದಲ್ಲಿ 50 ಕೆಜಿ ತೂಕ ಇಳಿಕೆ, ತೆಳ್ಳಗಾಗಲು ಬಯಸುವವರಿಗೆ ಮುತ್ತಿನಂಥ 3 ಸಲಹೆ ನೀಡಿದ ನಿಕ್‌
5 ವರ್ಷದಲ್ಲಿ 50 ಕೆಜಿ ತೂಕ ಇಳಿಕೆ, ತೆಳ್ಳಗಾಗಲು ಬಯಸುವವರಿಗೆ ಮುತ್ತಿನಂಥ 3 ಸಲಹೆ ನೀಡಿದ ನಿಕ್‌

Weight Loss Motivation: ಆತನ ಹೆಸರು ನಿಕ್ ಜಿಯೊಪ್ಪೊ. ಅಮೆರಿಕ ಮೂಲದ ಇವರು ವೇಟ್‌ ಲಾಸ್‌ ಟ್ರೇನರ್‌. ಐದು ವರ್ಷಗಳಲ್ಲಿ 110 ಪೌಂಡ್ (49.89 ಕೆಜಿ) ತೂಕ ಕಳೆದುಕೊಳ್ಳುವ ಮೂಲಕ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ. ಈ ರೀತಿ ತೂಕ ಇಳಿಕೆ ಮಾಡಲು ಬಯಸುವವರಿಗೆ ಇದೀಗ ಸಹಾಯ ಮಾಡಲು ಮುಂದಾಗಿದ್ದಾರೆ. ಆರೋಗ್ಯಕರವಾಗಿ ದೇಹದ ತೂಕ ಇಳಿಸುವುದು ಹೇಗೆ? ತೂಕ ಇಳಿಕೆ ಪ್ರಯಾಣದಲ್ಲಿ ಮೋಟಿವೇಷನ್‌ ಕಳೆದುಕೊಳ್ಳದೆ ಇರುವುದು ಹೇಗೆ ಎಂದು ಇವರು ಸಲಹೆ ನೀಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಇವರು ಈ ಕುರಿತು ಬರೆದಿದ್ದಾರೆ. "ತೂಕ ಇಳಿಕೆ ಪ್ರಯಾಣದಲ್ಲಿ ಮೋಟಿವೇಷನ್‌ ಕೊರತೆ ಕಾಡುತ್ತಿದೆಯೇ. ನನಗೂ ಹಾಗೆಯೇ ಆಗಿತ್ತು. ಆದರೆ, ನನಗೆ ಈ ಹಾದಿಯಲ್ಲಿ ಪ್ರೇರೇಪಣೆ ಅಥವಾ ಮೋಟಿವೇಷನ್‌ನ ಅಗತ್ಯವಿಲ್ಲದ ಯೋಜನೆಯೊಂದನ್ನು ನಾನು ರೂಪಿಸಿದೆ. ಇದರಿಂದ ನನಗೆ 110 ಪೌಂಡ್‌ ತೂಕ ಕಳೆದುಕೊಳ್ಳಲು ಸಾಧ್ಯವಾಯಿತು" ಎಂದು ಅವರು ಬರೆದಿದ್ದಾರೆ.

"2019ರಲ್ಲಿ ನಾನು ದಪ್ಪಗಾಗಿದ್ದೆ. ತೂಕ ಕಳೆದುಕೊಳ್ಳಲು ನನಗೆ ಹಂತಹಂತವಾಗಿ ಯಾರಾದರೂ ಮೋಟಿವೇಷನ್‌ ಮಾಡಬೇಕಿತ್ತು. ಆದರೆ, ಯಾರೂ ನನಗೆ ಮೋಟಿವೇಷನ್‌ ಮಾಡಲಿಲ್ಲ. ಆದ್ದರಿಂದ ನಾನು ನನ್ನದೇ ರೀತಿಯಲ್ಲಿ ಲೆಕ್ಕಾಚಾರ ಮಾಡಬೇಕಿತ್ತು. ಇದು ಕಷ್ಟಕರವಾಗಿತ್ತು" ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಮೋಟಿವೇಷನ್‌ ಕೊರತೆ ಇರುವಾಗಲೂ ತೂಕ ಕಳೆದುಕೊಳ್ಳಲು ಏನು ಮಾಡಬೇಕೆಂದು ನಿಕ್‌ ಸಲಹೆ ನೀಡಿದ್ದಾರೆ. ಈ ಮುಂದಿನ ವಿಡಿಯೋ ನೋಡಿ ಆತ ನೀಡಿರುವ ಸಲಹೆಗಳನ್ನು ಗಮನಿಸಿ.

ಹಂತ 1: ಕೆಲಸ ಮಾಡುವುದರಿಂದ ಪ್ರೇರಣೆ ದೊರಕುತ್ತದೆ.

ಯಾರಾದರೂ ಪ್ರೇರೇಪಿಸದೆ ಇದ್ದರೂ ಕೆಲಸ ಮಾಡಿದರೆ ತನ್ನಿಂದ ತಾನೇ ಪ್ರೇರಣೆ ಬರುತ್ತದೆ ಎನ್ನುವುದನ್ನು ಗುರುತಿಸಬೇಕು. "ನನಗೆ ಸಾಕಷ್ಟು ಮೋಟಿವೇಷನ್‌ ಇಲ್ಲ ಎನ್ನುವ ಬದಲು, ನಾನು ಪ್ರೇರಣೆಯನ್ನು ಹುಡುಕಲು ಪ್ರಯತ್ನಿಸುತ್ತೇನೆ ಎಂದು ಹೇಳಿ. ಆರೋಗ್ಯಕರ ಆಹಾರ ಸೇವಿಸಲು ನನಗೆ ಮೋಟಿವೇಷನ್‌ ಇಲ್ಲ ಎಂದು ಹೇಳುವ ಬದಲು, ಆರೋಗ್ಯಕರ ಆಹಾರದಿಂದ ನನಗೆ ಮೋಟಿವೇಷನ್‌ ದೊರಕುತ್ತದೆ ಎಂದು ಹೇಳಿ. ಈ ರೀತಿ ಕೆಲಸ ಮಾಡುವುದರಿಂದ ನಿಮಗೆ ಪ್ರೇರೇಪಣೆ ದೊರಕುತ್ತದೆ" ಎಂದು ನಿಕ್‌ ಹೇಳಿದ್ದಾರೆ.

ಹಂತ 2: ನಿಮ್ಮ ವೀಡಿಯೊವನ್ನು ತೆಗೆದುಕೊಳ್ಳಿ

"ನಿಮ್ಮ ಫೋನ್‌ನಲ್ಲಿ ವಿಡಿಯೋ ಮಾಡಿಕೊಳ್ಳಿ. ನಿಮ್ಮ ಫೋನ್‌ ಹೊರತೆಗೆಯಿರಿ. ಕೆಲಸ ಮಾಡಲು ನಿಮಗೆ ನೀವೇ ಪ್ರೇರಣೆ ನೀಡಿ. ವಿಡಿಯೋದಲ್ಲಿ ಮಾತನಾಡಿ. "ನನಗೆ ಯಾರೂ ಪ್ರೇರೇಪಣೆ ನೀಡುತ್ತಿಲ್ಲ" ಎಂದು ಹೇಳಿ. ಈ ವಿಡಿಯೋವನ್ನು ಇನ್ನೊಮ್ಮೆ ವೀಕ್ಷಿಸಿದಾಗ ನಿಮಗೆ ಅದು ಎಷ್ಟು ಹಾಸ್ಯಾಸ್ಪದ ಎಂದೆನಿಸುತ್ತದೆ. ನನಗೆ ಯಾರೂ ಸ್ಪೂರ್ತಿ ನೀಡುತ್ತಿಲ್ಲ, ಯಾರೂ ಮೋಟಿವೇಷನ್‌ ಮಾಡುತ್ತಿಲ್ಲ ಎಂದುಕೊಳ್ಳಬೇಡಿ. ನಿಮಗೆ ನೀವೇ ಪ್ರೇರಣೆ ನೀಡಲು ಮುಂದಾಗಿ. ತೂಕ ಇಳಿಕೆ ಪ್ರಯಾಣದಲ್ಲಿ ಇದು ಅತ್ಯಂತ ಅಗತ್ಯ" ಎಂದು ಅವರು ಹೇಳಿದ್ದಾರೆ

ಹಂತ 3: ಪ್ರೇರಣೆ ಶಾಶ್ವತವಲ್ಲ

ಮೋಟಿವೇಷನ್‌ ಬರುತ್ತದೆ, ಹೋಗುತ್ತದೆ ಎಂದು ಗುರುತಿಸಿ. ನಿಮ್ಮನ್ನು ಯಾರಾದರೂ ಮೋಟಿವೇಷನ್‌ ಮಾಡದೆ ಇದ್ದರೆ ಏನು ಮಾಡುವಿರಿ. ಯಾರೂ ಕೂಡ ಸಾರ್ವಕಾಲಿಕವಾಗಿ ಮೋಟಿವೇಷನ್‌ಗೆ ಒಳಗಾಗುವುದಿಲ್ಲ. ಸದಾ ಆರೋಗ್ಯಕರ ಆಯ್ಕೆಗಳನ್ನು ಮಾಡಿ. ಇವರು ನೀಡಿರುವ

ಹೀಗೆ ತೂಕ ಇಳಿಕೆಗೆ ಇವರು ವಿಭಿನ್ನ ರೀತಿಯಲ್ಲಿ ಪ್ರೇರೇಪಣೆಯ ವಿವರಗಳನ್ನು ನೀಡಿದ್ದಾರೆ. ತೂಕ ಇಳಿಸಬೇಕೆಂದು ಸತತ ಪ್ರಯತ್ನ ಮಾಡಿ ಕೆಲವು ದಿನಗಳ ಬಳಿಕ "ಸಾಕು ಇನ್ನು ನನ್ನಿಂದಾಗದು" ಎಂದುಕೊಳ್ಳುವರು ಸ್ವಯಂ ನಿರ್ಣಯದಿಂದ, ಸ್ವಯಂ ಹಠದಿಂದ ಇದ್ದರೆ ಹೇಗೆ ತೂಕ ಕಳೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಡಿಸ್‌ಕ್ಲೈಮರ್‌: ಇದು ಲಭ್ಯವಿರುವ ಮಾಹಿತಿ ಆಧರಿತ ಲೇಖನ. ತೂಕ ಇಳಿಕೆಗೆ ಸಂಬಂಧಪಟ್ಟಂತೆ ತಜ್ಞರ ನೆರವು ಪಡೆದು ಮುಂದುವರೆಯಿರಿ.

Whats_app_banner