ಕಣ್ಣಿನಿಂದ ತಿಳಿಯಬಹುದು ಮನದ ವಿಚಾರ; ವಿಶಾಲವಾದ ಕಣ್ಣು ಹೊಂದಿರುವವರ ಗುಣ ಸ್ವಭಾವ ಹೇಗೆ? ಕಣ್ಣುಗಳು ಯಾವ ದೇವತೆಯ ಅಧೀನಕ್ಕೆ ಒಳಪಟ್ಟಿದೆ?-horoscope character of people who has broad eyes kundali news in kannada eyes in astrology ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕಣ್ಣಿನಿಂದ ತಿಳಿಯಬಹುದು ಮನದ ವಿಚಾರ; ವಿಶಾಲವಾದ ಕಣ್ಣು ಹೊಂದಿರುವವರ ಗುಣ ಸ್ವಭಾವ ಹೇಗೆ? ಕಣ್ಣುಗಳು ಯಾವ ದೇವತೆಯ ಅಧೀನಕ್ಕೆ ಒಳಪಟ್ಟಿದೆ?

ಕಣ್ಣಿನಿಂದ ತಿಳಿಯಬಹುದು ಮನದ ವಿಚಾರ; ವಿಶಾಲವಾದ ಕಣ್ಣು ಹೊಂದಿರುವವರ ಗುಣ ಸ್ವಭಾವ ಹೇಗೆ? ಕಣ್ಣುಗಳು ಯಾವ ದೇವತೆಯ ಅಧೀನಕ್ಕೆ ಒಳಪಟ್ಟಿದೆ?

ಮುಖ ಲಕ್ಷಣ ಮಾತ್ರವಲ್ಲ, ಕಣ್ಣುಗಳ ಆಕಾರ ನೋಡಿ ಕೂಡಾ ಆ ವ್ಯಕ್ತಿಗಳ ಸ್ವಭಾವ ಹೇಳಬಹುದು ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ವಿಶಾಲವಾದ ಕಣ್ಣು ಹೊಂದಿರುವವರ ಗುಣಸ್ವಭಾವ ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಕಣ್ಣಿನಿಂದ ತಿಳಿಯಬಹುದು ಮನದ ವಿಚಾರ; ವಿಶಾಲವಾದ ಕಣ್ಣು ಹೊಂದಿರುವವರ ಗುಣ ಸ್ವಭಾವ ಹೇಗೆ?
ಕಣ್ಣಿನಿಂದ ತಿಳಿಯಬಹುದು ಮನದ ವಿಚಾರ; ವಿಶಾಲವಾದ ಕಣ್ಣು ಹೊಂದಿರುವವರ ಗುಣ ಸ್ವಭಾವ ಹೇಗೆ?

ಜನ್ಮ ದಿನಾಂಕ ಆಧರಿಸಿ ಮಾತ್ರವಲ್ಲ, ಕೈ ರೇಖೆಗಳಿಂದ ಕೂಡಾ ಮನುಷ್ಯನ ಸ್ವಭಾವ ತಿಳಿಯಬಹುದು. ಹಾಗೇ ಕಣ್ಣುಗಳನ್ನು ನೋಡಿಯೂ ಆ ವ್ಯಕ್ತಿಗಳ ಸ್ವಭಾವ ಹೇಳಬಹುದು ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ನಮ್ಮ ದೇಹದ ಪ್ರತಿಯೊಂದು ಭಾಗಗಳು ಪಂಚಭೂತಗಳ ಅಧೀನಕ್ಕೆ ಒಳ ಪಟ್ಟಿದೆ ನಮ್ಮ ಬಲ ಕಣ್ಣು ಸಂಪೂರ್ಣವಾಗಿ ರವಿಯ ಅಥವಾ ಸೂರ್ಯನ ಅಧೀನಕ್ಕೆ ಒಳಪಟ್ಟಿರುತ್ತದೆ.

ವಿಶಾಲ ಕಣ್ಣು ಹೊಂದಿರುವವರ ಗುಣ ಲಕ್ಷಣ

ಕೆಲವರ ಕಣ್ಣು ನೋಡಲು ವಿಶಾಲವಾಗಿರುತ್ತದೆ. ಇಂತಹವರು ಸದಾ ಸಂತೋಷದಿಂದ ಇರುತ್ತಾರೆ. ಇಂತಹವರ ಬಲಕಣ್ಣಿನಲ್ಲಿ ಕಪ್ಪು ಬಣ್ಣದ ಚುಕ್ಕೆ ಇದ್ದಲ್ಲಿ ಇವರಿಂದ ಸಹಾಯ ಪಡೆದವರೇ ಇವರ ವಿರೋಧಿಗಳಾಗಿ ಬದಲಾಗುತ್ತಾರೆ. ಕುಟುಂಬದ ಮತ್ತು ತಮ್ಮನ್ನು ನಂಬಿದವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ಕಷ್ಟಕ್ಕೆ ಸಿಲುಕುತ್ತಾರೆ. ಕುಟುಂಬದ ದೊಡ್ಡ ಜವಾಬ್ದಾರಿಯನ್ನು ಸುಲಭವಾಗಿ ನಿರ್ವಹಿಸುವ ಬುದ್ಧಿಶಕ್ತಿ ಇವರಿಗೆ ಇರುತ್ತದೆ. ಕುಟುಂಬದ ಆಸ್ತಿಯ ವಿಚಾರದಲ್ಲಿ ಬೇರೆಯವರ ಸಹಭಾವತ್ವವನ್ನು ವಿರೋಧಿಸುತ್ತಾರೆ. 

ತಮಗೆ ಅವಶ್ಯಕತೆ ಇದ್ದಷ್ಟು ಹಣ ಅಥವಾ ಆಸ್ತಿಯನ್ನು ಗಳಿಸುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಇವರಲ್ಲಿ ನಾಯಕತ್ವದ ಗುಣ ಕಂಡು ಬರುತ್ತದೆ. ಹಣದ ಅವಶ್ಯಕತೆ ಹೆಚ್ಚಿರುವ ಕಾರಣ ಎರಡು ಅಥವಾ ಹೆಚ್ಚು ಉದ್ಯೋಗವನ್ನು ಮಾಡುತ್ತಾರೆ. ಇವರ ದಾಂಪತ್ಯ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ. ಸಾರ್ವಜನಿಕರಿಗೆ ಅನುಕೂಲವಾಗುವಂತಹ ಸಂಘ ಸಂಸ್ಥೆಯನ್ನು ಆರಂಭಿಸುವಲ್ಲಿ ಇವರು ಯಶಸ್ವಿಯಾಗುತ್ತಾರೆ. ಸದಾಕಾಲ ಇವರು ಸ್ವತಂತ್ಯ್ರ ಜೀವನ ನಡೆಸುತ್ತಾರೆ. ಬೇರೆಯವರ ಮಕ್ಕಳನ್ನು ಸಹ ತಮ್ಮ ಮಕ್ಕಳಂತೆ ಪ್ರೀತಿಯಿಂದ ಕಾಣುತ್ತಾರೆ.

ಕಿರಿದಾದ ಕಣ್ಣು ಹೊಂದಿರುವವರ ಸ್ವಭಾವ

ಕೆಲವರ ಕಣ್ಣು ಸಾಮಾನ್ಯಕ್ಕಿಂತ ಕಿರಿದಾಗಿರುತ್ತದೆ. ಇವರು ಯಾವುದೇ ವಿಚಾರವನ್ನು ಸುಲಭವಾಗಿ ಸಮ್ಮತಿಸುವುದಿಲ್ಲ. ಸಣ್ಣಪುಟ್ಟ ವಿಚಾರಗಳನ್ನು ಆಳವಾಗಿ ಅಧ್ಯಯನ ಮಾಡುವ ಕಾರಣ ಆತ್ಮೀಯರಲ್ಲಿ ಬೇಸರ ಉಂಟಾಗುತ್ತದೆ. ಆರಂಭಿಸಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವವರೆಗೂ ಬೇರೆಯವರಿಗೆ ತಿಳಿಸುವುದಿಲ್ಲ. ಇವರ ಮನದಲ್ಲಿ ಏಕಾಗ್ರತೆ ಮತ್ತು ಹಟ ಮನೆ ಮಾಡಿರುತ್ತದೆ. ವಿದ್ಯಾಭ್ಯಾಸದಲ್ಲಿ ಸುಲಭವಾಗಿ ಯಶಸ್ಸು ಗಳಿಸುತ್ತಾರೆ. ನಿತ್ಯ ಜೀವನಕ್ಕೆ ಅವಶ್ಯವೆನಿಸುವಷ್ಟು ಜ್ಞಾನ ಸಂಪಾದಿಸುವುದು ಇವರ ಗುರಿ. ಬೇರೆಯವರ ಸಲಹೆ ಸೂಚನೆಯನ್ನು ಸುಲಭವಾಗಿ ಪರಿಗಣಿಸುವುದಿಲ್ಲ. ಸ್ನೇಹಿತರಿಂದ ಮತ್ತು ಬಂಧು ವರ್ಗದಿಂದ ದೂರ ಉಳಿಯಲು ಬಯಸುತ್ತಾರೆ. ಉದ್ಯೋಗದಲ್ಲಿ ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸುತ್ತಾರೆ. ಇವರ ಹೃದಯ ವೈಶಾಲ್ಯತೆಗೆ ಹಿರಿಯ ಅಧಿಕಾರಿಗಳು ಸಹಕಾರ ನೀಡುತ್ತಾರೆ. ಉತ್ತಮ ಅವಕಾಶ ದೊರೆತರೂ ಉದ್ಯೋಗ ಬದಲಿಸುವುದಿಲ್ಲ.

ಇವರಿಗೆ ಎರಡು ರೀತಿಯ ಆದಾಯವಿರುತ್ತದೆ. ಮನಸ್ಸಿಗೆ ಬೇಸರ ಉಂಟು ಮಾಡುವವರಿಂದ ದೂರ ಉಳಿಯುತ್ತಾರೆ. ಇವರಿಗೆ ಜಗಳ ಕದನಗಳೆಂದರೆ ಬೇಡದ ವಿಚಾರಗಳಾಗುತ್ತವೆ. ಹಿರಿಯರ ಮನಸ್ಸಿಗೆ ಬೇಸರ ಮಾಡದೆ ಎಲ್ಲರ ಜೊತೆ ಪ್ರೀತಿ ವಿಶ್ವಾಸದಿಂದ ವರ್ತಿಸುತ್ತಾರೆ. ಇವರನ್ನು ನಂಬಿದವರಿಗೆ ಯಾವುದೇ ರೀತಿಯ ಮೋಸವಾಗುವುದಿಲ್ಲ. ಕೆಲವರ ಬಲಗಣ್ಣು ಗಿಡದ ಎಲೆಯ ಆಕಾರದಲ್ಲಿ ಇರುತ್ತದೆ. ಇಂತವರು ಹೆಚ್ಚು ಭಾವಜೀವಿಗಳಾಗಿರುತ್ತಾರೆ. ಒಳ್ಳೆಯ ವಿಚಾರವಾಗಲಿ ಅಥವಾ ಕೆಟ್ಟ ವಿಚಾರವಾಗಲಿ ಕ್ರೀಡಾ ಸ್ಪೂರ್ತಿಯಿಂದ ತೆಗೆದುಕೊಳ್ಳುವುದು ಇವರ ಹೆಗ್ಗಳಿಕೆ. ಇವರ ಮಾತುಗಳಿಗೆ ಎಲ್ಲೆಡೆ ಗೌರವ ಲಭಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಇವರ ಮನಸ್ಸಿನಲ್ಲಿ ದೊಡ್ಡ ದೊಡ್ಡ ಆಸೆಗಳಿರುತ್ತವೆ. ಅವು ನೆರವೇರದೇ ಹೋದಾಗ ಆತಂಕಕ್ಕೆ ಒಳಗಾಗುತ್ತಾರೆ. ಒಮ್ಮೆ ಮಾಡಿದ ಕೆಲಸಗಳನ್ನು ಮತ್ತೊಮ್ಮೆ ಮಾಡುವುದಿಲ್ಲ. ಸಣ್ಣ ಪುಟ್ಟ ಯಶಸ್ಸಿಗೂ ಸಂತೋಷಪಡುತ್ತಾರೆ. ಇವರಿಗೆ ಅತಿ ಆಸೆ ಇರುವುದಿಲ್ಲ.

ಹಣದ ತೊಂದರೆ ಎದುರಾಗದು

ಈ ರೀತಿಯ ಜನರಲ್ಲಿ ಹೋರಾಟದ ಮನೋಭಾವ ಬಾಳಿನ ಅವಕಾಶಗಳನ್ನು ಹೆಚ್ಚಿಸುತ್ತದೆ. ಮನಸ್ಸಿಗೆ ಸರಿ ಎನಿಸುವ ಕೆಲಸಗಳನ್ನು ಮಾತ್ರ ಆಯ್ಕೆ ಮಾಡುತ್ತಾರೆ. ಸಾಮಾನ್ಯವಾಗಿ ಇವರಿಗೆ ಹಣದ ತೊಂದರೆ ಎದುರಾಗುವುದಿಲ್ಲ. ಬೇರೆಯವರಿಂದ ಪಡೆದ ಹಣವನ್ನು ಮರಳಿ ನೀಡುವವರೆಗೂ ಮನಸ್ಸಿಗೆ ಶಾಂತಿ ಇರುವುದಿಲ್ಲ. ತಮ್ಮ ಬಾಳಸಂಗಾತಿಯನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಾರೆ. ಎಲ್ಲರೊಡನೆ ಹೊಂದಿಕೊಂಡು ನಡೆಯುವ ಗುಣವಿರುತ್ತದೆ. ಮಕ್ಕಳಿಗೆ ಸಂಬಂಧಪಟ್ಟಂತೆ ಯಾರನ್ನು ನಂಬದೇ ಸ್ವಂತ ತೀರ್ಮಾನಗಳಿಗೆ ಬದ್ದರಾಗುತ್ತಾರೆ. ಅನಿವಾರ್ಯವಾಗಿ ಆತ್ಮೀಯರಿಗೆ ಹಣದ ಸಹಾಯ ಮಾಡಬೇಕಾಗುತ್ತದೆ. ಉದ್ಯೋಗದಲ್ಲಿ ಇವರಿಗೆ ಹಿರಿಯ ಅಧಿಕಾರಿಗಳ ಸಲಹೆ ದೊರೆಯುತ್ತದೆ. ಸಹೋದ್ಯೋಗಿಗಳು ನಿಮ್ಮೊಡನೆ ಉತ್ತಮ ಒಡನಾಟ  ಹೊಂದಿರುತ್ತಾರೆ. ಬೇರೆಯವರ ಸೋಲನ್ನು ಟೀಕಿಸುವ ಕಾರಣ ವಿರೋಧಿಗಳು ಹೆಚ್ಚುತ್ತಾರೆ. ಐಷಾರಾಮಿ ಮನೆ ಮತ್ತು ವಾಹನಗಳ ಬಗ್ಗೆ ಹೆಚ್ಚಿನ ಅಕ್ಕರೆ ತೋರುತ್ತಾರೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

 

 

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.