Bhagavad Gita: ಆತ್ಮನೂ ಪರಮಾತ್ಮನೂ ಒಂದೇ ಆದರೂ ಭಿನ್ನ ಎನ್ನುವ ಅರಿವೇ ಜ್ಞಾನ; ಭಗವದ್ಗೀತೆಯ ಸಾರಾಂಶ ಹೀಗಿದೆ-spiritual news bhagavad gita updesh lord krishna awareness of difference is knowledge bhagavad gita quotes in kannada ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಆತ್ಮನೂ ಪರಮಾತ್ಮನೂ ಒಂದೇ ಆದರೂ ಭಿನ್ನ ಎನ್ನುವ ಅರಿವೇ ಜ್ಞಾನ; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita: ಆತ್ಮನೂ ಪರಮಾತ್ಮನೂ ಒಂದೇ ಆದರೂ ಭಿನ್ನ ಎನ್ನುವ ಅರಿವೇ ಜ್ಞಾನ; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita: ಆತ್ಮನೂ ಪರಮಾತ್ಮನೂ ಒಂದೇ ಆದರೂ ಭಿನ್ನ ಎನ್ನುವ ಅರಿವೇ ಜ್ಞಾನ ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯದ 3 ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - ಶ್ಲೋಕ 3

ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ ಸರ್ವಕ್ಷೇತ್ರೇಷು ಭಾರತ |

ಕ್ಷೇತ್ರಕ್ಷೇತ್ರಜ್ಞಯೋರ್ಜ್ಞಾನಂ ಯತ್ತಜ್‌ಜ್ಞಾನಂ ಮತಂ ಮಮ ||3|

ಭಗವದ್ಗೀತೆಯ 13 ನೇ ಅಧ್ಯಾಯದ 3 ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ವೇದ ಸಾಹಿತ್ಯದಲ್ಲಿ ಹೀಗೆ ಹೇಳಿದೆ.

ಕ್ಷೇತ್ರಾವಣಿ ಹಿ ಶರೀರಾಣಿ ಬೀಜಂ ಚಾಪಿ ಶುಭಾಶುಭೇ |

ತಾನಿ ವೇತ್ತಿ ಸ ಯೋಗಾತ್ಮಾ ತತಃ ಕ್ಷೇತ್ರಜ್ಞಉಚ್ಯತೇ ||

ದೇಹವನ್ನು ಕ್ಷೇತ್ರ ಎಂದು ಕರೆದಿದೆ. ಅದರೊಳಗೆ ಕ್ಷೇತ್ರಜ್ಞರು ಮತ್ತು ದೇಹವನ್ನೂ ದೇಹದ ಒಡೆಯನನ್ನೂ ಬಲ್ಲ ಪರಮ ಪ್ರಭುವು ವಾಸಿಸುತ್ತಾನೆ. ಆದುದರಿಂದ ಆತನನ್ನು ಎಲ್ಲ ಕ್ಷೇತ್ರಗಳನ್ನು ತಿಳಿದವನು ಎಂದು ಕರೆಯುತ್ತಾರೆ. ಚಟುವಟಿಕೆಗಳ ಕ್ಷೇತ್ರ, ಕ್ಷೇತ್ರಜ್ಞ ಮತ್ತು ಪರಮ ಕ್ಷೇತ್ರಜ್ಞ - ಇವರ ನಡುವಣ ವ್ಯತ್ಯಾಸವನ್ನು ಹೀಗೆ ವರ್ಣಿಸಿದೆ. ದೇಹದ ಸ್ವರೂಪ, ವ್ಯಕ್ತಿಗತ ಆತ್ಮದ ಸ್ವರೂಪ ಮತ್ತು ಪರಮಾತ್ಮನ ಸ್ವರೂಪ ಇವುಗಳ ಪರಿಪೂರ್ಣ ತಿಳುವಳಿಕೆಗೆ ವೇದ ಸಾಹಿತ್ಯದಲ್ಲಿ ಜ್ಞಾನ ಎಂದು ಹೆಸರು. ಅದು ಕೃಷ್ಣನ ಅಭಿಪ್ರಾಯ.

ಆತ್ಮನೂ ಪರಮಾತ್ಮನೂ ಒಂದೇ ಆದರೂ ಭಿನ್ನ ಎನ್ನುವ ಅರಿವೇ ಜ್ಞಾನ. ಕ್ಷೇತ್ರ ಮತ್ತು ಕ್ಷೇತ್ರಜ್ಞನನ್ನು ಅರ್ಥಮಾಡಿಕೊಳ್ಳಲಾರದವನಿಗೆ ಪರಿಪೂರ್ಣ ಜ್ಞಾನವಿಲ್ಲ. ಪ್ರಕೃತಿ, ಪುರುಷ ಮತ್ತು ಈಶ್ವರ (ಪ್ರಕೃತಿ ಮತ್ತು ವ್ಯಕ್ತಿಗತ ಆತ್ಮ ಇವುಗಳ ಮೇಲೆ ಪ್ರಭುತ್ವ ಮಾಡುವ ಮತ್ತು ಇವುಗಳನ್ನು ನಿಯಂತ್ರಿಸುವ ಕ್ಷೇತ್ರಜ್ಞ) ಇವರ ಸ್ಥಾನವನ್ನು ತಿಳಿದುಕೊಳ್ಳಬೇಕು. ಬೇರೆ ಬೇರೆ ಪಾತ್ರಗಳಲ್ಲಿರುವ ಈ ಮೂವರ ವಿಷಯದಲ್ಲಿ ಗೊಂದಲಮಾಡಿಕೊಳ್ಳಬಾರದು. ಚಟುವಟಿಕೆಗಳ ಕ್ಷೇತ್ರವಾದ ಈ ಐಹಿಕ ಜಗತ್ತು ಪ್ರಕೃತಿ. ಪ್ರಕೃತಿಯ ಭೋಕ್ತೃ ಜೀವಿ. ಇವರಿಬ್ಬರ ಮೇಲೆ ಪರಮ ನಿಯಂತ್ರಕ ದೇವೋತ್ತಮ ಪುರುಷ. ವೈದಿಕ ಭಾಷೆಯಲ್ಲಿ ಶ್ವೇತಾಶ್ವತರ ಉಷನಿಷತ್‌ನಲ್ಲಿ (1.12) ಹೀಗೆ ಹೇಳಿದೆ - ಭೋಕ್ತಾ ಭೋಗ್ಯಂ ಪ್ರೇರಿತಾರಂ ಚ ಮತ್ವಾ/ಸರ್ವಂ ಪ್ರೋಕ್ತಂ ತ್ರಿವಿಧಂ ಬ್ರಹ್ಮ್ ಏತತ್.

ಬ್ರಹ್ಮನ್‌ನ ಮೂರು ಪರಿಕಲ್ಪನೆಗಳಿವೆ - ಚಟುವಟಿಕೆಗಳ ಕ್ಷೇತ್ರವಾಗಿ ಪ್ರಕೃತಿಯು ಬ್ರಹ್ಮನ್. ಪ್ರಕೃತಿಯನ್ನು ನಿಯಂತ್ರಿಸಲು ಪ್ರಯತ್ನಿಸುವ ಜೀವಿಯು ಸಹ ಬ್ರಹ್ಮನ್. ಇವೆರಡನ್ನೂ ನಿಯಂತ್ರಿಸುವವನು ಬ್ರಹ್ಮನ್. ಆತನೇ ವಾಸ್ತವಿಕವಾಗಿ ನಿಯಂತ್ರಕ. ಈ ಅಧ್ಯಾಯದಲ್ಲಿ ಇಬ್ಬರು ಕ್ಷೇತ್ರಜ್ಞರಲ್ಲಿ ಒಬ್ಬನು ಚ್ಯುತಿ ಹೊಂದಬಹುದಾದವನು ಮತ್ತು ಇನ್ನೊಬ್ಬನು ಅತ್ಯುತನು ಎಂದು ವಿವರಿಸಲಾಗುತ್ತದೆ.

ಒಬ್ಬನು ಶ್ರೇಷ್ಠ, ಇನ್ನೊಬ್ಬನು ಅವನಿಗಿಂತ ಕೆಳಗಿನವನು. ಇಬ್ಬರು ಕ್ಷೇತ್ರಜ್ಞರೂ ಒಬ್ಬರೇ ಎಂದು ತಿಳಿದುಕೊಳ್ಳುವವನು ದೇವೋತ್ತಮ ಪರಮ ಪುರುಷನು ಇಲ್ಲಿ ಸ್ಪಷ್ಟವಾಗಿ ಹೇಳುತ್ತಾನೆ. ಹಗ್ಗವನ್ನು ಹಾವೆಂದು ತಪ್ಪಾಗಿ ಭಾವಿಸುವವನು ಜ್ಞಾನದಲ್ಲಿಲ್ಲ. ದೇಹಗಳಲ್ಲಿ ಬೇರೆ ಬೇರೆ ರೀತಿಗಳುಂಟು. ದೇಹಗಳ ಒಡೆಯರು ಬೇರೆ ಬೇರೆಯವರು. ಪ್ರತಿಯೊಂದು ವ್ಯಕ್ತಿಗತ ಆತ್ಮಕ್ಕೂ ಐಹಿಕ ಪ್ರಕೃತಿಯ ಮೇಲೆ ಪ್ರಭುತ್ವ ಮಾಡುವ ವಿಶಿಷ್ಟ ಶಕ್ತಿಯುಂಟು. ಆದುದರಿಂದ ಬೇರೆ ಬೇರೆ ದೇಹಗಳಿವೆ. ಆದರೆ ಪರಮ ಪ್ರಭುವು ಅವರಲ್ಲಿ ಪರಮ ನಿಯಂತ್ರಕನಾಗಿ ಇದ್ದಾನೆ.

ಚ ಎನ್ನುವ ಪದವು ಅರ್ಥವತ್ತಾದದ್ದು. ಏಕೆಂದರೆ ಅದು ದೇಹಗಳ ಒಟ್ಟು ಸಂಖ್ಯೆಯನ್ನು ನಿರ್ದೇಶಿಸುತ್ತದೆ. ಇದು ಶ್ರೀ ಬಲದೇವ ವಿದ್ಯಾಭೂಷಣರ ಅಭಿಪ್ರಾಯ. ಪ್ರತಿಯೊಂದು ದೇಹದಲ್ಲಿ ವ್ಯಕ್ತಿಗತ ಆತ್ಮನಲ್ಲದೆ ಇರುವ ಪರಮಾತ್ಮನು ಕೃಷ್ಣ. ಇಲ್ಲಿ ಕೃಷ್ಣನು, ಕಾರ್ಯಕ್ಷೇತ್ರ ಮತ್ತು ಪರಿಮಿತ ಭೋಕ್ತೃ ಇಬ್ಬರನ್ನೂ ನಿಯಂತ್ರಿಸುವವನು ಪರಮಾತ್ಮನೇ ಎಂದು ಸ್ಪಷ್ಟವಾಗಿ ವಿವರಿಸುತ್ತಾನೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.