ಗಡಿಯಾರ, ಕರವಸ್ತ್ರ ಸೇರಿದಂತೆ ಆತ್ಮೀಯರಿಗೆ ಈ ಉಡುಗೊರೆಗಳನ್ನು ಕೊಡಲೇಬೇಡಿ; ಸಂಬಂಧದಲ್ಲಿ ಬಿರುಕು ಮೂಡಬಹುದು ಎಚ್ಚರ!
Vastu Tips: ಮದುವೆ, ಗೃಹಪ್ರವೇಶ, ಬರ್ತ್‌ಡೇ ಪಾರ್ಟಿಯಂತಹ ವಿಶೇಷ ಸಂದರ್ಭದಲ್ಲಿಉಡುಗೊರೆಗಳನ್ನು ಕೊಡುವ ರೂಢಿ ಇದೆ. ಆದರೆ ಗಿಫ್ಟ್ ನೀಡುವಾಗ ಯೋಚಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಉಡುಗೊರೆಗಳನ್ನು ನೀಡುವುದು ಅಶುಭ. ಗಡಿಯಾರ, ಕರವಸ್ತ್ರ ಸೇರಿದಂತೆ ಆತ್ಮೀಯರಿಗೆ ಈ ಉಡುಗೊರೆಗಳನ್ನು ಕೊಡಲೇಬೇಡಿ. ಇದರಿಂದ ಸಂಬಂಧದಲ್ಲಿ ಬಿರುಕು ಮೂಡಬಹುದು ಎಚ್ಚರ.
ಯಾರಿಗಾದರೂ ಉಡುಗೊರೆ ಕೊಡುವ ಮೊದಲು ನಾವೆಲ್ಲರೂ ಬಹಳಷ್ಟು ಯೋಚಿಸುತ್ತೇವೆ. ಏಕೆಂದರೆ ನಾವು ಕೊಡುವ ಉಡುಗೊರೆ ಅವರಿಗೆ ಸವಿನೆನಪಾಗಿರಲಿ ಎಂಬುದು ಅದರ ಹಿಂದಿನ ಉದ್ದೇಶವಾಗಿರುತ್ತದೆ. ಒಮ್ಮೆ ಗಿಫ್ಟ್ ಶಾಪ್‌ಗೆ ಹೋದರೆ ಅಲ್ಲಿ ಸಾಕಷ್ಟು ರೀತಿಯ ಉಡುಗೊರೆಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಕಾಲಕ್ಕೆ ತಕ್ಕಂತೆ ಹೊಸ ಹೊಸ ಐಡಿಯಾಗಳನ್ನು ಯೋಚಿಸಲಾಗುತ್ತದೆ.
ವಸ್ತುಗಳ ಬಣ್ಣದಿಂದ ಹಿಡಿದು ಡಿಸೈನ್‌ವರೆಗೂ ಕಾಳಜಿ ವಹಿಸಲಾಗುತ್ತದೆ. ಅದೆಷ್ಟೋ ಅಂಗಡಿಗಳಿಗೆ ಹೋಗಿ ಕೊನೆಯದಾಗಿ ಒಂದು ಚಂದದ ವಸ್ತುಗಳನ್ನು ಖರೀದಿಸಲಾಗುತ್ತದೆ. ಆದರೆ ಕೆಲವೊಮ್ಮೆ ಅಷ್ಟೆಲ್ಲಾ ಕಷ್ಟಪಟ್ಟು ಹುಡುಕಿ ತಂದ ಉಡುಗೊರೆಗಳಿಂದಲೇ ಸಂಬಂಧಗಳು ಹಾಳಾಯಿತೆಂದರೆ, ಅಲ್ಲಿಗೆ ನಾವು ಅಷ್ಟು ಖರ್ಚು ಮಾಡಿ ನೀಡಿದ ಉಡುಗೊರೆಗೆ ಬೆಲೆಯೇ ಇಲ್ಲದಂತೆ ಆಗುತ್ತದೆ. ಹೌದು, ವಾಸ್ತು ಅಥವಾ ಜ್ಯೋತಿಷ್ಯದಲ್ಲಿ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದನ್ನು ನಿಷೇಧಿಸಲಾಗಿದೆ. ಅವುಗಳಿಂದ ಸಂಬಂಧ ಕೆಡುತ್ತದೆ, ಜಗಳಗಳಾಗುತ್ತವೆ ಎಂಬ ನಂಬಿಕೆಯಿದೆ. ನೀವು ನಿಮ್ಮ ಪ್ರೀತಿ ಪಾತ್ರರಿಗೆ ವಾಸ್ತು ಪ್ರಕಾರವೋ ಅಥವಾ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವೊ ಉಡುಗೊರೆಗಳನ್ನು ನೀಡಿದರೆ ಅಗ ಅದು ಸಂತೋಷ ನೀಡುವುದರ ಜೊತೆಗೆ ಶುಭ ಫಲಿತಾಂಶಗಳು ದೊರೆಯುತ್ತವೆ. ಇದರಿಂದ ನಿಮಗೂ ಬಹಳ ಸಂತೋಷವಾಗುವುದು ಖಂಡಿತ. ಹಾಗಾದರೆ ಯಾವ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು ತಿಳಿಯಲು ಮುಂದೆ ಓದಿ.
ಈ ರೀತಿಯ ಉಡುಗೊರೆಗಳನ್ನು ಎಂದಿಗೂ ಕೊಡಬೇಡಿ
ಸಾಮಾನ್ಯವಾಗಿ ಗಡಿಯಾರವನ್ನು ಉಡುಗೊರೆಯಾಗಿ ಕೊಡಲಾಗುತ್ತದೆ. ಆದರೆ ವಾಸ್ತು ದೃಷ್ಟಿಯಿಂದ ಈ ರೀತಿ ಗಡಿಯಾರ ನೀಡುವುದು ಶುಭವಲ್ಲ ಎಂದು ನಂಬಲಾಗಿದೆ. ಅದೇ ರೀತಿ ಪರ್ಫ್ಯೂಮ್ ಅನ್ನು ಸಹ ಗಿಫ್ಟ್ ಆಗಿ ನೀಡಲೇಬಾರದು ಎಂದು ಹೇಳಲಾಗಿದೆ.
ಈ ವಸ್ತುಗಳನ್ನು ಕೊಟ್ಟರೆ ಸಂಬಂಧಗಳಲ್ಲಿ ಬಿರುಕು ಮೂಡಬಹುದು
ಸಾಮಾನ್ಯವಾಗಿ ಜನರು ಕರವಸ್ತ್ರವನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೀಗೆ ಕೊಡುವುದು ಅಶುಭ ಎಂದು ಹೇಳಲಾಗಿದೆ. ಆ ರೀತಿ ಮಾಡುವುದರಿಂದ ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಹಾಗೆಯೇ ಚಪ್ಪಲಿ, ಶೂ ಇತ್ಯಾದಿಗಳನ್ನು ಉಡುಗೊರೆಯಾಗಿ ನೀಡುವುದು ಒಳ್ಳೆಯದಲ್ಲ.
ಈ ವಸ್ತುವನ್ನಂತೂ ಕೊಡಲೇಬೇಡಿ
ಮಹಾಭಾರತ ಹಿಂದೂಗಳ ಪವಿತ್ರ ಗಂಥವಾಗಿದ್ದರೂ ಅದನ್ನು ಮನೆಯಲ್ಲಿ ಇಡುವುದು ಅಷ್ಟು ಸೂಕ್ತವಲ್ಲ ಎಂಬ ನಂಬಿಕೆ ಇದೆ. ಆದ್ದರಿಂದ ಮಹಾಭಾರತ ಕಾವ್ಯವನ್ನು ಉಡುಗೊರೆಯಾಗಿ ನೀಡಬೇಡಿ. ಏಕೆಂದರೆ ಆ ವ್ಯಕ್ತಿಯೊಂದಿಗೆ ನಿಮ್ಮ ಸಂಬಂಧ ಹಾಳಾಗಬಹುದು.
ಈ ಬಣ್ಣದ ಬಟ್ಟೆಯನ್ನು ಉಡುಗೊರೆಯಾಗಿ ನೀಡಬೇಡಿ
ನಮ್ಮಲ್ಲಿ ಬಟ್ಟೆಯನ್ನು ಉಡುಗೊರೆಯಾಗಿ ನೀಡುವ ಪದ್ಧತಿಯಿದೆ. ಆದರೆ ನೀವು ಯಾರಿಗಾದೂ ಬಟ್ಟೆಯನ್ನು ಉಡುಗೊರೆಯಾಗಿ ನೀಡುವಾಗ ಕಪ್ಪು ಬಣ್ಣದ ಬಟ್ಟೆಯನ್ನು ಎಂದಿಗೂ ನೀಡಬಾರದು ಎಂದು ನೆನಪಿಟ್ಟುಕೊಳ್ಳಿ. ಏಕೆಂದರೆ ಕಪ್ಪು ಬಣ್ಣವನ್ನು ಅಶುಭದ ಸಂಕೇತವೆಂದು ಪರಿಗಣಿಸಲಾಗಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)