Bhagavad Gita: ಪುಣ್ಯಕಾರ್ಯಗಳಿಂದ ಮನುಷ್ಯನಿಗೆ ಜ್ಞಾನೋದಯವಾದಾಗ ಇತರೆ ಸ್ಥಿತಿಗಳಿಂದ ಹೊರ ಬರುತ್ತಾನೆ; ಭಗವದ್ಗೀತೆಯ ಸಾರಾಂಶ ಹೀಗಿದೆ-spiritual news bhagavad gita updesh lord krishna enlightenment for men bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಪುಣ್ಯಕಾರ್ಯಗಳಿಂದ ಮನುಷ್ಯನಿಗೆ ಜ್ಞಾನೋದಯವಾದಾಗ ಇತರೆ ಸ್ಥಿತಿಗಳಿಂದ ಹೊರ ಬರುತ್ತಾನೆ; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita: ಪುಣ್ಯಕಾರ್ಯಗಳಿಂದ ಮನುಷ್ಯನಿಗೆ ಜ್ಞಾನೋದಯವಾದಾಗ ಇತರೆ ಸ್ಥಿತಿಗಳಿಂದ ಹೊರ ಬರುತ್ತಾನೆ; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಪುಣ್ಯಕಾರ್ಯಗಳಿಂದ ಮನುಷ್ಯನಿಗೆ ಜ್ಞಾನೋದಯವಾದಾಗ ಇತರೆ ಸ್ಥಿತಿಗಳಿಂದ ಹೊರ ಬರುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 13ನೇ ಅಧ್ಯಾಯದ 1 ಮತ್ತು 2 ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - ಶ್ಲೋಕ 1 ಮತ್ತು 2
ಪ್ರಕೃತಿಂ ಪುರುಷಂ ಚೈವ ಕ್ಷೇತ್ರಂ ಕ್ಷೇತ್ರಜ್ಞಮೇವ ಚ |
ಏತದ್ ವೇದಿತುಮಿಚ್ಛಾಮಿ ಜ್ಞಾನಂ ಜ್ಞೇಯಂ ಚ ಕೇಶವ ||1|
ಇದಂ ಶರೀರಂ ಕೌನ್ತೇಯ ಕ್ಷೇತ್ರಮಿತ್ಯಭಿಧೀಯತೇ |
ಏತದ್ ಯೋ ವೇತ್ತಿ ತಂ ಪ್ರಾಹುಃ ಕ್ಷೇತ್ರಜ್ಞ ತದ್ವಿದಃ ||2|

ಅನುವಾದ: ಅರ್ಜುನನು ಹೇಳಿದನು - ಪ್ರೀತಿಯ ಕೃಷ್ಣನೆ, ಪ್ರಕೃತಿ, ಪುರುಷ, ಕ್ಷೇತ್ರ, ಕ್ಷೇತ್ರಜ್ಞ, ಜ್ಞಾನ ಮತ್ತು ಜ್ಞಾನದ ಗುರಿ ಇವನ್ನು ತಿಳಿದುಕೊಳ್ಳಲು ಬಯಸುತ್ತೇನೆ.

ಭಗವದ್ಗೀತೆಯ 13 ನೇ ಅಧ್ಯಾಯದ 1 ಮತ್ತು 2ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ಕ್ಷೇತ್ರಜ್ಞನು ದೇಹದಿಂದ ಭಿನ್ನನಾದವನು. ನಾವು - ನಮ್ಮ ಬಟ್ಟೆ ಮೊದಲಾದ - ಹಲವು ವಸ್ತುಗಳನ್ನು ಬಳಸಬಹುದಾದರೂ ಬಳಸಿದ ವಸ್ತುಗಳಿಂದ ನಾವು ಬೇರೆ ಎಂದು ನಮಗೆ ಗೊತ್ತು. ಹಾಗೆಯೇ ಸ್ವಲ್ಪ ಯೋಚಿಸಿದರೆ ನಾವು ದೇಹದಿಂದ ಬೇರೆ ಎಂದು ಅರ್ಥವಾಗುತ್ತದೆ. ನಾನು ಅಥವಾ ನೀವು ಅಥವಾ ದೇಹದ ಯಜಮಾನರಾದವರು ಕ್ಷೇತ್ರಜ್ಞರು, ಚಟುವಟಿಕೆಗಳ ಕ್ಷೇತ್ರವನ್ನು ಬಲ್ಲವರು. ದೇಹವು ಕ್ಷೇತ್ರ, ಚಟುವಟಿಕೆಗಳ ವಲಯ.

ಭಗವದ್ಗೀತೆಯ ಮೊದಲ ಆರು ಅಧ್ಯಾಯಗಳಲ್ಲಿ ಕ್ಷೇತ್ರಜ್ಞನನ್ನೂ (ಜೀವಿ) ಅವನು ಪರಮ ಪ್ರಭುವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವ ಸ್ಥಾನವನ್ನೂ ವರ್ಣಿಸಿದೆ. ಭಗವದ್ಗೀತೆಯ ಮಧ್ಯದ ಆರು ಅಧ್ಯಾಯಗಳಲ್ಲಿ ದೇವೋತ್ತಮ ಪರಮ ಪುರುಷನ ಭಕ್ತಿಸೇವೆಯ ವಿಷಯದಲ್ಲಿ ವ್ಯಕ್ತಿಗತ ಆತ್ಮನಿಗೂ ಪರಮಾತ್ಮನಿಗೂ ಇರುವ ಸಂಬಂಧವನ್ನು ವರ್ಣಿಸಿದೆ. ದೇವೋತ್ತಮ ಪರಮ ಪುರುಷನ ಉನ್ನತ ಸ್ಥಾನವನ್ನೂ, ವ್ಯಕ್ತಿಗತ ಆತ್ಮನ ಕೆಳಗಿನ ಸ್ಥಾನವನ್ನೂ, ಈ ಅಧ್ಯಾಯಗಳಲ್ಲಿ ಖಚಿತವಾಗಿ ವಿವರಿಸಿದೆ. ಜೀವಿಗಳು ಎಲ್ಲ ಸನ್ನಿವೇಶದಲ್ಲಿಯೂ ಅಧೀನರು (Bhagavad Gita Updesh in Kannada).

ತಮ್ಮ ವಿಸ್ಮರಣೆಯಿಂದ ಅವರು ನೋವನ್ನು ಅನುಭವಿಸುತ್ತಿದ್ದಾರೆ. ಪುಣ್ಯಕಾರ್ಯಗಳಿಂದ ಅವರಿಗೆ ಜ್ಞಾನೋದಯವಾದಾಗ ಅವರು ಬೇರೆ ಬೇರೆ ಸ್ಥಿತಿಗಳಿಂದ ಪರಮ ಪ್ರಭುವಿನ ಬಳಿಗೆ ಹೋಗುತ್ತಾರೆ. ನೋವಿನಲ್ಲಿರುವವರು, ಹಣದ ಅಗತ್ಯವಿರುವವರು, ಕುತೂಹಲಿಗಳು ಮತ್ತು ಜ್ಞಾನದ ಅನ್ವೇಷಣೆಯಲ್ಲಿರುವವರು ಹೀಗೆ ಪರಮ ಪ್ರಭುವಿನ ಬಳಿ ಸಾರುತ್ತಾರೆ.

ಇದನ್ನೂ ವರ್ಣಿಸಲಾಗಿದೆ. ಹದಿಮೂರನೆಯ ಅಧ್ಯಾಯದಿಂದ, ಜೀವಿಗೆ ಹೇಗೆ ಐಹಿಕ ಪ್ರಕೃತಿಯ ಸಂಪರ್ಕವು ಬರುತ್ತದೆ ಮತ್ತು ಫಲಾಪೇಕ್ಷೆಯಿರುವ ಕರ್ಮ, ಜ್ಞಾನದ ಬೆಳವಣಿಗೆ ಮತ್ತು ಭಕ್ತಿಸೇವೆ ಇವುಗಳ ವಿವಿಧ ವಿಧಾನಗಳ ಮೂಲಕ ಪರಮ ಪ್ರಭುವು ಜೀವಿಯನ್ನು ಹೇಗೆ ಉದ್ಧಾರಮಾಡುತ್ತಾನೆ ಎನ್ನುವುದನ್ನು ವಿವರಿಸಿದೆ. ಜೀವಿಯು ಐಹಿಕ ದೇಹದಿಂದ ಸಂಪೂರ್ಣವಾಗಿ ಭಿನ್ನನಾದರೂ ಹೇಗೋ ಅದರ ಸಂಬಂಧ ಪಡೆಯುತ್ತಾನೆ. ಇದನ್ನೂ ವಿವರಿಸಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.