logo
ಕನ್ನಡ ಸುದ್ದಿ  /  ಕ್ರೀಡೆ  /  Wasim Jaffer: ಟ್ರಿನಿಡಾಡ್ ಪಿಚ್ ಅನ್ನು ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್‌ಗೆ ಹೋಲಿಸಿದ ವಾಸಿಮ್ ಜಾಫರ್; ಕಾರಣ ಇದು

Wasim Jaffer: ಟ್ರಿನಿಡಾಡ್ ಪಿಚ್ ಅನ್ನು ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್‌ಗೆ ಹೋಲಿಸಿದ ವಾಸಿಮ್ ಜಾಫರ್; ಕಾರಣ ಇದು

Jayaraj HT Kannada

Jul 25, 2023 02:52 PM IST

google News

ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ ಮೈದಾನ

    • ‌India vs West Indies: ಭಾರತದ ಪಂದ್ಯ ಡ್ರಾ ಆದ ಟ್ರಿನಿಡಾಡ್ ಪಿಚ್ ಅನ್ನು, ಭಾರತದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್‌ಗೆ ಹೋಲಿಸಿದ್ದಾರೆ.
ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ ಮೈದಾನ
ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ ಮೈದಾನ

ಟ್ರಿನಿಡಾಡ್‌ನಲ್ಲಿ (Trinidad) ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ (West Indies vs India) ನಡುವಿನ ಎರಡನೇ ಟೆಸ್ಟ್ ಪಂದ್ಯವು ನೀರಸ ಡ್ರಾದಲ್ಲಿ ಅಂತ್ಯಗೊಂಡಿತು. ಐದನೇ ದಿನದಾಟದ ಆರಂಭದಲ್ಲೇ ಸುರಿದ ಭಾರಿ ಮಳೆಯಿಂದಾಗಿ ದಿನದಾಟದಲ್ಲಿ ಒಂದೇ ಒಂದು ಓವರ್ ಕೂಡಾ ಬೌಲಿಂಗ್‌ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಆಟವನ್ನು ಮೊಟಕುಗೊಳಿಸಿ ಪಂದ್ಯವನ್ನು ಡ್ರಾ ಮಾಡಲಾಯ್ತು.

ಎರಡನೇ ಟೆಸ್ಟ್‌ಗೂ ಮುನ್ನ ಡೊಮಿನಿಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವು ಮೂರು ದಿನಗಳಲ್ಲಿ ಕೊನೆಗೊಂಡಿತು. ಆದರೆ ಮಳೆಗಾಹುತಿಯಾದ ಎರಡನೇ ಟೆಸ್ಟ್‌ ಸಂಪೂರ್ಣ ನಿಧಾನವಾಗಿ ಸಾಗಿತು. ಪಂದ್ಯ ನಡೆದ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿರುವ ಪಿಚ್‌ ಮೇಲೆ ಆಟಗಾರರಿಗಿಂತ ಹೆಚ್ಚಾಗಿ ಕವರ್‌ ಇದ್ದಿದ್ದೇ ಹೆಚ್ಚು. ಹೀಗಾಗಿ ಮಳೆಯಿಂದಾಗಿ ಆಟ ನೀಧಾನವಾಗಿ ಸಾಗಿದ್ದಕ್ಕೆ ಮೈದಾನ ಹಾಗೂ ಪಿಚ್‌ ಕುರಿತಾಗಿ ಸಾಕಷ್ಟು ಟೀಕೆ ಟಿಪ್ಪಣಿಗಳು ಎದ್ದಿವೆ.

ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಮ್ ಜಾಫರ್ ಕೂಡಾ ಟ್ರಿನಿಡಾಡ್‌ ಪಿಚ್‌ ಕುರಿತು ಹಾಸ್ಯಾಸ್ಪದವಾಗಿ ಟ್ವೀಟ್‌ ಮಾಡಿದ್ದಾರೆ. ಕ್ರಿಕೆಟ್‌ ಕುರಿತಾಗಿ ಈಗಾಗಲೇ ಹಾಸ್ಯಮಯವಾಗಿ ವಿಶ್ಲೇಷಣೆಯನ್ನು ಮಾಡಿ ಹೆಸರುವಾಸಿಯಾಗಿರುವ ಜಾಫರ್, ಟ್ರಿನಿಡಾಡ್‌ ಪಿಚ್‌ಗೂ ಹಾಸ್ಯಮಯವಾಗಿ ಹೆಸರಿಟ್ಟಿದ್ದಾರೆ.

ಮೊದಲ ಟೆಸ್ಟ್‌ ಮೂರನೇ ದಿನದಲ್ಲಿ ಅಂತ್ಯವಾಗಿತ್ತು. ಆದರೆ ಎರಡನೇ ಟೆಸ್ಟ್‌ ಮೂರನೇ ದಿನದಲ್ಲಿ ಅಂತ್ಯವಾಗಿರಲಿಲ್ಲ. ಈ ವೇಳೆ ಟ್ರಿನಿಡಾಡ್‌ ಪಿಚ್‌ಗೆ ಇಂಟರ್ನೆಟ್ ಎಕ್ಸ್‌ಪ್ಲೋರರ್ ಎಂದು ಕರೆಯುವ ಮೂಲಕ ಜಾಫರ್‌ ತಮ್ಮ ಹಾಸ್ಯಪ್ರಜ್ಞೆ ಪ್ರದರ್ಶಿಸಿದ್ದಾರೆ. ಇಂಟರ್ನೆಟ್ ಎಕ್ಸ್‌ಪ್ಲೋರರ್ ಹಳೆಯ ವೆಬ್ ಬ್ರೌಸರ್ ಆಗಿದ್ದು, ಇತರ ಹೊಸ ಬ್ರೌಸರ್‌ಗಳಿಗೆ ಹೋಲಿಸಿದರೆ ತುಂಬಾ ನಿಧಾನವಾಗಿ ಬ್ರೌಸ್‌ ಮಾಡುತ್ತದೆ. ಈ ಬಗ್ಗೆ ಅನೇಕ ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಟ್ರಿನಿಡಾಡ್‌ ಮೈದಾನ ಕೂಡಾ ತುಂಬಾ ನಿಧಾನ ಎಂಬುದನ್ನು ವೆಬ್‌ ಬ್ರೌಸರ್‌ಗೆ ಹೋಲಿಸಿ ವಿವರಿಸಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ ಟ್ರಿನಿಡಾಡ್ ಪಿಚ್‌ ಫೋಟೋ ಮತ್ತು ಇಂಟರ್ನೆಟ್ ಎಕ್ಸ್‌ಪ್ಲೋರರ್‌ ಬ್ರೌಸರ್‌ ಲೋಗೋವನ್ನು ಜಾಫರ್‌ ಪೋಸ್ಟ್ ಮಾಡಿದ್ದಾರೆ. "ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವ ಅಗತ್ಯವಿದೆ," ಎಂದು ಅವರು ಹೇಳಿದ್ದಾರೆ. ಇದೇ ವೇಳೆ "ಅವು ಎರಡೂ ಒಂದೇ ಚಿತ್ರ" ಎಂದು ಕಾರ್ಪೊರೇಟ್‌ ವಲಯದ ಯುವತಿಯೊಬ್ಬಳು ಹೇಳುವ ರೀತಿ ಮೆಮ್‌ ರಚಿಸಿದ್ದಾರೆ.

ಫೋಟೋದ ಜೊತೆಗೆ ಕ್ಯಾಪ್ಷನ್‌ ಹಾಕಿರುವ ಜಾಫರ್, “ಈ ಪಿಚ್ ಕ್ರಿಕೆಟ್ ಪಿಚ್‌ಗಳ ಇಂಟರ್ನೆಟ್ ಎಕ್ಸ್‌ಪ್ಲೋರರ್” ಎಂದು ಬರೆದಿದ್ದಾರೆ. ಅಂದರೆ ನಿಧಾನಗತಿಯ ಪಿಚ್‌ ಎಂಬರ್ಥದಲ್ಲಿ ಹೇಳಿಕೊಂಡಿದ್ದಾರೆ.

ಮಳೆ ಪಾಲಾದ ಎರಡನೇ ಟೆಸ್ಟ್‌; ಪಂದ್ಯ ಡ್ರಾದಲ್ಲಿ ಅಂತ್ಯ, 1-0 ಅಂತರದಿಂದ ಸರಣಿ ಗೆದ್ದ ಭಾರತ

ಕೊನೆಗೂ ಭಾರತದ ಗೆಲುವಿನ ಕನಸಿಗೆ ವರುಣನ ನೆರವು ಸಿಗಲೇ ಇಲ್ಲ. ವೆಸ್ಟ್ ಇಂಡೀಸ್ (West Indies vs India) ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು, 2-0 ಅಂತರದಿಂದ ಸರಣಿ ಕ್ಲೀನ್‌ಸ್ವೀಪ್‌ ಸಾಧಿಸುವ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಮಳೆ ಸಂಪೂರ್ಣವಾಗಿ ಕಾಡಿತು. ಪಂದ್ಯದ ಐದನೇ ದಿನದಾಟದ ಆರಂಭದಿಂದಲೂ ಸುರಿದ ಭಾರಿ ಮಳೆಯಯಿಂದಾಗಿ ಸಂಪೂರ್ಣ ದಿನದಾಟವನ್ನು ಮೊಟಕುಗೊಳಿಸಲಾಯ್ತು. ಹೀಗಾಗಿ ಇಂಡೋ ವಿಂಡೀಸ್‌ ಟೆಸ್ಟ್‌ ಸರಣಿಯ ಎರಡನೇ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿತು.

ಎರಡನೇ ಟೆಸ್ಟ್‌ನ ಆರಂಭದಿಂದಲೂ ಮೇಲುಗೈ ಸಾಧಿಸಿದ್ದ ಭಾರತ, ನಾಲ್ಕನೇ ದಿನದಾಟದಲ್ಲಿ ವಿಂಡೀಸ್‌ಗೆ 365 ರನ್‌ಗಳ ಬೃಹತ್‌ ಗುರಿ ನೀಡಿತು. ಹೀಗಾಗಿ ಪಂದ್ಯದ ಐದನೇ ಮತ್ತು ಅಂತಿಮ ದಿನದಾಟವು ಕುತೂಹಲ ಮೂಡಿಸಿತ್ತು. ಭಾರತದ ಗೆಲುವಿಗೆ ಎಂಟು ವಿಕೆಟ್‌ಗಳ ಅಗತ್ಯವಿತ್ತು. ಆದರೆ ಮಳೆ ನಿಲ್ಲದ ಕಾರಣ ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ