ಉತ್ತರಾಖಂಡದ ಬದರೀನಾಥ ಸೇರಿದಂತೆ ಈ 4 ಕ್ಷೇತ್ರಗಳ ದರ್ಶನ ಮಾಡಿದರೆ ಜನನ ಮರಣ ಚಕ್ರದಿಂದ ಮುಕ್ತಿ, ಮೋಕ್ಷಕ್ಕೆ ರಹದಾರಿ-indian temples visit these 4 temples to get moksha including badrinath temple in uttarakhand rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಉತ್ತರಾಖಂಡದ ಬದರೀನಾಥ ಸೇರಿದಂತೆ ಈ 4 ಕ್ಷೇತ್ರಗಳ ದರ್ಶನ ಮಾಡಿದರೆ ಜನನ ಮರಣ ಚಕ್ರದಿಂದ ಮುಕ್ತಿ, ಮೋಕ್ಷಕ್ಕೆ ರಹದಾರಿ

ಉತ್ತರಾಖಂಡದ ಬದರೀನಾಥ ಸೇರಿದಂತೆ ಈ 4 ಕ್ಷೇತ್ರಗಳ ದರ್ಶನ ಮಾಡಿದರೆ ಜನನ ಮರಣ ಚಕ್ರದಿಂದ ಮುಕ್ತಿ, ಮೋಕ್ಷಕ್ಕೆ ರಹದಾರಿ

Indian Temples: ಹುಟ್ಟು ಹಾಗೂ ಸಾವಿನ ಚಕ್ರದಿಂದ ಮೋಕ್ಷ ಹೊಂದಬೇಕೆಂದು ಅನೇಕರು ಬಯಸುತ್ತಾರೆ. ಇದಕ್ಕಾಗಿ ಪೂಜೆ, ದಾನ, ಧರ್ಮ ಮಾಡುತ್ತಾರೆ. ಕೆಲವೊಂದು ದೇವಾಲಯಳಿಗೂ ಭೇಟಿ ನೀಡುತ್ತಾರೆ. ಉತ್ತರಾಖಂಡದ ಬದರೀನಾಥ ಸೇರಿದಂತೆ ಈ 4 ಕ್ಷೇತ್ರಗಳ ದರ್ಶನ ಮಾಡಿದರೆ ಜನನ ಮರಣ ಚಕ್ರದಿಂದ ಮುಕ್ತಿ, ಮೋಕ್ಷಕ್ಕೆ ರಹದಾರಿ ಎಂದು ನಂಬಲಾಗಿದೆ. ಆ ದೇವಾಲಯಗಳು ಯಾವುವು ನೋಡಿ.

ಉತ್ತರಾಖಂಡದ ಬದರೀನಾಥ ಸೇರಿದಂತೆ ಈ 4 ಕ್ಷೇತ್ರಗಳ ದರ್ಶನ ಮಾಡಿದರೆ ಜನನ ಮರಣ ಚಕ್ರದಿಂದ ಮುಕ್ತಿ, ಮೋಕ್ಷಕ್ಕೆ ರಹದಾರಿ
ಉತ್ತರಾಖಂಡದ ಬದರೀನಾಥ ಸೇರಿದಂತೆ ಈ 4 ಕ್ಷೇತ್ರಗಳ ದರ್ಶನ ಮಾಡಿದರೆ ಜನನ ಮರಣ ಚಕ್ರದಿಂದ ಮುಕ್ತಿ, ಮೋಕ್ಷಕ್ಕೆ ರಹದಾರಿ (PC: Pixaby)

ಮನುಷ್ಯ ಸೇರಿದಂತೆ ಭೂಮಿಯಲ್ಲಿ ಸಾವನ್ನಪ್ಪಿದ ಪ್ರತಿ ಜೀವಿಗೂ ಪುನರ್ಜನ್ಮ ಇದೆ ಎಂದು ನಂಬಲಾಗಿದೆ. ಆದರೆ ಎಲ್ಲರೂ ಜನನ ಮತ್ತು ಮರಣದ ಚಕ್ರದಿಂದ ಮುಕ್ತಿ/ ಮೋಕ್ಷ ಬಯಸುತ್ತಾರೆ. ಮೋಕ್ಷ ಎಂದರೆ ಪುನರ್ಜನ್ಮ ಇಲ್ಲ ಎಂದು ಅರ್ಥ. ಆದರೆ ಮೋಕ್ಷ ಪಡೆಯುವುದು ಹೇಗೆ ಎಂಬುದಕ್ಕೆ ಹಲವರಲ್ಲಿ ಗೊಂದಲವಿದೆ.

ಸಾವಿನ ನಂತರ ಆತ್ಮವು ದೈವಿಕತೆಯೊಂದಿಗೆ ಒಂದಾಗುತ್ತದೆ. ಆದ್ದರಿಂದಲೇ ಎಲ್ಲರೂ ದೇವರಲ್ಲಿ ಮೋಕ್ಷವನ್ನು ದಯಪಾಲಿಸಲಿ ಎಂದು ಬೇಡಿಕೊಳ್ಳುತ್ತಾರೆ. ಮೋಕ್ಷವನ್ನು ಸಾಧಿಸುವುದು ಮಾನವ ಜೀವನದ ಅಂತಿಮ ಗುರಿ ಎಂದು ಪರಿಗಣಿಸಲಾಗಿದೆ. ಇದು ಶಾಶ್ವತ ಶಾಂತಿ, ಸಂತೋಷ ಮತ್ತು ದುಃಖದಿಂದ ಮುಕ್ತಿಯನ್ನು ನೀಡುತ್ತದೆ. ಮೋಕ್ಷಕ್ಕಾಗಿ ಪೂಜೆ, ಯಜ್ಞಯಾಗಾದಿಗಳು ನಡೆಯುತ್ತವೆ. ಅಷ್ಟು ಮಾತ್ರವಲ್ಲ ಭಾರತದ ಈ ನಾಲ್ಕು ದೇವಾಲಯಗಳಿಗೆ ಭೇಟಿ ನೀಡುವುದರಿಂದ ನಿಮಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ.

ಉತ್ತರದಲ್ಲಿ ಬದರೀನಾಥ

ಬದರೀನಾಥ ದೇವಾಲಯವು ಉತ್ತರಾಖಂಡದ ಹಿಮಾಲಯದ ನಡುವೆ ಇದೆ. 6 ತಿಂಗಳಿಗೊಮ್ಮೆ ಈ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಅಕ್ಷಯ ತೃತೀಯದಿಂದ ಅಂದರೆ ಮೇ 10 ರಿಂದ ಈ ದೇವಾಲಯದ ಬಾಗಿಲು ಭಕ್ತರ ದರ್ಶನಕ್ಕಾಗಿ ತೆರೆಯಲಾಗುತ್ತದೆ. ಇದು ಭಾರತದ ಪವಿತ್ರ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಜನ್ಮದಲ್ಲಿ ಮೋಕ್ಷವನ್ನು ಪಡೆಯಲು ಬಯಸುವವರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಬದರೀನಾಥ ದೇವಾಲಯಕ್ಕೆ ಭೇಟಿ ನೀಡಬೇಕು. ಪ್ರಪಂಚದಾದ್ಯಂತದ ಭಕ್ತರು ಇಲ್ಲಿಗೆ ಬರುತ್ತಾರೆ. ಜೋಶಿ ಮಠದಿಂದ ಪಾದಯಾತ್ರೆ ಮೂಲಕ ದೇವಸ್ಥಾನವನ್ನು ತಲುಪಬೇಕು. ಪಾಪದಿಂದ ತುಂಬಿರುವ ಆತ್ಮಗಳನ್ನು ಶುದ್ಧೀಕರಿಸಲು ಈ ದೇವಾಲಯಕ್ಕೆ ಭೇಟಿ ನೀಡಲಾಗುತ್ತದೆ. ಈ ಸುಂದರವಾದ ಸ್ಥಳವು ಅದರ ಆಧ್ಯಾತ್ಮಿಕ ಶಕ್ತಿಗಳಿಗೆ ಹೆಸರಾಗಿದೆ .

ಪಶ್ಚಿಮದಲ್ಲಿ ಕೃಷ್ಣನ ದ್ವಾರಕೆ

ಗುಜರಾತಿನಲ್ಲಿರುವ ದ್ವಾರಕಾವನ್ನು ಕೃಷ್ಣ ರಾಜ್ಯ ಎಂದೂ ಕರೆಯುತ್ತಾರೆ. ದ್ವಾರಕಾ ದೇವಸ್ಥಾನವನ್ನು ದ್ವಾರಕಾಧೀಶ ಮಂದಿರ ಎಂದೂ ಕರೆಯುತ್ತಾರೆ. ಇದು ಶ್ರೀಕೃಷ್ಣನಿಗೆ ಅರ್ಪಿತವಾದ ದೇವಾಲಯವಾಗಿದೆ. ಜೀವನದಲ್ಲಿ ಒಮ್ಮೆಯಾದರೂ ದ್ವಾರಕೆಗೆ ಭೇಟಿ ನೀಡಿದರೆ ಇತರ ಧಾಮಗಳೊಂದಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಮತ್ತು ಪರಮಾತ್ಮನಲ್ಲಿ ಐಕ್ಯವಾಗುತ್ತದೆ ಎಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿರುವ ಕೃಷ್ಣನ ವಿಗ್ರಹವು ಕಾಂತೀಯ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಪೂರ್ವದಲ್ಲಿ ಜಗನ್ನಾಥ ದೇವಾಲಯ

ಒರಿಸ್ಸಾ ರಾಜ್ಯದ ಪುರಿ ಪ್ರದೇಶದಲ್ಲಿ ನೆಲೆಗೊಂಡಿರುವ ಜಗನ್ನಾಥ ದೇವಾಲಯವು ಸಂಸ್ಕೃತಿ, ಇತಿಹಾಸ ಮತ್ತು ರಹಸ್ಯಗಳಲ್ಲಿ ಮುಳುಗಿರುವ ಮಹಾನ್ ದೇವಾಲಯವಾಗಿದೆ. ಮೋಕ್ಷವನ್ನು ಪಡೆಯುವ ಉದ್ದೇಶವಿಲ್ಲದಿದ್ದರೂ, ಒಮ್ಮೆಯಾದರೂ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಭಗವಾನ್ ಜಗನ್ನಾಥ, ಬಲರಾಮ ಮತ್ತು ಸುಭದ್ರೆಗೆ ಸಮರ್ಪಿತವಾದ ದೇವಾಲಯ ಇದು. ಈ ದೇವಾಲಯ ವಾರ್ಷಿಕ ರಥಯಾತ್ರೆ ಉತ್ಸವಕ್ಕೆ ಪ್ರಸಿದ್ಧವಾಗಿದೆ. ಜಗನ್ನಾಥ ರಥಯಾತ್ರೆಯನ್ನು ವೀಕ್ಷಿಸಲು ಲಕ್ಷಾಂತರ ಭಕ್ತರು ಇಲ್ಲಿ ಸೇರುತ್ತಾರೆ. ದೇವಾಲಯದ ವಾಸ್ತುಶಿಲ್ಪದ ಶೈಲಿಯು ಅದರ ಸುತ್ತಲಿನ ಆಧ್ಯಾತ್ಮಿಕ ಶಕ್ತಿಯನ್ನು ಮಂತ್ರಮುಗ್ಧಗೊಳಿಸುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿದರೆ ಮೋಕ್ಷ ಸಿಗುತ್ತದೆ. ಪುನರ್ಜನ್ಮ ಎಂಬುದೇ ಇರುವುದಿಲ್ಲ ಎಂಬ ನಂಬಿಕೆ ಇದೆ.

ದಕ್ಷಿಣದಲ್ಲಿ ರಾಮೇಶ್ವರಂ

ತಮಿಳುನಾಡಿನ ರಾಮೇಶ್ವರ ದೇವಾಲಯವು ಭಾರತದ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ. ಶಿವನಿಗೆ ಸಮರ್ಪಿತವಾಗಿರುವ ಈ ದೇವಾಲಯವು ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಹಿಂದಿನ ಜನ್ಮದ ಪಾಪ ಕರ್ಮಗಳಿಂದ ಮುಕ್ತಿ ಪಡೆಯಲು ಯಾತ್ರಾರ್ಥಿಗಳು ರಾಮೇಶ್ವರಂಗೆ ಭೇಟಿ ನೀಡುತ್ತಾರೆ. ಹಿಂದೂ ಮಹಾಸಾಗರಕ್ಕೆ ಸಮೀಪದಲ್ಲಿರುವ ರಾಮೇಶ್ವರ ದೇವಾಲಯವು ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ. ಜನರು ದೇವರಿಗೆ ಹತ್ತಿರವಾಗುತ್ತಾರೆ. ಸಾಯುವ ಮುನ್ನ ಒಮ್ಮೆ ರಾಮೇಶ್ವರನ ದರ್ಶನ ಪಡೆದರೆ ಮೋಕ್ಷ ಸಿಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.