ಕೊಹ್ಲಿಯ ಶಿವನ ಟ್ಯಾಟೂಗೂ ಅಕಾಯ್ ಹೆಸರಿಗೂ ಇದೆ ವಿಶೇಷ ಅರ್ಥ; ವಿರಾಟ್ ಪುತ್ರನ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ನಕಲಿ ಖಾತೆಗಳು ಓಪನ್-the link between kohli tattoo and newborn babys name akaay countless fake accounts opened in the name of virat son prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಕೊಹ್ಲಿಯ ಶಿವನ ಟ್ಯಾಟೂಗೂ ಅಕಾಯ್ ಹೆಸರಿಗೂ ಇದೆ ವಿಶೇಷ ಅರ್ಥ; ವಿರಾಟ್ ಪುತ್ರನ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ನಕಲಿ ಖಾತೆಗಳು ಓಪನ್

ಕೊಹ್ಲಿಯ ಶಿವನ ಟ್ಯಾಟೂಗೂ ಅಕಾಯ್ ಹೆಸರಿಗೂ ಇದೆ ವಿಶೇಷ ಅರ್ಥ; ವಿರಾಟ್ ಪುತ್ರನ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ನಕಲಿ ಖಾತೆಗಳು ಓಪನ್

Virat Kohi Son Akaay : ವಿರಾಟ್ ಕೊಹ್ಲಿ ಹೊಂದಿರುವ ಲಾರ್ಡ್ ಶಿವನ ಟ್ಯಾಟೂಗೂ ಮತ್ತು ಪುತ್ರನಿಗೆ ಇಟ್ಟಿರುವ ಅಕಾಯ್ ಹೆಸರಿಗೂ ಇದೆ ವಿಶೇಷ ಅರ್ಥ. ಅದೇನೆಂಬುದನ್ನು ಈ ಮುಂದೆ ಓದಿ.

ಕೊಹ್ಲಿ ಶಿವನ ಟ್ಯಾಟೂಗೂ ಅಕಾಯ್ ಹೆಸರಿಗೂ ಇದೆ ವಿಶೇಷ ಅರ್ಥ
ಕೊಹ್ಲಿ ಶಿವನ ಟ್ಯಾಟೂಗೂ ಅಕಾಯ್ ಹೆಸರಿಗೂ ಇದೆ ವಿಶೇಷ ಅರ್ಥ

ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಹಾಲಿ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಗಂಡು ಮಗುವಿನ ತಂದೆಯಾಗಿದ್ದಾರೆ. ಕೊಹ್ಲಿ-ಅನುಷ್ಕಾ (Virat Kohli-Anushka Sharma) ದಂಪತಿಯೇ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ತಮ್ಮ ಪುತ್ರನಿಗೆ ಅಕಾಯ್ (Virat Kohli Son Akaay) ಎಂದು ಹೆಸರಿಟ್ಟಿದ್ದಾರೆ. ಕೊಹ್ಲಿ ಹೊಂದಿರುವ ಶಿವನ ಟ್ಯಾಟೂಗೂ ಕೊಹ್ಲಿ ಮಗನ ಹೆಸರಿಗೂ ವಿಶೇಷ ಅರ್ಥವಿದೆ.

ಫೆಬ್ರವರಿ 15ರ ಗುರುವಾರ ಅನುಷ್ಕಾ ಶರ್ಮಾ ಅವರು ಗುಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ ದಂಪತಿ ಈ ಸಂತಸದ ಮಾಹಿತಿಯನ್ನು ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಫೆ 20ರಂದು ಶೇರ್ ಮಾಡಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ಐಕಾನ್ ಎಡ ಮುಂದೋಳಿನ ಮೇಲೆ ಲಾರ್ಡ್ ಶಿವನ ಟ್ಯಾಟೂ ಹಾಕಿಸಿಕೊಂಡಿದ್ದರು. ಈ ಚಿತ್ರ ಎಲ್ಲೆಡೆ ಹರಿದಾಡುತ್ತಿದೆ.

ಹೆಸರಿನ ಹಿಂದಿರುವ ಅರ್ಥವೇನು?

ಶಿವನ ಟ್ಯಾಟೂವನ್ನೇ ಹಾಕಿಸಿಕೊಳ್ಳಲು ಪ್ರಮುಖ ಕಾರಣ ಇದೆ. ಅಕಾಯ್ ಎಂಬುದಕ್ಕೆ ಎರಡು ಅರ್ಥಗಳು ಸಿಗುತ್ತವೆ. ಅಕಾಯ್ ಎಂಬುದು ಸಂಸ್ಕೃತ ಮೂಲವನ್ನು ಹೊಂದಿದೆ. ಇದರ ಅರ್ಥ ಏನೆಂದರೆ ನಿರಾಕಾಯ ಅಥವಾ ದೈಹಿಕ ಶಕ್ತಿಗಿಂತ ಮಿಗಿಲಾದವನು. ಶಿವಪುರಾಣದಲ್ಲಿ 'ಅಕಾಯ್‌' ಎಂಬುದು ಶಿವನ ಹೆಸರಾಗಿದೆ. ಅಕಾಯ್ ಎಂಬುದು ಶಿವನ ಹೆಸರೇ ಆಗಿರುವುದು ಟ್ಯಾಟೂಗೂ ಲಿಂಕ್​ ಹೊಂದಿದೆ. ಸದ್ಯ ಅವರ ದೇಹದ ಮೇಲೆ 12 ಟ್ಯಾಟೂಗಳಿವೆ. ಇನ್ನು ಇದೇ ಹೆಸರು ಟರ್ಕಿಶ್ ಭಾಷೆಯಲ್ಲೂ ಇದ್ದು, ಅಲ್ಲಿ ‘ಹೊಳೆಯುವ ಚಂದ್ರ’ ಎಂಬರ್ಥವನ್ನು ಹೊಂದಿದೆ.

ಲೆಕ್ಕವಿಲ್ಲದಷ್ಟು ನಕಲಿ ಖಾತೆಗಳು

ಅಲ್ಲದೆ, ಅಕಾಯ್​ ಜನಿಸಿದ ಕುರಿತು ಮಾಹಿತಿ ನೀಡಿದ ಬೆನ್ನಲ್ಲೇ ಜೂನಿಯರ್ ವಿರಾಟ್ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ನಕಲಿ ಖಾತೆಗಳನ್ನು ತೆರೆಯಲಾಗಿದೆ. ಕಂದನ ಹೆಸರು ಅಕಾಯ್ ಎಂದು ಬಹಿರಂಗಪಡಿಸುತ್ತಿದ್ದಂತೆ ಹೊಸ ಸಂಚಲನ ಸೃಷ್ಟಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಲೆಕ್ಕಕ್ಕೇ ಸಿಗದಷ್ಟು ನಕಲಿ ಖಾತೆಗಳನ್ನು ತೆರೆಯಲಾಗಿದೆ. ಈ ಮೊದಲು ಕೊಹ್ಲಿ ಎಂದು ಜಾಲತಾಣಗಳಲ್ಲಿ ಸರ್ಚ್ ಮಾಡಿದರೆ, ವಿರಾಟ್ ಕೊಹ್ಲಿ ಹೆಸರಿನ ಖಾತೆಗಳು ಬರುತ್ತಿದ್ದವು. ಆದರೀಗ ಅಕಾಯ್ ಕೊಹ್ಲಿ ಖಾತೆಗಳು ಸೋಷಿಯಲ್ ಮೀಡಿಯಾಗಳಲ್ಲಿ ರಾರಾಜಿಸುತ್ತಿವೆ.

ಕೊಹ್ಲಿ ಪೋಸ್ಟ್​

ತುಂಬಾ ಸಂತೋಷ ಮತ್ತು ನಮ್ಮ ಹೃದಯ ಪ್ರೀತಿಯಿಂದ ತುಂಬಿದೆ. ಫೆಬ್ರವರಿ 15 ರಂದು ನಾವು ನಮ್ಮ ಗಂಡು ಮಗು ಅಕಾಯ್, ವಮಿಕಾಳ ಪುಟ್ಟ ಸಹೋದರನನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ಎಲ್ಲರಿಗೂ ತಿಳಿಸಲು ನಾವು ಸಂತೋಷಪಡುತ್ತೇವೆ! ಎಂದು ವಿರಾಟ್ ಕೊಹ್ಲಿ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

"ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಕೋರುತ್ತೇವೆ. ಈ ಸಮಯದಲ್ಲಿ ದಯವಿಟ್ಟು ನಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ವಿನಂತಿಸುತ್ತೇವೆ. ಪ್ರೀತಿ ಮತ್ತು ಕೃತಜ್ಞತೆ. ಇಂತಿ ವಿರಾಟ್ ಮತ್ತು ಅನುಷ್ಕಾ ಎಂದು ಪತ್ರದ ಮೂಲಕ ವಿರಾಟ್ ದಂಪತಿ ಮಾಹಿತಿ ಹಂಚಿಕೊಂಡಿದ್ದಾರೆ.

2021ರಲ್ಲಿ ವಮಿಕಾ ಹುಟ್ಟಿದ್ದಳು

2021ರ ಜನವರಿ 1 ರಂದು ವಿರುಷ್ಕಾ ದಂಪತಿ ವಮಿಕಾಳನ್ನು ಸ್ವಾಗತಿಸಿದ್ದರು. 2023ರ ಫೆಬ್ರವರಿ 15 ರಂದು ಎರಡನೇ ಮಗು ಅಕಾಯ್ ಆಗಮನವಾಗಿದೆ. ಕೊಹ್ಲಿ ಮತ್ತು ಅನುಷ್ಕಾ 2017 ರಲ್ಲಿ ವಿವಾಹವಾಗಿದ್ದರು. ಕಳೆದ ತಿಂಗಳು ಈ ಸ್ಟಾರ್ ದಂಪತಿ ತಮ್ಮ ಮಗಳು ವಮಿಕಾ ಅವರ ಮೂರನೇ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದರು. ಇದೀಗ ಇವರ ಖುಷಿ ಡಬಲ್ ಆಗಿದೆ.

ಭಾರತ-ಇಂಗ್ಲೆಂಡ್ ನಡುವಿನ 2 ಟೆಸ್ಟ್ ಪಂದ್ಯಗಳಿಗೆ ಸ್ಥಾನ ಪಡೆದಿದ್ದರೂ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳನ್ನು ನೀಡಿ ಹೈದರಾಬಾದ್‌ನಲ್ಲಿ ನಡೆದಿದ್ದ ಮೊದಲ ಪಂದ್ಯ ಆರಂಭವಾಗುವುದಕ್ಕೂ ಮೂರು ದಿನಗಳ ಮೊದಲು ಸರಣಿಯಿಂದ ಹಿಂದೆ ಸರಿದ್ದರು. ಇದಾದ ಬಳಿಕ ಎಬಿ ಡಿವಿಲಿಯರ್ಸ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿ, ನಾನು ಹೇಳಿದ್ದು ಸುಳ್ಳು ಎಂದಿದ್ದರು. ಇದೀಗ ಮಾತು ಸತ್ಯವಾಗಿದೆ.

ಕೊಹ್ಲಿ ಅವರ ಆಪ್ತ ಸ್ನೇಹಿತ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ಬಿವಿ ಡಿವಿಲಿಯರ್ಸ್ ಕೊಹ್ಲಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ ಎಂದು ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಹಿತಿ ಬಹಿರಂಗಪಡಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದರು. ನಂತರ ವಿರಾಟ್ ಅವರು ತಂಡದಿಂದ ವಿರಾಮ ಪಡೆದಿದ್ದ ಸುದ್ದಿ ಮತ್ತಷ್ಟು ಕುತೂಹಲ ಹೆಚ್ಚಿಸಿತ್ತು.

ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಲ್ಲಿ ಮುನ್ನಡೆ ಪಡೆದಿದೆ. ನಾಲ್ಕು ಮತ್ತು ಐದನೇ ಟೆಸ್ಟ್ ಪಂದ್ಯಗಳಿಗಾಗಿ ವಿರಾಟ್ ಕೊಹ್ಲಿ ತಂಡವನ್ನು ಸೇರಿಕೊಳ್ಳುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )