ಚುನಾಯಿತ ಜನಪ್ರತಿನಿಧಿಗಳ ಜಾತಿ ಸಂಬಂಧಿಸಿದ ತಕರಾರು ಅರ್ಜಿಗಳನ್ನು ಇತ್ಯರ್ಥಗೊಳಿಸಬಲ್ಲದು ಕರ್ನಾಟಕ ಹೈಕೋರ್ಟ್‌: ನ್ಯಾಯಪೀಠದ ಸ್ಪಷ್ಟ ನುಡಿ
ಕನ್ನಡ ಸುದ್ದಿ  /  ಕರ್ನಾಟಕ  /  ಚುನಾಯಿತ ಜನಪ್ರತಿನಿಧಿಗಳ ಜಾತಿ ಸಂಬಂಧಿಸಿದ ತಕರಾರು ಅರ್ಜಿಗಳನ್ನು ಇತ್ಯರ್ಥಗೊಳಿಸಬಲ್ಲದು ಕರ್ನಾಟಕ ಹೈಕೋರ್ಟ್‌: ನ್ಯಾಯಪೀಠದ ಸ್ಪಷ್ಟ ನುಡಿ

ಚುನಾಯಿತ ಜನಪ್ರತಿನಿಧಿಗಳ ಜಾತಿ ಸಂಬಂಧಿಸಿದ ತಕರಾರು ಅರ್ಜಿಗಳನ್ನು ಇತ್ಯರ್ಥಗೊಳಿಸಬಲ್ಲದು ಕರ್ನಾಟಕ ಹೈಕೋರ್ಟ್‌: ನ್ಯಾಯಪೀಠದ ಸ್ಪಷ್ಟ ನುಡಿ

Karnataka High Court: ಚುನಾಯಿತ ಜನಪ್ರತಿನಿಧಿಗಳ ಜಾತಿಗೆ ಸಂಬಂಧಿಸಿದ ತಕರಾರು ಅರ್ಜಿ ಬಂದಾಗ, ಅದರ ವಿಚಾರಣೆ ನಡೆಸಿ ಇತ್ಯರ್ಥಗೊಳಿಸುವ ಅಧಿಕಾರ ಕರ್ನಾಟಕ ಹೈಕೋರ್ಟ್‌ಗೆ ಇದೆ. ಅದಕ್ಕೆ ಯಾವುದೇ ಕಾನೂನು ಅಡ್ಡಿ ಆಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಏನಿದು ಕೇಸ್ - ಇಲ್ಲಿದೆ ವಿವರ.

ಚುನಾಯಿತ ಜನಪ್ರತಿನಿಧಿಗಳ ಜಾತಿ ಸಂಬಂಧಿಸಿದ ತಕರಾರು ಅರ್ಜಿಗಳನ್ನು ಇತ್ಯರ್ಥಗೊಳಿಸಬಲ್ಲದು ಕರ್ನಾಟಕ ಹೈಕೋರ್ಟ್‌ ಎಂದು ನ್ಯಾಯಪೀಠದ ಸ್ಪಷ್ಟಪಡಿಸಿದೆ.
ಚುನಾಯಿತ ಜನಪ್ರತಿನಿಧಿಗಳ ಜಾತಿ ಸಂಬಂಧಿಸಿದ ತಕರಾರು ಅರ್ಜಿಗಳನ್ನು ಇತ್ಯರ್ಥಗೊಳಿಸಬಲ್ಲದು ಕರ್ನಾಟಕ ಹೈಕೋರ್ಟ್‌ ಎಂದು ನ್ಯಾಯಪೀಠದ ಸ್ಪಷ್ಟಪಡಿಸಿದೆ.

Karnataka High Court: ಚುನಾಯಿತ ಜನಪ್ರತಿನಿಧಿಗಳ ಜಾತಿಗೆ ಸಂಬಂಧಿಸಿದ ತಕರಾರು ಎದುರಾದಾಗ ಅದರ ಅರ್ಜಿ ವಿಚಾರಣೆ ಮತ್ತು ಇತ್ಯರ್ಥಗೊಳಿಸುವ ಅಧಿಕಾರ ಕರ್ನಾಟಕ ಹೈಕೋರ್ಟ್‌ಗೆ ಇದೆ ಎಂದು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ನ್ಯಾಯಪೀಠ ಸ್ಪಷ್ಟಪಡಿಸಿದೆ. ಮೀಸಲು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಅಭ್ಯರ್ಥಿಯ ಜಾತಿಗೆ ಸಂಬಂಧಿಸಿದ ದಾವೆಯನ್ನು ಇತ್ಯರ್ಥಗೊಳಿಸುವುದಕ್ಕೆ ಕರ್ನಾಟಕ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಗಳ ಮೀಸಲಾತಿ ಇತ್ಯಾದಿ) ಕಾಯಿದೆ - 1990 ಅಡ್ಡಿಪಡಿಸುವುದಿಲ್ಲ ಎಂದು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಸ್ಪಷ್ಟವಾಗಿ ಹೇಳಿದರು.

ಜಾತಿ ಪ್ರಮಾಣಪತ್ರ ತಕರಾರು ದಾವೆ; ಏನಿದು ಕೇಸ್‌

ದಾವಣಗೆರೆ ಜಿಲ್ಲೆ ಜಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ, ಕಾಂಗ್ರೆಸ್ ನಾಯಕ ಬಿ. ದೇವೇಂದ್ರಪ್ಪ ಅವರ ಆಯ್ಕೆಯನ್ನು ಪ್ರಶ್ನಿಸಿ ಜಿ. ಸ್ವಾಮಿ ಎಂಬುವವರು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ, ದೇವೇಂದ್ರಪ್ಪ ಪರ ವಕೀಲರು, "ಕರ್ನಾಟಕ ಪರಿಶಿಷ್ಟ ಜಾತಿಗಳು ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮೀಸಲಾತಿ ಇತ್ಯಾದಿ) ಕಾಯ್ದೆಯಡಿ ರಚಿಸಲಾಗಿರುವ ಈ ಸಮಿತಿಗೆ ಮಾತ್ರ ಜಾತಿಯ ಸಿಂಧುತ್ವ ನಿರ್ಧರಿಸುವ ಅಧಿಕಾರವಿದೆ. ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ (ಡಿಸಿವಿಸಿ) ನಿರ್ಧರಿಸಬೇಕು ಎಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದೆ.

ವಿಧಾನಸಭೆ ಚುನಾವಣೆ ವಿಚಾರ ಬಂದಾಗ ಸಂಸತ್ತು ರೂಪಿಸಿದ ಪ್ರಜಾಪ್ರತಿನಿಧಿ ಕಾಯ್ದೆ ಮುಖ್ಯವಾಗುತ್ತದೆ. ಆದರೆ ಈ ಕಾಯ್ದೆ ಪ್ರಕಾರ, ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ. ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯು ಶಾಸನ ಬದ್ಧ ಸಂಸ್ಥೆಯಾಗಿದ್ದು, ಇದರ ಅಧಿಕಾರ ವ್ಯಾಪ್ತಿ ಕರ್ನಾಟಕ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿಗಳ ಮೀಸಲಾತಿ ಇತ್ಯಾದಿ) ಕಾಯಿದೆ-1990ರ ಪ್ರಕಾರ ಜಾತಿ ಪ್ರಮಾಣ ಪತ್ರಗಳಿಗೆ ಮಾತ್ರ ಸೀಮಿತ. ಆದರೆ, ಪ್ರಜಾಪ್ರತಿನಿಧಿ ಕಾಯಿದೆ 1951ರಲ್ಲಿ ಹೈಕೋರ್ಟ್‌ಗೆ ನೀಡಲಾದ ಅಧಿಕಾರ ವ್ಯಾಪ್ತಿಯನ್ನು 1990ರ ಕಾಯ್ದೆಯು ಮೊಟಕುಗೊಳಿಸುವುದಿಲ್ಲ ಎಂಬುದರ ಕಡೆಗೆ ನ್ಯಾಯಪೀಠ ಗಮನಸೆಳೆದಿದೆ. ಈ ಕಾನೂನು ಚೌಕಟ್ಟಿನಲ್ಲಿ ಅರ್ಜಿದಾರ ಅಭ್ಯರ್ಥಿಯ ಜಾತಿಗೆ ಸಂಬಂಧಿಸಿದ ವಿವಾದವನ್ನು ಕರ್ನಾಟಕ ಹೈಕೋರ್ಟ್ ನಿರ್ಧರಿಸಬಹುದಾಗಿದೆ ಎಂದು ಪೀಠ ಸ್ಪಷ್ಟಪಡಿಸಿದೆ.

ಚುನಾಯಿತ ಜನಪ್ರತಿನಿಧಿಯ ಜಾತಿಗೆ ಸಂಬಂಧಿಸಿದ ತಕರಾರು ಅರ್ಜಿ ಇತ್ಯರ್ಥ ಪಡಿಸುವುದಕ್ಕೆ ಪ್ರಜಾಪ್ರತಿನಿಧಿ ಕಾಯಿದೆ 1951ರಲ್ಲಿ ಹೈಕೋರ್ಟ್‌ಗೆ ನೀಡಲಾದ ಅಧಿಕಾರ ವ್ಯಾಪ್ತಿ ವಿಶಾಲವಾದುದು. ಇದರ ಮೇಲೆ ಪ್ರಭಾವ ಬೀರಲು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ನಿರ್ಧಾರ ಅಂತಿಮವಲ್ಲ. ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ನಿರ್ಧಾರ ಪ್ರಕಾರ ಅರ್ಜಿ ಇತ್ಯರ್ಥಪಡಿಸುವುದು ಕೂಡ ಸಾಧ್ಯವಿಲ್ಲ ಎಂದು ನ್ಯಾಯಪೀಠ ವಿವರಿಸಿದೆ.

ಉದ್ದೇಶಕ್ಕೆ ತಕ್ಕಂತೆ ಜಾತಿ ಬದಲಾಯಿಸಲಾಗದು; ಪ್ರಕರಣದ ಹಿನ್ನೆಲೆ

ಒಬ್ಬ ವ್ಯಕ್ತಿಯು ವಿಭಿನ್ನ ಉದ್ದೇಶಗಳಿಗಾಗಿ ವಿಭಿನ್ನ ಜಾತಿಯವನಾಗಿ ತನ್ನನ್ನು ತಾನು ಬಿಂಬಿಸಲು ಸಾಧ್ಯವೇ ಇಲ್ಲ. ಒಬ್ಬ ವ್ಯಕ್ತಿಯನ್ನು 'ಅ' ಎಂಬ ಜಾತಿಯವನು ಎಂದು ಪ್ರಮಾಣೀಕರಿಸಿ ಜಾತಿ ಪ್ರಮಾಣಪತ್ರ ನೀಡಿದರೆ, ಆ ವ್ಯಕ್ತಿಯ ಎಲ್ಲ ಉದ್ದೇಶಗಳಿಗೂ 'ಅ' ಜಾತಿಯವನು ಎಂದೇ ಜಾತಿ ಕಾಲಂನಲ್ಲಿ ನಮೂದಿಸಬೇಕು. ಅದು ಬಿಟ್ಟು ಉದ್ದೇಶ ಬದಲಾದಂತೆ ಆ ಉದ್ದೇಶಕ್ಕೆ ಬೇಕಾದ ರೀತಿಯಲ್ಲಿ ತನ್ನ ಜಾತಿಯು “ಅ” ಅಲ್ಲ, “ಬ” ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ವಿವರಿಸಿದೆ.

ಜಗಳೂರು ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರ. ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಕೆಯಾಗಿರುವ ಚುನಾವಣಾ ತಕರಾರರು ಅರ್ಜಿ ಪ್ರಕಾರ, ಚುನಾವಣೆ ಗೆದ್ದ ದೇವೇಂದ್ರಪ್ಪ ಅವರು ಪರಿಶಿಷ್ಟ ಪಂಗಡದವರಲ್ಲ. ಹಿಂದುಳಿದ ವರ್ಗದವರು (ಒಬಿಸಿ). ಆದ್ದರಿಂದ ಅವರನ್ನು ಅನರ್ಹಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

Whats_app_banner