PKL 2024 Playoffs Schedule; ಪ್ರೊ ಕಬಡ್ಡಿ ಎಲಿಮಿನೇಟರ್ಸ್, ಸೆಮಿ-ಫೈನಲ್, ಫೈನಲ್ ದಿನಾಂಕ, ಸಮಯ, ನೇರ ಪ್ರಸಾರದ ವಿವರ ಹೀಗಿದೆ
Feb 22, 2024 08:00 AM IST
ಪ್ರೊ ಕಬಡ್ಡಿ ಎಲಿಮಿನೇಟರ್ಸ್, ಸೆಮಿ-ಫೈನಲ್, ಫೈನಲ್ ದಿನಾಂಕ, ಸಮಯ, ನೇರ ಪ್ರಸಾರದ ವಿವರ ಹೀಗಿದೆ
- PKL 2024 Playoffs Schedule : ಅಗ್ರ ಆರು ತಂಡಗಳಾದ ಪುಣೇರಿ ಪಲ್ಟನ್, ಜೈಪುರ್ ಪಿಂಕ್ ಪ್ಯಾಂಥರ್ಸ್, ದಬಾಂಗ್ ಡೆಲ್ಲಿ ಕೆಸಿ, ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್ ಮತ್ತು ಪಾಟ್ನಾ ಪೈರೇಟ್ಸ್ ಪಿಕೆಎಲ್ ಸೀಸನ್ 10ರ ಪ್ಲೇಆಫ್ ಪಂದ್ಯಗಳಲ್ಲಿ ಸೆಣಸಾಟ ನಡೆಸಲಿವೆ. ಅದರ ವೇಳಾಪಟ್ಟಿ ಹೀಗಿದೆ.
ಪ್ರೊ ಕಬಡ್ಡಿ ಲೀಗ್ ಗುಂಪು ಹಂತದ ಪಂದ್ಯಗಳು ಮುಕ್ತಾಯಗೊಂಡಿವೆ. ಎರಡೂವರೆ ತಿಂಗಳ ಕಾಲ ನಡೆದ ಲೀಗ್ ಸ್ಟೇಜ್ ಕೊನೆಗೂ ತೆರೆ ಬಿದ್ದಿದೆ. ಇನ್ನೇನಿದ್ದರೂ ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳು ಮಾತ್ರ. ಈಗಾಗಲೇ 12 ತಂಡಗಳ ಪೈಕಿ ಅಂಕಪಟ್ಟಿಯಲ್ಲಿ ಅಗ್ರ 6 ಸ್ಥಾನ ಪಡದ ತಂಡಗಳು ಪ್ಲೇ ಆಫ್ಗೆ ಪ್ರವೇಶಿಸಿವೆ.
ಅಗ್ರ ಆರು ತಂಡಗಳಾದ ಪುಣೇರಿ ಪಲ್ಟನ್, ಜೈಪುರ್ ಪಿಂಕ್ ಪ್ಯಾಂಥರ್ಸ್, ದಬಾಂಗ್ ಡೆಲ್ಲಿ ಕೆಸಿ, ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್ ಮತ್ತು ಪಾಟ್ನಾ ಪೈರೇಟ್ಸ್ ಪಿಕೆಎಲ್ ಸೀಸನ್ 10 ರ ಪ್ಲೇಆಫ್ ಪಂದ್ಯಗಳಲ್ಲಿ ಸೆಣಸಾಟ ನಡೆಸಲಿವೆ. ಎಲಿಮಿನೇಟರ್ 1, ಎಲಿಮಿನೇಟರ್ 2, ಸೆಮಿಫೈನಲ್ 1, ಸೆಮಿಫೈನಲ್ 2 ಮತ್ತು ಫೈನಲ್ ಸೇರಿ ಐದು ಮಾತ್ರ ಬಾಕಿ ಉಳಿದಿವೆ. ಟ್ರೋಫಿ ಎತ್ತಿ ಹಿಡಿಯಲು 6 ತಂಡಗಳ ನಡುವೆ ರಣರೋಚಕ ಪೈಪೋಟಿ ಏರ್ಪಡುವುದು ಖಚಿತ.
ಜೈಪುರ ಮತ್ತು ಪುಣೇರಿ ನೇರ ಸೆಮಿಫೈನಲ್ಗೆ
ಪಿಕೆಎಲ್ 2024ರ ಪ್ಲೇಆಫ್‌ಗಳನ್ನು ಫೆಬ್ರವರಿ ಕೊನೆಯ ವಾರದಲ್ಲಿ ನಡೆಸಲಾಗುತ್ತಿದೆ. ಮತ್ತು ಫೈನಲ್ ಪಂದ್ಯವು ಮಾರ್ಚ್ 1 ರಂದು ನಡೆಯಲಿದೆ. ಎಲ್ಲಾ ಐದು ಪಂದ್ಯಗಳು ಹೈದರಾಬಾದ್‌ನ ಗಚಿಬೌಲಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಕಳೆದ ವರ್ಷದ ಫೈನಲಿಸ್ಟ್‌ಗಳಾದ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಪುಣೇರಿ ಪಲ್ಟನ್ ಮೊದಲ 2 ಸ್ಥಾನಗಳನ್ನು ಕಾಯ್ದಿರಿಸಿದ ಕಾರಣ ನೇರವಾಗಿ ಸೆಮಿಫೈನಲ್ಗೆ ಪ್ರವೇಶ ಪಡೆದಿವೆ.
ಪ್ಲೇ ಆಫ್ನಲ್ಲಿ ಯಾವ ತಂಡಗಳ ನಡುವೆ ಪೈಪೋಟಿ?
ಮೊದಲ ಸ್ಥಾನದಲ್ಲಿರುವ ಪುಣೇರಿ ಪಲ್ಟನ್ ಸೆಮಿಫೈನಲ್ 1 ರಲ್ಲಿ ಎಲಿಮಿನೇಟರ್ 1ರ ವಿಜೇತರ ವಿರುದ್ಧ ಆಡಲಿದೆ. ಈ ಎಲಿಮಿನೇಟರ್-1ರ ಪಂದ್ಯವು ಮೂರನೇ ಸ್ಥಾನದಲ್ಲಿರುವ ದಬಾಂಗ್ ಡೆಲ್ಲಿ ಮತ್ತು ಪಾಟ್ನಾ ಪೈರೇಟ್ಸ್ ನಡುವೆ ಸೋಮವಾರ (ಫೆಬ್ರವರಿ 26) ಸೆಣಸಾಟ ನಡೆಸಲಿವೆ.
ಎರಡನೇ ಸ್ಥಾನದಲ್ಲಿರುವ ಜೈಪುರ ಪಿಂಕ್ ಪ್ಯಾಂಥರ್ಸ್ ಸೆಮಿಫೈನಲ್ 2 ರಲ್ಲಿ ಎಲಿಮಿನೇಟರ್ 2ರ ವಿಜೇತರ ವಿರುದ್ಧ ಆಡಲಿದೆ. ಈ ಎಲಿಮಿನೇಟರ್-2 ಸೋಮವಾರ (ಫೆಬ್ರವರಿ 26) ರಂದು ನಾಲ್ಕನೇ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್, ಐದನೇ ಸ್ಥಾನದಲ್ಲಿರುವ ಹರಿಯಾಣ ಸ್ಟೀಲರ್ಸ್ ತಂಡವನ್ನು ಎದುರಿಸಲಿದೆ.
ಎರಡು ಸೆಮಿಫೈನಲ್‌ಗಳು ಬುಧವಾರ (ಫೆಬ್ರವರಿ 28) ಡಬಲ್ ಹೆಡರ್ ಆಗಿ ನಡೆಯಲಿದ್ದು, ಪ್ರೊ ಕಬಡ್ಡಿ ಫೈನಲ್ ಶುಕ್ರವಾರ (ಮಾರ್ಚ್ 1) ಹೈದರಾಬಾದ್‌ನ ತೆಲುಗು ಟೈಟಾನ್ಸ್ ತವರಿನಲ್ಲಿ ನಡೆಯಲಿದೆ. ಈಗ ಪಿಕೆಎಲ್ ಪ್ಲೇಆಫ್ ವೇಳಾಪಟ್ಟಿ ಮತ್ತು ಇತರ ಪ್ರಮುಖ ವಿವರಗಳನ್ನು ನೋಡೋಣ.
ಪಿಎಕೆಎಲ್ 2024 ಪ್ಲೇಆಫ್‌ಗಳ ವೇಳಾಪಟ್ಟಿ- ಎಲಿಮಿನೇಟರ್, ಸೆಮಿಫೈನಲ್, ಫೈನಲ್
ಎಲಿಮಿನೇಟರ್ 1: ದಬಾಂಗ್ ದೆಹಲಿ vs ಪಾಟ್ನಾ ಪೈರೇಟ್ಸ್ ಸೋಮವಾರ, ಫೆಬ್ರವರಿ 26 ರಂದು ರಾತ್ರಿ 8 ಗಂಟೆಗೆ
ಎಲಿಮಿನೇಟರ್ 2: ಗುಜರಾತ್ ಜೈಂಟ್ಸ್ vs ಹರಿಯಾಣ ಸ್ಟೀಲರ್ಸ್ ಸೋಮವಾರ, ಫೆಬ್ರವರಿ 26 ರಂದು ರಾತ್ರಿ 9 ಗಂಟೆಗೆ
ಸೆಮಿಫೈನಲ್ 1: ಪುಣೇರಿ ಪಲ್ಟನ್ vs ಎಲಿಮಿನೇಟರ್ 1ರ ವಿಜೇತರು, ಬುಧವಾರ, ಫೆಬ್ರವರಿ 28 ರಂದು ರಾತ್ರಿ 8 ಗಂಟೆಗೆ
ಸೆಮಿ-ಫೈನಲ್ 2: ಜೈಪುರ ಪಿಂಕ್ ಪ್ಯಾಂಥರ್ಸ್ vs ಎಲಿಮಿನೇಟರ್ 2ರ ವಿಜೇತರು, ಬುಧವಾರ, ಫೆಬ್ರವರಿ 28 ರಂದು ರಾತ್ರಿ 9 ಗಂಟೆಗೆ
ಫೈನಲ್: ಸೆಮಿ-ಫೈನಲ್ 1ರ ವಿಜೇತರು ಮತ್ತು ಸೆಮಿ-ಫೈನಲ್ 2ರ ವಿಜೇತರು ಶುಕ್ರವಾರ, ಮಾರ್ಚ್ 1 ರಂದು ರಾತ್ರಿ 8 ಗಂಟೆಗೆ
ಪಿಕೆಎಲ್ ಪ್ಲೇಆಫ್ ಲೈವ್ ಸ್ಟ್ರೀಮಿಂಗ್ ಮತ್ತು ಟೆಲಿಕಾಸ್ಟ್ ವಿವರ
ಪಿಕೆಎಲ್ 2024 ಪ್ಲೇಆಫ್‌ಗಳ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಸ್ಟಾರ್ ಸ್ಪೋರ್ಟ್ಸ್ 2 ಎಸ್‌ಡಿ, ಸ್ಟಾರ್ ಸ್ಪೋರ್ಟ್ಸ್ 2 ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ಎಸ್‌ಡಿ ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ ಹಿಂದಿ ಮತ್ತು ಸ್ಟಾರ್ ಸ್ಪೋರ್ಟ್ಸ್ ಫಸ್ಟ್ ಚಾನಲ್‌ಗಳ ಮೂಲಕ ತೋರಿಸಲಾಗುತ್ತದೆ. ಆದರೆ ಪಿಕೆಎಲ್ ಲೈವ್ ಸ್ಟ್ರೀಮಿಂಗ್ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತದೆ.