ರಾಘವೇಂದ್ರ ಸ್ವಾಮಿಗಳ ಆರಾಧನೆ ಪ್ರಯುಕ್ತ ಆ.18 ರಿಂದ 24ವರೆಗೆ ಮಂತ್ರಾಲಯದಲ್ಲಿ ನಡೆಯುವ ಕಾರ್ಯಕ್ರಮಗಳ ಮಾಹಿತಿ-hindu culture program details of guru raghavendra swami aradhana mahotsava held in mantralya from august 18th rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಘವೇಂದ್ರ ಸ್ವಾಮಿಗಳ ಆರಾಧನೆ ಪ್ರಯುಕ್ತ ಆ.18 ರಿಂದ 24ವರೆಗೆ ಮಂತ್ರಾಲಯದಲ್ಲಿ ನಡೆಯುವ ಕಾರ್ಯಕ್ರಮಗಳ ಮಾಹಿತಿ

ರಾಘವೇಂದ್ರ ಸ್ವಾಮಿಗಳ ಆರಾಧನೆ ಪ್ರಯುಕ್ತ ಆ.18 ರಿಂದ 24ವರೆಗೆ ಮಂತ್ರಾಲಯದಲ್ಲಿ ನಡೆಯುವ ಕಾರ್ಯಕ್ರಮಗಳ ಮಾಹಿತಿ

ಈ ಬಾರಿ ಆಗಸ್ಟ್‌ 18 ರಿಂದ 24 ವರೆಗೆ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಡೆಯುತ್ತಿದೆ. ಇದರ ಪ್ರಯುಕ್ತ ಮೂಲ ಬೃಂದಾವನವಿರುವ ಮಂತ್ರಾಲಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಮಠದ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ರಾಘವೇಂದ್ರ ಸ್ವಾಮಿಗಳ ಆರಾಧನೆ ಪ್ರಯುಕ್ತ ಆ.18 ರಿಂದ 24ವರೆಗೆ ಮಂತ್ರಾಲಯದಲ್ಲಿ ನಡೆಯುವ ಕಾರ್ಯಕ್ರಮಗಳ ಮಾಹಿತಿ
ರಾಘವೇಂದ್ರ ಸ್ವಾಮಿಗಳ ಆರಾಧನೆ ಪ್ರಯುಕ್ತ ಆ.18 ರಿಂದ 24ವರೆಗೆ ಮಂತ್ರಾಲಯದಲ್ಲಿ ನಡೆಯುವ ಕಾರ್ಯಕ್ರಮಗಳ ಮಾಹಿತಿ (PC: @chamundi_betta, ಜಗ್ಗೇಶ್ ಶಿವಲಿಂಗಪ್ಪ Facebook)

ರಾಘವೇಂದ್ರ ಸ್ವಾಮಿಗಳು ಸಶರೀರ ಬೃಂದಾವನಸ್ಥರಾದ ದಿನವನ್ನು ಪ್ರತಿ ವರ್ಷ ಆರಾಧನೆಯನ್ನಾಗಿ ಆಚರಿಸಲಾಗುತ್ತದೆ. 1671 ರಲ್ಲಿ ಶ್ರಾವಣ ಕೃಷ್ಣ ಪಕ್ಷದ ದ್ವಿತೀಯ ದಿನದಂದು ರಾಘವೇಂದ್ರ ಸ್ವಾಮಿಗಳು ಸಶರೀರ ಬೃಂದಾವನಸ್ಥರಾದರು. ಅಂದಿನಿಂದ ಪ್ರತಿ ವರ್ಷ ಆ ದಿನವನ್ನು ರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನಾಗಿ ಆಚರಿಸಲಾಗುತ್ತಿದೆ. ಈ ಬಾರಿ ಕೂಡಾ ಮೂಲ ಬೃಂದಾವನವಿರುವ ಮಂತ್ರಾಲಯ ಹಾಗೂ ಎಲ್ಲಾ ರಾಯರ ಮಠದಲ್ಲಿ ಆರಾಧನೆಯನ್ನು ಆಚರಿಸಲಾಗುತ್ತಿದೆ.

ಈ ಬಾರಿ ಆಗಸ್ಟ್‌ 18 ರಿಂದ 14 ವರೆಗೆ ಒಂದು ವಾರಗಳ ಕಾಲ 353ನೇ ಆರಾಧನಾ ಮಹೋತ್ಸವವನ್ನು ಮಂತ್ರಾಲಯದಲ್ಲಿ ಆಚರಿಸಲಾಗುತ್ತಿದೆ. ಇದಕ್ಕಾಗಿ ತಯಾರಿ ಕೂಡಾ ಆರಂಭವಾಗಿದೆ. ಈ ಹಿನ್ನೆಲೆ ಮಂತ್ರಾಲಯದ ಶ್ರೀಗಳಾದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿ, ಭಕ್ತರಿಗೆ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದಾರೆ. ಮಠದ ಅಧಿಕೃತ ವೆಬ್‌ಸೈಟ್‌ನಲ್ಲಿ 7 ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಯ ಪ್ರತಿಯನ್ನು ಹಂಚಿಕೊಳ್ಳಲಾಗಿದೆ.

ಮಂತ್ರಾಲಯದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ವಿವರ

ಆಗಸ್ಟ್‌ 18, ಭಾನುವಾರ

ಅಂದು ಬೆಳಗ್ಗೆ 8 ಗಂಟೆಗೆ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಯಿಂದ ರಾಘವೇಂದ್ರ ಸ್ವಾಮಿಗಳಿಗೆ ತಿರುಮಲ ಶ್ರೀನಿವಾಸದೇವರ ವಸ್ತ್ರ ಸಮರ್ಪಣೆ ಮಾಡಲಾಗುವುದು.

10 ಗಂಟೆಗೆ ಗಂಗಾವತಿಯ ವಿದ್ವಾನ್‌ ಗೊರೆಬಲ್‌ ವಾಗೀಶಾಚಾರ್‌ ಅವರಿಂದ ಪ್ರವಚನ

ಸಂಜೆ 6 ಗಂಟೆಗೆ ಧ್ವಜಾರೋಹಣ

ರಾತ್ರಿ 8 ಗಂಟೆಗೆ ಪ್ರಾರ್ಥನೋತ್ಸವ, ಪ್ರಭಾವ ಉತ್ಸವ, ಧನ್ಯೋತ್ಸವ ನಡೆಯಲಿದೆ

ಆಗಸ್ಟ್‌ 19, ಸೋಮವಾರ

ಬೆಳಗ್ಗೆ 8ಕ್ಕೆ ಯಜುರ್ವೇದ ನಿತ್ಯ ನೂತನ ಉಪಕರ್ಮ

ಬೆಳಗ್ಗೆ 10ಕ್ಕೆ ಮೈಸೂರಿನ ವಿದ್ವಾನ್‌ ಮಾಥವೇಶ್ವರಾಚಾರ್‌ ಅವರಿಂದ ಪ್ರವಚನ

ರಾತ್ರಿ 8ಕ್ಕೆ ಶಕೋತ್ಸವ , ರತಜ ಮಂಟಪೋತ್ಸವ

ಆಗಸ್ಟ್‌ 20, ಮಂಗಳವಾರ

ಆ ದಿನ ಪೂರ್ವಾರಾಧನೆ ಪ್ರಯುಕ್ತ ಬೆಳಗ್ಗೆ 10ಕ್ಕೆ ಬೆಂಗಳೂರಿನ ವಿದ್ವಾನ್‌ ಬಿ.ಎನ್‌, ವಿಜಯೇಂದ್ರಾಚಾರ್‌ ಅವರಿಂದ ಪ್ರವಚನ

ಸಂಜೆ 7.30ಕ್ಕೆ ಗಣ್ಯರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭ. ಕಾರ್ಯಕ್ರಮಕ್ಕೆ ಮೈಸೂರು-ಕೊಡಗು ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್‌ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ರಾತ್ರಿ 8ಕ್ಕೆ ರಜತ ಸಿಂಹ ವಾಹನೋತ್ಸವ

ಆಗಸ್ಟ್‌ 21, ಬುಧವಾರ

ಮಧ್ಯಾರಾಧನೆ ಪ್ರಯುಕ್ತ ಬೆಳಗ್ಗೆ 9 ಕ್ಕೆ ಮಹಾ ಪಂಚಾಮೃತ ಅಭಿಷೇಕ ಏರ್ಪಡಿಸಲಾಗಿದೆ

ರಾತ್ರಿ 8ಕ್ಕೆ ಗಜವಾಹನೋತ್ಸವ, ರಜತ ಹಾಗೂ ಸುವರ್ಣ ರಜೋತ್ಸವ ಕಾರ್ಯಕ್ರಮವಿದೆ.

ಆಗಸ್ಟ್‌ 22, ಗುರುವಾರ

ಉತ್ತರ ಆರಾಧನೆ ಪ್ರಯುಕ್ತ ಬೆಳಗ್ಗೆ 8 ಕ್ಕೆ ರಾಯಚೂರಿನ ವಿದ್ವಾನ್‌ ಬಂಡಿ ಶ್ಯಾಮಾಚಾರ್ಯ ಅವರಿಂದ ಪ್ರವಚನ

ಬೆಳಗ್ಗೆ 10 ಗಂಟೆಗೆ ಮಹಾರಥೋತ್ಸವವಿದೆ.

ಆಗಸ್ಟ್‌ 23, ಶುಕ್ರವಾರ

ಬೆಳಗ್ಗೆ 10 ಕ್ಕೆ ಕಂಬಲದಿನ್ನಿಯ ವಿದ್ವಾನ್‌ ಲಕ್ಷ್ಮೀನಾರಾಯಣ ಆಚಾರ್‌ ಅವರಿಂದ ಪ್ರವಚನ

ರಾತ್ರಿ 8ಕ್ಕೆ ಅಶ್ವ ವಾಹನೋತ್ಸವ ಹಾಗೂ ಶ್ರೀ ಸುಜ್ಞಾನೇಂದ್ರ ತೀರ್ಥರ ಆರಾಧನೆ

ಆಗಸ್ಟ್‌ 24, ಶನಿವಾರ

ಬೆಳಗ್ಗೆ 10ಕ್ಕೆ ಬೆಂಗಳೂರಿನ ವಿದ್ವಾನ್‌ ವೇಣುಗೋಪಾಲಾಚಾರ್‌ ಅಗ್ನಿಹೋತ್ರಿ ಅವರಿಂದ ಪ್ರವಚನ

ರಾತ್ರಿ 8 ಕ್ಕೆ ಸರ್ವಸಮಪರ್ಣೋತ್ಸವ ಆಯೋಜಿಸಲಾಗಿದೆ

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸೇವೆಗಳ ವಿವರ

ಇದರೊಂದಿಗೆ ಪ್ರತಿದಿನ ಸಂಜೆ 5.30 ರಿಂದ 9.30ವರೆಗೆ ಭರತನಾಟ್ಯ, ದಾಸವಾಣಿ, ವಾದ್ಯ ಸಂಗೀತ, ಹಿಂದೂಸ್ತಾನಿ ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆ ಪ್ರಯುಕ್ತ ಒಂದು ವಾರಗಳ ಕಾಲ ಮಂತ್ರಾಲಯದಲ್ಲಿ ವಿವಿಧ ಸೇವೆಗಳನ್ನು ಆಯೋಜಿಸಲಾಗಿದೆ. ಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗದ ಭಕ್ತರು ಆನ್‌ ಲೈನ್‌ ಮೂಲಕ ಹಣ ಪಾವತಿಸಿ ಸೇವೆ ಸಲ್ಲಿಸಬಹುದು. ಸೇವೆಗಳು, ದರ ಹಾಗೂ ಆನ್‌ಲೈನ್‌ ಬುಕಿಂಗ್‌ ಮಾಹಿತಿಯನ್ನು ಮಂತ್ರಾಲಯದ ವೆಬ್‌ಸೈಟ್‌ನಲ್ಲಿ ನೋಡಬಹುದು.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.