Phalguna Pournami: ಹೋಳಿ ಹುಣ್ಣಿಮೆಯು ಯಾವ ರಾಶಿಗೆ ಶುಭ, ಯಾರಿಗೆ ಅಶುಭ; ಇಲ್ಲಿದೆ ದ್ವಾದಶ ರಾಶಿಗಳ ಫಲಾಫಲ-spiritual news phalguna pournami lunar eclipse on holi hunnime effects on zodiac sign astrology prediction rst ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Phalguna Pournami: ಹೋಳಿ ಹುಣ್ಣಿಮೆಯು ಯಾವ ರಾಶಿಗೆ ಶುಭ, ಯಾರಿಗೆ ಅಶುಭ; ಇಲ್ಲಿದೆ ದ್ವಾದಶ ರಾಶಿಗಳ ಫಲಾಫಲ

Phalguna Pournami: ಹೋಳಿ ಹುಣ್ಣಿಮೆಯು ಯಾವ ರಾಶಿಗೆ ಶುಭ, ಯಾರಿಗೆ ಅಶುಭ; ಇಲ್ಲಿದೆ ದ್ವಾದಶ ರಾಶಿಗಳ ಫಲಾಫಲ

ಈ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯು ಕನ್ಯಾರಾಶಿಯಲ್ಲಿ ರೂಪುಗೊಳ್ಳಲಿದೆ. ಇದು ದ್ವಾದಶ ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಮೇಷದಿಂದ ಮೀನದವರೆಗೆ ಈ ವರ್ಷದ ಹೋಳಿ ಹುಣ್ಣಿಮೆಯು ಯಾರಿಗೆ ಶುಭ, ಯಾರಿಗೆ ಅಶುಭ ನೋಡಿ.

ದ್ವಾದಶ ರಾಶಿಗಳ ಮೇಲೆ ಹೋಳಿ ಹುಣ್ಣಿಮೆಯ ಪರಿಣಾಮ ತಿಳಿಯಿರಿ
ದ್ವಾದಶ ರಾಶಿಗಳ ಮೇಲೆ ಹೋಳಿ ಹುಣ್ಣಿಮೆಯ ಪರಿಣಾಮ ತಿಳಿಯಿರಿ

ಫಾಲ್ಗುಣ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಪಾಲ್ಗುಣ ಹುಣ್ಣಿಮೆ ಅಥವಾ ಹೋಳಿ ಹುಣ್ಣಿಮೆ ಎಂದು ಕರೆಯುತ್ತಾರೆ. ಈ ವರ್ಷ ಮಾರ್ಚ್‌ 25 ರಂದು ಹೋಳಿ ಹುಣ್ಣಿಮೆ ಇದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಹುಣ್ಣಿಮೆಯನ್ನು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಚಂದ್ರನು ಕನ್ಯಾರಾಶಿಯಲ್ಲಿದ್ದಾನೆ. ಕನ್ಯಾರಾಶಿಯ ಅಧಿಪತಿ ಬುಧ.

ಚಂದ್ರ ಮತ್ತು ಬುಧ ಎರಡೂ ಸೂಕ್ಷ್ಮಗ್ರಾಹಿಗಳು. ಹುಣ್ಣಿಮೆಯ ದಿನ ಹೋಳಿ ದಹನ ಆಚರಿಸುವುದು ವಾಡಿಕೆ. ಈ ಬಾರಿ ಮಾರ್ಚ್‌ 24 ರಿಂದ ಮಾರ್ಚ್‌ 25ರವರೆಗೆ ಹುಣ್ಣಿಮೆ ಇರುವ ಕಾರಣಕ್ಕೆ ಎರಡೂ ದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಅಲ್ಲದೇ ಮಾರ್ಚ್‌ 25 ರಂದು ವರ್ಷದ ಮೊದಲ ಚಂದ್ರಗ್ರಹಣ ಕೂಡ ಸಂಭವಿಸಲಿದೆ. ಹೋಳಿ ಹುಣ್ಣಿಮೆ ಹಾಗೂ ಚಂದ್ರಗ್ರಹಣದ ಪ್ರಭಾವದಿಂದ ಯಾವೆಲ್ಲಾ ರಾಶಿಯವರು ಏನೆಲ್ಲಾ ಪರಿಣಾಮಗಳನ್ನು ಎದುರಿಸಲಿದ್ದಾರೆ ನೋಡಿ.

ಮೇಷ ರಾಶಿ

ಮೇಷ ರಾಶಿಯವರು ಈ ಸಮಯದಲ್ಲಿ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರಬೇಕು. ಒತ್ತಡಕ್ಕೆ ಸಿಲುಕಲಿದ್ದೀರಿ. ದೈನಂದಿನ ಕೆಲಸ ಮತ್ತು ಕಚೇರಿ ವಿಷಯಗಳಲ್ಲಿ ಕೆಲವು ತೊಂದರೆಗಳು ಎದುರಾಗುತ್ತವೆ.

ವೃಷಭ ರಾಶಿ

ಈ ಹುಣ್ಣಿಮೆಯು ವೃಷಭ ರಾಶಿಯವರಿಗೆ ಸೃಜನಶೀಲ ವಿಚಾರಗಳು ಎದುರಾಗುವಂತೆ ಮಾಡುತ್ತದೆ. ಪ್ರೇಮ ಸಂಬಂಧಗಳ ಮೇಲೆ ಹುಣ್ಣಿಮೆಯು ಪರಿಣಾಮ ಬೀರಲಿದೆ. ನಿಮ್ಮ ಕಲಾತ್ಮಕ ಭಾವವನ್ನು ಪ್ರದರ್ಶಿಸಲು ಇದು ಉತ್ತಮ ಸಮಯ. ಭಾವನಾತ್ಮಕ ಕ್ಷಣಗಳನ್ನು ಖುಷಿ ನೀಡಲಿವೆ.

ಮಿಥುನ ರಾಶಿ

ಹುಣ್ಣಿಮೆಯ ಸಮಯದಲ್ಲಿ, ಮಿಥುನ ರಾಶಿಯವರು ಮನೆ ಮತ್ತು ಕುಟುಂಬ ಸಂಬಂಧಿತ ಕಾಳಜಿಗಳ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಅವುಗಳನ್ನು ಪರಿಹರಿಸಲು ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಿರಿ.

ಕಟಕ

ಈ ಬಾರಿಯ ಹೋಳಿ ಹುಣ್ಣಿಮೆಯು ಇತರರೊಂದಿಗೆ ಸಂವಹನ ನಡೆಸಲು ಮತ್ತು ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಉತ್ತಮ ಅವಕಾಶಗಳನ್ನು ನೀಡಲಿದೆ. ನಿಮ್ಮ ಸುತ್ತಲಿನ ವಿಷಯಗಳು ನಿಮ್ಮನ್ನು ಹೆಚ್ಚು ಭಾವನಾತ್ಮಕವಾಗಿಸುತ್ತವೆ.

ಸಿಂಹ

ಹುಣ್ಣಿಮೆಯ ಸಮಯದಲ್ಲಿ ಸಿಂಹ ರಾಶಿಯವರು ಹಣವನ್ನು ಗಳಿಸಲಿದ್ದಾರೆ. ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ಕನಸುಗಳು ನನಸಾಗುವ ಕಾಲ ಬರಲಿದೆ.

ಕನ್ಯಾ

ಈ ಸಮಯದಲ್ಲಿ ಸ್ವಯಂ ಆಲೋಚನೆಗಳಿಂದ ಲಾಭ ಗಳಿಸಲಿದ್ದೀರಿ. ನೀವು ನಿಮ್ಮ ಬಗ್ಗೆ ಯೋಚಿಸುತ್ತೀರಿ. ನಿಮಗೆ ಬೇಕಾದುದನ್ನು ಮಾಡಲು ಪ್ರಯತ್ನಿಸುತ್ತೀರಿ. ಸಮಾಜದಲ್ಲಿ ಮನ್ನಣೆ ಸಿಗುತ್ತದೆ. ನಿಮ್ಮನ್ನು ಸುಧಾರಿಸಿಕೊಳ್ಳಲು ಇದು ಉತ್ತಮ ಸಮಯ.

ತುಲಾ

ಈ ಹುಣ್ಣಿಮೆಯ ಸಮಯದಲ್ಲಿ, ತುಲಾ ರಾಶಿಯವರು ಆಧ್ಯಾತ್ಮ ಕಡೆ ಗಮನ ಹರಿಸುತ್ತಾರೆ. ಧ್ಯಾನದ ಮೇಲೆ ಒಲವು ಮೂಡುತ್ತದೆ. ಈ ರಾಶಿಯವರು ತಮ್ಮ ಮನಸ್ಸನ್ನು ಒತ್ತಡದಿಂದ ಮುಕ್ತವಾಗಿಡಲು ಪ್ರಯತ್ನಿಸುತ್ತಾರೆ, ಅಲ್ಲದೇ ಒಂಟಿಯಾಗಿರಲು ಇಷ್ಟಪಡುತ್ತಾರೆ.

ವೃಶ್ಚಿಕ

ಹುಣ್ಣಿಮೆಯ ಸಮಯದಲ್ಲಿ, ವೃಶ್ಚಿಕ ರಾಶಿಯವರು ಧಾರ್ಮಿಕ ಚಟುವಟಿಕೆಗಳ ಬಗ್ಗೆ ಭಾವೋದ್ರಿಕ್ತರಾಗುತ್ತಾರೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಇತರರು ಮತ್ತು ಸ್ನೇಹಿತರೊಂದಿಗೆ ಸಂಬಂಧಗಳು ಸುಧಾರಿಸುತ್ತವೆ.

ಧನು

ಧನು ರಾಶಿ ಜನರು ಹುಣ್ಣಿಮೆಯ ಸಮಯದಲ್ಲಿ ವೃತ್ತಿಪರ ಗುರಿಗಳ ಮೇಲೆ ಕೇಂದ್ರೀಕರಿಸುತ್ತಾರೆ. ನಿಮ್ಮ ಗುರಿ ಮತ್ತು ಕನಸುಗಳನ್ನು ಈಡೇರಿಸಲು ಪ್ರಯತ್ನಿಸಿ.

ಮಕರ

ಮಕರ ರಾಶಿಯವರು ಉನ್ನತ ಶಿಕ್ಷಣದ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಹೊಸ ಆಲೋಚನೆಗಳು ಪ್ರಾರಂಭವಾಗುತ್ತವೆ. ಅವುಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಯೋಚಿಸುತ್ತಾರೆ.

ಕುಂಭ

ಹುಣ್ಣಿಮೆಯ ಸಮಯದಲ್ಲಿ, ವೈಯಕ್ತಿಕ ಸಂಬಂಧಗಳು ಮತ್ತು ಸಂಗಾತಿಯೊಂದಿಗಿನ ಪ್ರೀತಿಯ ಸಂಬಂಧಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಹಣಕಾಸಿನ ಸಮಸ್ಯೆಗಳು ಹೊರಬರಲು ಕಷ್ಟವಾಗಬಹುದು. ಪ್ರೀತಿಪಾತ್ರರೊಂದಿಗಿನ ಸಂಬಂಧಗಳು ಭಾವನಾತ್ಮಕವಾಗಿರುತ್ತವೆ.

ಮೀನ

ಮೀನ ರಾಶಿಯವರು ಹುಣ್ಣಿಮೆಯ ಸಮಯದಲ್ಲಿ ತಮ್ಮ ಸಂಗಾತಿಯೊಂದಿಗೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪರಿಣಾಮವಾಗಿ, ಅವರು ಭಾವೋದ್ರಿಕ್ತರಾಗುತ್ತಾರೆ. ಮನಸ್ಸು ನೋವಿನಿಂದ ತುಂಬಿರುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.