Bhagavad Gita: ಪರಿಶುದ್ಧ ಭಕ್ತಿಸೇವೆಯಲ್ಲಿ ಮನುಷ್ಯನಿಗೆ ಭಗವಂತನು ದೊಡ್ಡವನು; ಗೀತೆಯ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಪರಿಶುದ್ಧ ಭಕ್ತಿಸೇವೆಯಲ್ಲಿ ಮನುಷ್ಯನಿಗೆ ಭಗವಂತನು ದೊಡ್ಡವನು; ಗೀತೆಯ ಸಾರಾಂಶ ಹೀಗಿದೆ

Bhagavad Gita: ಪರಿಶುದ್ಧ ಭಕ್ತಿಸೇವೆಯಲ್ಲಿ ಮನುಷ್ಯನಿಗೆ ಭಗವಂತನು ದೊಡ್ಡವನು; ಗೀತೆಯ ಸಾರಾಂಶ ಹೀಗಿದೆ

Bhagavad Gita: ಪರಿಶುದ್ಧ ಭಕ್ತಿಸೇವೆಯಲ್ಲಿ ಮನುಷ್ಯನಿಗೆ ಭಗವಂತನು ದೊಡ್ಡವನು ಎಂಬುದರ ಅರ್ಥವನ್ನು ಭಗವದ್ಗೀತೆಯ 12 ನೇ ಅಧ್ಯಾಯದ 6 ಮತ್ತು 7 ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 12 - ಭಕ್ತಿ ಸೇವೆ -ಶ್ಲೋಕ - 6-7

ಯೇ ತು ಸರ್ವಾಣಿ ಕರ್ಮಾಣಿ ಮಯಿ ಸನ್ನ್ಯಸ್ಯ ಮತ್ಪರಾಃ |

ಅನನ್ನೇನೈವ ಯೋಗೇನ ಮಾಂ ಧ್ಯಾಯನ್ತ ಉಪಾಸತೇ ||6||

ತೇಷಾಮಹಂ ಸಮುದ್ಧರ್ತಾ ಮೃತ್ಯಸಂಸಾರಸಾಗರಾತ್ |

ಭವಾಮಿ ನ ಚಿರಾತ್ ಪಾರ್ಥ ಮಯ್ಯಾವೇಶಿತಚೇತಸಾಮ್ ||7||

ಅನುವಾದ: ಪಾರ್ಥ, ತಮ್ಮ ಎಲ್ಲ ಕರ್ಮಗಳನ್ನೂ ನನಗೆ ಅರ್ಪಿಸಿ, ನಿಶ್ಚಲವಾಗಿ ನನ್ನಲ್ಲಿ ಭಕ್ತಿ ಇಟ್ಟು, ಭಕ್ತಿಸೇವೆಯಲ್ಲಿ ನಿರತರಾಗಿ ಸದಾ ನನ್ನನ್ನೇ ಧ್ಯಾನಿಸುತ್ತ, ನನ್ನಲ್ಲೇ ಮನಸ್ಸನ್ನು ನಿಲ್ಲಿಸಿ ನನ್ನನ್ನು ಪೂಜಿಸುವವರನ್ನು, ನಾನು ಹುಟ್ಟು, ಸಾವುಗಳ ಸಂಸಾರ ಸಾಗರದಿಂದ ಶೀಘ್ರವಾಗಿ ಉದ್ಧಾರ ಮಾಡುತ್ತೇನೆ.

ಭಾವಾರ್ಥ: ಭಗವಂತನು ಭಕ್ತರನ್ನು ಐಹಿಕ ಅಸ್ತಿತ್ವದಿಂದ ಬಹು ಶೀಘ್ರವಾಗಿ ಉದ್ಧರಿಸುವುದರಿಂದ ಅವರು ಅದೃಷ್ಟವಂತರು ಎಂದು ಇಲ್ಲಿ ಸ್ಪಷ್ಟವಾಗಿ ಹೇಳಿದೆ. ಪರಿಶುದ್ಧ ಭಕ್ತಿಸೇವೆಯಲ್ಲಿ ಮನುಷ್ಯನಿಗೆ ಭಗವಂತನು ದೊಡ್ಡವನು, ವ್ಯಕ್ತಿಗತ ಆತ್ಮನು ಭಗವಂತನಿಗೆ ಅಧೀನ ಎನ್ನುವ ಅರಿವು ಬರುತ್ತದೆ. ಭಗವಂತನಿಗೆ ಸೇವೆ ಸಲ್ಲಿಸುವುದೇ ಅವನ ಕರ್ತವ್ಯ. ಸಲ್ಲಿಸದಿದ್ದರೆ, ಅವನು ಮಾಯೆಗೆ ಸೇವಕನಾಗುತ್ತಾನೆ.

ಹಿಂದೆಯೇ ಹೇಳಿದಂತೆ, ಭಕ್ತಿಸೇವೆಯ ಮೂಲಕ ಮಾತ್ರ ಜೀವಿಯು ಪರಮ ಪ್ರಭುವಿನ ಬಳಿಗೆ ಹೋಗಲು ಸಾಧ್ಯ. ಆದುದರಿಂದ ಮನುಷ್ಯನಿಗೆ ಸಂಪೂರ್ಣ ಭಕ್ತಿ ಇರಬೇಕು. ಕೃಷ್ಣನನ್ನು ಸೇರಲು ತನ್ನ ಮನಸ್ಸನ್ನು ಸಂಪೂರ್ಣವಾಗಿ ಅವನಲ್ಲಿ ನಿಲ್ಲಿಸಬೇಕು. ಕೃಷ್ಣನಿಗಾಗಿಯೇ ಕೆಲಸವನ್ನು ಮಾಡಬೇಕು. ಮಾಡುವ ಕೆಲಸ ಯಾವುದೇ ರೀತಿಯದಾಗಿರಬಹುದು. ಆ ಕೆಲಸವನ್ನು ಕೃಷ್ಣನಿಗಾಗಿಯೇ ಮಾಡಬೇಕು. ಭಕ್ತಿಸೇವೆಯ ಮಾನದಂಡ ಇದೇ. ದೇವೋತ್ತಮ ಪರಮ ಪುರುಷನನ್ನು ಸುಪ್ರೀತಗೊಳಿಸುವುದಲ್ಲದೆ ಬೇರೆ ಯಾವ ಸಾಧನೆಯನ್ನೂ ಭಕ್ತನು ಅಪೇಕ್ಷಿಸುವುದಿಲ್ಲ.

ಅವನ ಬದುಕಿನ ಮಹದುದ್ದೇಶವೇ ಕೃಷ್ಣನನ್ನು ಪ್ರಸನ್ನಗೊಳಿಸುವುದು. ಅರ್ಜುನನು ಕುರುಕ್ಷೇತ್ರ ಯುದ್ಧದಲ್ಲಿ ಮಾಡಿದಂತೆ ಅವನು ಕೃಷ್ಣನ ತೃಪ್ತಿಗಾಗಿ ಎಲ್ಲವನ್ನೂ ತ್ಯಾಗಮಾಡಬಲ್ಲ. ಈ ಪ್ರಕ್ರಿಯೆ ಬಹು ಸುಲಭ. ತನ್ನ ವೃತ್ತಿಯಲ್ಲಿ ತೊಡಗಿ ಅದೇ ಸಮಯದಲ್ಲಿಯೇ ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ/ ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ ಎಂದು ಕೀರ್ತನೆ ಮಾಡಬಹುದು. ಇಂತಹ ದಿವ್ಯ ಸಂಕೀರ್ತನೆಯು ಭಕ್ತನನ್ನು ದೇವೋತ್ತಮ ಪರಮ ಪುರುಷನೆಡೆಗೆ ಆಕರ್ಷಿಸುತ್ತದೆ.

ಹೀಗೆ ನಿರತನಾಗಿರುವ ಪರಿಶುದ್ಧ ಭಕ್ತನನ್ನು ವಿಳಂಬವಿಲ್ಲದೆ ತಾನು ಭವಸಾಗರದಿಂದ ಪಾರುಮಾಡುವುದಾಗಿ ಪರಮ ಪ್ರಭುವು ಇಲ್ಲಿ ವಾಗ್ದಾನ ಮಾಡುತ್ತಾನೆ. ಯೋಗಾಭ್ಯಾಸದಲ್ಲಿ ಮುಂದುವರಿದವರು ಸಂಕಲ್ಪಮಾಡಿ ಆತ್ಮವನ್ನು ತಾವು ಇಚ್ಛಿಸುವ ಯಾವುದೇ ಲೋಕಕ್ಕೆ ವರ್ಗಾಯಿಸಬಲ್ಲರು. ಇತರರು ಬೇರೆ ಬೇರೆ ರೀತಿಗಳಲ್ಲಿ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ಆದರೆ ಭಕ್ತನ ಮಟ್ಟಿಗೆ ಸ್ವತಃ ಪ್ರಭುವೇ ಅವನನ್ನು ಕರೆದುಕೊಳ್ಳುತ್ತಾನೆ ಎಂದು ಇಲ್ಲಿ ಸ್ಪಷ್ಟವಾಗಿ ಹೇಳಿದೆ. ತನ್ನನ್ನು ಅಧ್ಯಾತ್ಮಿಕ ಗಗನಕ್ಕೆ ವರ್ಗಾಯಿಸಿಕೊಳ್ಳಲು ಭಕ್ತನು ಬಹು ಅನುಭವಿಯಾಗಬೇಕಾಗಿಲ್ಲ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.