ಕೆನ್ನೆಯ ಆಕಾರದಿಂದಲೂ ತಿಳಿಯಬಹುದು ವ್ಯಕ್ತಿತ್ವ; ಗುಂಡಗಿನ ಗುಳಿ ಕೆನ್ನೆ ಇರುವವರು ಭವಿಷ್ಯದಲ್ಲಿ ಹೇಗಿರುತ್ತಾರೆ? ಇಲ್ಲಿದೆ ಮಾಹಿತಿ-characteristic of people who has bubbly cheeks and dimple astrological prediction in kannada sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕೆನ್ನೆಯ ಆಕಾರದಿಂದಲೂ ತಿಳಿಯಬಹುದು ವ್ಯಕ್ತಿತ್ವ; ಗುಂಡಗಿನ ಗುಳಿ ಕೆನ್ನೆ ಇರುವವರು ಭವಿಷ್ಯದಲ್ಲಿ ಹೇಗಿರುತ್ತಾರೆ? ಇಲ್ಲಿದೆ ಮಾಹಿತಿ

ಕೆನ್ನೆಯ ಆಕಾರದಿಂದಲೂ ತಿಳಿಯಬಹುದು ವ್ಯಕ್ತಿತ್ವ; ಗುಂಡಗಿನ ಗುಳಿ ಕೆನ್ನೆ ಇರುವವರು ಭವಿಷ್ಯದಲ್ಲಿ ಹೇಗಿರುತ್ತಾರೆ? ಇಲ್ಲಿದೆ ಮಾಹಿತಿ

ಜ್ಯೋತಿಷ್ಯದಲ್ಲಿ ಮೂಗು, ಕಣ್ಣು, ಕೈ ಬೆರಗಳುಗಳು ಸೇರಿದಂತೆ ವಿವಿಧ ಭಾಗಗಳ ಆಕಾರದಿಂದ ವ್ಯಕ್ತಿತ್ವವನ್ನು ಕಂಡು ಹಿಡಿಯಬಹುದು. ಕೆನ್ನೆಗಳನ್ನು ನೋಡಿಯೂ ಅವರ ವ್ಯಕ್ತಿತ್ವ,ಭವಿಷ್ಯದ ಬಗ್ಗೆ ತಿಳಿಯಬಹುದು. ಕೆನ್ನೆ ಗುಂಡಾಗಿದ್ದು ಮಧ್ಯೆ ಗುಳಿ ಇರುವವರ ವ್ಯಕ್ತಿತ್ವ ಯಾವ ರೀತಿ ಇರುತ್ತದೆ. ಅವರು ಜೀವನದಲ್ಲಿ ಹೇಗೆ ಬಾಳುತ್ತಾರೆ? ನೋಡೋಣ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಕೆನ್ನೆಯ ಆಕಾರದಿಂದಲೂ ತಿಳಿಯಬಹುದು ವ್ಯಕ್ತಿತ್ವ; ಗುಂಡಗಿನ ಗುಳಿ ಕೆನ್ನೆ ಇರುವವರು ಭವಿಷ್ಯದಲ್ಲಿ ಹೇಗಿರುತ್ತಾರೆ? ಇಲ್ಲಿದೆ ಮಾಹಿತಿ (ಸಾಂದರ್ಭಿಕ ಚಿತ್ರ)
ಕೆನ್ನೆಯ ಆಕಾರದಿಂದಲೂ ತಿಳಿಯಬಹುದು ವ್ಯಕ್ತಿತ್ವ; ಗುಂಡಗಿನ ಗುಳಿ ಕೆನ್ನೆ ಇರುವವರು ಭವಿಷ್ಯದಲ್ಲಿ ಹೇಗಿರುತ್ತಾರೆ? ಇಲ್ಲಿದೆ ಮಾಹಿತಿ (ಸಾಂದರ್ಭಿಕ ಚಿತ್ರ) (PC: Freepik)

ಕೆಲವರ ಕೆನ್ನೆಯು ಗುಂಡಾಗಿದ್ದು ಅದರ ಮಧ್ಯೆ ಗುಳಿ ಇರುತ್ತದೆ. ಇಂತಹವರ ಜೀವನವೇ ವಿಶೇಷವಾಗಿರುತ್ತದೆ. ಇವರನ್ನು ಅದೃಷ್ಟವಂತರು ಎಂದು ಹೇಳಬಹುದು. ಚಿಕ್ಕ ವಯಸ್ಸಿನಲ್ಲಿ ಇವರು ಜನಾನುರಾಗಿ ಆಗುತ್ತಾರೆ. ತಮ್ಮ ಸ್ವಂತ ಕೆಲಸ ಕಾರ್ಯಗಳನ್ನು ಬೇರೆಯವರಿಂದ ಮಾಡಿಸಿಕೊಳ್ಳುತ್ತಾರೆ. ಇವರು ಸೋಮಾರಿಗಳಲ್ಲ. ಆದರೆ ಇವರಿಗೆ ಉತ್ತಮ ಅವಕಾಶ ಮತ್ತು ಬೇರೆಯವರ ಸಹಕಾರ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ.

ವಿದ್ಯಾಭ್ಯಾಸದ ಜೊತೆಗೆ ಹಣ ಸಂಪಾದನೆ ಮಾಡುತ್ತಾರೆ

ಚಿಕ್ಕ ಮಕ್ಕಳಲ್ಲಿ ಆರೋಗ್ಯದ ತೊಂದರೆ ಕಂಡು ಬರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ತೋರಿದಲ್ಲಿ ಕಲಿಕೆಯಲ್ಲಿ ಉನ್ನತ ಸ್ಥಾನಮಾನ ಗಳಿಸಬಹುದು. ಆದರೆ ಇವರು ಓದಿನ ವಿಚಾರದಲ್ಲಿಯೂ ಲೆಕ್ಕಾಚಾರದ ಸ್ವಭಾವ ತೋರಿಸುತ್ತಾರೆ. ಪರೀಕ್ಷೆಗೆ ಬರಬಹುದಾದ ವಿಷಯಗಳನ್ನು ಅಷ್ಟೇ ಅಧ್ಯಯನ ಮಾಡುವುದು ಇವರ ಗುಣ. ಕೆಲವೊಮ್ಮೆ ಇವರ ನಿರೀಕ್ಷೆಯಂತೆ ಇವರು ಓದಿದ ವಿಚಾರಗಳು ಮಾತ್ರ ಪರೀಕ್ಷೆಗಳಲ್ಲಿ ಬರುತ್ತದೆ.

ಇವರ ಮುಖ ನೋಡಿದವರಿಗೆ ಸಹಾಯ ಮಾಡಬೇಕೆನ್ನುವ ಮನಸ್ಸು ಉಂಟಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಚಿಕ್ಕಂದಿನಿಂದಲೇ ಇವರು ಜಿಪುಣತನ ತೋರಿಸುತ್ತಾರೆ. ಬರುವ ಆದಾಯದಲ್ಲಿ ಕನಿಷ್ಠ ಪಾಲನ್ನಾದರೂ ಉಳಿಸುವುದು ಇವರ ಗುರಿಯಾಗಿರುತ್ತದೆ. ವಿದ್ಯಾಭ್ಯಾಸ ಮಾಡುವ ಜೊತೆಗೆ ಇವರು ಹಣ ಸಂಪಾದನೆ ಆರಂಭಿಸುತ್ತಾರೆ. ಇವರಲ್ಲಿ ಅಪಾರ ಬುದ್ಧಿಶಕ್ತಿಗೆ ಎಲ್ಲರೂ ತಲೆದೂಗುತ್ತಾರೆ. ಉದ್ಯೋಗದಲ್ಲಿ ಇವರಿಗೆ ಅನುಕೂಲವಾಗುವಂಥ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳುತ್ತಾರೆ.

ಜಗಳ ಕದನಗಳಿಗೆ ಆಸ್ಪದ ನೀಡದೆ ಎಲ್ಲರಿಗೂ ಮೆಚ್ಚುಗೆಯಾಗುವಂತೆ ಮಾತನಾಡಿ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಾರೆ. ಇವರ ವೈವಾಹಿಕ ಜೀವನ ಸಾಧಾರವಣವಾಗುತ್ತದೆ. ಇವರ ಸಂಗಾತಿಗೆ ಇವರ ಮನಸ್ಸಿನಲ್ಲಿರುವ ವಿಚಾರಗಳು ಅರ್ಥವಾಗುವುದಿಲ್ಲ. ದಂಪತಿಗಳಲ್ಲಿ ಪರಸ್ಪರ ನಂಬಿಕೆ ಕೊರತೆ ಕಂಡುಬರುತ್ತದೆ. ತಮ್ಮ ಜೀವನ ನಡೆಸಲು ಇವರು ಯಾರನ್ನೂ ಆಶ್ರಯಿಸುವುದಿಲ್ಲ. ನಿತ್ಯ ಜೀವನಕ್ಕೆ ಬೇಕಾದ ಹಣ ಸಂಪಾದಿಸುವ ಛಲ ಇವರಿಗೆ ಇರುತ್ತದೆ. ವಯಸ್ಸಾದ ನಂತರವೂ ಇವರು ಸ್ವತಂತ್ರವಾದ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ.

ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಾರೆ

ಕೆಲವರ ಕೆನ್ನೆಯು ಮೀನಿನ ಹೊಟ್ಟೆಯ ಆಕಾರದಂತೆ ಇರುತ್ತದೆ. ಸಾಮಾನ್ಯವಾಗಿ ಇವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಇವರ ಮನಸ್ಸಿನ ಎಲ್ಲಾ ಆಸೆ ಆಕಾಂಕ್ಷೆಗಳು ಸುಲಭವಾಗಿ ಈಡೇರುತ್ತವೆ. ಮಕ್ಕಳಿದ್ದಾಗಲೂ ಸಹ ಇವರು ಐಷಾರಾಮಿ ಜೀವನ ನಡೆಸುತ್ತಾರೆ. ತಂದೆ ಅಥವಾ ತಾಯಿಯಿಂದ ಹಣದ ಸಹಾಯ ದೊರವ ಕಾರಣ ವಿದ್ಯಾರ್ಥಿಗಳು ಯಾವುದೇ ಅಡೆತಡೆ ಇಲ್ಲದೆ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಸ್ತ್ರೀಯರಾದಲ್ಲಿ ಐಷಾರಾಮಿ ಜೀವನ ನಡೆಸುತ್ತಾರೆ. ವಿದ್ಯಾಭ್ಯಾಸದಲ್ಲಿ ಉನ್ನತಿ ಸಾಧಿಸಲು ಹೆಚ್ಚಿನ ಪ್ರಯತ್ನ ಪಡುತ್ತಾರೆ. ವಿದೇಶದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಲು ಅವಕಾಶ ದೊರೆಯುತ್ತದೆ. ಸ್ವತಂತ್ರ ಜೀವನ ನಡೆಸಲು ಅವಶ್ಯವಿರುವ ಜ್ಞಾನ ಸಂಪಾದಿಸುತ್ತಾರೆ. ವಿದ್ಯಾಭ್ಯಾಸ ಮುಗಿದ ತಕ್ಷಣ ಇವರಿಗೆ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ.

ಉದ್ಯೋಗದಲ್ಲಿ ಇವರ ಮನಸ್ಸಿಗೆ ಒಪ್ಪುವಂಥ ಸನ್ನಿವೇಶ ಎದುರಾಗುತ್ತವೆ. ಹಣಕಾಸಿನ ವ್ಯವಹಾರದಲ್ಲಿ ವಿಶೇಷವಾದ ಆಸಕ್ತಿ ಇರುತ್ತದೆ. ಇವರ ಮನಸ್ಸನ್ನು ಒಪ್ಪುವಂತಹ ಸಂಗಾತಿಯೊಂದಿಗೆ ವಿವಾಹವಾಗುತ್ತದೆ. ವೈವಾಹಿಕ ಜೀವನದಲ್ಲಿ ಸುಖ ಸಂತೋಷ ಮನೆ ಮಾಡಿರುತ್ತದೆ. ಮನೆಗೆ ಸಂಬಂಧಿಸಿದ ವಿಚಾರಗಳು ಬೇರೆಯವರಿಗೆ ತಿಳಿಯದಂತೆ ನಿಗಾ ವಹಿಸುವಲ್ಲಿ ಯಶಸ್ಸು ಗಳಿಸುತ್ತಾರೆ. ಬಂಧು ಬಳಗದವರ ಅಥವಾ ನೆರೆಹೊರೆಯವರ ಕಷ್ಟ ನಷ್ಟಗಳಿಗೆ ಸ್ಪಂದಿಸುತ್ತಾರೆ.

ಕುಟುಂಬದ ಹಿರಿಯ ವ್ಯಕ್ತಿಗಳು ಮತ್ತು ಹಿರಿಯ ಅಧಿಕಾರಿಗಳು ಇವರ ಬೆಂಬಲಕ್ಕೆ ಸದಾ ಕಾಲ ನಿಲ್ಲುತ್ತಾರೆ. ಹವ್ಯಾಸವಾಗಿ ಆರಂಭವಾದ ಬರವಣಿಗೆಯು ಮುಂದೆ ವೃತ್ತಿಯಾಗುತ್ತದೆ. ಸಮಾಜದಲ್ಲಿ ನಾಯಕರಾಗಿ ಬೆಳೆಯುವ ಅವಕಾಶ ದೊರೆಯಲಿದೆ. ರಾಜಕೀಯದಲ್ಲಿ ಆಸಕ್ತಿ ಇರುವುದಿಲ್ಲ, ಆದರೆ ರಾಜಕೀಯ ವ್ಯಕ್ತಿಗಳ ಒಡನಾಟ ಇರುತ್ತದೆ. ಪದೇ ಪದೇ ಉದ್ಯೋಗ ಬದಲಿಸುತ್ತಾರೆ. ಮಕ್ಕಳ ಜೊತೆ ಸುಖ ಸಂತೋಷದ ಜೀವನವನ್ನು ನಡೆಸುತ್ತಾರೆ. ಇವರ ಆರೋಗ್ಯದಲ್ಲಿ ಸದಾ ಕಾಲ ಏನಾದರೂ ತೊಂದರೆ ಇದ್ದೇ ಇರುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

mysore-dasara_Entry_Point

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.