Maha Shivaratri Mantras: ಶಿವರಾತ್ರಿ ವೇಳೆ ರಾಶಿಗನುಗುಣವಾಗಿ ಈ ಮಂತ್ರಗಳನ್ನು ಪಠಿಸಿ ಶಿವನ ಕೃಪೆಗೆ ಪಾತ್ರರಾಗಿ.. ಯಾವ ರಾಶಿಗೆ ಯಾವ ಮಂತ್ರ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Maha Shivaratri Mantras: ಶಿವರಾತ್ರಿ ವೇಳೆ ರಾಶಿಗನುಗುಣವಾಗಿ ಈ ಮಂತ್ರಗಳನ್ನು ಪಠಿಸಿ ಶಿವನ ಕೃಪೆಗೆ ಪಾತ್ರರಾಗಿ.. ಯಾವ ರಾಶಿಗೆ ಯಾವ ಮಂತ್ರ?

Maha Shivaratri Mantras: ಶಿವರಾತ್ರಿ ವೇಳೆ ರಾಶಿಗನುಗುಣವಾಗಿ ಈ ಮಂತ್ರಗಳನ್ನು ಪಠಿಸಿ ಶಿವನ ಕೃಪೆಗೆ ಪಾತ್ರರಾಗಿ.. ಯಾವ ರಾಶಿಗೆ ಯಾವ ಮಂತ್ರ?

ಶಿವರಾತ್ರಿ ದಿನದಂದು ರಾಶಿಗನುಗುಣವಾಗಿ ಮಂತ್ರ ಪಠಿಸಿದರೆ ಒಳಿತು. ಹಾಗಾದರೆ, ಯಾವ ರಾಶಿಯವರು ಯಾವ ಮಂತ್ರ ಪಠಿಸಬೇಕು? ಇದರಿಂದ ಆಗುವ ಪ್ರಯೋಜನವೇನು? ಇಲ್ಲಿದೆ ಮಾಹಿತಿ..

ಶಿವರಾತ್ರಿ ವೇಳೆ ರಾಶಿಗನುಗುಣವಾಗಿ ಈ ಮಂತ್ರಗಳನ್ನು ಪಠಿಸಿ ಶಿವನ ಕೃಪೆಗೆ ಪಾತ್ರರಾಗಿ.. ಯಾವ ರಾಶಿಗೆ ಯಾವ ಮಂತ್ರ?
ಶಿವರಾತ್ರಿ ವೇಳೆ ರಾಶಿಗನುಗುಣವಾಗಿ ಈ ಮಂತ್ರಗಳನ್ನು ಪಠಿಸಿ ಶಿವನ ಕೃಪೆಗೆ ಪಾತ್ರರಾಗಿ.. ಯಾವ ರಾಶಿಗೆ ಯಾವ ಮಂತ್ರ?

Maha Shivaratri Mantras: ಶಿವರಾತ್ರಿ ಭಾರತದ ಪ್ರಮುಖ ಹಿಂದೂ ಹಬ್ಬಗಳಲ್ಲಿ ಒಂದಾಗಿದ್ದು, ಇಂದು (ಫೆ. 18) ದೇಶಾದ್ಯಂತ ಶಿವನ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರುತ್ತಿದೆ. ಉಪವಾಸ ಆಚರಣೆಯ ಜತೆಗೆ ಜಾಗರಣೆ ಮಾಡುವುದೂ ಈ ಹಬ್ಬದ ವಿಶೇಷತೆ. ಉಪವಾಸ ಮಾಡಿ ಶಿವನ ಧ್ಯಾನಿಸಿದರೆ ಇಷ್ಟಾರ್ಥಗಳು ಈಡೇರಲಿವೆ ಎಂಬುದು ವಾಡಿಕೆ. ಈ ದಿನದಂದು ರಾಶಿಗನುಗುಣವಾಗಿ ಮಂತ್ರ ಪಠಿಸಿದರೆ ಒಳಿತು. ಹಾಗಾದರೆ, ಯಾವ ರಾಶಿಯವರು ಯಾವ ಮಂತ್ರ ಪಠಿಸಬೇಕು? ಇದರಿಂದ ಆಗುವ ಪ್ರಯೋಜನವೇನು? ಇಲ್ಲಿದೆ ಮಾಹಿತಿ..

ಮೇಷ ರಾಶಿ

ಮೇಷ ರಾಶಿಯವರು ಶಿವನಿಗೆ ನೀರನ್ನು ಅರ್ಪಿಸಿದ ನಂತರ 'ಓಂ ನಾಗೇಶ್ವರಾಯ ನಮಃ' ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು.

ವೃಷಭ ರಾಶಿ

ಶಿವಲಿಂಗಕ್ಕೆ ಹಾಲನ್ನು ಅರ್ಪಿಸಿದ ನಂತರ ವೃಷಭ ರಾಶಿಯವರು ‘ಓಂ ನಮಃ ಶಿವೈ’ ಎಂದು 51 ಬಾರಿ ಜಪಿಸಬೇಕು.

ಮಿಥುನ ರಾಶಿ

ಶಿವನನ್ನು ಮೆಚ್ಚಿಸಲು, ಈ ರಾಶಿಯವರು ಶಿವನ ರುದ್ರಾಷ್ಟಕದೊಂದಿಗೆ 'ಓಂ ನಮಃ ಶಿವಾಯ ಕಾಲಂ ಮಹಾಕಾಲ ಕಾಲಂ ಕೃಪಾಲಂ ಓಂ ನಮಃ' ಎಂಬ ಮಂತ್ರವನ್ನು ಪಠಿಸಬೇಕು.

ಕರ್ಕಾಟಕ ರಾಶಿ

ಮಹಾಶಿವರಾತ್ರಿಯ ದಿನ ಕರ್ಕಾಟಕ ರಾಶಿಯವರು ಹಸುವಿನ ಹಾಲನ್ನು ಅರ್ಪಿಸಿ ಶಿವ ಚಾಲೀಸವನ್ನು ಭಕ್ತಿಯಿಂದ ಜಪಿಸಬೇಕು.

ಸಿಂಹ ರಾಶಿ

ಸಿಂಹ ರಾಶಿಯವರು ಮಹಾದೇವನಿಗೆ ಕೆಂಪು ಹೂವುಗಳನ್ನು ಅರ್ಪಿಸಿದ ನಂತರ.. ಪಂಚಾಕ್ಷರಿ ಮಂತ್ರವನ್ನು ಪಠಿಸಬೇಕು.

ಕನ್ಯಾರಾಶಿ

ಈ ರಾಶಿಗೆ ಸೇರಿದವರು ಮಹಾಶಿವರಾತ್ರಿಯ ದಿನದಂದು ‘ಓಂ ನಮೋ ಶಿವಾಯ ಕಾಲನ್ ಓಂ ನಮಃ’ ಎಂಬ ಮಂತ್ರವನ್ನು ಪಠಿಸಬೇಕು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಶಿವ ಮತ್ತು ಪಾರ್ವತಿ ದೇವಿಯನ್ನು ಒಟ್ಟಿಗೆ ಪೂಜಿಸಬೇಕು. 'ಓಂ ಪಾರ್ವತೀ ನಾಥಾಯ ನಮಃ' ಎಂದು 51 ಬಾರಿ ಜಪಿಸಿ.

ಧನು ರಾಶಿ

ಧನು ರಾಶಿಯವರು ಮಹಾದೇವನ ಪೂಜೆಯ ನಂತರ ರುದ್ರಾಷ್ಟಕ ಸ್ತುತಿಯನ್ನು ಓದಬೇಕು. ಶಿವನಿಗೆ ನೀರನ್ನು ಅರ್ಪಿಸುವಾಗ 'ಓಂ ಅಂಗರೇಶ್ವರಾಯ ನಮಃ' ಎಂಬ ಮಂತ್ರವನ್ನು ಪಠಿಸುತ್ತಿರಿ.

ಮಕರ ರಾಶಿ

ಈ ರಾಶಿಯವರು ಶಿವನಿಗೆ ಶ್ರೀಗಂಧವನ್ನು ಹಚ್ಚಿದ ನಂತರ 'ಓಂ ಭಾಮೇಶ್ವರಾಯ ನಮಃ' ಎಂಬ ಮಂತ್ರವನ್ನು 51 ಬಾರಿ ಜಪಿಸಬೇಕು.

ಕುಂಭ ರಾಶಿ

ಶನಿಯು ಮಕರ ಮತ್ತು ಕುಂಭ ರಾಶಿಯ ಅಧಿಪತಿ. ಶಿವನಿಗೆ ಹಾಲು, ಮೊಸರು ಮತ್ತು ಜೇನುತುಪ್ಪವನ್ನು ಅರ್ಪಿಸಿದ ನಂತರ, ಈ ರಾಶಿಯವರು 'ಓಂ ನಮಃ ಶಿವಾಯ' ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು.

ಮೀನ ರಾಶಿ

ಮೀನ ರಾಶಿಯವರು ದೇವಸ್ಥಾನದಲ್ಲಿ ಕುಳಿತು ಶಿವನಿಗೆ ಧಾತುರ ಮತ್ತು ಭಂಗವನ್ನು ಅರ್ಪಿಸಿದ ನಂತರ ಮಹಾಶಿವರಾತ್ರಿಯಂದು ಶಿವಾಷ್ಟಕವನ್ನು ಪಠಿಸುವುದು ಉತ್ತಮ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.